ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಸ್ವಚ್ಛತಾ ವಿಶೇಷ ಅಭಿಯಾನಕ್ಕಾಗಿ ಡಿಎಸ್ಟಿಯಿಂದ ಹಲವು ಉಪಕ್ರಮಗಳ ಜಾರಿ
प्रविष्टि तिथि:
20 OCT 2022 12:26PM by PIB Bengaluru
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ತನ್ನ ಅಧೀನ ಕಚೇರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ (ಎಐಗಳು) ಸಹಯೋಗದೊಂದಿಗೆ 2022 ರ ಅಕ್ಟೋಬರ್ 2 ರಿಂದ 2022 ರ ಅಕ್ಟೋಬರ್ 31 ರವರೆಗೆ ಸ್ವಚ್ಛತಾ ಮತ್ತು ಬಾಕಿ ಉಳಿದಿರುವ ವಿಷಯಗಳ ವಿಲೇವಾರಿಗಾಗಿ ವಿಶೇಷ ಅಭಿಯಾನವನ್ನು ಅತ್ಯಂತ ಹುರುಪಿನಿಂದ ಅನುಷ್ಠಾನಗೊಳಿಸುತ್ತಿದೆ.
ಅಭಿಯಾನದ ಅವಧಿಯಲ್ಲಿ, ಹೊಸದಿಲ್ಲಿಯ ತಂತ್ರಜ್ಞಾನ (ಟೆಕ್ನಾಲಜಿ) ಭವನದಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಇರುವ ವಾಯು ವಿಶಿಷ್ಟ ಗುಣಮಟ್ಟ ನಿಗಾ (ಏರ್ ಯುನಿಕ್ ಕ್ವಾಲಿಟಿ ಮಾನಿಟರಿಂಗ್- ಎಯುಎಂ) ಘಟಕವನ್ನು ನೈಜ ಸಮಯದ ಅಂದರೆ ಆಯಾ ಕ್ಷಣದ ಮಾಲಿನ್ಯ ಮಟ್ಟವನ್ನು ಪ್ರದರ್ಶಿಸುವ ಪ್ರದರ್ಶನ ಫಲಕಕ್ಕೆ (ಡ್ಯಾಶ್ಬೋರ್ಡ್) ಜೋಡಿಸಲಾಗಿದೆ.

ಎಯುಎಂನಿಂದ ಲಭಿಸುವ ದತ್ತಾಂಶಗಳನ್ನು ಈಗ ದೆಹಲಿ ಮಾಲಿನ್ಯ ನಿಯಂತ್ರಣ ಆಯೋಗದೊಂದಿಗೆ ಯುಪಿಐ ಇಂಟರ್ಫೇಸ್ ಮೂಲಕ ತಡೆರಹಿತವಾಗಿ ಹಂಚಿಕೊಳ್ಳಲಾಗುತ್ತಿದೆ.
ಚಲಿಸುವ ಸ್ವಚ್ಛತಾ ಉಪಕರಣ (ರೈಡ್-ಆನ್ ಸ್ವೀಪರ್) , ಆಟೋ ಸ್ಕ್ರಬ್ಬರ್ ಡ್ರೈಯರ್, ಸಿಂಗಲ್ ಡಿಸ್ಕ್ ಕ್ಲೀನರ್, ವೆಟ್ ಮತ್ತು ಡ್ರೈ ಕ್ಲೀನರ್, ಡ್ರೈ ವ್ಯಾಕ್ಯೂಮ್ ಕ್ಲೀನರ್, ಹೈ ಪ್ರೆಶರ್ ಕ್ಲೀನರ್ ಮುಂತಾದ ಯಂತ್ರಗಳ ಮೂಲಕ ಇಲಾಖೆಯು ತನ್ನ ಆವರಣದಲ್ಲಿ ಯಾಂತ್ರೀಕೃತ ಸ್ವಚ್ಛತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಡಿ.ಎಸ್.ಟಿ. ಆವರಣದಲ್ಲಿ ಯಾಂತ್ರೀಕೃತ ಶುಚಿಗೊಳಿಸುವಿಕೆ
ಹೊಸ ಕಟ್ಟಡಗಳ ನಿರ್ಮಾಣದ ಯೋಜನೆಯ ಭಾಗವಾಗಿ, ಇಲಾಖೆಯು ತನ್ನ ಹಳೆಯ ಕಟ್ಟಡಗಳಲ್ಲಿ ಒಂದಾದ ಟಿಐಎಫ್ಎಸಿ ಬ್ಲಾಕ್ ಅನ್ನು ಅತ್ಯಂತ ಪರಿಸರ ಸ್ನೇಹಿ ರೀತಿಯಲ್ಲಿ ನೆಲಸಮಗೊಳಿಸುತ್ತಿದೆ. ಧೂಳು ಮಾಲಿನ್ಯವನ್ನು ಪರಿಶೀಲಿಸಲು ಇಲಾಖೆಯು ಫಾಗಿಂಗ್ ಯಂತ್ರವನ್ನು ಸ್ಥಾಪಿಸಿದೆ ಮತ್ತು ಅಂತಹ ಇನ್ನಷ್ಟು ಫಾಗಿಂಗ್ ಯಂತ್ರಗಳನ್ನು ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಸ್ವಚ್ಛತಾ ಅಭಿಯಾನವು ತಂತ್ರಜ್ಞಾನ ಭವನದ ಆವರಣದಲ್ಲಿ ನಿರ್ಮಾಣಕ್ಕೆ ಸಂಬಂಧಿಸಿ "ಹಸಿರು" ಅಂಶಗಳಿಗೆ ಮತ್ತಷ್ಟು ಒತ್ತು ನೀಡಿದೆ ಮತ್ತು ಕಚೇರಿ ಸ್ಥಳಾವಕಾಶದ ವರ್ಧನೆಗೆ ವೇಗವನ್ನು ಒದಗಿಸಿದೆ.
*****
(रिलीज़ आईडी: 1869564)
आगंतुक पटल : 144