ವಿಶೇಷ ಸೇವೆ ಮತ್ತು ನುಡಿಚಿತ್ರ
azadi ka amrit mahotsav

ರೆಪೋದರವನ್ನು ಮತ್ತೆ 50 ಮೂಲ ಅಂಶಗಳೊಂದಿಗೆ 5.4% ಕ್ಕೆ ಹೆಚ್ಚಿಸಿದ ಆರ್.ಬಿ.ಐ


ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರದ ಅಂದಾಜು 7.2% ರಷ್ಟಾಗುವ ನಿರೀಕ್ಷೆ

ಎನ್.ಆರ್.ಐಗಳು ಕೂಡ ಭಾರತ್ ಬಿಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಂಡು ಬಿಲ್ ಪಾವತಿ ಮಾಡಬಹುದು

ಹಣಕಾಸು ಮಾರುಕಟ್ಟೆಗಳನ್ನು ಬಲಪಡಿಸುವ ಮತ್ತು ಹಣಕಾಸು ಸೇವೆಗಳ ಹೊರಗುತ್ತಿಗೆಯಲ್ಲಿ ಅಪಾಯಗಳ ನಿರ್ವಹಣೆಗೆ ಕ್ರಮಗಳು ಪ್ರಕಟ

ಬಡ್ಡಿದರಗಳ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆಗೆ ಸಮಿತಿ ರಚನೆಗೆ ನಿರ್ಧಾರ

Posted On: 05 AUG 2022 1:26PM by PIB Bengaluru

ಆಗಸ್ಟ್ 5, 2022

 

ರೆಪೋದರ 5.40% ಕ್ಕೆ ಏರಿಕೆ  

ವಾಣಿಜ್ಯ ಬ್ಯಾಂಕ್ ಗಳಿಗೆ ಆರ್.ಬಿ.ಐ ನೀಡುವ ಸಾಲದ ಮೇಲಿನ ರೆಪೋ ದರವನ್ನು ಶೇಕಡ ಅರ್ದದಷ್ಟು ಹೆಚ್ಚಿಸಿದೆ. ಹಾಲಿ ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ಪರಿಗಣಿಸಿ ದೇಶೀಯ ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸುವ, ಹೆಚ್ಚಿರುವ ಹಣದುಬ್ಬರ ಪ್ರಮಾಣವನ್ನು ಪರಿಗಣಿಸಿ ಆರ್.ಬಿ.ಐ ರೆಪೋದರವನ್ನು ಮತ್ತೆ 50 ಮೂಲ ಅಂಶಗಳೊಂದಿಗೆ 5.4% ಕ್ಕೆ ಹೆಚ್ಚಿಸಿದೆ.  

 

ಹಣದುಬ್ಬರ ಮತ್ತು ಹಣದುಬ್ಬರದ ನಿರೀಕ್ಷೆಗಳನ್ನು ನಿಯಂತ್ರಣದಲ್ಲಿಡುವ ಅಗತ್ಯತೆಯಿಂದಾಗಿ ಆರ್.ಬಿ.ಐ ನ ಹಣಕಾಸು ನೀತಿ ಸಮಿತಿ ಈ ನಿರ್ಣಯಕ್ಕೆ ಬಂದಿದೆ. “ಸುಸ್ಥಿರವಾದ ಹೆಚ್ಚಿನ ಹಣದುಬ್ಬರ, ಹಣದುಬ್ಬರದ ನಿರೀಕ್ಷೆಗಳನ್ನು ಅಸ್ಥಿರಗೊಳಿಸುತ್ತದೆ ಮತ್ತು ಮಧ್ಯಮಾವಧಿಯಲ್ಲಿ ಬೆಳವಣಿಗೆಗೆ ಹಾನಿಯುಂಟು ಮಾಡುತ್ತದೆ” ಎಂದು ಆರ್.ಬಿ.ಐ ಗರ್ವನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಆನ್ ಲೈನ್ ಮೂಲಕ ಆರ್ಥಿಕ ನೀತಿ ಕುರಿತ ಹೇಳಿಕೆಯನ್ನು ಅವರು ನೀಡಿದರು. ಆರ್.ಬಿ.ಐ ಗರ್ವನರ್ ಅವರ ಭಾಷಣ ಇಲ್ಲಿ ಲಭ್ಯ: https://youtu.be/2VXCSN9Ypes

 

ಹೆಚ್ಚುವರಿ ಕ್ರಮಗಳು

 

ಆರ್.ಬಿ.ಐ ಗರ್ವನರ್ ಅವರು ಐದು ಹೆಚ್ಚುವರಿ ಸರಣಿ ಕ್ರಮಗಳನ್ನು ಪ್ರಕಟಿಸಿದ್ದಾರೆ.

