ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಳಮಟ್ಟದಲ್ಲಿ ಜನ-ಕೇಂದ್ರಿತ ಆರೋಗ್ಯ ಸೇವೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು ಬ್ಲಾಕ್ ಮಟ್ಟದಿಂದ ಪ್ರಾರಂಭವಾಗುವ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಕೇಂದ್ರ ನಿಧಿಯ ಸಮಯೋಚಿತ ಬಳಕೆ ಮಾಡಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ ಒತ್ತಾಯ


"ಬಹು-ಹಂತದ ಆರೋಗ್ಯ ಮೂಲಸೌಕರ್ಯ ಜಾಲವನ್ನು ರಚಿಸಲು ಕೇಂದ್ರವು ರಾಜ್ಯಗಳೊಂದಿಗೆ ಸಹಕಾರಿ ಮತ್ತು ಸಹಯೋಗದ ಒಕ್ಕೂಟ ಮನೋಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ"

ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಶಿಬಿರಗಳನ್ನು ಆಯೋಜಿಸುವ ಮೂಲಕ ಲಸಿಕೆ ಅಮೃತ ಮಹೋತ್ಸವದ ಅಡಿಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಡೋಸ್‌ ನೀಡಿಕೆಯನ್ನು ವೇಗಗೊಳಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಾಯ

"ನಿಖರವಾದ ಯೋಜನೆ ಮತ್ತು ನಿಯಮಿತ ಪರಿಶೀಲನೆಯ ಮೂಲಕ ಒಂದೇ ಒಂದು ಡೋಸ್ ಲಸಿಕೆ ಕೂಡ ವ್ಯರ್ಥವಾಗದಂತೆ ಖಚಿತಪಡಿಸಿಕೊಳ್ಳೋಣ"

ಪಿಎಂಜೆಎವೈ ಅಡಿಯಲ್ಲಿ ಆರೋಗ್ಯ ಸೇವೆಗಳಿಗೆ ಎಲ್ಲಾ ಅರ್ಹ ಫಲಾನುಭವಿಗಳನ್ನು ತ್ವರಿತವಾಗಿ ಸೇರಿಸಬೇಕು: ಡಾ. ಮನ್ಸುಖ್ ಮಾಂಡವೀಯ

Posted On: 16 AUG 2022 3:01PM by PIB Bengaluru

"ದೇಶದಾದ್ಯಂತ ಬಹು-ಹಂತದ ಆರೋಗ್ಯ ಮೂಲಸೌಕರ್ಯ ಜಾಲವನ್ನು ರಚಿಸಲು, ವಿಸ್ತರಿಸಲು ಮತ್ತು ಬಲಪಡಿಸಲು ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಹಕಾರಿ ಮತ್ತು ಸಹಯೋಗದ ಒಕ್ಕೂಟ ಮನೋಭಾವನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಇಂದು ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ ಹೆಚ್‌ ಎಂ), ತುರ್ತು ಕೋವಿಡ್ ಪ್ರತಿಕ್ರಿಯೆ ಪ್ಯಾಕೇಜ್‌ ಅಡಿಯಲ್ಲಿ ವಿವಿಧ ಯೋಜನೆಗಳು (ಇಸಿಆರ್‌ಪಿ)-II, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎ ಬಿ ಹೆಚ್‌ ಐ ಎಂ), 15 ನೇ ಹಣಕಾಸು ಆಯೋಗದ (XV ಎಫ್‌ ಸಿ) ಅನುದಾನ ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ನಡೆಸಿದ ವರ್ಚುವಲ್‌ ಸಂವಾದಲ್ಲಿ ಅವರು ಮಾತನಾಡುತ್ತಿದ್ದರು. ಕೋವಿಡ್ ಲಸಿಕೆ ಅಮೃತ್ ಮಹೋತ್ಸವದ ಅಡಿಯಲ್ಲಿ ಮುನ್ನೆಚ್ಚರಿಕೆ ಡೋಸ್ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವುದರೊಂದಿಗೆ ರಾಷ್ಟ್ರೀಯ ಕೋವಿಡ್-19 ಲಸಿಕೆ ಅಭಿಯಾನದ ಪ್ರಗತಿಯನ್ನೂ ಅವರು ಪರಿಶೀಲಿಸಿದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಡಾ.ಭಾರತಿ ಪ್ರವೀಣ್ ಪವಾರ್ ಉಪಸ್ಥಿತರಿದ್ದರು. ಇದು ರಾಜ್ಯಗಳಾದ್ಯಂತ ನಿರ್ಣಾಯಕ ಆರೈಕೆ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ಬಲವರ್ಧನೆಗಾಗಿ ವಿವಿಧ ಯೋಜನೆಗಳು ಮತ್ತು ಪ್ಯಾಕೇಜ್‌ಗಳ ಅಡಿಯಲ್ಲಿ ರಾಜ್ಯಗಳಲ್ಲಿ ಕೇಂದ್ರ ನಿಧಿಗಳ ಪ್ರಗತಿ ಮತ್ತು ಬಳಕೆಯನ್ನು ತ್ವರಿತಗೊಳಿಸಲು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸರಣಿ ಸಭೆಗಳ ಭಾಗವಾಗಿದೆ.

