ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ನವ ಭಾರತಕ್ಕಾಗಿ ಪಠ್ಯಕ್ರಮವನ್ನು ತಯಾರಿಸಲು ನಾಗರಿಕ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಶ್ರೀ ಧರ್ಮೇಂದ್ರ ಪ್ರಧಾನ್ ನಾಗರಿಕರನ್ನು ಕೋರಿದ್ದಾರೆ


ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವಿಕ್ಸಿತ್  ಭಾರತ್‌ ಯೋಜನೆಯ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ -  ಶ್ರೀ ಧರ್ಮೇಂದ್ರ ಪ್ರಧಾನ್ 

Posted On: 16 AUG 2022 3:54PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಹೊಸ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ನಾಗರಿಕ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ನಾಗರಿಕರನ್ನು ಕೋರಿದರು.  ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಕ್ರಿಯಾತ್ಮಕ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವಿಕ್ಸಿತ್  ಭಾರತ್ ಯೋಜನೆಯ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಜಾಗತಿಕ ದೃಷ್ಟಿಕೋನದ ಜೊತೆಗೆ ಸಾಂಸ್ಕೃತಿಕವಾಗಿ ಬೇರೂರುವಿಕೆಯನ್ನು ಸಂಯೋಜಿಸಲು, ವಸಾಹತುಶಾಹಿ ಮನಸ್ಥಿತಿಯಿಂದ ಶಿಕ್ಷಣವನ್ನು ಮುಕ್ತಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಯಲ್ಲಿ ಆಳವಾದ ಹೆಮ್ಮೆಯ ಭಾವನೆಯನ್ನು ತುಂಬಲು ರೋಮಾಂಚಕ, ಕ್ರಿಯಾತ್ಮಕ, ಅಂತರ್ಗತ ಮತ್ತು ಭವಿಷ್ಯದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅಭಿವೃದ್ಧಿ ಅಗತ್ಯವಿದೆ ಎಂದು ಅವರು ಹೇಳಿದರು.

    ರೋಮಾಂಚಕ, ಕ್ರಿಯಾತ್ಮಕ, ಅಂತರ್ಗತ ಮತ್ತು ಭವಿಷ್ಯದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅಭಿವೃದ್ಧಿಯು ಜಾಗತಿಕ ದೃಷ್ಟಿಕೋನದ ಜೊತೆಗೆ ಸಾಂಸ್ಕೃತಿಕ-ಬೇರೂರುವಿಕೆಯನ್ನು ಸಂಯೋಜಿಸಲು, ವಸಾಹತುಶಾಹಿ ಮನಸ್ಥಿತಿಯಿಂದ  ಶಿಕ್ಷಣವನ್ನು ಮುಕ್ತಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಯಲ್ಲಿ ಆಳವಾದ ಹೆಮ್ಮೆಯ ಭಾವವನ್ನು ತುಂಬಲು ಅವಶ್ಯಕವಾಗಿದೆ.
    — ಧರ್ಮೇಂದ್ರ ಪ್ರಧಾನ್ (@dpradhanbjp) ಆಗಸ್ಟ್ 16, 2022

ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಲು ಮತ್ತು ಪಠ್ಯಕ್ರಮ, ಪಠ್ಯಪುಸ್ತಕಗಳು ಮತ್ತು ಇತರ ಸೂಚನಾ ಸಾಮಗ್ರಿಗಳ ವಿನ್ಯಾಸಕ್ಕಾಗಿ ಆನ್‌ಲೈನ್ ಸಾರ್ವಜನಿಕ ಸಮಾಲೋಚನೆ ಸಮೀಕ್ಷೆಯ ಮೂಲಕ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಭಾರತ ಸರ್ಕಾರವು 29ನೇ ಜುಲೈ 2020 ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಘೋಷಿಸಿತು, ಇದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ ಸಿ ಎಫ್‌) ಅಭಿವೃದ್ಧಿಯ ಮೂಲಕ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಸುಧಾರಣೆಯನ್ನು ಶಿಫಾರಸು ಮಾಡುತ್ತದೆ. ಜಿಲ್ಲಾ ಸಮಾಲೋಚನಾ ಸಮಿತಿಗಳು, ರಾಜ್ಯ ಕೇಂದ್ರಿತ  ಗುಂಪುಗಳು ಮತ್ತು ರಾಜ್ಯ ಸಂಚಾಲನ ಸಮಿತಿ, ರಾಷ್ಟ್ರೀಯ ಕೇಂದ್ರಿತ ಗುಂಪುಗಳು ಮತ್ತು ರಾಷ್ಟ್ರೀಯ ಸಂಚಾಲನ ಸಮಿತಿ ಇತ್ಯಾದಿಗಳು ಸಂವಿಧಾನದ ಮೂಲಕ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ತಾಂತ್ರಿಕ ವೇದಿಕೆ – ಜಾಲತಾಣ  ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ನವೀನ ರೀತಿಯಲ್ಲಿ  ಮತ್ತು ಕಾಗದರಹಿತವಾಗಿ ಕಾರ್ಯಗತಗೊಳಿಸಲು ಅಭಿವೃದ್ಧಿಪಡಿಸಲಾಗಿದೆ. ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಶಿಕ್ಷಕರಂತಹ ಪಾಲುದಾರರನ್ನು ತಲುಪಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಳಮಟ್ಟದಿಂದ ಕಾರ್ಯಮಾಡುವ ವಿಧಾನವನ್ನು ಬಳಸಿಕೊಂಡು, ಜಿಲ್ಲಾ ಮಟ್ಟದ ಸಮಾಲೋಚನೆಗಳು, ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಮೀಕ್ಷೆಗಳು, ರಾಜ್ಯ  ಕೇಂದ್ರಿತ ಗುಂಪುಗಳು ಮತ್ತು ರಾಜ್ಯ ಸಂಚಾಲನಾ  ಸಮಿತಿಯ ಮೂಲಕ ರಾಜ್ಯ ಮಟ್ಟದ ಸಮಾಲೋಚನೆಗಳನ್ನು ನಡೆಸಿವೆ.  ಶಿಕ್ಷಕರು, ವಿದ್ಯಾರ್ಥಿಗಳು, ಇತ್ಯಾದಿ ತಳಮಟ್ಟದಲ್ಲಿ ಮತ್ತು ಶಾಲಾ ಶಿಕ್ಷಣದ ಭವಿಷ್ಯ, ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ.

ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಕೇಂದ್ರಿತ  ಗುಂಪುಗಳು ಮತ್ತು ರಾಷ್ಟ್ರೀಯ ಸಂಚಾಲನಾ ಸಮಿತಿಯು ವಿವಿಧ ಸಚಿವಾಲಯಗಳು, ಸ್ವಾಯತ್ತ ಸಂಸ್ಥೆಗಳು, ಎನ್‌ಜಿಒಗಳು, ಕಾರ್ಪೊರೇಟ್‌ಗಳು,  ಸಮಾಜಸೇವಾ ಸಂಸ್ಥೆಗಳು  ಇತ್ಯಾದಿಗಳೊಂದಿಗೆ ಸಂವಾದವನ್ನು ಒಳಗೊಂಡಂತೆ ವಿವಿಧ ಸಮಸ್ಯೆಗಳು ಮತ್ತು ಕಾಳಜಿಗಳ ಕುರಿತು ಚರ್ಚಿಸಲು ತೊಡಗಿವೆ. ಎನ್‌ಸಿಎಫ್‌ ನ ಪ್ರಕ್ರಿಯೆಯಲ್ಲಿ ಪಾಲುದಾರರಿಗೆ ಮಾರ್ಗದರ್ಶನ ನೀಡಲು ಎನ್‌ಸಿಎಫ್‌ ಅನ್ನು ರೂಪಿಸಲು ಆದೇಶದ ದಾಖಲೆಯನ್ನು ಅಭಿವೃದ್ಧಿಪಡಿಸಲಾಗಿದೆ.