 

1. ಆರ್ಥಿಕ ಮಾರುಕಟ್ಟೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸ್ವತಂತ್ರ ವಿತರಕರಿಗೆ ಪ್ರೋತ್ಸಾಹ

 

ಸ್ವತಂತ್ರ ಪ್ರಾಥಮಿಕ ವಿತರಕರಿಗೆ [ಎಸ್.ಪಿ.ಡಿಗಳು] ಎಲ್ಲಾ ವಿದೇಶಿ ವಿನಿಯಮ ಮಾರುಕಟ್ಟೆಗಳಿಗೆ ಅವಕಾಶವಿದ್ದು, ವಿವೇಕಯುತ ಮಾರ್ಗಸೂಚಿಗಳನ್ವಯ ಕ್ಯಾಟಗೆರಿ – 1 ರಲ್ಲಿ ಅಧಿಕೃತ ವಿತರಕರಾಗಲು ಅವಕಾಶ ನೀಡಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು ಗ್ರಾಹಕರಿಗೆ ತಮ್ಮ ವಿದೇಶಿ ಕರೆನ್ಸಿ ಅಪಾಯವನ್ನು ನಿರ್ವಹಿಸಲು ವ್ಯಾಪಕ ಮಾರುಕಟ್ಟೆ ತಯಾರಕರನ್ನು ಒದಗಿಸುತ್ತದೆ. ಇದರಿಂದ ಭಾರತದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ.  

 

ಅನಿವಾಸಿಗಳು ಮತ್ತು ಇತರೆ ಮಾರುಕಟ್ಟೆ ತಯಾರಕರೊಂದಿಗೆ ಕಡಲಾಚೆಯಲ್ಲಿ ಮಾರುಕಟ್ಟೆ ಸೂಚ್ಯಂಕದಲ್ಲಿ ವಹಿವಾಟು ಕೈಗೊಳ್ಳಲು ಎಸ್.ಪಿ.ಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಹೆಚ್ಚುವರಿ ಕ್ರಮವಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ಇದೇ ರೀತಿಯ ಕ್ರಮಗಳನ್ನು ಬ್ಯಾಂಕ್ ಗಳಿಗಾಗಿ ಘೋಷಿಸಲಾಗಿತ್ತು. ಈ ಕ್ರಮಗಳಿಂದ ಕಡಲಾಚೆ ಮತ್ತು ಕಡಲಾಚೆಯ ಒ.ಐ.ಎಸ್ ಮಾರುಕಟ್ಟೆಗಳ ನಡುವಿನ ವಿಭಜನೆಯನ್ನು ತೆಗೆದುಹಾಕಲು ಮತ್ತು ಬೆಲೆ ಅನ್ವೇಷಣೆಯಲ್ಲಿ ಸುಧಾರಣೆಯಾಗುವುದನ್ನು ನಿರೀಕ್ಷಿಸಲಾಗಿದೆ. ಹಣಕಾಸು ಮಾರುಕಟ್ಟೆ ಅಭಿವೃದ್ಧಿಪಡಿಸಲು ಎಸ್.ಪಿ.ಡಿಗಳನ್ನು ಪರಿಗಣಿಸಲಾಗಿದೆ.

 

2. ಅಪಾಯವನ್ನು ನಿರ್ವಹಿಸುವ ಮತ್ತು ಹಣಕಾಸು ಸೇವೆಗಳನ್ನು ಹೊರಗುತ್ತಿಗೆ ನೀಡಲು ನೀತಿ ಸಂಹಿತೆ

 

ನಿಯಂತ್ರಿತ ಘಟಕಗಳಲ್ಲಿ ಹಣಕಾಸು ಸೇವೆಗಳಿಗೆ ಹೊರ ಗುತ್ತಿಗೆ ವ್ಯವಸ್ಥೆಯಲ್ಲಿ ಏರುಗತಿ ಪ್ರವೃತ್ತಿ ಕಂಡು ಬಂದಿದೆ. ಇದನ್ನು ಪರಿಗಣಿಸಿ ಆರ್.ಬಿ.ಐ ಅಪಾಯಗಳನ್ನು ನಿರ್ವಹಣೆ ಮಾಡಲು ಸೂಕ್ತ ಕರಡು ನಿರ್ದೇಶನವನ್ನು ನೀಡಿದೆ ಮತ್ತು ಸಾರ್ವತ್ರಿಕ ಪ್ರತಿಕ್ರಿಯೆಗಾಗಿ ಹಣಕಾಸು ಸೇವೆಯಲ್ಲಿ ಹೊರಗುತ್ತಿಗೆ ನೀಡಲು ನೀತಿ ಸಂಹಿತೆ ರೂಪಿಸಲಾಗಿದೆ. ಅಪಾಯ ನಿರ್ವಹಣೆಯ ಚೌಕಟ್ಟನ್ನು ಬಲಪಡಿಸಲು ಮತ್ತು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಸಮನ್ವಯದಿಂದ ಸಂಯೋಜಿಸಲು ಇದನ್ನು ಜಾರಿಗೊಳಿಸಲಾಗಿದೆ.    