ತ್ರಿಪುರಾ ಮುಖ್ಯಮಂತ್ರಿ ಶ್ರೀ ಬಿಪ್ಲಬ್ ಕುಮಾರ್ ದೇಬ್ ಮತ್ತು ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಶ್ರೀ ಮನೀಶ್ ಸಿಸೋಡಿಯಾ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಗಳ ಆರೋಗ್ಯ ಸಚಿವರಾದ ಡಾ. ರಾಜೀವ್ ಸೈಜಾಲ್ (ಹಿಮಾಚಲ ಪ್ರದೇಶ), ಶ್ರೀಮತಿ ವೀಣಾ ಜಾರ್ಜ್ (ಕೇರಳ), ಡಾ. ಕೆ. ಸುಧಾಕರ್ (ಕರ್ನಾಟಕ), ಡಾ. ಧನ್ ಸಿಂಗ್ ರಾವತ್ (ಉತ್ತರಾಖಂಡ), ಶ್ರೀಮತಿ ವಿದಧಾಲ ರಜನಿ (ಆಂಧ್ರ ಪ್ರದೇಶ), ಶ್ರೀ ಕೇಶಬ್ ಮಹಾಂತ (ಅಸ್ಸಾಂ), ಶ್ರೀ ಅಲೋ ಲಿಬಾಂಗ್ (ಅರುಣಾಚಲ ಪ್ರದೇಶ), ಶ್ರೀ ಅನಿಲ್ ವಿಜ್ (ಹರಿಯಾಣ), ಶ್ರೀ ಬನ್ನಾ ಗುಪ್ತಾ (ಜಾರ್ಖಂಡ್), ಡಾ. ಮಣಿ ಕುಮಾರ್ ಶರ್ಮಾ (ಸಿಕ್ಕಿಂ), ಶ್ರೀ ಮಾ ಸುಬ್ರಮಣಿಯನ್ (ತಮಿಳುನಾಡು), ಶ್ರೀ ಟಿ. ಹರೀಶ್ ರಾವ್ (ತೆಲಂಗಾಣ), ಶ್ರೀ ಟಿ.ಎಸ್. ಸಿಂಗ್ ದೇವ್ (ಛತ್ತೀಸ್‌ಗಢ), ಶ್ರೀ ಎನ್. ರಂಗಸಾಮಿ (ಪುದುಚೇರಿ), ಶ್ರೀ ಎಲ್ ಜಯಂತಕುಮಾರ್ ಸಿಂಗ್ (ಮಣಿಪುರ), ಶ್ರೀ ಜೇಮ್ಸ್ ಕೆ ಸಂಗ್ಮಾ (ಮೇಘಾಲಯ), ಶ್ರೀ ಪರ್ಸಾದಿ ಲಾಲ್ ಮೀನಾ (ರಾಜಸ್ಥಾನ), ಶ್ರೀ ಬ್ರಿಜೇಶ್ ಪಾಠಕ್ (ಉತ್ತರ ಪ್ರದೇಶ), ಡಾ. ಪ್ರಭುರಾಮ್ ಚೌಧರಿ (ಮಧ್ಯಪ್ರದೇಶ), ಶ್ರೀ ಋಷಿಕೇಶ್ ಪಟೇಲ್ (ಗುಜರಾತ್) ಮತ್ತು ಶ್ರೀಮತಿ ನಿಮಿಷಾ ಸುತಾರ್, ಆರೋಗ್ಯ ಖಾತೆ ಸಹಾಯಕಿ ಸಚಿವರು(ಗುಜರಾತ್) ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿಕೂಲತೆಯನ್ನು ನಮ್ಮ ಸಾಮರ್ಥ್ಯದಿಂದ ಕಲಿಯಲು ಮತ್ತು ನಿರ್ಮಿಸಲು ಒಂದು ಅವಕಾಶವನ್ನಾಗಿ ಮಾಡಕೊಳ್ಳಬೇಕು ಎಂಬ ಪ್ರಧಾನಮಂತ್ರಿಯವರ ತತ್ವವನ್ನು ಪುನರುಚ್ಚರಿಸಿದ ಡಾ. ಮನ್ಸುಖ್ ಮಾಂಡವೀಯ ಅವರು, ಸಾಂಕ್ರಾಮಿಕ ರೋಗವು ಪ್ರತಿ ಜಿಲ್ಲೆ ಮತ್ತು ಬ್ಲಾಕ್‌ಗಳಲ್ಲಿ ನಿರ್ಣಾಯಕ ಆರೈಕೆ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಬೇಕೆಂಬುದನ್ನು ನಮಗೆ ಕಲಿಸಿದೆ ಎಂದು ಹೇಳಿದರು. ನಾಗರಿಕರಿಗೆ ಲಭ್ಯತೆಯ, ಕೈಗೆಟುಕುವ, ಗುಣಮಟ್ಟದ ಮತ್ತು ಸಮಾನವಾದ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಯತ್ನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು. ಕೆಲವು ರಾಜ್ಯಗಳಲ್ಲಿ ಕೇಂದ್ರ ನಿಧಿಯ ಕಡಿಮೆ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ನಿಧಿಯ ಕಡಿಮೆ ಬಳಕೆಯನ್ನು ಕೇಂದ್ರವು ಪರಿಶೀಲಿಸುವ ಬದಲು, ರಾಜ್ಯಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಆರೋಗ್ಯ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರದಿಂದ ತ್ವರಿತವಾಗಿ ಹಣವನ್ನು ಪಡೆಯಬೇಕು" ಎಂದು ಹೇಳಿದರು. ಪ್ಯಾಕೇಜ್‌ಗಳು/ಫ್ಲ್ಯಾಗ್‌ಶಿಪ್ ಕಾರ್ಯಕ್ರಮಗಳ ಅಡಿಯಲ್ಲಿ ನಿಧಿಯ ಸಮಯೋಚಿತ ಬಳಕೆ ಮತ್ತು ಆರೋಗ್ಯ ಮೂಲಸೌಕರ್ಯಗಳ ಸೃಷ್ಟಿಗಾಗಿ ವಿವಿಧ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಡಿಸೆಂಬರ್ 2022 ರವರೆಗೆ ಪ್ಯಾಕೇಜ್ ಲಭ್ಯವಿರುವುದರಿಂದ ಇ ಸಿ ಆರ್‌ ಪಿ -II ಅಡಿಯಲ್ಲಿ ಹಣವನ್ನು ಶೀಘ್ರವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.

