ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ಅಹಮದಾಬಾದ್ ನಲ್ಲಿ ಮೋದಿ ಶೈಕ್ಷಣಿಕ ಸಂಕುಲದ ಮೊದಲ ಹಂತವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

Posted On: 10 OCT 2022 6:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಿರ್ಗತಿಕ ವಿದ್ಯಾರ್ಥಿಗಳ ಶೈಕ್ಷಣಿಕ ಸಂಕೀರ್ಣವಾದ ಮೋದಿ ಶೈಕ್ಷಣಿಕ ಸಂಕುಲದ ಮೊದಲ ಹಂತವನ್ನು ಉದ್ಘಾಟಿಸಿದರು. ಈ ಯೋಜನೆಯು ಸಮಗ್ರ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದೆ.

ಭವನದ ಉದ್ಘಾಟನೆಯ ಸಂಕೇತವಾಗಿ ಪ್ರಧಾನಮಂತ್ರಿ ಅವರು ರಿಬ್ಬನ್ ಕತ್ತರಿಸಿದರು. ಈ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರು ದೀಪ ಬೆಳಗಿಸಿ ಭವನದ ಮೂಲಕ ಕಾಲ್ನಡಿಗೆಯಲ್ಲಿ ಸಾಗಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ನಿನ್ನೆ ಮಾ ಮೋದೇಶ್ವರಿಯ ಸನ್ನಿಧಿಯಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸುವ ಸೌಭಾಗ್ಯ ನನ್ನದಾಗಿದೆ ಎಂದು ಹೇಳಿದರು. ಜನರಲ್ ಕಾರ್ಯಪ್ಪ ಅವರ ಒಂದು ಸ್ವಾರಸ್ಯಕರವಾದ ಕಥೆಯನ್ನು ನೆನಪಿಸಿಕೊಂಡರು. ಜನರಲ್ ಕಾರ್ಯಪ್ಪ ಹೋದಲ್ಲೆಲ್ಲಾ ಎಲ್ಲರೂ ಗೌರವದಿಂದ ನಮಸ್ಕರಿಸುತ್ತಿದ್ದರು, ಆದರೆ ಅವರ ಹಳ್ಳಿಯ ಜನರು ಸಮಾರಂಭವೊಂದರಲ್ಲಿ ಅವರನ್ನು ಸನ್ಮಾನಿಸಿದಾಗ ಅವರು ವಿಭಿನ್ನ ರೀತಿಯ ಸಂತೋಷ ಮತ್ತು ಸಂತೃಪ್ತಿಯನ್ನು ಅನುಭವಿಸಿದರು ಎಂದು ಅವರು ಹೇಳಿದರು.ಈ ಘಟನೆಯ ಹೋಲಿಕೆಯನ್ನು ಚಿತ್ರಿಸುತ್ತಾ, ಪ್ರಧಾನಮಂತ್ರಿ ಅವರು ತಮ್ಮ ಸಮಾಜ ಹಿಂದಿರುಗಿದಾಗ ನೀಡಿದ ಆಶೀರ್ವಾದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭವನ್ನು ಸಾಕಾರಗೊಳಿಸಿದ್ದಕ್ಕಾಗಿ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಸಮಾಜದ ಸದಸ್ಯರನ್ನು ಅಭಿನಂದಿಸಿದರು. "ಕಾಲಾವಧಿ ಹೊಂದಿಕೆಯಾಗಲಿಲ್ಲ ಎಂಬುದು ನಿಜ. ಆದರೆ ನೀವು ಗುರಿಯನ್ನು ಬಿಟ್ಟುಕೊಡಲಿಲ್ಲ ಮತ್ತು ಎಲ್ಲರೂ ಒಟ್ಟುಗೂಡಿ ಈ ಕೆಲಸಕ್ಕೆ ಆದ್ಯತೆ ನೀಡಿದರು", ಎಂದು ಅವರು ಹೇಳಿದರು.

