ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ಕಾರಿ ಗೌರವದೊಂದಿಗೆ ನೆರವೇರಲಿರುವ ಜಪಾನಿನ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ರಾತ್ರಿ ಟೋಕಿಯೊಗೆ ತೆರಳಲಿರುವ ಪ್ರಧಾನಮಂತ್ರಿ

Posted On: 26 SEP 2022 5:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರಿ ಗೌರವದೊಂದಿಗೆ ನೆರವೇರಲಿರುವ ಜಪಾನ್ ನ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ರಾತ್ರಿ ಜಪಾನ್ ನ ಟೋಕಿಯೋಗೆ ತೆರಳಲಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು;

"ಭಾರತ-ಜಪಾನ್ ಬಾಂಧವ್ಯದ ಮಹಾನ್ ನಾಯಕ ಮತ್ತು ಆತ್ಮೀಯ ಗೆಳೆಯರಾಗಿದ್ದ, ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾನು ಇಂದು ರಾತ್ರಿ ಟೋಕಿಯೋಗೆ ತೆರಳುತ್ತಿದ್ದೇನೆ.

"ನಾನು ಎಲ್ಲಾ ಭಾರತೀಯರ ಪರವಾಗಿ ಪ್ರಧಾನಮಂತ್ರಿ ಕಿಶಿದಾ ಮತ್ತು ಶ್ರೀಮತಿ ಅಬೆ ಅವರಿಗೆ ಹೃದಯಾಂತರಾಳದ ಸಂತಾಪ ಸೂಚಿಸಲಿದ್ದೇನೆ. ಅಬೆ ಸಾನ್ ಅವರ ಕಲ್ಪನೆಯಂತೆ ಭಾರತ-ಜಪಾನ್ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕಾರ್ಯವನ್ನು ನಾವು ಮುಂದುವರಿಸುತ್ತೇವೆ. @kishida230" ಎಂದು ತಿಳಿಸಿದ್ದಾರೆ.

 

*******

 

 


(Release ID: 1862386)