ಈ ಗುರಿಯನ್ನು ಸಾಧಿಸಲು ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಳ್ಳುವಂತೆ ರಾಜ್ಯಗಳ ಆರೋಗ್ಯ ಸಚಿವರಿಗೆ ಡಾ. ಮಾಂಡವಿಯಾ ಕೇಳಿದರು ಮತ್ತು ನಿಧಿಯ ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಲು ಅವರ ಸಲಹೆಗಳನ್ನು ಕೋರಿದರು. ಕೆಲವು ಸವಾಲುಗಳ ಬಗ್ಗೆ ವಿವರಿಸಿದ ರಾಜ್ಯಗಳ ಆರೋಗ್ಯ ಸಚಿವರು, ಈ ಯೋಜನೆಗಳ ಪ್ರಗತಿಯನ್ನು ತಳಮಟ್ಟದಲ್ಲಿ ತ್ವರಿತಗೊಳಿಸಲು ಕೇಂದ್ರ ಆರೋಗ್ಯ ಸಚಿವರ ವೈಯಕ್ತಿಕ ಮೇಲ್ವಿಚಾರಣೆ ಮತ್ತು ಸಾಮಾನ್ಯ ಪರಿಶೀಲನಾ ಸಭೆಗಳಿಗಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ನಿಯಮಿತ ಆಧಾರದ ಮೇಲೆ ನಿಧಿಯ ಬಳಕೆಯನ್ನು ಖುದ್ದಾಗಿ ಪರಿಶೀಲಿಸುವಂತೆ ಮತ್ತು ಯಾವುದೇ ನಿಧಿಯು ಬಳಕೆಯಾಗದೆ ಉಳಿಯದಂತೆ ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳ ಆರೋಗ್ಯ ಸಚಿವರನ್ನು ಡಾ. ಮಾಂಡವಿಯಾ ಒತ್ತಾಯಿಸಿದರು. ಆರೋಗ್ಯ ಮೂಲಸೌಕರ್ಯ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಪೋರ್ಟಲ್ ನಲ್ಲಿ ನಿಯಮಿತವಾಗಿ ಅಪ್‌ ಡೇಟ್‌ ಮಾಡುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು.

