ಸಂಪುಟ
ಅತ್ಯಧಿಕ ದಕ್ಷತೆಯ ಸೌರಶಕ್ತಿ ಫೋಟೊ ವೋಲ್ಟಾಯಿಕ್(ಪಿವಿ) ಮಾಡ್ಯೂಲ್(ಕೋಶಗಳು)ಗಳ ಉತ್ಪಾದನಾ ಸಾಮರ್ಥ್ಯವನ್ನು ಗಿಗಾ ವ್ಯಾಟ್ ಮಟ್ಟಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಗುರಿ 'ಅಧಿಕ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ಗಳ ರಾಷ್ಟ್ರೀಯ ಕಾರ್ಯಕ್ರಮ'ಕ್ಕೆ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ) ಒದಗಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ
Posted On:
21 SEP 2022 3:45PM by PIB Bengaluru
'ಅತ್ಯಧಿಕ ದಕ್ಷತೆಯ ಸೌರಶಕ್ತಿಯ ಫೋಟೊ ವೋಲ್ಟಾಯಿಕ್(ಪಿವಿ) ಸೆಲ್ಸ್ ಅಥವಾ ಮಾಡ್ಯೂಲ್(ಸೌರಶಕ್ತಿ ಕೋಶಗಳು)ಗಳ ರಾಷ್ಟ್ರೀಯ ಕಾರ್ಯಕ್ರಮ'ಕ್ಕೆ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(2ನೇ ಹಂತ)ಯನ್ನು ವಿಸ್ತರಿಸುವ 'ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸಚಿವಾಲಯ'ದ ಪ್ರಸ್ತಾವನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅತ್ಯಧಿಕ ದಕ್ಷತೆಯ ಸೌರಶಕ್ತಿಯ ಪಿವಿ ಮಾಡ್ಯೂಲ್‌ಗಳಲ್ಲಿ ಗಿಗಾ ವ್ಯಾಟ್ ಮಟ್ಟದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ 19,500 ಕೋಟಿ ರೂ. ಗಾತ್ರದ ಬೃಹತ್ ಮತ್ತು ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
'ಅತ್ಯಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ರಾಷ್ಟ್ರೀಯ ಕಾರ್ಯಕ್ರಮ'ವು ಭಾರತದಲ್ಲಿ ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಗೆ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಿದೆ. ಇದರಿಂದಾಗಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಮದು ಅವಲಂಬನೆ ಕಡಿಮೆ ಮಾಡುತ್ತದೆ. ಇದು ಆತ್ಮನಿರ್ಭರ್ ಭಾರತ್ ಉಪಕ್ರಮವನ್ನು ಬಲಪಡಿಸುತ್ತದೆ ಮತ್ತು ಅಪಾರ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಸೌರಶಕ್ತಿ ಫೋಟೊ ವೋಲ್ಟಾಯಿಕ್ ಕೋಶಗಳ ತಯಾರಕ ಕಂಪನಿಗಳನ್ನು ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಸೌರಶಕ್ತಿ ಪಿವಿ ಕೋಶಗಳ ಉತ್ಪಾದನಾ ಘಟಕಗಳು ಕಾರ್ಯಾಚರಣೆ ಆರಂಭಿಸಿದ ನಂತರ 5 ವರ್ಷಗಳವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಅಧಿಕ ದಕ್ಷತೆಯ ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ ಮಾರಾಟಕ್ಕೆ ಉತ್ಪಾದನಾ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ)ಯ ಪ್ರಯೋಜನಗಳನ್ನು ವಿತರಿಸಲಾಗುತ್ತದೆ.
ಪಿಎಲ್ಐ ಯೋಜನೆಯ ನಿರೀಕ್ಷಿತ ಫಲಿತಾಂಶಗಳು, ಪ್ರಯೋಜನಗಳು ಈ ಕೆಳಕಂಡಂತಿವೆ:
1.ವಾರ್ಷಿಕವಾಗಿ ಸುಮಾರು 65,000 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಸಂಪೂರ್ಣ ಮತ್ತು ಭಾಗಶಃ ಸಂಯೋಜಿತ, ಸೌರಶಕ್ತಿ ಪಿವಿ ಮಾಡ್ಯೂಲ್‌ಗಳ(ಘಟಕಗಳು ಅಥವಾ ಸ್ಥಾವರಗಳು) ಸ್ಥಾಪನೆ ಆಗಲಿದೆ ಎಂದು ಅಂದಾಜಿಸಲಾಗಿದೆ.
2.ಈ ಯೋಜನೆಯು ಸುಮಾರು 94,000 ಕೋಟಿ ರೂ. ನೇರ ಹೂಡಿಕೆಯನ್ನು ಆಕರ್ಷಿಸಲಿದೆ(ಹೂಡಿಕೆ ಒಳಹರಿವಾಗಲಿದೆ).
3.ಎಥಿನಿಲ್ ವೀನೈಲ್ ಅಸಿಟೇಟ್(ಇವಿಎ), ಸೋಲಾರ್ ಗ್ಲಾಸ್, ಬ್ಯಾಕ್‌ಶೀಟ್ ಇತ್ಯಾದಿ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆ ಸಮತೋಲನ ಕಾಪಾಡಲು ಉತ್ಪಾದನಾ ಸಾಮರ್ಥ್ಯ ಸೃಜಿಸಲಿದೆ.
4. ಸುಮಾರು 1,95,000 ನೇರ ಉದ್ಯೋಗಗಳು ಮತ್ತು 7,80,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
5.ಅಂದಾಜು 1.37 ಲಕ್ಷ ಕೋಟಿ ರೂ. ಮೌಲ್ಯದ ಆಮದು ವೆಚ್ಚ ತಗ್ಗಲಿದೆ.
6.ಸೌರಶಕ್ತಿ ಫೋಟೊ ವೋಲ್ಟಾಯಿಕ್ ಕೋಶಗಳ ಉತ್ಪಾದನೆಯ ಅತ್ಯಧಿಕ ದಕ್ಷತೆ ಸಾಧಿಸುವ ರಾಜಮಾರ್ಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉತ್ತೇಜನ ಒದಗಿಸಲಿದೆ.
*****
(Release ID: 1861226)
Visitor Counter : 239
Read this release in:
Odia
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam