ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಪುಣೆಯಲ್ಲಿ ಕೆ.ಪಿ.ಐ.ಟಿ.-ಸಿ.ಎಸ್.ಐ.ಆರ್. ಅಭಿವೃದ್ಧಿಪಡಿಸಿದ ಭಾರತದ ಮೊದಲ ಸಂಪೂರ್ಣ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಸೆಲ್ ಬಸ್ ಅನ್ನು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಉದ್ಘಾಟನೆಗೊಳಿಸಿದರು; ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ರಾಷ್ಟ್ರೀಯ ಹಸಿರು ಹೈಡ್ರೋಜನ್ ಸಂಕಲ್ಪಕ್ಕೆ ಅನುಗುಣವಾಗಿದೆ ಎಂದು ಸಚಿವರು ಹೇಳಿದರು
ಇಂಧನ ಕೋಶವು ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸಿ ಬಸ್ ಗೆ ಶಕ್ತಿ ತುಂಬಲು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಬಸ್ನಿಂದ ಹೊರಸೂಸುವ ಏಕೈಕ ತ್ಯಾಜ್ಯ ನೀರು,
ಹೀಗಾಗಿ ಇದು ಅತ್ಯಂತ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದೆ ಎಂದು ಸಚಿವರು ತಿಳಿದರು.
ಇಂಧನ ಕೋಶದ ವಾಹನಗಳ ಹೆಚ್ಚಿನ ದಕ್ಷತೆಯು ಡೀಸೆಲ್ ಚಾಲಿತ ವಾಹನಗಳಿಗಿಂತ ಕಿಲೋಮೀಟರ್ ಗೆ ಕಡಿಮೆ ಕಾರ್ಯಾಚರಣೆಯ ವೆಚ್ಚವನ್ನು ಖಾತ್ರಿಗೊಳಿಸುತ್ತದೆ ಮತ್ತು ಭಾರತದಲ್ಲಿ ಸರಕು ಕ್ಷೇತ್ರದಲ್ಲಿ ಕ್ರಾಂತಿಯನ್ನು ತರಬಹುದು: ಸಚಿವ ಡಾ ಜಿತೇಂದ್ರ ಸಿಂಗ್
ಸಿ.ಎಸ್.ಐ.ಆರ್. – ಎನ್.ಸಿ.ಎಲ್. ನಲ್ಲಿ ಬಿಸ್ಫೆನಾಲ್-ಎ ಪೈಲಟ್ ಸ್ಥಾವರವನ್ನು ಸಚಿವ ಡಾ ಜಿತೇಂದ್ರ ಸಿಂಗ್ ಅವರು ಉದ್ಘಾಟಿಸಿದರು, ಇದು ಎಪಾಕ್ಸಿ ರೆಸಿನ್ಗಳು, ಪಾಲಿಕಾರ್ಬೊನೇಟ್ ಮತ್ತು ಇತರ ಎಂಜಿನಿಯರಿಂಗ್ ಪ್ಲಾಸ್ಟಿಕ್ ಗಳ ಉತ್ಪಾದನೆಗೆ ಪ್ರಮುಖ ಫೀಡ್ಸ್ಟಾಕ್ ಆಗಿರುತ್ತದೆ.
Posted On:
21 AUG 2022 4:01PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ(ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಗಳ ರಾಜ್ಯಖಾತೆ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಇಂದು ಪುಣೆಯಲ್ಲಿ ಕೆ.ಪಿ.ಐ.ಟಿ.-ಸಿ.ಎಸ್.ಐ.ಆರ್. ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸಂಪೂರ್ಣ ಸ್ಥಳೀಯವಾಗಿ ನಿರ್ಮಿಸಿದ ಹೈಡ್ರೋಜನ್ ಇಂಧನ ಸೆಲ್ ಬಸ್ ಅನ್ನು ಉದ್ಘಾಟಿಸಿದರು.