ಕೋವಿಡ್ ಲಸಿಕಾ ಅಭಿಯಾನದ ಸಾಧನೆಗಳನ್ನು ಪ್ರಸ್ತಾಪಿಸಿದ ಡಾ. ಮಾಂಡವೀಯ, 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಗೆ ಮುನ್ನೆಚ್ಚರಿಕೆ ಡೋಸ್‌ನ ವ್ಯಾಪ್ತಿಯನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದರು ಕೋವಿಡ್ ಲಸಿಕೆ ಅಮೃತ ಮಹೋತ್ಸವು 15 ಜುಲೈ 2022 ರಲ್ಲಿ ಆರಂಭವಾಗಿದ್ದು, 75 ದಿನಗಳವರೆಗೆ ಅಂದರೆ 2022 ರ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ. 2ನೇ ಡೋಸ್ ಪಡೆದ ದಿನಾಂಕದಿಂದ 6 ತಿಂಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತ ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿರುತ್ತಾರೆ. CorBEvax ಲಸಿಕೆಯ ಮುನ್ನೆಚ್ಚರಿಕಾ ಡೋಸ್‌ ಲಭ್ಯತೆಯ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ಮತ್ತು ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕಾ ಡೋಸ್‌ಗಳನ್ನು ನೀಡಲು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಶಾಲೆಗಳು/ಕಾಲೇಜುಗಳು, ಧಾರ್ಮಿಕ ಯಾತ್ರಾ ಮಾರ್ಗಗಳು, ಧಾರ್ಮಿಕ ಸ್ಥಳಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು. ಇದುವರೆಗೆ, 12.36 ಕೋಟಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.

ಲಸಿಕೆಗಳ ಅವಧಿ ಮೀರುವುದನ್ನು ತಪ್ಪಿಸಲು ಎಲ್ಲಾ ಲಸಿಕೆ ಡೋಸ್‌ಗಳನ್ನು FEFO (ಫಸ್ಟ್ ಎಕ್ಸ್‌ಪೈರಿ ಫಸ್ಟ್ ಔಟ್) ತತ್ವದ ಆಧಾರದ ಮೇಲೆ ಬಳಸುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಯಿತು. ಲಸಿಕೆಗಳು ಅಮೂಲ್ಯವಾದ ರಾಷ್ಟ್ರೀಯ ಸಂಪನ್ಮೂಲವಾಗಿದೆ ಮತ್ತು ನಿಖರವಾದ ಯೋಜನೆ ಮತ್ತು ನಿಯಮಿತ ಪರಿಶೀಲನೆಯ ಮೂಲಕ ಒಂದು ಡೋಸ್ ಸಹ ವ್ಯರ್ಥವಾಗದಂತೆ ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಒತ್ತಿ ಹೇಳಿದರು.

