ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಇಪಿಎಫ್‌ಒ ವೇತನದಾರರ ದತ್ತಾಂಶ: ಇಪಿಎಫ್‌ಒ 2022ರ ಜುಲೈ ತಿಂಗಳಲ್ಲಿ18.23 ಲಕ್ಷ  ಒಟ್ಟು ಸದಸ್ಯರು ಸೇರ್ಪಡೆ

Posted On: 20 SEP 2022 5:31PM by PIB Bengaluru

2022ರ ಸೆಪ್ಟೆಂಬರ್‌ 20 ರಂದು ಬಿಡುಗಡೆಯಾದ ಇಪಿಎಫ್‌ಒನ ತಾತ್ಕಾಲಿಕ ವೇತನದಾರರ ದತ್ತಾಂಶವು 2022ರ ಜುಲೈ ತಿಂಗಳಲ್ಲಿಇಪಿಎಫ್‌ಒ 18.23 ಲಕ್ಷ  ಒಟ್ಟು ಸದಸ್ಯರನ್ನು ಸೇರ್ಪಡೆಗೊಳಿಸಿದೆ ಎಂದು ಪ್ರತಿಬಿಂಬಿಸುತ್ತದೆ. 2021ರಲ್ಲಿಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ, 2022ರ ಜುಲೈನಲ್ಲಿ ಒಟ್ಟು ಸದಸ್ಯತ್ವ ಸೇರ್ಪಡೆಯಲ್ಲಿ ಶೇಕಡಾ 24.48 ರಷ್ಟು ಹೆಚ್ಚಳ ಕಂಡು ಬಂದಿದೆ.

ಈ ತಿಂಗಳಲ್ಲಿಒಟ್ಟು 18.23 ಲಕ್ಷ  ಸದಸ್ಯರ ಪೈಕಿ, ಸುಮಾರು 10.58 ಲಕ್ಷ  ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್‌ಒನ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದು 2022ರ ಏಪ್ರಿಲ್‌ನಿಂದ ಇಪಿಎಫ್‌ಒಗೆ ಸೇರುವ ಹೊಸ ಸದಸ್ಯರ ದತ್ತಾಂಶವು ಬೆಳೆಯುತ್ತಿರುವ ಪ್ರವೃತ್ತಿಯನ್ನು ತೋರಿಸಿದೆ. ಹೊಸದಾಗಿ ಸೇರ್ಪಡೆಗೊಂಡ 10.58 ಲಕ್ಷ  ಸದಸ್ಯರಲ್ಲಿ, ಸುಮಾರು ಶೇಕಡಾ 57.69 ರಷ್ಟು ಜನರು 18-25 ವರ್ಷ ವಯಸ್ಸಿನವರಾಗಿದ್ದಾರೆ. ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳು ತಮ್ಮ ಶಿಕ್ಷಣವನ್ನು ಅನುಸರಿಸಿ ಸಂಘಟಿತ ವಲಯದ ಕಾರ್ಯಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ ಮತ್ತು ಸಂಘಟಿತ ವಲಯದಲ್ಲಿನ ಹೊಸ ಉದ್ಯೋಗಗಳು ಹೆಚ್ಚಾಗಿ ದೇಶದ ಯುವಕರಿಗೆ ಹೋಗುತ್ತಿವೆ ಎಂದು ಇದು ಬಿಂಬಿಸುತ್ತದೆ.

ಈ ತಿಂಗಳಲ್ಲಿ, ಸುಮಾರು 4.07 ಲಕ್ಷ  ಸದಸ್ಯರು ಇಪಿಎಫ್‌ಒ ವ್ಯಾಪ್ತಿಯಿಂದ ನಿರ್ಗಮಿಸಿದರು ಮತ್ತು 11.72 ಲಕ್ಷ  ಸದಸ್ಯರು ನಿರ್ಗಮಿಸಿ ಇಪಿಎಫ್‌ಒಗೆ ಮತ್ತೆ ಸೇರ್ಪಡೆಯಾಗಿದ್ದಾರೆ. ಈ ಸದಸ್ಯರು ಅಂತಿಮ ಇತ್ಯರ್ಥವನ್ನು ಆಯ್ಕೆ ಮಾಡುವ ಬದಲು ಹಣ ವರ್ಗಾವಣೆಯ ಮೂಲಕ ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ತಡೆರಹಿತ ಮತ್ತು ಅಡೆತಡೆಯಿಲ್ಲದ ಸೇವೆ ವಿತರಣೆಗಾಗಿ ಇಪಿಎಫ್‌ಒ ತೆಗೆದುಕೊಂಡ ವಿವಿಧ ಇ-ಉಪಕ್ರಮಗಳು ಇದಕ್ಕೆ ಕಾರಣವಾಗಿರಬಹುದು.