ಆತ್ಮ ನಿರ್ಭರ್ ಎಂದರೆ ಕೈಗೆಟುಕುವ ಮತ್ತು ಸುಲಭದಲ್ಲಿ ಲಭ್ಯವಾಗುವ ಶುದ್ಧ ಇಂಧನ, ಹವಾಮಾನ ಬದಲಾವಣೆಯ ಗುರಿಗಳನ್ನು ಪೂರೈಸುವುದು ಮತ್ತು ಹೊಸ ಉದ್ಯಮಿಗಳು ಹಾಗೂ ಉದ್ಯೋಗಗಳನ್ನು ಸೃಷ್ಟಿಸುವುದಾಗಿದೆ, ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಹೈಡ್ರೋಜನ್ ವಿಷನ್ ಭಾರತಕ್ಕೆ ಬಹಳ ಮುಖ್ಯವಾಗಿದೆ ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು. ಹಸಿರು ಹೈಡ್ರೋಜನ್ ಒಂದು ಅತ್ಯುತ್ತಮವಾದ ಶುದ್ಧ ಶಕ್ತಿ ವೆಕ್ಟರ್ ಆಗಿದ್ದು, ಆಳವಾದ ಡಿಕಾರ್ಬೊನೈಸೇಶನ್ ಅನ್ನು ಸಶಕ್ತಗೊಳಿಸಿ ಸಂಸ್ಕರಣಾ ಉದ್ಯಮ, ರಸಗೊಬ್ಬರ ಉದ್ಯಮ, ಉಕ್ಕಿನ ಉದ್ಯಮ, ಸಿಮೆಂಟ್ ಉದ್ಯಮ ಮತ್ತು ಭಾರೀ ವಾಣಿಜ್ಯ ಸಾರಿಗೆ ವಲಯದಿಂದ ಆರೋಗ್ಯಕರ ಜೀವನಕ್ಕೆ ಕಷ್ಟಕರವಾದ ಕಾರ್ಬನ್ ಡೈ ಓಕ್ಸೈಡ್ ನ ಹೊರಸೂಸುವಿಕೆಯನ್ನು ತಡೆಯುತ್ತದೆ ಎಂದು ಸಚಿವರು ಹೇಳಿದರು.
ಇಂಧನ ಕೋಶವು ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸಿಕೊಂಡು ಬಸ್ ಗೆ ಆವಶ್ಯಕ ಶಕ್ತಿ ತುಂಬಲು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಬಸ್ ನಿಂದ ಹೊರಬರುವ ಏಕೈಕ ತ್ಯಾಜ್ಯವೆಂದರೆ ಅದು ನೀರು, ಆದ್ದರಿಂದ ಇದು ಅತ್ಯಂತ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದೆ ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದರು. ಹೋಲಿಕೆಗಾಗಿ, ದೂರದ ಮಾರ್ಗಗಳಲ್ಲಿ ಚಲಿಸುವ ಒಂದು ಡೀಸೆಲ್ ಬಸ್ ಸಾಮಾನ್ಯವಾಗಿ ವಾರ್ಷಿಕವಾಗಿ 100 ಟನ್ ಸಿಒ2 ಅನ್ನು ಹೊರಸೂಸುತ್ತದೆ ಮತ್ತು ಭಾರತದಲ್ಲಿ ಅಂತಹ ಹತ್ತು ಲಕ್ಷಕ್ಕಿಂತಲೂ ಅಧಿಕ ಬಸ್ ಗಳಿವೆ ಎಂಬ ಅಂಕಿಸಂಖ್ಯೆಗಳನ್ನು ಸಚಿವರು ಭಾಷಣದಲ್ಲಿ ಉಲ್ಲೇಖಿಸಿದರು.
ಇಂಧನ ಕೋಶ ವಾಹನಗಳ ಹೆಚ್ಚಿನ ದಕ್ಷತೆ ಮತ್ತು ಹೈಡ್ರೋಜನ್ ನ ಹೆಚ್ಚಿನ ಶಕ್ತಿಯ ಸಾಂದ್ರತೆಯಿಂದಾಗಿ ಪ್ರತಿ ಕಿಲೋಮೀಟರ್ ಗೆ ಇಂಧನ ಸೆಲ್ ಟ್ರಕ್ ಗಳು ಮತ್ತು ಬಸ್ ಗಳ ಕಾರ್ಯಾಚರಣೆಯ ವೆಚ್ಚವು ಡೀಸೆಲ್ ಚಾಲಿತ ವಾಹನಗಳಿಗಿಂತ ಕಡಿಮೆಯಿರುತ್ತದೆ ಮತ್ತು ಇದು ಭಾರತದಲ್ಲಿ ಸರಕು ಸಾಗಣೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರಬಹುದು ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದರು. ಇದಲ್ಲದೆ, ಇಂಧನ ಕೋಶದ ವಾಹನಗಳು ಶೂನ್ಯ ಹಸಿರು-ಮನೆ (ಗ್ರೀನ್ ಹೌಸ್) ಅನಿಲ ಹೊರಸೂಸುವಿಕೆಯನ್ನು ನೀಡುತ್ತವೆ. ಕೆ.ಪಿ.ಐ.ಟಿ. ಮತ್ತು ಸಿ.ಎಸ್.ಐ.ಆರ್. ಜಂಟಿ ಅಭಿವೃದ್ಧಿ ಪ್ರಯತ್ನಗಳನ್ನು ಸಚಿವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಭಾರತೀಯ ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ತಂತ್ರಜ್ಞಾನದ ಸಾಧನೆಯು ವಿಶ್ವದ ಅತ್ಯುತ್ತಮವಾದುದಕ್ಕಿಂತ ಯಾವನಿಟ್ಟಿನಲ್ಲೂ ಕಡಿಮೆಯಿಲ್ಲ ಮತ್ತು ಕಡಿಮೆ ವೆಚ್ಚದಲ್ಲಿಯೂ ಇದೆ ಎಂದು ಸಚಿವರು ತಿಳಿಸಿದರು.
