ಕೃಷಿ ಸಚಿವಾಲಯ
2022-23ರ ಹಿಂಗಾರಿಗಾಗಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೀಜ ಮಿನಿ ಕಿಟ್‌ಗಳನ್ನು ವಿತರಿಸುವ ಮೂಲಕ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರವು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ
2022ರ ಮುಂಗಾರು ಸಮಯದಲ್ಲಿ ಕಡಿಮೆ/ ಕೊರತೆಯ ಮಳೆ ಬೀಳುವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ಭಾಗವಾದ ರಾಜ್ಯಗಳು ಅಂತಹ ಕಿಟ್ ಗಳನ್ನು ಪಡೆಯುತ್ತವೆ
Posted On:
22 SEP 2022 4:06PM by PIB Bengaluru
ಬೀಜವು ಸಂಪೂರ್ಣ ತಂತ್ರಜ್ಞಾನವಾಗಿದೆ ಮತ್ತು ಬೆಳೆಗಳ ಉತ್ಪಾದಕತೆಯನ್ನು ಸುಮಾರು ಶೇ. 20-25 ರಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಕೃಷಿಗಾಗಿ ಉತ್ತಮ ಬೀಜಗಳ ಲಭ್ಯತೆಯು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ರೈತರಿಗೆ ಹೆಚ್ಚಿನ ಆದಾಯ ಬರುತ್ತದೆ, ಇದರ ಜೊತೆಗೆ ಕೃಷಿ ಪರಿಸರ ವ್ಯವಸ್ಥೆ ಮತ್ತು ರಾಷ್ಟ್ರದ ಆರ್ಥಿಕತೆಗೆ ಒಟ್ಟಾರೆಯಾಗಿ ಪ್ರಯೋಜನವನ್ನು ನೀಡುತ್ತದೆ. ಕೆಲವು ರಾಜ್ಯಗಳಲ್ಲಿಅನಿಯಮಿತ ಮತ್ತು ಮಳೆಯ ಕೊರತೆಯಿಂದಾಗಿ, ಇದು ಹಿಂಗಾರು ಬೆಳೆಗಳನ್ನು ವಿಶೇಷವಾಗಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಮುಂಚಿತವಾಗಿ ಬಿತ್ತನೆ ಮಾಡುವ ಅಗತ್ಯವನ್ನು ಹೆಚ್ಚಿಸಿದೆ.
2022-23 ರ ಹಿಂಗಾರು ಹಂಗಾಮಿಗೆ, ನಿಯಮಿತ ವಿತರಣೆಯ ಹೊರತಾಗಿ ರಾಜ್ಯಗಳಲ್ಲಿ ಮಾನ್ಸೂನ್ ಕೊರತೆಯ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೀಜ ಮಿನಿಕಿಟ್‌ಗಳನ್ನು ಒದಗಿಸುವುದು ಸರ್ಕಾರದ ಗಮನವಾಗಿದೆ. ಮಿನಿಕಿಟ್ ಗಳನ್ನು ರಾಷ್ಟ್ರೀಯ ಬೀಜ ನಿಗಮ (ಎನ್‌ಎಸ್‌ಸಿ), ನಾಫೆಡ್ ಮುಂತಾದ ಕೇಂದ್ರೀಯ ಏಜೆನ್ಸಿಗಳು ಒದಗಿಸುತ್ತಿವೆ ಮತ್ತು ಇವುಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಮೂಲಕ ಭಾರತ ಸರ್ಕಾರ ಸಂಪೂರ್ಣವಾಗಿ ಧನಸಹಾಯ ನೀಡುತ್ತದೆ.