 

3. ಭಾರತ್ ಬಿಲ್ ಪಾವತಿ ವ್ಯವಸ್ಥೆಯು ಅನಿವಾಸಿ ಭಾರತೀಯರಿಗೂ ಮುಕ್ತ

 

ಭಾರತ್ ಬಿಲ್ ಪಾವತಿ ವ್ಯವಸ್ಥೆ [ಬಿಬಿಪಿಎಸ್] ಪ್ರಾಮಾಣಿತ ಬಿಲ್ ಪಾವತಿಗಳಿಗೆ ಅಂತರ್ ಕಾರ್ಯನಿರ್ವಹಣೆಯ ವೇದಿಕೆಯಾಗಿದ್ದು, ಗಡಿಯಾಚೆಯ ಬಿಲ್ ಪಾವತಿಗಳನ್ನು ಸ್ವೀಕರಿಸಲು ಇದರಿಂದ ಸಾಧ್ಯವಾಗಿದೆ. ಈ ಕ್ರಮದಿಂದ ಭಾರತದಲ್ಲಿರುವ ತಮ್ಮ ಕುಟುಂಬದವರಿಗಾಗಿ ಎನ್.ಆರ್.ಐಗಳು ಶಿಕ್ಷಣ, ಬಳಕೆಗಳು ಮತ್ತು ಇತರ ಸೇವೆಗಳಿಗೆ ಬಿಲ್ ಗಳನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.  

 

4. ಸಾಲ ಹೊಂದಿರುವ ಕಂಪೆನಿಗಳನ್ನು ರಿಸರ್ವ್ ಬ್ಯಾಂಕ್ ನ ಸಮಗ್ರ ಒಂಬುಡ್ಸ್ ಮನ್ ಯೋಜನೆ [ಆರ್.ಬಿ.-ಐ.ಒ.ಎಸ್] 2021 ರ ಅಡಿ ತರಲಾಗುವುದು.

 

ಆರ್.ಬಿ-ಐಒಎಸ್ ವ್ಯಾಪ್ತಿಯನ್ನು ವಿಸ್ತರಿಸಲು ಸಾಲ ಮಾಹಿತಿ ಕಂಪೆನಿಗಳನ್ನು [ಸಿಐಸಿಗಳು] ಆರ್.ಬಿ-ಐಒಎಸ್ ಚೌಕಟ್ಟಿಗೆ ತರಲಾಗಿದೆ. ಇದರಿಂದ ಸಾಲ ಮಾಹಿತಿ ಕಂಪೆನಿಗಳ ವಿರುದ್ಧದ ಕುಂದು ಕೊರತೆಗಳ ಪರಿಹಾರಕ್ಕಾಗಿ ವೆಚ್ಚ ಮುಕ್ತ ಪರ್ಯಾಯ ಕಾರ್ಯವಿಧಾನವನ್ನು ಹೊಂದಬಹುದಾಗಿದೆ.  

 

ಮುಂದುವರೆದಂತೆ ಇಂತಹ ಕಂಪೆನಿಗಳು ಅಗತ್ಯಬಿದ್ದರೆ ಇದೀಗ ತನ್ನದೇ ಆದ ಆಂತರಿಕ ಒಂಬುಡ್ಸ್ ಮನ್ [ಐಒ] ಚೌಕಟ್ಟು ರೂಪಿಸಿಕೊಳ್ಳಬಹುದು. ಇದರಿಂದ ಸಿಐಸಿಗಳನ್ನು ಹೊಂದುವ ಮೂಲಕ ಆಂತರಿಕ ಕುಂದುಕೊರತೆ ವ್ಯವಸ್ಥೆಯನ್ನು ಬಲಗೊಳಿಸಿಕೊಳ್ಳಲು ಸಾಧ್ಯವಾಗಲಿದೆ.

