ಸಂಸ್ಕೃತಿ ಸಚಿವಾಲಯ
azadi ka amrit mahotsav

ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ 5 ಕೋಟಿಗೂ ಹೆಚ್ಚು ತಿರಂಗ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ


ಇದು ಮಾತೃಭೂಮಿಗಾಗಿ ಪ್ರೀತಿ ಮತ್ತು ಬೆಸುಗೆಯ ಸಾಮೂಹಿಕ ಅಭಿವ್ಯಕ್ತಿಯ ವಿಶೇಷ ಕ್ಷಣವಾಗಿದೆ: ಶ್ರೀ ಜಿ.ಕಿಶನ್ ರೆಡ್ಡಿ

Posted On: 15 AUG 2022 5:59PM by PIB Bengaluru

ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ 5 ಕೋಟಿಗೂ ಹೆಚ್ಚು ತಿರಂಗಾ ಸೆಲ್ಫಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಒಂದು ಅಗಾಧ ಸಾಧನೆ ಮಾಡಲಾಗಿದೆ.
ಆಜಾದಿ ಕಾ ಅಮೃತ ಮಹೋತ್ಸವಕ್ಕಾಗಿ ಸರ್ಕಾರದ ನೋಡಲ್‌ ಸಚಿವಾಲಯವಾದ ಸಂಸ್ಕೃತಿ ಸಚಿವಾಲಯದ ಹರ್ ಘರ್ ತಿರಂಗ ಉಪಕ್ರಮವು, ತನ್ನ 75 ವಾರಗಳ ಕೌಂಟ್‌ಡೌನ್ ಅನ್ನು ಭಾರತವು ಸ್ವಾತಂತ್ರ್ಯದ 76 ನೇ ವರ್ಷಕ್ಕೆ ಕಾಲಿಡುತ್ತಿರುವ 2022 ರ ಆಗಸ್ಟ್ 15 ರಂದು ಪೂರ್ಣಗೊಳಿಸಿದೆ. 
ತ್ರಿವರ್ಣ ಧ್ವಜದೊಂದಿಗೆ ಗಾಢವಾದ ಬೆಸುಗೆಯನ್ನು ಪ್ರೋತ್ಸಾಹಿಸಲು ಮೀಸಲಾಗಿರುವ ಈ ಉಪಕ್ರಮವು, ಅಮೃತ ಕಾಲದ ಅವಧಿಯಲ್ಲಿ (ಇಂದಿನಿಂದ 25 ವರ್ಷಗಳು ಭಾರತ@2047) ರಾಷ್ಟ್ರ ನಿರ್ಮಾಣದಲ್ಲಿ ಬದ್ಧತೆಯನ್ನು ತೋರಲು ತ್ರಿವರ್ಣ ಧ್ವಜವನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಪ್ರದರ್ಶಿಸಲು ಭಾರತೀಯರನ್ನು ವಿನಂತಿಸಲಾಯಿತು.
ಹೈಬ್ರಿಡ್ ಸ್ವರೂಪದಲ್ಲಿ ರೂಪಿಸಲಾದ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಧ್ವಜದೊಂದಿಗೆ ದೈಹಿಕ ಮತ್ತು ಭಾವನಾತ್ಮಕ ಬೆಸುಗೆಯನ್ನು ಪ್ರೋತ್ಸಾಹಿಸಲು ರೂಪಿಸಲಾಗಿದೆ. ಈ ಉಪಕ್ರಮಕ್ಕಾಗಿ ರಚಿಸಲಾದ ವಿಶೇಷ ವೆಬ್‌ಸೈಟ್‌ನಲ್ಲಿ (www.harghartiranga.com) ಸೆಲ್ಫಿಯನ್ನು ಅಪ್‌ಲೋಡ್ ಮಾಡುವ ಮೂಲಕ ಸಾಮೂಹಿಕ ಆಚರಣೆ ಮತ್ತು ದೇಶಭಕ್ತಿಯ ಉತ್ಸಾಹವನ್ನು ವರ್ಧಿಸುವುದು ಇದರ ಉದ್ದೇಶವಾಗಿದೆ. 
ಇದಕ್ಕೂ ಮುನ್ನ ಬೆಳಗ್ಗೆ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ ಕೆಲವು ದಿನಗಳಲ್ಲಿ ನಾವು ಸಾಮೂಹಿಕ ಆತ್ಮಸಾಕ್ಷಿಯ ಜಾಗೃತಿಯ ಹೊಸ ಶಕ್ತಿಯನ್ನು ನೋಡಿದ್ದೇವೆ ಮತ್ತು ಅನುಭವಿಸಿದ್ದೇವೆ ಮತ್ತು ಈ ಸಾಮೂಹಿಕ ಆತ್ಮಸಾಕ್ಷಿಯ ಪುನರುಜ್ಜೀವನವು ದೇಶದ ಅತಿದೊಡ್ಡ ಸಂಪತ್ತು ಮತ್ತು ಸ್ವಾತಂತ್ರ್ಯಕ್ಕಾಗಿ ವರ್ಷಾನುಗಟ್ಟಲೆ ನಡೆದ ಹೋರಾಟದಲ್ಲಿ ಹೊರಹೊಮ್ಮಿದ ಅಮೃತದಂತೆ ಎಂದು ಹೇಳಿದರು.