ಈ ಕೆಳಗಿನ ಉದ್ದೇಶಗಳೊಂದಿಗೆ ರೈತರಿಗೆ ಹೊಸದಾಗಿ ಬಿಡುಗಡೆಯಾದ ಅಧಿಕ ಇಳುವರಿ ನೀಡುವ ತಳಿಗಳ ಬೀಜಗಳನ್ನು ವಿತರಿಸಲು ಬೃಹತ್ ಬೀಜ ಮಿನಿಕಿಟ್ ಕಾರ್ಯಕ್ರಮಕ್ಕೆ ಸರ್ಕಾರ ಅನುಮೋದನೆ ನೀಡಿದೆ:
* ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಇತ್ತೀಚಿನ ಬೆಳೆ ಪ್ರಭೇದಗಳನ್ನು ಜನಪ್ರಿಯಗೊಳಿಸುವುದು.
* ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ಭಾಗವಾದ 2022 ರ ಮುಂಗಾರು ಸಮಯದಲ್ಲಿ ಕಡಿಮೆ/ಕೊರತೆಯನ್ನು ಪಡೆಯುವ ರಾಜ್ಯಗಳಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೀಜ ಮಿನಿಕಿಟ್‌ಗಳನ್ನು ವಿತರಿಸುವುದು.
* ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿನ ರೇಪ್ಸೀಡ್ಸ್(ಸಾಸುವೆ ಬೀಜಗಳು) ಮತ್ತು ಸಾಸಿವೆ (ಆರ್ ಮತ್ತು ಎಂ) ಗಾಗಿ ಸಾಂಪ್ರದಾಯಿಕವಲ್ಲದ ಪ್ರದೇಶವನ್ನು ಒಳಗೊಳ್ಳುವುದು.
* ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕಗಳಿಗೆ ಪ್ರಮುಖ ಹಿಂಗಾರು ಎಣ್ಣೆಕಾಳುಗಳನ್ನು ನೆಲಗಡಲೆಯಾಗಿ ವಿತರಿಸುವುದು ಮತ್ತು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ಥಾನದಲ್ಲಿ ಲಿನ್ಸೀಡ್(ಅಗಸೆ)ಯಂತಹ ಸಣ್ಣ ಎಣ್ಣೆಕಾಳುಗಳು ಮತ್ತು ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕುಸುಬೆಯಂತಹ ಸಣ್ಣ ಎಣ್ಣೆಕಾಳುಗಳನ್ನು ವಿತರಿಸುವುದು.
ದ್ವಿದಳ ಧಾನ್ಯಗಳ ಉತ್ತೇಜನಕ್ಕಾಗಿ, ಸರ್ಕಾರವು 2022-23ರಲ್ಲಿ11 ರಾಜ್ಯಗಳಿಗೆ 4.54 ಲಕ್ಷ ಸಂಖ್ಯೆಯ ಬೇಳೆಕಾಳು ಮತ್ತು ಉದ್ದಿನ ಬೀಜ ಮಿನಿಕಿಟ್‌ಗಳನ್ನು ಮತ್ತು 4.04 ಲಕ್ಷ ಬೀಜ ಮಿನಿಕಿಟ್‌ಗಳನ್ನು 11 ರಾಜ್ಯಗಳಿಗೆ ಹಂಚಿಕೆ ಮಾಡಿದೆ, ವಿಶೇಷವಾಗಿ ಉತ್ತರ ಪ್ರದೇಶ (1,11,563 ಸಂಖ್ಯೆಗಳು), ಜಾರ್ಖಂಡ್ (12,500 ಸಂಖ್ಯೆಗಳು) ಮತ್ತು ಬಿಹಾರ (12,500 ಸಂಖ್ಯೆಗಳು) ನಂತಹ ರಾಜ್ಯಗಳ ಮಳೆ ಕೊರತೆಯ ಪ್ರದೇಶಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡುವ ಗುರಿಯನ್ನು ಹೊಂದಿದೆ. ಇದು ಒಟ್ಟು ಹಂಚಿಕೆಯ ಶೇಕಡ 33.8 ರಷ್ಟು ಮತ್ತು ಈ ಮೂರು ಮಳೆ ಕೊರತೆಯ ರಾಜ್ಯಗಳಿಗೆ ಕಳೆದ ವರ್ಷಕ್ಕಿಂತ ಶೇಕಡಾ 39.4 ರಷ್ಟು ಹೆಚ್ಚಾಗಿದೆ.
