ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಸಚಿವಾಲಯದಿಂದ '75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ' ಗೆ ಪ್ರವೇಶ ಆಹ್ವಾನ'

Posted On: 05 SEP 2022 5:17PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯದ '75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ' ಗೆ ಇಂದಿನಿಂದ ಪ್ರವೇಶ ಸಲ್ಲಿಕೆ ಆರಂಭವಾಗಿದೆ. ಗೋವಾದಲ್ಲಿ ನಡೆಯುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ನಿರ್ಮಾಣದ ವಿವಿಧ ಆಯಾಮಗಳಲ್ಲಿ ಯುವ  ಸೃಜನಶೀಲ ಪ್ರತಿಭೆಗಳನ್ನು  ಗುರುತಿಸಲು, ಪ್ರೋತ್ಸಾಹಿಸಲು ಮತ್ತು ಉತ್ತೇಜಿಸುವ ವಾರ್ಷಿಕ ವೇದಿಕೆ ಇದಾಗಿದೆ. 


ಈ ಉಪಕ್ರಮ  ತನ್ನ ಎರಡನೇ ವರ್ಷ ಪ್ರವೇಶಿಸಿದೆ, 2021ರಲ್ಲಿ ಭಾರತದ ಸ್ವಾತಂತ್ರ್ಯದ 75ನೇ ವರ್ಷದ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆಯ ಭಾಗವಾಗಿ ಇದನ್ನು ಪ್ರಾರಂಭಿಸಲಾಯಿತು.  ಭಾರತದ ಸ್ವಾತಂತ್ರ್ಯದ ವರ್ಷಗಳನ್ನೇ ಚಲನಚಿತ್ರ ನಿರ್ಮಾಪಕರ ಸಂಖ್ಯೆಯೂ ಸಂಕೇತಿಸುತ್ತದೆ. ಮುಂದಿನ ವರ್ಷಗಳಲ್ಲಿ ಕ್ರಿಯೇಟಿವ್ ಮೈಂಡ್ಸ್ ನಲ್ಲಿ ಭಾಗವಹಿಸುವ ಯುವಕರ ಸಂಖ್ಯೆ ಒಂದೊಂದಾಗಿ ಹೆಚ್ಚುತ್ತದೆ ಮತ್ತು ಪ್ರಯತ್ನದ ಸ್ಫೂರ್ತಿಯನ್ನು ಜೀವಂತವಾಗಿರಿಸುತ್ತದೆ ಎಂದು ಅಂದಾಜಿಸಲಾಗಿದೆ.


ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ  53ನೇ ಆವೃತ್ತಿಗೆ ಮುಂಚಿತವಾಗಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ, ಪ್ರಸಿದ್ಧ ತೀರ್ಪುಗಾರರ ಮೂಲಕ ಅರ್ಜಿಗಳ ಸಲ್ಲಿಕೆಗಳ ಆಧಾರದ ಮೇಲೆ  75 ಕ್ರಿಯೇಟಿವ್ ಮೈಂಡ್ ಗಳನ್ನು ಕಿರುಪಟ್ಟಿ ಮಾಡಿ, ಆಯ್ಕೆ  ಮಾಡಲಾಗುತ್ತದೆ. ಈ ಕಾರ್ಯಕ್ರಮವು ಯುವ ಉದಯೋನ್ಮುಖ ಚಲನಚಿತ್ರ ತಯಾರಕರನ್ನು ಗುರುತಿಸುತ್ತದೆ ಮತ್ತು ಗೋವಾದ ಇಫ್ಫಿ (ಐ.ಎಫ್.ಎಫ್.ಐ.)ಯ ಅವಧಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ತಯಾರಕರಿಂದ ಸಂವಹನ ನಡೆಸಲು ಮತ್ತು ಕಲಿಯಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದು, ವಿಶ್ವದಾದ್ಯಂತದ ಯಾವುದೇ ಒಂದು ಪ್ರಮುಖ ಚಲನಚಿತ್ರೋತ್ಸವದಲ್ಲಿ ಯುವ ಸೃಜನಶೀಲ ಮನಸ್ಸುಗಳ ಅತಿದೊಡ್ಡ ಕೂಟವನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತಿರುವ ಒಂದು ವಿಶಿಷ್ಟ ವೇದಿಕೆಯಾಗಿದೆ; 2021ರಲ್ಲಿ  ಕೇಂದ್ರ ವಾರ್ತಾ ಮತ್ತು ಪ್ರಸಾರ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಲು ಮತ್ತು ಅವರನ್ನು ಮಾಧ್ಯಮ ಮತ್ತು ಮನರಂಜನಾ ವಲಯದ ಉದ್ಯಮದ ದಿಗ್ಗಜರೊಂದಿಗೆ ಸಂಪರ್ಕಿಸಲು ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರು.