ದೇಶದಲ್ಲಿನ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬ  ಪಾಲುದಾರ, ಮಧ್ಯಸ್ಥಗಾರರಿಗೆ ಅವಕಾಶವನ್ನು ಒದಗಿಸುವುದು, ಅವರು ಪೋಷಕರು ಅಥವಾ ಶಿಕ್ಷಕರು ಅಥವಾ ವಿದ್ಯಾರ್ಥಿಯಾಗಿರಬಹುದು ಅಥವಾ ಇಲ್ಲದಿರಬಹುದು ಮತ್ತು ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯ ರೂಪಾಂತರದಲ್ಲಿ ಭಾಗವಹಿಸಲು ಸಿದ್ಧರಿರುವವರು, ಸಾಮಾನ್ಯ ಕಾಳಜಿಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಶಿಕ್ಷಣಕ್ಕೆ ಇದು ಈಗಿನ ಅಗತ್ಯವಾಗಿದೆ. ಇಂತಹ ಬಹು ಮತ್ತು ವೈವಿಧ್ಯಮಯ ಅಭಿಪ್ರಾಯ, ಸಲಹೆಗಳು ಎನ್‌ಇಪಿ 2020ರ ದೃಷ್ಟಿಯ ಸುಗಮ ಅನುಷ್ಠಾನಕ್ಕಾಗಿ ಪ್ರಾಯೋಗಿಕ ಮಾರ್ಗವನ್ನು ಒದಗಿಸುವ ಸಾಧ್ಯತೆಯಿದೆ.

ಶಿಕ್ಷಕರು, ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರು, ಶಾಲಾ ಮುಖಂಡರು, ಶಿಕ್ಷಣ ತಜ್ಞರು, ಪೋಷಕರು, ವಿದ್ಯಾರ್ಥಿಗಳು, ಸಮುದಾಯದವರು, ಎನ್‌ಜಿಒಗಳು, ತಜ್ಞರು, ಸಾರ್ವಜನಿಕ ಪ್ರತಿನಿಧಿಗಳು, ಕಲಾವಿದರು, ಕುಶಲಕರ್ಮಿಗಳು, ರೈತರು ಮತ್ತು ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಯಾರಾದರೂ ಸೇರಿದಂತೆ ಎಲ್ಲಾ ಪಾಲುದಾರರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ. ಈ ಆನ್‌ಲೈನ್ ಸಮೀಕ್ಷೆಯನ್ನು ನಮ್ಮ ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಭಾಷೆಗಳನ್ನು ಒಳಗೊಂಡಂತೆ 23 ಭಾಷೆಗಳಲ್ಲಿ ನಡೆಸಲಾಗುತ್ತಿದೆ.

ನಮ್ಮೊಂದಿಗೆ ಸೇರಿ ಮತ್ತು ಆನ್‌ಲೈನ್ ಸಮೀಕ್ಷೆಯನ್ನು ಮಾಡಿ ಮತ್ತು ಭಾರತದಲ್ಲಿ ದೃಢವಾದ, ಮತ್ತು ಸುಸಂಬದ್ಧವಾದ ಶಿಕ್ಷಣದ ರಚನೆಗೆ ಕೊಡುಗೆ ನೀಡಿ.  ಆನ್‌ಲೈನ್ ಸಮೀಕ್ಷೆಯನ್ನು ತೆಗೆದುಕೊಳ್ಳಲು ಈಗಲೇ ಈ ಕೊಂಡಿಯನ್ನು ಕ್ಲಿಕ್ ಮಾಡಿ: https://ncfsurvey.ncert.gov.in 


********


(Release ID: 1852304) Visitor Counter : 353