ತಮ್ಮ ಸಮಾಜದ ಜನರಿಗೆ ಪ್ರಗತಿ ಸಾಧಿಸಲು ಅತ್ಯಲ್ಪ ಅವಕಾಶಗಳಿದ್ದ ದಿನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯ, " ಇಂದು ಸಮಾಜದಲ್ಲಿ ಜನರು ತಮ್ಮದೇ ಆದ ರೀತಿಯಲ್ಲಿ ಮುಂದೆ ಬರುವುದನ್ನು ನಾವು ನೋಡಬಹುದು " ಎಂದು ಹೇಳಿದರು. ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ ಮತ್ತು ಈ ಸಾಮೂಹಿಕ ಪ್ರಯತ್ನವು ಸಮಾಜದ ಶಕ್ತಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ಗಮನ ಸೆಳೆದರು. " ಮಾರ್ಗವು ಸರಿಯಾಗಿದೆ, ಮತ್ತು ಈ ರೀತಿಯಾಗಿ, ಸಮಾಜದ ಕಲ್ಯಾಣವನ್ನು ಸಾಧಿಸಬಹುದು " ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು,      " ಒಂದು ಸಮಾಜವಾಗಿ, ಅವರು ತಮ್ಮ ಸಮಸ್ಯೆಗಳನ್ನು ನಿಭಾಯಿಸುತ್ತಾರೆ, ಅವಮಾನವನ್ನು ಜಯಿಸುತ್ತಾರೆ, ಆದರೆ ಯಾರ ದಾರಿಗೂ ಬರುವುದಿಲ್ಲ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ " ಎಂದು ಹೇಳಿದರು. ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗಿದ್ದಾರೆ ಮತ್ತು ಕಲಿಯುಗದಲ್ಲಿ ಅದರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಸಂತೋಷ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಅವರು ಸಮಾಜದ ಋಣವನ್ನು ತೀರಿಸಬೇಕಾಗಿದೆ ಎಂದು ಹೇಳಿದರು. ಈ ಸಮಾಜದ ಮಗ ದೀರ್ಘಕಾಲದಿಂದ ಗುಜರಾತಿನ ಮುಖ್ಯಮಂತ್ರಿಯಾಗಿರಬಹುದು ಮತ್ತು ಈಗ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿರಬಹುದು, ಆದರೆ ಅವರ ಸುದೀರ್ಘ ಆಡಳಿತದ ಜವಾಬ್ದಾರಿಗಳ ನಡುವೆಯೂ, ಈ ಸಮಾಜದಿಂದ ಒಬ್ಬ ವ್ಯಕ್ತಿಯೂ ವೈಯಕ್ತಿಕ ಕೆಲಸದೊಂದಿಗೆ ತಮ್ಮ ಬಳಿಗೆ ಬರಲಿಲ್ಲ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಸಮಾಜದ ಸಂಸ್ಕಾರವನ್ನು ಬಿಂಬಿಸಿದರು ಮತ್ತು ಅವರಿಗೆ ಗೌರವಪೂರ್ವಕವಾಗಿ ನಮಸ್ಕರಿಸಿದರು.

