ಇಂಧನ ಸಚಿವಾಲಯ

ರಾಜ್ಯಗಳು ಮತ್ತು ರಾಜ್ಯಗಳ ವಿದ್ಯುತ್ ಸೌಲಭ್ಯಗಳೊಂದಿಗೆ ಯೋಜನೆ ಮತ್ತು ಮೇಲ್ವಿಚಾರಣೆ (ಆರ್‌ ಪಿ ಎಂ) ಕುರಿತ ಪರಿಶೀಲನಾ ಸಭೆ


ಆರ್‌ ಪಿ ಎಂ ಸಭೆಯಲ್ಲಿ ಡಿಸ್ಕಾಂಗಳ 10 ನೇ ಸಂಯೋಜಿತ ರೇಟಿಂಗ್‌ಗಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಶ್ರೀ ಆರ್‌ ಕೆ ಸಿಂಗ್

ಸ್ಮಾರ್ಟ್ ಪ್ರಿ-ಪೇಯ್ಡ್ ಮೀಟರಿಂಗ್ ಮೊಬೈಲ್ ಅಪ್ಲಿಕೇಶನ್ ಮತ್ತು ಡಿಸ್ಕಾಂಗಳ ಗ್ರಾಹಕ ಸೇವೆಗಳ ಸೂಚ್ಯಂಕಕ್ಕೂ ಚಾಲನೆ

Posted On: 06 AUG 2022 9:11AM by PIB Bengaluru

ರಾಜ್ಯಗಳು ಮತ್ತು ರಾಜ್ಯಗಳ ವಿದ್ಯುತ್ ಸೌಲಭ್ಯಗಳೊಂದಿಗೆ ಯೋಜನೆ ಮತ್ತು ಮೇಲ್ವಿಚಾರಣೆ ಮಾನಿಟರಿಂಗ್ (ಆರ್‌ ಪಿ ಎಂ) ಪರಿಶೀಲನಾ ಸಭೆಯು 05.08.2022 ರಂದು ನವದೆಹಲಿಯಲ್ಲಿ ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಶ್ರೀ ಆರ್‌ ಕೆ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ಸಹಾಯಕ ಸಚಿವ ಶ್ರೀ ಕ್ರಿಶನ್ ಪಾಲ್ ಗುರ್ಜರ್, ಕಾರ್ಯದರ್ಶಿ (ವಿದ್ಯುತ್), ಕಾರ್ಯದರ್ಶಿ (ಹೊಸ ಮತ್ತು ನವೀಕರಿಸಬಹುದಾದ ಇಂಧನ) ಜೊತೆಗೆ ವಿದ್ಯುತ್ ಸಚಿವಾಲಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿದ್ಯುತ್ ವಲಯದ ಸಿಪಿಎಸ್‌ಇಗಳು ಮತ್ತು ವಿವಿಧ ರಾಜ್ಯಗಳ ವಿದ್ಯುತ್ / ಇಂಧನ ಇಲಾಖೆಗಳು ಮತ್ತು ರಾಜ್ಯ ವಿದ್ಯುತ್ ಸೌಲಭ್ಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