ಸರ್ಕಾರವು 2022-23 ರಿಂದ ಮಸೂರ್ ಅಡಿಯಲ್ಲಿ120 ಜಿಲ್ಲೆಗಳು ಮತ್ತು ಉದ್ದಿನ ಅಡಿಯಲ್ಲಿ150 ಜಿಲ್ಲೆಗಳಲ್ಲಿ(ಟಿಎಂಯು 370) ‘ತುರ್‌ಮಸೂರ್‌ಉರದ್ - 370’ ಎಂಬ ವಿಶೇಷ ಕಾರ್ಯಕ್ರಮವನ್ನು ಸಹ ಜಾರಿಗೆ ತರುತ್ತಿದೆ, ಈ ಉದ್ದೇಶಿತ ಜಿಲ್ಲೆಗಳಲ್ಲಿ ಘಟಕಗಳ ಗರಿಷ್ಠ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ದ್ವಿದಳ ಧಾನ್ಯಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ವಿವಿಧ ಬೆಳೆಗಳ 39.22 ಕೋಟಿ ರೂ.ಗಳ ಮೌಲ್ಯದ ಸುಮಾರು 8.3 ಲಕ್ಷ ಬೀಜ ಮಿನಿಕಿಟ್‌ಗಳನ್ನು ವಿತರಿಸುವ ಮೂಲಕ ಎಣ್ಣೆಕಾಳುಗಳನ್ನು ಉತ್ತೇಜಿಸಲಾಗುತ್ತಿದೆ. 10.93 ಕೋಟಿ ರೂ.ಗಳ ಮೌಲ್ಯದ ಸಾಸಿವೆ (10.93 ಕೋಟಿ ರೂ.ಗಳ ಮೌಲ್ಯದ 575000 ಮಿನಿಕಿಟ್‌ಗಳು), ನೆಲಗಡಲೆ (16.07 ಕೋಟಿ ರೂ.ಗಳ ಮೌಲ್ಯದ 70500 ಮಿನಿಕಿಟ್‌ಗಳು), ಸೋಯಾಬೀನ್ (11 ಕೋಟಿ ರೂ. ಮೌಲ್ಯದ 125,000 ಮಿನಿಕಿಟ್‌ಗಳು), ಕುಸುಬೆ (0.65 ಕೋಟಿ ರೂ.ಗಳ ಮೌಲ್ಯದ 32500 ಮಿನಿಕಿಟ್‌ಗಳು) ಮತ್ತು 0.57 ಕೋಟಿ ರೂ.ಗಳ ಮೌಲ್ಯದ 26,000 ಮಿನಿಕಿಟ್‌ಗಳನ್ನು ನೇರವಾಗಿ ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಸರ್ಕಾರವು 2021-22ರ ಹಿಂಗಾರು ಹಂಗಾಮಿನ ವಿಶೇಷ ಸಾಸಿವೆ ಮಿಷನ್ ಅನ್ನು ಜಾರಿಗೆ ತಂದಿತು. ಇದರ ಪರಿಣಾಮವಾಗಿ ಶೇ.20 ರಷ್ಟು ಪ್ರದೇಶ ಮತ್ತು ಶೇ. 15 ರಷ್ಟು ಉತ್ಪಾದನೆ ಹೆಚ್ಚಳಗೊಂಡಿದೆ. ಈ ವರ್ಷ (2022-23) 18 ರಾಜ್ಯಗಳ 301 ಜಿಲ್ಲೆಗಳಲ್ಲಿ50.41 ಕೋಟಿ ರೂ.ಗಳ ಮೌಲ್ಯದ 2653183 ರೇಪ್ಸೀಡ್ ಮತ್ತು ಸಾಸಿವೆ ಬೀಜಗಳ ಮಿನಿಕಿಟ್‌ಗಳ ಹಂಚಿಕೆಯನ್ನು ವಿಶೇಷ ಕಾರ್ಯಕ್ರಮವಾಗಿ ವಿತರಿಸಲು ಅನುಮೋದನೆ ನೀಡಲಾಗಿದೆ.