ಗೋವಾದಲ್ಲಿ ನಡೆಯಲಿರುವ ಉತ್ಸವದಲ್ಲಿ ಆಯ್ದ '75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ' ಸಹ ವಿಶೇಷವಾಗಿ ಸಿನೆಮಾ ದಿಗ್ಗಜರುಗಳು ನಡೆಸಿಕೊಡುವ ಕಾರ್ಯಾಗಾರಗಳು ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಪ್ರತಿ ತಂಡವು  53 ಗಂಟೆಗಳಲ್ಲಿ  ಕಿರುಚಿತ್ರವನ್ನು ನಿರ್ಮಿಸಲು ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಕಿರುಚಿತ್ರದ ವಿಷಯಗಳು ಆಜಾದಿ ಕಾ ಅಮೃತ ಮಹೋತ್ಸವದ ಸ್ಫೂರ್ತಿಯನ್ನು ಆಧರಿಸಿರುತ್ತವೆ, ಇದರಲ್ಲಿ ತಂಡಗಳು India@100 ಕುರಿತಂತೆ ತಮ್ಮ ಕಲ್ಪನೆಯನ್ನು ಪ್ರದರ್ಶಿಸುತ್ತವೆ. ಆಯ್ಕೆಯಾದ ಕ್ರಿಯೇಟಿವ್ ಮೈಂಡ್ಸ್ ಗಳನ್ನು ಈ ಉಪಕ್ರಮದ ಕಾರ್ಯಕ್ರಮ ಪಾಲುದಾರ ಶಾರ್ಟ್ಸ್ ಟಿವಿಯೊಂದಿಗೆ ಸಮಾಲೋಚಿಸಿ ಏಳು ತಂಡಗಳ ಭಾಗವಾಗಿ ಮಾಡಲಾಗುವುದು. ಏಳು ತಂಡಗಳು ನಿರ್ಮಿಸಿದ ಚಿತ್ರಗಳು  2022ರ ನವೆಂಬರ್ 24 ರಂದು ಇಫ್ಫಿಯಲ್ಲಿ  ರಂಗ ಪ್ರದರ್ಶನಗೊಳ್ಳುತ್ತದೆ.  ನಂತರ ವಿಜೇತ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.  ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಸ್ಪರ್ಧಿಗಳನ್ನೂ ಗುರುತಿಸುವ ಕಾರ್ಯ ಮಾಡಲಾಗುತ್ತದೆ.


ಯುವ ಪ್ರತಿಭೆಗಳನ್ನು ಗುರುತಿಸುವ, ಪೋಷಿಸುವ ಮತ್ತು ಅವರ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಮತ್ತು ಅವರನ್ನು ಉದ್ಯಮ ಸಂಪರ್ಕ ಮತ್ತು ಸನ್ನದ್ಧಗೊಳಿಸುವ ಮೂಲಕ ಭಾರತವನ್ನು ವಿಶ್ವಕ್ಕೆ ವಸ್ತು ವಿಷಯ ಮತ್ತು ಚಿತ್ರ ತಯಾರಿಕೆಯೋತ್ತರ ತಾಣ ಮಾಡುವ ನಿಟ್ಟಿನಲ್ಲಿ ಈ ಉಪಕ್ರಮವು ಮತ್ತೊಂದು ಹೆಜ್ಜೆಯಾಗಿದೆ. ಈ ಉಪಕ್ರಮವು ಯುವ ಚಲನಚಿತ್ರ ನಿರ್ಮಾಪಕರ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತಿದೆ ಮತ್ತು ನಿರ್ಮಿಸುತ್ತಿದೆ, ಇದು ಆರಂಭಿಕ ಹಂತದಿಂದಲೇ ಜಾಲ ಮತ್ತು ಸಹಯೋಗಕ್ಕೆ ಅನುವು ಮಾಡಿಕೊಡುತ್ತದೆ.  ಸಚಿವಾಲಯವು ಫಲಪ್ರದ ಮಧ್ಯಸ್ಥಿಕೆಗಳನ್ನು ಪರಿಚಯಿಸಲು ಯೋಜಿಸಿದೆ, ಇದರಿಂದ ಭಾಗವಹಿಸುವವರು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಲಾಭದಾಯಕ ಉದ್ಯೋಗಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿರುತ್ತದೆ.

ಪ್ರವೇಶ ಸಲ್ಲಿಕೆ https://www.iffigoa.org/creativeminds  ನಲ್ಲಿ ಸೆಪ್ಟೆಂಬರ್ 5, 2022ರಿಂದ 2022ರ ಸೆಪ್ಟೆಂಬರ್ 23ರವರೆಗೆ ತೆರೆದಿರುತ್ತದೆ



(Release ID: 1856951) Visitor Counter : 145