2022 ರ ಜುಲೈ 30 ರಂದು ಉಜ್ವಲ ಭಾರತ ಉಜ್ವಲ ಭವಿಷ್ಯ ಆಚರಣೆಯ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಆಧಾರದ ಮೇಲೆ ಸಾಧ್ಯತೆ ಮತ್ತು ಸುಸ್ಥಿರತೆಯ ಬುನಾದಿಯೊಂದಿಗೆ ವಿದ್ಯುತ್ ವಲಯದಲ್ಲಿ ರಾಷ್ಟ್ರೀಯ ಪ್ರಾಮುಖ್ಯದ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸರ್ಕಾರಿ ಇಲಾಖೆಗಳ ವಿದ್ಯುತ್ ಬಾಕಿ ಮತ್ತು ಸಬ್ಸಿಡಿ ಬಾಕಿಗಳ ಪರಿಸಮಾಪ್ತಿ; ಸರ್ಕಾರಿ ಇಲಾಖೆಗಳಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರಿಂಗ್‌ನಲ್ಲಿ ಪ್ರಗತಿ; ಇಂಧನ ಲೆಕ್ಕಪತ್ರ ನಿರ್ವಹಣೆ ಮತ್ತು ಸಬ್ಸಿಡಿ ಲೆಕ್ಕಪತ್ರ ನಿರ್ವಹಣೆ ಮತ್ತು ಅದರ ಸಕಾಲಿಕ ಮತ್ತು ಮುಂಗಡ ಪಾವತಿಗಳ ದೃಢವಾದ ವ್ಯವಸ್ಥೆಗಳನ್ನು ಸ್ಥಾಪಿಸುವುದು; ನಿಯಮಿತ ಮತ್ತು ನೈಜ ಸುಂಕಗಳ ಸಮಯೋಚಿತ ಸ್ಥಿರೀಕರಣ; ಯುಟಿಲಿಟಿ ಖಾತೆಗಳ ಸಕಾಲಿಕ ಅಂತಿಮಗೊಳಿಸುವಿಕೆ; ಫೀಡರ್ ಮತ್ತು ಡಿಟಿ ಮೀಟರಿಂಗ್‌ನ ಪ್ರಗತಿ; ಪರಿಷ್ಕರಿಸಿದ ವಿತರಣಾ ವಲಯ ಯೋಜನೆ (ಆರ್‌ ಡಿ ಎಸ್‌ ಎಸ್) ಪ್ರಗತಿ ಮತ್ತು ವಿದ್ಯುತ್ (ವಿಳಂಬ ಪಾವತಿ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) ನಿಯಮಗಳು, 2022 ಕ್ಕೆ ಸಂಬಂಧಿಸಿದ ಅನುಸರಣೆ ಕುರಿತು ಚರ್ಚೆಗಳು ನಡೆದವು.

ಸಭೆಯಲ್ಲಿ, ಮಾನ್ಯ ಕೇಂದ್ರ ಸಚಿವರು (i) ವಿದ್ಯುತ್ ವಿತರಣಾ ಸೌಲಭ್ಯಗಳ 10 ನೇ ಇಂಟಿಗ್ರೇಟೆಡ್ ರೇಟಿಂಗ್, (ii) ಡಿಸ್ಕಾಂಗಳ ಮೊದಲ ಗ್ರಾಹಕ ಸೇವಾ ರೇಟಿಂಗ್ ಮತ್ತು (iii) ಭಾರತ್ ಇ-ಸ್ಮಾರ್ಟ್ ಮೊಬೈಲ್ ಅಪ್ಲಿಕೇಶನ್ (ಬಿ ಇ ಎಸ್‌ ಎಂ ಎ) ಗೆ ಚಾಲನೆ ನೀಡಿದರು.

ಆರ್ಥಿಕ ಸುಸ್ಥಿರತೆ, ಕಾರ್ಯಕ್ಷಮತೆಯ ಉತ್ಕೃಷ್ಟತೆ ಮತ್ತು ಬಾಹ್ಯ ಪರಿಸರ ಹಾಗೂ ವರ್ಷದಿಂದ ವರ್ಷಕ್ಕೆ ಸುಧಾರಣೆಗಳನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿರುವ ನಿಯತಾಂಕಗಳ ಮೇಲೆ ಸೌಲಭ್ಯಗಳ ದಕ್ಷತೆಯನ್ನು ಮೌಲ್ಯಮಾಪನ ಮಾಡುವ ಗುರಿಯೊಂದಿಗೆ 2012 ರಿಂದ ವಾರ್ಷಿಕವಾಗಿ ಸಮಗ್ರ ರೇಟಿಂಗ್ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ರೇಟಿಂಗ್ ಕ್ರಮದಲ್ಲಿ ರೇಟಿಂಗ್‌ನ ವಿಧಾನವನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ ಮತ್ತು ಪರಿಷ್ಕರಿಸಲಾಗಿದೆ, ಇದು ಈಂತಹ ಕ್ರಮಗಳ ಸರಣಿಯಲ್ಲಿ 10 ನೆಯದಾಗಿದೆ. ರೇಟಿಂಗ್ ಈಗ ಹಣಕಾಸಿನ ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡುತ್ತದೆ, ಹಾಗೆಯೇ ಡಿಸ್ಕಾಮ್‌ಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಬಾಹ್ಯ ಪರಿಸರ ವ್ಯವಸ್ಥೆಯನ್ನು ನಿರ್ಣಯಿಸುತ್ತದೆ. ಡಿಸ್ಕಾಮ್‌ ಹಣಕಾಸುಗಳ ಮೇಲೆ ಪ್ರಭಾವ ಬೀರುವ ಪ್ರಚೋದಕಗಳ ಆಧಾರದ ಮೇಲೆ ರೇಟಿಂಗ್ ಈಗ ಡೈನಮಿಕ್ ಸ್ವರೂಪದ್ದಾಗಿದೆ. ಖಾಸಗಿ ಡಿಸ್ಕಾಂಗಳು ಮತ್ತು ರಾಜ್ಯ ವಿದ್ಯುತ್ ಇಲಾಖೆಗಳನ್ನು ಸಮಗ್ರ ವಲಯದ ವ್ಯಾಪ್ತಿಗೆ ಸೇರಿಸಲಾಗಿದೆ. ವಿವರಗಳನ್ನು urjadrishti.com ನಲ್ಲಿ ನೋಡಬಹುದು.

