ಜಲ ಶಕ್ತಿ ಸಚಿವಾಲಯ

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 2022 ರ ಅಕ್ಟೋಬರ್ 2 ರಂದು ಸ್ವಚ್ಛ ಭಾರತ ದಿನ [ಎಸ್.ಡಿ.ಬಿ] ಆಚರಣೆ


ಸಮಾರಂಭದ ಅಧ್ಯಕ್ಷತೆ ವಹಿಸಲಿರುವ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ಅವರಿಂದ 2022 ರ ‘ಗ್ರಾಮೀಣ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ’ ಪ್ರದಾನ ಮತ್ತು ಜಲ ಜಿವನ ಅಭಿಯಾನ ಕಾರ್ಯನಿರ್ವಹಣೆ ಕುರಿತ 2021-22 ಹಣಕಾಸು ವರ್ಷದ ವರದಿ ಜಲಶಕ್ತಿ ಸಚಿವರಿಂದ ಬಿಡುಗಡೆ

ಉತ್ತಮ ಸಾಧನೆ ಮಾಡಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳನ್ನು ಗೌರವಿಸಲಿರುವ ರಾಷ್ಟ್ರಪತಿಯವರು

ಜಲ ಜೀವನ ಸುರಕ್ಷಾ 2023,  ಒಂದು ಪಿಟ್ ನಿಂದ ಅವಳಿ ಪಿಟ್ ಅಭಿಯಾನ ಮತ್ತು ಸ್ವಚ್ಛ ಜಲದಿಂದ ಸುರಕ್ಷತೆ ಕುರಿತ ಅಭಿಯಾನಕ್ಕೆ ಚಾಲನೆ

Posted On: 30 SEP 2022 6:11PM by PIB Bengaluru

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಜನ್ಮ ದಿನದ ಅಂಗವಾಗಿ 2022 ರ ಅಕ್ಟೋಬರ್ 2 ರಂದು ಮಹಾತ್ಮಗಾಂಧಿ ಸ್ವಚ್ಛ ಭಾರತ ದಿನವನ್ನು ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ [ಡಿಡಿಡಬ್ಲ್ಯೂಎಸ್] ಇಲಾಖೆಯಿಂದ ಆಚರಿಸಲಾಗುತ್ತಿದೆ. ಮಹಾತ್ಮಗಾಂಧೀಜಿ ಅವರಿಂದ ಇಲಾಖೆ ಸ್ಫೂರ್ತಿ ಪಡೆದುಕೊಂಡಿದ್ದು, “ಸ್ವಚ್ಛತೆಯೇ ಮುಂದಿನ ದೈವತ್ವ” ಎಂದು ಅವರು ಒಮ್ಮೆ ಹೇಳಿದ್ದರು. ಹೀಗಾಗಿ ಸ್ವಚ್ಛ ಭಾರತ ಅಭಿಯಾನ ಜನರಿಂದ ಶಕ್ತಿ ಪಡೆದಿದ್ದು, “ಸಂಪೂರ್ಣ ಸ್ವಚ್ಛತೆ” ಸಂಪೂರ್ಣ ನೈರ್ಮಲ್ಯ ಸಾಧಿಸಲು ಇದನ್ನು ಜನಾಂದೋಲನವನ್ನಾಗಿ ರೂಪಿಸಲಾಗಿದೆ.  

2022 ರ ಅಕ್ಟೋಬರ್ 2 ರಂದು ವಿಜ್ಞಾನ ಭವನದಲ್ಲಿ ಇಡೀ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈ ವೈಭವದ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಜಲಶಕ್ತಿ, ಆಹಾರ ಮತ್ತು ಸಂಸ್ಕರಣೆ ಕೈಗಾರಿಕಾ ಖಾತೆ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವ ಬಿಶ್ವೇಶ್ವರ್ ತಡು ಅವರು ಪಾಲ್ಗೊಳ್ಳಲಿದ್ದಾರೆ.    