ಹೆಚ್ಚಿನ ಯುವಕರು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಅಂತಹ ಇತರ ವಿಭಾಗಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಸಂತೋಷ ವ್ಯಕ್ತಪಡಿಸಿದರು. ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿದ ಪ್ರಧಾನಮಂತ್ರಿ ಅವರು, ಮಗುವಿನ ಶಿಕ್ಷಣವನ್ನು ಪೂರ್ಣಗೊಳಿಸುವ ಸಮಯದಲ್ಲಿ ಉದ್ಭವಿಸಬಹುದಾದ ಕಷ್ಟಗಳ ಬಗ್ಗೆ ಮಾತನಾಡಿದರು ಮತ್ತು ಕೌಶಲ್ಯ ಅಭಿವೃದ್ಧಿಗೆ ಅವರನ್ನು ಸಿದ್ಧಪಡಿಸುವಂತೆ ಪೋಷಕರಿಗೆ ಸಲಹೆ ನೀಡಿದರು. ಅವರು ಎಂದಿಗೂ ಹಿಂತಿರುಗಿ ನೋಡದ ರೀತಿಯಲ್ಲಿ ಕೌಶಲ್ಯ ಅಭಿವೃದ್ಧಿಯು ಅವರನ್ನು ಸಶಕ್ತಗೊಳಿಸುತ್ತದೆ ಎಂದು ಅವರು ಹೇಳಿದರು.          " ಕೌಶಲ್ಯ ಅಭಿವೃದ್ಧಿ ಇದ್ದಾಗ, ಕೌಶಲ್ಯ ಇದ್ದಾಗ, ಅವರು ಎಂದಿಗೂ ಹಿಂತಿರುಗಿ ನೋಡಬೇಕಾಗಿಲ್ಲ. ಕಾಲ ಬದಲಾಗುತ್ತಿದೆ ಸ್ನೇಹಿತರು, ಪದವಿಗಳನ್ನು ಹೊಂದಿರುವವರಿಗಿಂತ ಹೆಚ್ಚು ಕೌಶಲ್ಯ ಹೊಂದಿರುವವರ ಶಕ್ತಿಗೆ ಉತ್ತೇಜನದ ಅಗತ್ಯವಿದೆ ", ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಸಿಂಗಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಸಿಂಗಾಪುರದ ಪ್ರಧಾನಮಂತ್ರಿಯವರೊಂದಿಗಿನ ತಮ್ಮ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಸ್ವತಃ ಸಿಂಗಾಪುರದ ಪ್ರಧಾನ ಮಂತ್ರಿಗಳು ಸ್ಥಾಪಿಸಿದ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡುವಂತೆ ತಮಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಹೇಳಿದರು. ಭೇಟಿ ನೀಡಿದ ನಂತರ, ಪ್ರಧಾನಮಂತ್ರಿ ಅವರು ಅದರ ಆಧುನಿಕತೆಯನ್ನು ನೆನಪಿಸಿಕೊಂಡರು ಮತ್ತು ಈ ಸಂಸ್ಥೆಯ ಸ್ಥಾಪನೆಯ ನಂತರ, ಶ್ರೀಮಂತರು ಪ್ರವೇಶ ಪಡೆಯಲು ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೆ ಎಂದು ಹೇಳಿದರು. ಸಮಾಜದ ಹಿರಿಮೆಯನ್ನು ಸಹ ವಿವರಿಸಲಾಗಿದೆ ಮತ್ತು ಈಗ ನಮ್ಮ ಮಕ್ಕಳು ಅದರಲ್ಲಿ ಭಾಗವಹಿಸಬಹುದು ಮತ್ತು ಹೆಮ್ಮೆಯ ಭಾವನೆಯನ್ನು ಅನುಭವಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು.

ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿ ಅವರು, ದುಡಿಮೆಗೂ ಪ್ರಚಂಡ ಶಕ್ತಿಯಿದೆ ಮತ್ತು ನಮ್ಮ ಸಮಾಜದ ಒಂದು ದೊಡ್ಡ ವರ್ಗವು ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದೆ ಎಂದು ಹೇಳಿದರು. "ಅವರ ಬಗ್ಗೆ ಹೆಮ್ಮೆಪಡಿರಿ" ಎಂದು ಅವರು ಹೇಳಿದರು. ಸದಸ್ಯರು ಎಂದಿಗೂ ಸಮಾಜಕ್ಕೆ ತೊಂದರೆ ಆಗಲು  ಅವಕಾಶ ನೀಡಿಲ್ಲ ಅಥವಾ ಇತರ ಯಾವುದೇ ಸಮಾಜದೊಂದಿಗೆ ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಧಾನಮಂತ್ರಿ ಅವರು ಹೆಮ್ಮೆ ವ್ಯಕ್ತಪಡಿಸಿದರು. " ಇದು ನಮ್ಮ ಪ್ರಯತ್ನವಾಗಿರುತ್ತದೆ, ಮುಂಬರುವ ಪೀಳಿಗೆಯು ಬಹಳ ಹೆಮ್ಮೆಯಿಂದ ಪ್ರಗತಿ ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಶ್ರೀ ನರೇಂದ್ರ ಮೋದಿ ತಮ್ಮ ಮಾತು ಮುಕ್ತಾಯಗೊಳಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸತ್ ಸದಸ್ಯರಾದ ಶ್ರೀ ಸಿ.ಆರ್.ಪಾಟೀಲ್ ಮತ್ತು ಶ್ರೀ ನರಹರಿ ಅಮೀನ್, ಗುಜರಾತ್ ಸರ್ಕಾರದ ಸಚಿವ ಶ್ರೀ ಜಿತುಭಾಯಿ ವಘಾನಿ ಮತ್ತು ಶ್ರೀ ಮೋಧ್ ವಾಣಿಕ್ ಮೋದಿ ಸಮಾಜ ಹಿತವರ್ಧಕ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಪ್ರವೀಣ್ ಭಾಯಿ ಚಿಮನ್ ಲಾಲ್ ಮೋದಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

*****


(Release ID: 1866845) Visitor Counter : 160