ದೇಶದಾದ್ಯಂತ ವಿದ್ಯುತ್ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಖಾತ್ರಿಪಡಿಸುವ ಬಹು ಸುಧಾರಣಾ ಕ್ರಮಗಳನ್ನು ಮುಂದಕ್ಕೊಯ್ಯುವ ಕ್ರವಾಗಿ ಕೇಂದ್ರ ಸಚಿವರು 2020-21 ನೇ ಆರ್ಥಿಕ ವರ್ಷದಕ್ಕಾಗಿ ಡಿಸ್ಕಮ್‌ಗಳ ಮೊದಲ ಗ್ರಾಹಕ ಸೇವಾ ರೇಟಿಂಗ್ (ಸಿ ಎಸ್‌ ಆರ್‌ ಡಿ) ಗೂ ಸಹ ಚಾಲನೆ ನೀಡಿದರು. ವರದಿಯು ವಿವಿಧ ಡಿಸ್ಕಾಂಗಳಲ್ಲಿ ಗ್ರಾಹಕ ಸೇವೆಗಳ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತದೆ. ಇದು ಕಾರ್ಯಾಚರಣೆಯ ವಿಶ್ವಾಸಾರ್ಹತೆ, ಸಂಪರ್ಕ ಸೇವೆಗಳು, ಮೀಟರಿಂಗ್, ಬಿಲ್ಲಿಂಗ್ ಮತ್ತು ವಸೂಲಿ ಸೇವೆಗಳು, ದೋಷ ನಿವಾರಣೆ ಮತ್ತು ಕುಂದುಕೊರತೆ ಪರಿಹಾರದಂತಹ ಗ್ರಾಹಕ ಸೇವೆಗಳ ಪ್ರಮುಖ ನಿಯತಾಂಕಗಳನ್ನು ಪರಿಶೀಲಿಸುತ್ತದೆ. ಡಿಸ್ಕಾಂಗಳನ್ನು ಏಳು-ಪಾಯಿಂಟ್ ಸ್ಕೇಲ್‌ನಲ್ಲಿ ಗುರುತಿಸಲಾದ ವಿವಿಧ ನಿಯತಾಂಕಗಳಲ್ಲಿ ರೇಟ್ ಮಾಡಲಾಗಿದೆ. ಉತ್ತಮ ಪ್ರದರ್ಶನ ನೀಡುವ ಡಿಸ್ಕಾಂಗಳ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನಿರ್ಣಾಯಕ ಕ್ಷೇತ್ರಗಳನ್ನು ಗುರುತಿಸುವಲ್ಲಿ ಇತರ ಡಿಸ್ಕಾಂಗಳಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಈ ವರದಿಯು recindia.nic.in ನಲ್ಲಿ ಲಭ್ಯವಿದೆ.