"ವಿಶೇಷ ಶಿಬಿರಗಳನ್ನು ಆಯೋಜಿಸುವ ಮೂಲಕ ಉಳಿದ ಫಲಾನುಭವಿಗಳಿಗೆ ಪಿಎಂಜೆಎವೈ ಕಾರ್ಡ್‌ಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಪಿಎಂಜೆಎವೈ ಅಡಿಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಆರೋಗ್ಯ ಸೇವೆಗಳ ರಕ್ಷಣೆ ನೀಡೋಣ" ಎಂದು ಪಿಎಂಜೆಎವೈ ಪ್ರಗತಿಯನ್ನು ಪರಿಶೀಲಿಸಿದ ಡಾ. ಮಾಂಡವೀಯ ರಾಜ್ಯಗಳಿಗೆ ತಿಳಿಸಿದರು.

ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಅ ಬಿ ಹೆಚ್‌ ಐ ಎಂ) ಭಾರತದಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ. ಆರು ವರ್ಷಗಳಲ್ಲಿ (2025-26 ರವರೆಗೆ) ಸುಮಾರು 64,180 ಕೋಟಿ ರೂ.ವೆಚ್ಚದೊಂದಿಗೆ,ಎಲ್ಲಾ ಹಂತಗಳಲ್ಲಿ ಆರೈಕೆಯ ನಿರಂತರತೆಯೊಂದಿಗೆ ಆರೋಗ್ಯ ವ್ಯವಸ್ಥೆಗಳು ಮತ್ತು ಸಂಸ್ಥೆಗಳ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಈ ಯೋಜನೆಯ ಕ್ರಮಗಳು ಗಮನಹರಿಸುತ್ತವೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಮತ್ತು ಪ್ರಸ್ತುತ ಮತ್ತು ಭವಿಷ್ಯದ ಸಾಂಕ್ರಾಮಿಕ/ವಿಪತ್ತುಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಸಿದ್ಧಪಡಿಸುತ್ತವೆ. ಬ್ಲಾಕ್, ಜಿಲ್ಲೆ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಣ್ಗಾವಲು ಪ್ರಯೋಗಾಲಯಗಳ ಜಾಲವನ್ನು ಅಭಿವೃದ್ಧಿಪಡಿಸುವ ಮೂಲಕ ಐಟಿ ಆಧಾರಿತ ರೋಗ ಕಣ್ಗಾವಲು ವ್ಯವಸ್ಥೆಯನ್ನು ನಿರ್ಮಿಸಲು, ಮಹಾನಗರಗಳಲ್ಲಿ ಮತ್ತು ಪ್ರವೇಶಿಸುವ ಸ್ಥಳಗಳಲ್ಲಿ ಆರೋಗ್ಯ ಘಟಕಗಳನ್ನು ಬಲಪಡಿಸಲು, ಪರಿಣಾಮಕಾರಿಯಾಗಿ ಪತ್ತೆಹಚ್ಚಲು, ತನಿಖೆ ಮಾಡಲು, ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳು ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ಗುರಿಯನ್ನು ಮಿಷನ್ ಹೊಂದಿದೆ.