ಡಿಡಿಡಬ್ಲ್ಯೂಎಸ್ ನಿಂದ ಕೇಂದ್ರ ಸರ್ಕಾರದ ಎರಡು ಮಹತ್ವಾಕಾಂಕ್ಷಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ: ಸ್ವಚ್ಛ ಭಾರತ ಅಭಿಯಾನ [ಗ್ರಾಮೀಣ] ಮತ್ತು ಜಲ ಜೀವನ ಅಭಿಯಾನ [ಜೆಜೆಎಂ] ಕಾರ್ಯಕ್ರಮಗಳು. ಜೆಜೆಎಂ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಆಗಸ್ಟ್ 15 ರಂದು ಕೆಂಪುಕೋಟೆ ಮೇಲೆ ಮಾಡಿದ ಭಾಷಣ ಸಂದರ್ಭದಲ್ಲಿ ಘೋಷಿಸಿದ್ದು, ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶವನ್ನು ಇದು ಒಳಗೊಂಡಿದೆ. ಇದೇ ರೀತಿ ಎಸ್.ಬಿ.ಎಂ[ಜಿ] 2 ನೇ ಹಂತದ ಕಾರ್ಯಕ್ರಮವನ್ನು 2020 ರ ಮಾರ್ಚ್ ನಲ್ಲಿ ಜಾರಿಗೊಳಿಸಿದ್ದು, ಗ್ರಾಮೀಣ ಭಾರತವನ್ನು ಒಡಿಎಫ್ ಫ್ಲಸ್ ಮಾಡುವ ಗುರಿ ಹೊಂದಲಾಗಿದೆ. ಸುಸ್ಥಿರ ಬಯಲು ಶೌಚ ಮುಕ್ತ [ಒಡಿಎಫ್] ಮಾನ್ಯತೆ ಪಡೆಯಲಾಗಿದೆ ಮತ್ತು ಪ್ರತಿಯೊಂದು ಗ್ರಾಮದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಖಾತರಿಪಡಿಸಲಾಗಿದೆ.    

  

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಕೇಂದ್ರ ಜಲಶಕ್ತಿ ಸಚಿವರ ಸ್ವಚ‍್ಛ ಸರ್ವೇಕ್ಷಣೆ ಗ್ರಾಮೀಣ [ಎಸ್.ಎಸ್.ಜಿ] 2022 ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಇಲಾಖೆ 2018 ರಿಂದ ಸ್ವಚ್ಛ ಸಮೀಕ್ಷೆಯನ್ನು ಕೈಗೊಂಡಿದೆ. 2022 ರ ಸಮೀಕ್ಷಾ ಕಾರ್ಯಕ್ಕೆ ಕೇಂದ್ರ ಜಲಶಕ್ತಿ ಸಚಿವ ಶ್ರಿ ಗಜೇಂದ್ರ ಸಿಂಗ್ ಶೇಖಾವತ್ ಅವರು 2021 ರ ಸೆಪ್ಟೆಂಬರ್ 9 ರಂದು ಚಾಲನೆ ನೀಡಿದ್ದರು. ಸ್ವಚ‍್ಛ ಸರ್ವೇಕ್ಷಣಾ ವರದಿಯಲ್ಲಿ ಶ‍್ರೇಯಾಂಕ, ಸಮೀಕ್ಷೆಯ ಪ್ರದೇಶಗಳು, ಮೌಲ್ಯಮಾಪನ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆ ಕುರಿತು ಮಾಹಿತಿ ಇದೆ. ಇದರ ಜೊತೆಗೆ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ [ಎಸ್.ಎಸ್.ಜಿ] 2023ರ ಕುರಿತಂತೆ ಮಾಹಿತಿ ನೀಡಲಾಗುತ್ತದೆ.  

ಕಾರ್ಯಕ್ರಮದಲ್ಲಿ “2021-22 ರ ಹಣಕಾಸು ವರ್ಷದ ಕ್ರಿಯಾತ್ಮಕ ಮೌಲ್ಯಮಾಪನ” ಎಂಬ ವರದಿ ಬಿಡುಗಡೆ ಮಾಡಲಾಗುತ್ತದೆ. ಮೂರನೇ ವ್ಯಕ್ತಿಯಿಂದ ಈ ಸಮೀಕ್ಷೆ ನಡೆಸಲಾಗಿದ್ದು, ಸಂಪರ್ಕ ಪಡೆದಿರುವ ಕೊಳವೆಗಳಲ್ಲಿ ಇದೀಗ ಎಷ್ಟು ಕಾರ್ಯನಿರ್ವಹಿಸುತ್ತಿವೆ, ನಿರಂತರವಾಗಿ ಮತ್ತು ಗುಣಮಟ್ಟದ ನೀರು ಪೂರೈಕೆ ಕುರಿತ ವಿವರಗಳನ್ನು ಈ ವರದಿ ಒಳಗೊಂಡಿದೆ. ಸಮೀಕ್ಷೆ ಸಂದರ್ಭದಲ್ಲಿ 712 ಜಿಲ್ಲೆಗಳ 13,299 ಹಳ್ಳಿಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಒಟ್ಟು 3,01,389 ಮನೆಗಳು ಮತ್ತು 22,596 ಸಾರ್ವಜನಿಕ ಸಂಸ್ಥೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಮನೆಗಳಿಂದ 2,19,564 ಹಾಗೂ 9,844 ಸಾರ್ವಜನಿಕ ಸಂಸ್ಥೆಗಳಿಂದ ನೀರಿನ ಮಾದರಿಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. 2022 ರ ಸಮೀಕ್ಷೆ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಮೂರು ಪಟ್ಟು ಹೆಚ್ಚಾಗಿದೆ.

ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ [ಎಸ್.ಎಸ್.ಜಿ] 2022 ಮತ್ತು ಜೆಜೆಎಂ ಕಾರ್ಯನಿರ್ವಹಣೆಯ ಮೌಲ್ಯಮಾಪನ ವರದಿಯ ಅನ್ವೇಷಣೆ ಆಧಾರದ ಮೇಲೆ 2022 ರ ಅಕ್ಟೋಬರ್ 2 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹಾಗೂ ಜಿಲ್ಲೆಗಳಲ್ಲಿ ಈ ಎರಡು ಯೋಜನೆಗಳಲ್ಲಿನ ಅನುಷ್ಠಾನದಲ್ಲಿ ಪ್ರಗತಿ ಸಾಧನೆಯನ್ನು ಗೌರವಿಸಲಾಗುತ್ತದೆ.  

ಸಮಾರಂಭದಲ್ಲಿ ಜಲ ಜೀವನ ಸರ್ವೇಕ್ಷಣೆ 2023 ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ‘ಹರ್ ಘರ್ ಜಲ್’ ಕಾರ್ಯಕ್ರಮ ಗ್ರಾಮಗಳಲ್ಲಿ ಅನುಷ್ಠಾನಗೊಂಡಿದ್ದು, ನೀರಿನ ಸಂಪರ್ಕದ ಕಾರ್ಯಚಟುವಟಿಕೆ ಕುರಿತ ವಿವರಗಳನ್ನು ಇದು ಒಳಗೊಂಡಿದೆ. ಜಲ ಜೀವನ್ ಅಭಿಯಾನದ ಉದ್ದೇಶವನ್ನು ಇದು ಸಾಧಿಸಿರುವುದನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆ ಒಂದು ಸಾಧನವಾಗಿದೆ. ಹಳ್ಳಿಗಳ ಪ್ರತಿಯೊಂದು ಮನೆಗಳಿಗೆ ನಿಯಮಿತವಾಗಿ ಮತ್ತು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಬಗ್ಗೆ ಇದು ಮಾಹಿತಿ ನೀಡಲಿದೆ. ಇದೇ ಸಂದರ್ಭದಲ್ಲಿ ಇಲಾಖೆ ಎರಡು ಅಭಿಯಾನಗಳನ್ನು ಹಮ್ಮಿಕೊಳ‍್ಳುತ್ತಿದೆ.

o   ಮಲದ ನಿರ್ವಹಣೆಗಾಗಿ ಮನೆಗಳಲ್ಲಿ ಅವಳಿ ಗುಂಡಿಗಳ ಶೌಚಾಲಯಗಳನ್ನು ಉತ್ತೇಜಿಸಲು “ಒಂದು ಪಿಟ್ ನಿಂದ ಅವಳಿ ಪಿಟ್ ಅಭಿಯಾನ” ಆರಂಭಿಸಲಾಗುತ್ತಿದೆ. ಈ ಅಭಿಯಾನ 2022 ರ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನದಂದು ಪೂರ್ಣಗೊಳ್ಳಲಿದೆ.

o   ‘ಸ್ವಚ್ಛ ಜಲದಿಂದ ಸುರಕ್ಷತೆ’ ; ನೀರಿನ ಗುಣಮಟ್ಟ ಕುರಿತ ಅಭಿಯಾನದಿಂದ ಸ್ವಚ್ಛ ಮತ್ತು ಸುರಕ್ಷಿತ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಿದೆ. ಅಲ್ಲದೇ ಗ್ರಾಮೀಣ ಮನೆಗಳಲ್ಲಿ ಗುಣಮಟ್ಟದ ನೀರು ಪೂರೈಕೆ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ

*****



(Release ID: 1864104) Visitor Counter : 188