ಸುಮಾರು 12-14% ಸಿಒ2 ಹೊರಸೂಸುವಿಕೆಗಳು ಮತ್ತು ಕಣಗಳ ಹೊರಸೂಸುವಿಕೆಗಳು ಡೀಸೆಲ್ ಚಾಲಿತ ಭಾರೀ ವಾಣಿಜ್ಯ ವಾಹನಗಳಿಂದ ಬರುತ್ತವೆ ಮತ್ತು ಇವುಗಳು ವಿಕೇಂದ್ರೀಕೃತ ಹೊರಸೂಸುವಿಕೆಗಳಾಗಿವೆ ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದರು. ಈ ವಲಯದಿಂದ ಆನ್-ರೋಡ್ ಹೊರಸೂಸುವಿಕೆಯನ್ನು ತಡೆಯಲು (ತೊಡೆದುಹಾಕಲು) ಹೈಡ್ರೋಜನ್ ಇಂಧನ ವಾಹನಗಳು ಅತ್ಯುತ್ತಮವಾಗಿವೆ ಎಂದು ಸಚಿವರು ಹೇಳಿದರು. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಣೆಗಾಗಿ ಒಳನಾಡಿನ ಜಲಮಾರ್ಗಗಳನ್ನು ಹೆಚ್ಚಿಸುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ ಎಂದು ಸಚಿವರು ಹೇಳಿದರು.
ಈ ಗುರಿಗಳನ್ನು ಸಾಧಿಸುವ ಮೂಲಕ ಭಾರತವು ಪಳೆಯುಳಿಕೆ ಶಕ್ತಿಯ ನಿವ್ವಳ ಆಮದು ಮಾಡಿಕೊಳ್ಳುವುದರಿಂದ ಶುದ್ಧ ಹೈಡ್ರೋಜನ್ ಶಕ್ತಿಯ ನಿವ್ವಳ ರಫ್ತು ಮಾಡುವವರೆಗೆ ಪೋಲ್-ವಾಲ್ಟ್ ಮಾಡಬಹುದು ಮತ್ತು ಹೀಗಾಗಿ, ದೊಡ್ಡ ಹಸಿರು ಹೈಡ್ರೋಜನ್ ಉತ್ಪಾದಕ ಮತ್ತು ಹಸಿರು ಹೈಡ್ರೋಜನ್ ಉಪಕರಣಗಳ ಪೂರೈಕೆದಾರರಾಗುವ ಮೂಲಕ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತಕ್ಕೆ ಜಾಗತಿಕ ನಾಯಕತ್ವ ಲಭಿಸಲಿದೆ ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಆಕಾಂಕ್ಷೆ ವ್ಯಕ್ತಪಡಿಸಿದರು.