 

5. ಎಂ.ಐ.ಬಿ.ಒ.ಆರ್ ಮಾನದಂಡ ಸಮಿತಿ ರಚಿಸಬೇಕು

 

ಮುಂಬೈ ಅಂತರ್ ಬ್ಯಾಂಕ್ ನ ಸಂಪೂರ್ಣ ದರಕ್ಕೆ ಪರ್ಯಾಯ ಮಾನದಂಡದ ಪರ್ಯಾಯ ಪರಿವರ್ತನೆಯ ಅಗತ್ಯ ಸೇರಿದಂತೆ ಬಡ್ಡಿದರ ವಿಷಯಗಳ ಕುರಿತಂತೆ ಸಮಸ್ಯೆಗಳ ಆಳವಾದ ಪರಿಶೀಲನೆ ನಡೆಸಲು ಸಮಿತಿ ರಚನೆಗೆ ಆರ್.ಬಿ.ಐ ನಿರ್ಧರಿಸಿದೆ. ಪರ್ಯಾಯ ಮಾನದಂಡ ದರಗಳನ್ನು ಅಭಿವೃದ್ಧಿಪಡಿಸಲು ಇತ್ತೀಚಿನ ಅಂತರರಾಷ್ಟ್ರೀಯ ಪ್ರಯತ್ನಗಳ ದೃಷ್ಟಿಯಿಂದ ಅಧ್ಯಯನ ಕೈಗೊಳ್ಳಲಾಗುತ್ತಿದೆ.

 

ಬೆಳವಣಿಗೆ ದರದ ಅಂದಾಜಿನಲ್ಲಿ ಬದಲಾವಣೆ ಇಲ್ಲ - 2022 – 23 ರಲ್ಲಿ 7.2%   

 

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆ ದರದ ಅಂದಾಜಿನಲ್ಲಿ ಕೇಂದ್ರೀಯ ಬ್ಯಾಂಕ್ ಯಾವುದೇ ಬದಲಾವಣೆ ಮಾಡಿಲ್ಲ, 7.2% ರಷ್ಟು ಬೆಳವಣಿಗೆ ದಾಖಲಿಸಿದೆ. ಮೊದಲ ತ್ರೈಮಾಸಿಕದಲ್ಲಿ 16.2 ರಷ್ಟು, ಎರಡನೇ ತ್ರೈಮಾಸಿಕದಲ್ಲಿ 6.2 ರಷ್ಟು, ಮೂರನೇ ತ್ರೈಮಾಸಿಕದಲ್ಲಿ 4.1 ರಷ್ಟು ಹಾಗೂ 4 ನೇ ತ್ರೈಮಾಸಿಕದಲ್ಲಿ 4.0 ರಷ್ಟಾಗಲಿದೆ. 2023 – 24 ರಲ್ಲಿ ನೈಜ ಜಿಡಿಪಿ ಬೆಳವಣಿಗೆ 6.7 ರಷ್ಟಾಗಲಿದೆ.

 

ಹಣದುಬ್ಬರ ಬೆಳವಣಿಗೆಯನ್ನು ಬೆಂಬಲಿಸುವ ಸಂದರ್ಭದಲ್ಲಿ ಮಧ್ಯಮಾವಧಿಯಲ್ಲಿ ಹಣದುಬ್ಬರ ದರ 4.0 ರ ಗುರಿಯ ಸಮೀಪಕ್ಕೆ ಬರಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ವಿತ್ತೀಯ ನೀತಿ ಮುಂದುವರೆಯಬೇಕು ಎಂದು ಆರ್.ಬಿ.ಐ ಗರ್ವನರ್ ಸಲಹೆ ಮಾಡಿದರು. ನಮ್ಮ ಆರ್ಥಿಕತೆ ಸುಸ್ಥಿರ ಪ್ರಗತಿಯ ಹಾದಿಯಲ್ಲಿ ಸಾಗಲು ದರ ಮತ್ತು ಹಣಕಾಸು ಸ್ಥಿರತೆಯನ್ನು ನಿರ್ವಹಣೆ ಮಾಡುವ ಬದ್ಧತೆಯನ್ನು ಮುಂದುವರೆಸಬೇಕು ಎಂದು ಆರ್.ಬಿ.ಐ ಗರ್ವನರ್ ಪುನರುಚ್ಚರಿಸಿದರು.

 

ಆರ್.ಬಿ.ಐ ಗರ್ವನರ್ ಅವರ ಪೂರ್ಣ ಹೇಳಿಕೆಯನ್ನು ಇಲ್ಲಿ ನೋಡಬಹುದು; here; ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳು ಇಲ್ಲಿ ಲಭ್ಯ; here; ಮತ್ತು ಹಣಕಾಸು ನೀತಿ ಕುರಿತ ಹೇಳಿಕೆಯನ್ನು ಇಲ್ಲಿ ಕಾಣಬಹುದು; here.

 

*******


(Release ID: 1848944) Visitor Counter : 184