2020-25 ನೇ ಆರ್ಥಿಕ ವರ್ಷಕ್ಕೆ ರಾಜ್ಯಗಳ ಸಂಚಿತ ನಿಧಿಯನ್ನು ಹೆಚ್ಚಿಸಲು ಕ್ರಮಗಳನ್ನು ಶಿಫಾರಸು ಮಾಡಲು ನವೆಂಬರ್ 2017 ರಲ್ಲಿ 15 ನೇ ಹಣಕಾಸು ಆಯೋಗವನ್ನು ಸ್ಥಾಪಿಸಲಾಯಿತು. 2022 ರ ವೇಳೆಗೆ ರಾಜ್ಯಗಳ ಆರೋಗ್ಯ ವೆಚ್ಚವನ್ನು ತಮ್ಮ ಬಜೆಟ್‌ನ ಶೇಕಡಾ 8 ಕ್ಕಿಂತ ಹೆಚ್ಚು ಏರಿಸಬೇಕೆಂದು ಆಯೋಗವು ಶಿಫಾರಸು ಮಾಡಿದೆ, ಪ್ರಾಥಮಿಕ ಆರೋಗ್ಯ ವೆಚ್ಚವು 2022 ರ ವೇಳೆಗೆ ಒಟ್ಟು ಆರೋಗ್ಯ ವೆಚ್ಚದ ಮೂರನೇ ಎರಡರಷ್ಟು ಇರಬೇಕು ಮತ್ತು ಆರೋಗ್ಯದಲ್ಲಿ ಕೇಂದ್ರೀಯ ಪ್ರಾಯೋಜಿತ ಯೋಜನೆಗಳು (ಸಿ ಎಸ್‌ ಎಸ್) ರಾಜ್ಯಗಳಿಗೆ ಹೊಂದಿಕೊಳ್ಳಲು ಮತ್ತು ಆವಿಷ್ಕರಿಸಲು ಅನುವು ಮಾಡಿಕೊಡುವಷ್ಟು ಹೊಂದಿಕೊಳ್ಳುವಂತಿರಬೇಕು, ಗಮನವು ಒಳಹರಿವಿನಿಂದ ಫಲಿತಾಂಶಗಳಿಗೆ ಬದಲಾಗಬೇಕು. ಕೇಂದ್ರ ಸರ್ಕಾರವು ಸ್ಥಳೀಯ ಸರ್ಕಾರಗಳಿಗೆ ಒಟ್ಟು ನಿಧಿಯಲ್ಲಿ ನಗರ ಆರೋಗ್ಯಕ್ಕೆ ಶೇ.37 (ರೂ. 26,123 ಕೋಟಿ) ಮತ್ತು ಗ್ರಾಮೀಣ ಆರೋಗ್ಯಕ್ಕೆ ಶೇ.63 (ರೂ. 43,928 ಕೋಟಿ) ಗಳೊಂದಿಗೆ ಒಟ್ಟು 70,051 ಕೋಟಿ ರೂ.ಗಳನ್ನುನ ಒದಗಿಸಬೇಕು ಎಂಬ 15 ನೇ ಹಣಕಾಸು ಆಯೋಗದ ಅನುದಾನ ಶಿಫಾರಸ್ಸನ್ನು ಅಂಗೀಕರಿಸಿದೆ.

'ಭಾರತ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್: ಹಂತ-II (ಇ ಸಿ ಆರ್‌ ಪಿ -II ಪ್ಯಾಕೇಜ್)' ನ 23,123 ಕೋಟಿ ರೂ. ಮೊತ್ತವನ್ನು ಕೇಂದ್ರ ಸಚಿವ ಸಂಪುಟವು 8ನೇ ಜುಲೈ, 2021 ರಂದು ಅನುಮೋದಿಸಿತು. ಮಕ್ಕಳ ಆರೈಕೆ ಮತ್ತು ಫಲಿತಾಂಶಗಳನ್ನು ಒಳಗೊಂಡಂತೆ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಆರಂಭಿಕ ತಡೆಗಟ್ಟುವಿಕೆ, ಪತ್ತೆ ಮತ್ತು ನಿರ್ವಹಣೆಗಾಗಿ ತಕ್ಷಣದ ಪ್ರತಿಕ್ರಿಯೆ ಒದಗಿಸಲು ಆರೋಗ್ಯ ವ್ಯವಸ್ಥೆಯನ್ನು ವೇಗಗೊಳಿಸುವುದು ಇದರ ಗುರಿಯಾಗಿದೆ.

 

******



(Release ID: 1852321) Visitor Counter : 235