ಗೌರವಾನ್ವಿತ ಪ್ರಧಾನ ಮಂತ್ರಿಯವರು ಜುಲೈ 22, 2022 ರಂದು, ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಅಥವಾ ಪ್ರದರ್ಶಿಸುವ ಮೂಲಕ ಹರ್ ಘರ್ ತಿರಂಗಾ ಆಂದೋಲನದೊಂದಿಗೆ ಸೇರುವಂತೆ ಕರೆ ನೀಡಿದ್ದರು.
ಭಾರತ ಇತಿಹಾಸದ ವಿಶೇಷ ಸಂದರ್ಭವನ್ನು ಆಚರಿಸುತ್ತಿರುವ ಭಾರತ ಮತ್ತು ಪ್ರಪಂಚದಾದ್ಯಂತದ ಪ್ರತಿಯೊಬ್ಬರ ಭಾಗವಹಿಸುವಿಕೆಯಿಂದಾಗಿ ಇಂದು ಮಧ್ಯಾಹ್ನ ಸುಮಾರು 4 ಗಂಟೆಗೆ 5 ಕೋಟಿ ತಿರಂಗ ಸೆಲ್ಫಿಗಳ ಸಾಧನೆಯನ್ನು ಸಾಧಿಸಲಾಗಿದೆ. 75 ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ 12 ಮಾರ್ಚ್ 2021 ರಿಂದ 15 ಆಗಸ್ಟ್, 2022 ರವರೆಗೆ 75 ವಾರಗಳ ಕೌಂಟ್‌ಡೌನ್‌ ಪ್ರಾರಂಭವಾಯಿತು. ಇದು 15 ಆಗಸ್ಟ್, 2023 ರವರೆಗೆ ಮುಂದುವರಿಯುತ್ತದೆ.
ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಶ್ರೀ ಕಿಶನ್ ರೆಡ್ಡಿ ಅವರು ಈ ಪ್ರಮುಖ ಮೈಲಿಗಲ್ಲಿನ ಬಗ್ಗೆ ಪ್ರತಿಕ್ರಿಯಿಸಿ, “5 ಕೋಟಿ ತಿರಂಗಾ ಸೆಲ್ಫಿಗಳು ರಾಷ್ಟ್ರವನ್ನು ಮೊದಲು ಮತ್ತು ಯಾವಾಗಲೂ ಮೊದಲ ಸ್ಥಾನದಲ್ಲಿಯೇ ಇಡುವ ಕರ್ತವ್ಯ ಬದ್ಧ ಭಾರತೀಯರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಧನ್ಯವಾದಗಳು, ಭಾರತ. ಇದು ಮಾತೃಭೂಮಿಗಾಗಿ ಪ್ರೀತಿ ಮತ್ತು ಬೆಸುಗೆಯ ಸಾಮೂಹಿಕ ಅಭಿವ್ಯಕ್ತಿಯ ವಿಶೇಷ ಕ್ಷಣವಾಗಿದೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!” ಎಂದು ಹೇಳಿದ್ದಾರೆ.
ವೆಬ್‌ಸೈಟ್ ಸಂಚಲನ ಸೃಷ್ಟಿಯ ಚಟುವಟಿಕೆಯಾಗಿ, ಜನರು ತಮ್ಮ ಐಪಿ ಆಧಾರದ ಮೇಲೆ ತಾವಿರುವ ಸ್ಥಳವನ್ನು ಡಿಜಿಟಲ್ ಆಗಿ 'ಧ್ವಜವನ್ನು ಪಿನ್' ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು. ಈ ವೈಶಿಷ್ಟ್ಯವು ಭಾರಿ ಬೆಂಬಲ ಪಡೆದು, ಭಾರತದಾದ್ಯಂತ ಮತ್ತು ಜಾಗತಿಕ ಭಾಗವಹಿಸುವಿಕೆಯಿಂದಾಗಿ  5 ಕೋಟಿಗೂ ಹೆಚ್ಚು ಪಿನ್‌ಗಳನ್ನು ದಾಟಿದೆ.
ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ "ಯುವಜನರು ತಮ್ಮ ಜೀವನದ ಮುಂದಿನ 25 ವರ್ಷಗಳನ್ನು ರಾಷ್ಟ್ರದ ಅಭಿವೃದ್ಧಿಗೆ ಮೀಸಲಿಡಬೇಕೆಂದು ನಾನು ಒತ್ತಾಯಿಸುತ್ತೇನೆ. ನಾವು ಇಡೀ ಮನುಕುಲದ ಪ್ರಗತಿಗೆ ಕೆಲಸ ಮಾಡುತ್ತೇವೆ. ಅದುವೇ ಭಾರತದ ಶಕ್ತಿ” ಎಂದು ಹೇಳಿದರು.
ಧ್ವಜದೊಂದಿಗಿನ 5 ಕೋಟಿ ಸೆಲ್ಫಿಗಳು ಭಾರತವನ್ನು ಅಗ್ರಸ್ಥಾನದಲ್ಲಿ ಇರಿಸಲು ಮತ್ತು ಭಾರತವನ್ನು ಸರ್ವೋಚ್ಚ ರಾಷ್ಟ್ರವನ್ನಾಗಿ ಮಾಡುವ 5 ಕೋಟಿ ಭರವಸೆಗಳಿಗೆ ಸಾಕ್ಷಿಯಾಗಿದೆ.

****************


(Release ID: 1852218) Visitor Counter : 209