ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಮೃತಸರದ ಸ್ವರ್ಣ ಮಂದಿರಕ್ಕೆ ಉಪರಾಷ್ಟ್ರಪತಿಯವರ ಭೇಟಿ; ಇದು "ನಮ್ಮ ಮಹಾನ್ ಗುರುಗಳ ಭವ್ಯವಾದ ಆಧ್ಯಾತ್ಮಿಕ ಪರಂಪರೆಯ ಸಂಕೇತ" ಎಂದು ಬಣ್ಣನೆ


ಶ್ರೀ ಧನಕರ್ ಅವರಿಂದ ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಉಪರಾಷ್ಟ್ರಪತಿ ಪಂಜಾಬ್ ರಾಜ್ಯಕ್ಕೆ ಒಂದು ದಿನದ ಪ್ರವಾಸವನ್ನು ಕೈಗೊಂಡಿದ್ದರು

प्रविष्टि तिथि: 26 OCT 2022 6:12PM by PIB Bengaluru

ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಅಮೃತಸರದಲ್ಲಿರುವ ಶ್ರೀ ದರ್ಬಾರ್ ಸಾಹಿಬ್ (ಸ್ವರ್ಣ ಮಂದಿರ) ಗೆ ಭೇಟಿ ನೀಡಿದರು ಮತ್ತು ಸ್ವರ್ಣಮಂದಿರವು "ನಮ್ಮ ಮಹಾನ್ ಗುರುಗಳ ಭವ್ಯವಾದ ಆಧ್ಯಾತ್ಮಿಕ ಪರಂಪರೆಯ  ಪ್ರಜ್ವಲಿಸುವ ಸಂಕೇತ" ಎಂದು ಬಣ್ಣಿಸಿದರು.

ಒಂದು ದಿನದ ಪ್ರವಾಸಕ್ಕಾಗಿ ಅಮೃತಸರಕ್ಕೆ ಆಗಮಿಸಿದ ಶ್ರೀ ಧನಕರ್ ಅವರು ಉಪರಾಷ್ಟ್ರಪತಿಯಾದ ನಂತರ  ಪಂಜಾಬ್ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಸ್ವರ್ಣಮಂದಿರದಲ್ಲಿನ "ಶಾಂತಿ, ಪ್ರಶಾಂತತೆ, ಭಕ್ತಿ ಮತ್ತು ಸೇವಾ ಮನೋಭಾವ ಒಂದು ಮರೆಯಲಾಗದ ಅನುಭವ" ಎಂದು ಅವರು ಬಣ್ಣಿಸಿದರು.

ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ ಅವರು ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು "ಶ್ರೀ ಹರ್ಮಂದಿರ್ ಸಾಹಿಬ್ ಯುಗಯುಗಾಂತರಗಳಿಂದ ಪ್ರೀತಿ, ಮಾನವೀಯತೆ, ಸಹಾನುಭೂತಿ ಮತ್ತು ಸಹೋದರತ್ವದ ಸಂದೇಶವನ್ನು ಹೊರಸೂಸುತ್ತಿದೆ" ಎಂದು ಹೇಳಿದರು.

ತಮ್ಮ ಭೇಟಿಯ ಸಂದರ್ಭದಲ್ಲಿ, ಉಪರಾಷ್ಟ್ರಪತಿಯವರು ಸ್ವರ್ಣಮಂದಿರದಲ್ಲಿ ದಾಸೋಹ ಸ್ವೀಕರಿಸಿದರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಸೇವೆಯಲ್ಲಿ ಪಾಲ್ಗೊಂಡರು.

ಬಳಿಕ ಜಲಿಯಾವಾಲಾ ಬಾಗ್ ಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ಇದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ ಎಂದು ಕರೆದ ಅವರು, "ನಾವು ಶಾಶ್ವತವಾಗಿ ಋಣಿಯಾಗಿರುವ ಹುತಾತ್ಮರ ತ್ಯಾಗವನ್ನು ಇದು ನೆನಪಿಸುತ್ತದೆ" ಎಂದು ಹೇಳಿದರು. ಹುತಾತ್ಮರಿಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿಯು "ಅವರು ಕಲ್ಪಿಸಿದ ಸಮೃದ್ಧ, ಅಂತರ್ಗತ ಮತ್ತು ಸ್ವಾವಲಂಬಿ ಭಾರತ" ವನ್ನು ನಿರ್ಮಿಸುವುದಾಗಿ ಶ್ರೀ ಧನಕರ್ ಹೇಳಿದರು. 

ನಂತರ ಉಪರಾಷ್ಟ್ರಪತಿ ಮತ್ತು ಅವರ ಕುಟುಂಬದವರು ಶ್ರೀ ದುರ್ಗಿಯಾನ ದೇವಸ್ಥಾನ ಮತ್ತು ಶ್ರೀರಾಮ ತೀರ್ಥದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಉಪರಾಷ್ಟ್ರಪತಿಯವರ ಭೇಟಿಯ ಸಂದರ್ಭದಲ್ಲಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಶ್ರೀ ಸೋಮ್ ಪ್ರಕಾಶ್, ಪಂಜಾಬ್ ಸಾರಿಗೆ ಸಚಿವ ಶ್ರೀ ಲಾಲ್ಜೀತ್ ಸಿಂಗ್ ಭುಲ್ಲರ್ ಮತ್ತು ರಾಜ್ಯದ ಇತರ ಹಿರಿಯ ಅಧಿಕಾರಿಗಳು ಇದ್ದರು.

*****


(रिलीज़ आईडी: 1871094) आगंतुक पटल : 196
इस विज्ञप्ति को इन भाषाओं में पढ़ें: English , Urdu , हिन्दी , Punjabi , Tamil