ಕಲ್ಲಿದ್ದಲು ಸಚಿವಾಲಯ

ನಾಳೆಯಿಂದ 10 ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭ

Posted On: 12 SEP 2022 5:39PM by PIB Bengaluru

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಗಾಗಿ ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶನ ಪ್ರಾಧಿಕಾರ  ಬಿಡ್ ಗಳನ್ನು ಆಹ್ವಾನಿಸಿದೆ. ಬಿಡ್ ಗಳ ತಾಂತ್ರಿಕ ಮೌಲ್ಯಮಾಪನ ಪೂರ್ಣಗೊಂಡಿದೆ ಮತ್ತು ನಾಳೆಯಿಂದ 10 ವಾಣಿಜ್ಯ ಕಲ್ಲಿದ್ದಲು ಗಣಿಗಳ ಇ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

 2022 ರ ಸೆಪ್ಟೆಂಬರ್ 13 ರಂದು 8 ಕಲ್ಲಿದ್ದಲು ಗಣಿಗಳು ಮತ್ತು ಸೆಪ್ಟೆಂಬರ್ 14 ರಂದು ಎರಡು ಕಲ್ಲಿದ್ದಲು ಗಣಿಗಳ ಇ ಹರಾಜು ಪ್ರಕ್ರಿಯೆ ನಡೆಯಲಿದೆ. ಇ ಹರಾಜಿಗಾಗಿ ಗಣಿಗಳ ಒಟ್ಟು ಗರಿಷ್ಠ ಸಾಮರ್ಥ್ಯ [ಪಿ.ಆರ್.ಸಿ] ವಾರ್ಷಿಕ 39.31 ದಶಲಕ್ಷ ಟನ್ ನಷ್ಟಿದೆ.  

ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶನ ಪ್ರಾಧಿಕಾರ ಈ ವರೆಗೆ ವಾರ್ಷಿಕ 85.54 ದಶಲಕ್ಷ ಟನ್ ಸಾಮರ್ಥ್ಯದ 43 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಹಾಕಿದೆ.

*****



(Release ID: 1858837) Visitor Counter : 95


Read this release in: Hindi , Tamil , English , Urdu , Telugu