ನಂತರ, ಕೆ.ಪಿ.ಐ.ಟಿ.-ಸಿ.ಎಸ್.ಐ.ಆರ್. ನಲ್ಲಿ ಬಿಸ್ಫೆನಾಲ್-ಎ ಪೈಲಟ್ ಪ್ಲಾಂಟ್ ಅನ್ನು ಸಚಿವ ಡಾ ಜಿತೇಂದ್ರ ಸಿಂಗ್ ಅವರು ಉದ್ಘಾಟಿಸಿದರು. ಸಿ.ಎಸ್.ಐ.ಆರ್. ಸಂಸ್ಥೆಯ ಕೋವಿಡ್ -19 ಮಿಷನ್ ಪ್ರೋಗ್ರಾಂ ಮತ್ತು ಬಲ್ಕ್ ಕೆಮಿಕಲ್ಸ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಎನ್.ಸಿ.ಎಲ್. ಅಭಿವೃದ್ಧಿಪಡಿಸಿದ ನವೀನ ಪ್ರಕ್ರಿಯೆ ತಂತ್ರಜ್ಞಾನಗಳನ್ನು ಈ ಪೈಲಟ್ ಪ್ಲಾಂಟ್ ಗಳು ಯಶಸ್ವಿಯಾಗಿ ಕಾರ್ಯ ಪ್ರದರ್ಶಿಸಿವೆ ಎಂದು ಸಚಿವರು ಹೇಳಿದರು.
ಬಿಸ್ಫೆನಾಲ್-ಎ (ಬಿ.ಪಿ.ಎ.) ಎಪಾಕ್ಸಿ ರೆಸಿನ್ ಗಳು, ಪಾಲಿಕಾರ್ಬೊನೇಟ್ ಮತ್ತು ಇತರ ಎಂಜಿನಿಯರಿಂಗ್ ಪ್ಲಾಸ್ಟಿಕ್ ಗಳ ಉತ್ಪಾದನೆಗೆ ಪ್ರಮುಖ ಫೀಡ್ ಬ್ಯಾಕ್ ಆಗಿದೆ ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು. ಬಿಸ್ಫೆನಾಲ್-ಎ ಯ ಜಾಗತಿಕ ಮಾರುಕಟ್ಟೆಯು 2027 ರ ವೇಳೆಗೆ 7.1 ಮಿಲಿಯನ್ ಟನ್ ಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ, ಇದು 2020-2027 ರ ವಿಶ್ಲೇಷಣಾ ಅವಧಿಯಲ್ಲಿ 2% ನಷ್ಟು ಸಿ.ಎ.ಜಿ.ಆರ್. ನಲ್ಲಿ ಬೆಳೆಯುತ್ತದೆ. ಭಾರತದಲ್ಲಿ 1, 35,000 ಟನ್ ಗಳಷ್ಟು ಅಂದಾಜು ವಾರ್ಷಿಕ ಬೇಡಿಕೆಯಿದ್ದು, ಇಂದು ಸಂಪೂರ್ಣ ಆಮದು ಮಾಡಿಕೊಳ್ಳಲಾಗುತ್ತದೆ. ಸಿ.ಎಸ್.ಐ.ಆರ್. – ಎನ್.ಸಿ.ಎಲ್. ನ ತಂತ್ರಜ್ಞಾನವು ಈ ಪ್ರಮುಖ ಕಚ್ಚಾ ವಸ್ತುಗಳ ಆಮದು ಪರ್ಯಾಯವನ್ನು ಸಕ್ರಿಯಗೊಳಿಸುತ್ತದೆ ಮತ್ತು ಭಾರತದ ಆತ್ಮ ನಿರ್ಭರ್ ಉಪಕ್ರಮಕ್ಕೆ ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.
ಸಿ.ಎಸ್.ಐ.ಆರ್. – ಎನ್.ಸಿ.ಎಲ್. ಅಭಿವೃದ್ಧಿಪಡಿಸಿದ ಪ್ರಕ್ರಿಯೆಯ ವಿಶಿಷ್ಟತೆಯು ಒಂದು ಅತ್ಯುತ್ತಮ ಡೌನ್ ಸ್ಟ್ರೀಮ್ ಪ್ರಕ್ರಿಯೆ ತಂತ್ರಜ್ಞಾನವಾಗಿದೆ, ಇದು ಈ ಸ್ಥಳೀಯ ತಂತ್ರಜ್ಞಾನವನ್ನು ಜಾಗತಿಕ ಮಾನದಂಡಗಳೊಂದಿಗೆ ಸ್ಪರ್ಧಾತ್ಮಕವಾಗಿಸುತ್ತದೆ. ಈ ಪ್ರಕ್ರಿಯೆಯು ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯ ಮಟ್ಟದಲ್ಲಿ ಮತ್ತಷ್ಟು ಸಹ-ಅಭಿವೃದ್ಧಿಗೆ ಸಿದ್ಧವಾಗಿದೆ.
******
(Release ID: 1853482)
Visitor Counter : 254