ವೇತನದ ದತ್ತಾಂಶದ ಲಿಂಗವಾರು ವಿಶ್ಲೇಷಣೆಯು 2022ರ ಜುಲೈನಲ್ಲಿಒಟ್ಟು (ನಿವ್ವಳ) ಮಹಿಳಾ ಸದಸ್ಯರ ದಾಖಲಾತಿ 4.06 ಲಕ್ಷ  ಎಂದು ಸೂಚಿಸುತ್ತದೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ದತ್ತಾಂಶದ ಹೋಲಿಕೆಯು ಸಂಘಟಿತ ಕಾರ್ಯಪಡೆಯಲ್ಲಿಮಹಿಳೆಯರ ಹೊಸ ಸದಸ್ಯತ್ವವು 2021ರ ಜುಲೈನ ಹೊಸ ಮಹಿಳಾ ಸದಸ್ಯತ್ವಕ್ಕೆ ಹೋಲಿಸಿದರೆ 2022ರ ಜುಲೈನಲ್ಲಿಶೇಕಡಾ 34.84 ರಷ್ಟು ಹೆಚ್ಚಾಗಿದೆ ಎಂದು ಬಿಂಬಿತವಾಗಿದೆ.

ಈ ತಿಂಗಳಲ್ಲಿಇಪಿಎಫ್‌ಒಗೆ ಸೇರುವ ಒಟ್ಟು ಹೊಸ ಸದಸ್ಯರಲ್ಲಿ, ಮಹಿಳಾ ಉದ್ಯೋಗಿಗಳ ದಾಖಲಾತಿಯು ಶೇ. 27.54 ರಷ್ಟು ಎಂದು ದಾಖಲಾಗಿದೆ, ಇದು ಕಳೆದ 12 ತಿಂಗಳುಗಳಲ್ಲಿ ಅತ್ಯಧಿಕವಾಗಿದೆ. ಇಪಿಎಫ್‌ಒಗೆ ಸೇರುವ ಹೊಸ ಸದಸ್ಯರಿಗೆ ಸಂಬಂಧಿಸಿದಂತೆ ಸಂಘಟಿತ ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತದೆ.

ತಮಿಳುನಾಡು, ದೆಹಲಿ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಒಟ್ಟು ಸದಸ್ಯರ ಸೇರ್ಪಡೆಯಲ್ಲಿ ತಿಂಗಳು-ತಿಂಗಳು ಬೆಳೆಯುತ್ತಿರುವ ಪ್ರವೃತ್ತಿಯನ್ನು ಗಮನಿಸಲಾಗಿದೆ ಎಂದು ರಾಜ್ಯವಾರು ವೇತನದಾರರ ಪಟ್ಟಿ ಅಂಕಿಅಂಶಗಳು ಬಿಂಬಿಸುತ್ತವೆ. ಈ ತಿಂಗಳಲ್ಲಿ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ, ಗುಜರಾತ್‌ ಮತ್ತು ದೆಹಲಿ ರಾಜ್ಯಗಳು ತಿಂಗಳಲ್ಲಿಸುಮಾರು 12.46 ಲಕ್ಷ  ಒಟ್ಟು ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಮುಂಚೂಣಿಯಲ್ಲಿವೆ, ಇದು ಎಲ್ಲಾ ವಯೋಮಾನದವರ ಒಟ್ಟು ಒಟ್ಟು ವೇತನದ ಸೇರ್ಪಡೆಯ ಶೇಕಡಾ 68.36 ರಷ್ಟಾಗಿದೆ.