ಗ್ರಾಹಕರ ಸಬಲೀಕರಣವನ್ನು ಹೆಚ್ಚಿಸುವ ಒಂದು ಕ್ರಮವಾಗಿ, ಸ್ಮಾರ್ಟ್ ಮೀಟರಿಂಗ್‌ನ ರಾಷ್ಟ್ರವ್ಯಾಪಿ ಆರಂಭಕ್ಕೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳಿಗೆ ಉಚಿತ-ಬಳಕೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಲಾಯಿತು. ಈ ಮೊಬೈಲ್ ಅಪ್ಲಿಕೇಶನ್ ಸ್ಮಾರ್ಟ್ ಮೀಟರ್‌ಗಳ ಡೇಟಾದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಗ್ರಾಹಕರಿಗೆ ಅವರ ಬಳಕೆ ಮತ್ತು ಉಳಿದಿರುವ ಯುನಿಟ್‌ ಗಳು ಹಾಗೂ ಹಣ ಎರಡಕ್ಕೂ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಗ್ರಾಹಕರು ತಮ್ಮ ವಿದ್ಯುತ್ ಬಳಕೆಗೆ ಸಂಬಂಧಿಸಿದ ನೈಜ ಸಮಯದ ಮಾಹಿತಿಯನ್ನು ಪ್ರವೇಶಿಸಲು ಮತ್ತು ಎಚ್ಚರಿಕೆಗಳು ಮತ್ತು ಸೂಚನೆಗಳನ್ನು ಸ್ವೀಕರಿಸಲು ಅಪ್ಲಿಕೇಶನ್ ನೆರವಾಗುತ್ತದೆ. ಅಪ್ಲಿಕೇಶನ್ ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇತ್ಯಾದಿಗಳಂತಹ ಬಹು ಆಯ್ಕೆಗಳನ್ನು ಮತ್ತು ಗೇಟ್‌ವೇಗಳಲ್ಲಿ ಸುಲಭವಾಗಿ ಮೊಬೈಲ್ ಫೋನ್‌ಗಳ ಮೂಲಕ ಪಾವತಿ ಮತ್ತು ರೀಚಾರ್ಜ್‌ ಮಾಡಲು ಅನುಕೂಲ ಕಲ್ಪಿಸುತ್ತದೆ. ಈ ಮೊಬೈಲ್ ಅಪ್ಲಿಕೇಶನ್ ಗ್ರಾಹಕರಿಗೆ ನೆಮ್ಮದಿಯನ್ನು ನೀಡುವ ಗುರಿಯನ್ನು ಹೊಂದಿದ್ದು, ಬಹುತೇಕ ನೈಜ ಸಮಯದಲ್ಲಿ ಅವರ ವಿದ್ಯುತ್ ಬಳಕೆಯ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ, ಹಾಗೆಯೇ ಅವರ ಅಗತ್ಯಗಳಿಗೆ ಅನುಗುಣವಾಗಿ ವಿದ್ಯುತ್ ಬಳಸಲು ಸಹಾಯ ಮಾಡುತ್ತದೆ, ಇಂಧನ ದಕ್ಷತೆಯನ್ನು ಸಾಧಿಸಲು ಬಳಕೆಯ ನಡವಳಿಕೆಯನ್ನು ಬದಲಾಯಿಸುತ್ತದೆ, ಜೊತೆಗೆ ಅವರ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆ್ಯಪ್ ಎಲ್ಲಾ ವಿತರಣಾ ಸೌಲಭ್ಯಗಳಿಗೂ ಅವುಗಳು ವಿದ್ಯುತ್ ಸಚಿವಾಲಯಕ್ಕೆ ಅವಶ್ಯಕತೆಯನ್ನು ಸಲ್ಲಿಸಿದಾಗ ಉಚಿತವಾಗಿ ಲಭ್ಯವಿರುತ್ತದೆ. ನಿರ್ದಿಷ್ಟ ಸೌಲಭ್ಯ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಮಟ್ಟದ ಕಸ್ಟಮೈಸೇಶನ್‌ಗೆ ಅಪ್ಲಿಕೇಶನ್ ಅನುಕೂಲಕರವಾಗಿದೆ, ಡಿಸ್ಕಾಮ್‌ ಗಳಿಗೆ 10 ವರ್ಷಗಳವರೆಗೆ ಒ & ಎಂ ಸಹ ಉಚಿತವಾಗಿರುತ್ತದೆ. ಮೊಬೈಲ್ ಅಪ್ಲಿಕೇಶನ್ ಅನ್ನು ಬಲವಾದ ಸುರಕ್ಷತಾ ಕ್ರಮಗಳಲ್ಲಿ ನಿರ್ಮಿಸಲಾಗಿದೆ ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸುತ್ತದೆ,

ಈ ಉಪಕ್ರಮಗಳು ದಕ್ಷ ಮತ್ತು ಸುಸ್ಥಿರ ವಿದ್ಯುತ್ ವಿತರಣಾ ಕ್ಷೇತ್ರದ ಹಾದಿಯನ್ನು ಸುಗಮಗೊಳಿಸುತ್ತವೆ.

 

*******

 

 

 



(Release ID: 1849136) Visitor Counter : 113