2014-15ನೇ ಸಾಲಿನಿಂದ ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವತ್ತ ಹೊಸ ಗಮನ ಹರಿಸಲಾಗಿದೆ. ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡಿವೆ. 2014-15ರಲ್ಲಿ27.51 ದಶ ಲಕ್ಷ ಟನ್ ಇದ್ದ ಎಣ್ಣೆಕಾಳುಗಳ ಉತ್ಪಾದನೆ 2021-22ರಲ್ಲಿ37.70 ದಶ ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ (4ನೇ ಮುಂಗಡ ಅಂದಾಜು). ದ್ವಿದಳ ಧಾನ್ಯಗಳ ಉತ್ಪಾದನೆಯು ಇದೇ ರೀತಿಯ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸಿದೆ. ಬೀಜ ಮಿನಿಕಿಟ್‌ಗಳ ಕಾರ್ಯಕ್ರಮವು ರೈತರ ಹೊಲಗಳಲ್ಲಿ ಹೊಸ ತಳಿಯ ಬೀಜಗಳನ್ನು ಪರಿಚಯಿಸುವ ಪ್ರಮುಖ ಸಾಧನವಾಗಿದೆ ಮತ್ತು ಬೀಜ ಬದಲಿ ದರವನ್ನು ಹೆಚ್ಚಿಸಲು ಪ್ರಮುಖ ಸಾಧನವಾಗಿದೆ.
ಬೇಳೆ ಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದಕತೆಯು ಕಳೆದ 3 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ದ್ವಿದಳ ಧಾನ್ಯಗಳ ಉತ್ಪಾದಕತೆಯನ್ನು ಹೆಕ್ಟೇರ್‌ಗೆ 727 ಕಿಗ್ರಾಂನಿಂದ (2018-19) 980 ಕಿಗ್ರಾಂ/ಹೆಕ್ಟೇರ್‌ಗೆ (4ನೇ ಮುಂಗಡ. ಅಂದಾಜುಗಳು, 2021-22) ಅಂದರೆ ಶೇ. 34.8 ರಷ್ಟು ಹೆಚ್ಚಳಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ, ಎಣ್ಣೆಕಾಳು ಬೆಳೆಗಳಲ್ಲಿಉತ್ಪಾದಕತೆಯನ್ನು ಹೆಕ್ಟೇರ್‌ಗೆ 1271 ಕಿಗ್ರಾಂನಿಂದ (2018-19) 1292 ಕಿಗ್ರಾಂ/ಹೆಕ್ಟೇರ್‌ಗೆ ಹೆಚ್ಚಿಸಲಾಗಿದೆ (4ನೇ ಮುಂಗಡ. ಅಂದಾಜುಗಳು, 2021-22).
ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಆ ಮೂಲಕ ಆತ್ಮನಿರ್ಭರ ಭಾರತದ ಉದ್ದೇಶವನ್ನು ಈಡೇರಿಸುವುದು ಸರ್ಕಾರದ ಆದ್ಯತೆಯಾಗಿದೆ. ಪ್ರದೇಶ ವಿಸ್ತರಣೆ, ಎಚ್‌ವೈವಿಗಳ ಮೂಲಕ ಉತ್ಪಾದಕತೆ, ಎಂಎಸ್‌ಪಿ ಬೆಂಬಲ ಮತ್ತು ಸಂಗ್ರಹಣೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವುದು ರೂಪಿಸಲಾದ ಕಾರ್ಯತಂತ್ರಗಳಾಗಿವೆ.
*******
(Release ID: 1861622)
Visitor Counter : 383