ಉದ್ಯಮವಾರು ವೇತನಪಟ್ಟಿ ದತ್ತಾಂಶದ ವರ್ಗೀಕರಣವು ಮುಖ್ಯವಾಗಿ ಎರಡು ವರ್ಗಗಳು ಅಂದರೆ ‘ ಪರಿಣತ ಸೇವೆಗಳು ’ (ಮಾನವಶಕ್ತಿ ಏಜೆನ್ಸಿಗಳು, ಖಾಸಗಿ ಭದ್ರತಾ ಏಜೆನ್ಸಿಗಳು ಮತ್ತು ಸಣ್ಣ ಗುತ್ತಿಗೆದಾರರು ಇತ್ಯಾದಿಗಳನ್ನು ಒಳಗೊಂಡಿರುತ್ತದೆ) ಮತ್ತು ‘ ವ್ಯಾಪಾರ-ವಾಣಿಜ್ಯ ಸಂಸ್ಥೆಗಳು ’ ತಿಂಗಳಲ್ಲಿಒಟ್ಟು ಸದಸ್ಯ ಸೇರ್ಪಡೆಯ ಶೇಕಡಾ 46.20 ರಷ್ಟನ್ನು ಹೊಂದಿವೆ ಎಂದು ಸೂಚಿಸುತ್ತದೆ. ಉದ್ಯಮವಾರು ದತ್ತಾಂಶಗಳನ್ನು ಹಿಂದಿನ ತಿಂಗಳ ದತ್ತಾಂಶದೊಂದಿಗೆ ಹೋಲಿಸಿ ನೋಡಿದರೆ, ‘ ಶಾಲೆಗಳು’, ‘ ಕಟ್ಟಡ ಮತ್ತು ನಿರ್ಮಾಣ ಉದ್ಯಮ’, ‘ಹಣಕಾಸು ಸ್ಥಾಪನೆ’ ಮುಂತಾದ ಕೈಗಾರಿಕೆಗಳಲ್ಲಿ ಹೆಚ್ಚಿನ ದಾಖಲಾತಿಗಳು ಕಂಡುಬಂದಿವೆ.

ಉದ್ಯೋಗಿಗಳ ದಾಖಲೆಯ ನವೀಕರಣವು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ದತ್ತಾಂಶ ಉತ್ಪಾದನೆಯು ಒಂದು ನಿರಂತರ ವ್ಯಾಯಾಮವಾಗಿರುವುದರಿಂದ ವೇತನದಾರರ ಪಟ್ಟಿ ದತ್ತಾಂಶವು ತಾತ್ಕಾಲಿಕವಾಗಿರುತ್ತದೆ. ಆದ್ದರಿಂದ 2018ರ ಏಪ್ರಿಲ್‌ನಿಂದ ಹಿಂದಿನ ದತ್ತಾಂಶವು ಪ್ರತಿ ತಿಂಗಳು ನವೀಕರಿಸಲ್ಪಡುತ್ತದೆ, ಇಪಿಎಫ್‌ಒ  2017ರ ಸೆಪ್ಟೆಂಬರ್‌ನಿಂದ ವೇತನ ದತ್ತಾಂಶವನ್ನು ಬಿಡುಗಡೆ ಮಾಡುತ್ತಿದೆ. ಮಾಸಿಕ ವೇತನದಾರರ ದತ್ತಾಂಶದಲ್ಲಿ, ಆಧಾರ್‌ ಮೌಲ್ಯೀಕರಿಸಿದ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಮೂಲಕ ಮೊದಲ ಬಾರಿಗೆ ಇಪಿಎಫ್‌ಒಗೆ ಸೇರುವ ಸದಸ್ಯರ ಎಣಿಕೆ, ಇಪಿಎಫ್‌ಒ ವ್ಯಾಪ್ತಿಯಿಂದ ನಿರ್ಗಮಿಸುವ ಹಾಲಿ ಸದಸ್ಯರು ಮತ್ತು ಸದಸ್ಯರಾಗಿ ನಿರ್ಗಮಿಸಿದ ಆದರೆ ಸದಸ್ಯರಾಗಿ ಮತ್ತೆ ಸೇರ್ಪಡೆಯಾಗುವವರ ಸಂಖ್ಯೆಯನ್ನು ಒಟ್ಟು ಮಾಸಿಕ ವೇತನಪಟ್ಟಿಗೆ ತಲುಪಲು ತೆಗೆದುಕೊಳ್ಳಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿಸ್ಮಾರ್ಟ್‌ಫೋನ್‌ಗಳ  ವ್ಯಾಪಕ ಬಳಕೆಯೊಂದಿಗೆ, ಇಪಿಎಫ್‌ಒ ಮೊಬೈಲ್‌ ಆಡಳಿತದ ಮೂಲಕವೂ ತನ್ನ ಸೇವೆಗಳನ್ನು ವಿಸ್ತರಿಸಿದೆ. ಇಪಿಎಫ್‌ಒ ಈಗ ಟ್ವಿಟರ್‌, ವಾಟ್‌ಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲಿಯೂ  ಸದಸ್ಯರಿಗೆ ನೆರವಾಗಲು ಲಭ್ಯವಿದೆ.

*****


(Release ID: 1860999) Visitor Counter : 147