ನೀತಿ ಆಯೋಗ

ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ

Posted On: 05 AUG 2022 1:52PM by PIB Bengaluru

ಭಾರತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯಗಳು ಚುರುಕುಗೊಳ್ಳುತ್ತಿವೆ, ಚೇತರಿಸಿಕೊಳ್ಳುವ ಮತ್ತು ಸ್ವಾವಲಂಬಿಯಾಗುವ ಹಾಗೂ ಸಹಕಾರ ಒಕ್ಕೂಟದ ಸ್ಫೂರ್ತಿಯೊಂದಿಗೆ ಸ್ವಾವಲಂಬಿ ಭಾರತದತ್ತ ಸಾಗುತ್ತಿವೆ. ಈ ನಿಟ್ಟಿನಲ್ಲಿ ಸ್ಥಿರ, ಸುಸ್ಥಿರ ಮತ್ತು ಎಲ್ಲವನ್ನೊಳಗೊಂಡ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ 7 ನೇ ನೀತಿ ಆಯೋಗದ ಆಡಳಿತ ಮಂಡಳಿ ಸಭೆ 2022 ರ ಆಗಸ್ಟ್ 7 ರಂದು ನಡೆಯಲಿದೆ ಮತ್ತು ಕೇಂದ್ರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸಹಯೋಗದತ್ತ ಸಂಯೋಜನೆಗೊಳ್ಳಲು ಈ ಸಭೆ ಸಹಕಾರಿಯಾಗಲಿದೆ.

 

ನವದೆಹಲಿಯ ರಾಷ್ಟ್ರಪತಿ‌ ಭವನದ ಸಂಸ್ಕೃತ ಕೇಂದ್ರದಲ್ಲಿ ನಡೆಯಲಿರುವ ಏಳನೇ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಹಿಸಲಿದ್ದಾರೆ.

 

ಇತರೆ ವಿಷಯಗಳ ಜೊತೆಗೆ ಬೆಳೆ ವೈವಿಧ್ಯತೆ ಮತ್ತು ತೈಲ ಬೀಜ ಹಾಗೂ ಬೇಳೆಕಾಳುಗಳು, ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ, ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಾಗೂ ನಗರ ಆಡಳಿತ ಕುರಿತ ವಿಷಯಗಳು ಸಭೆಯ ಕಾರ್ಯಸೂಚಿಯಲ್ಲಿವೆ.  

 

2022 ರ ಜೂನ್ ನಲ್ಲಿ ಧರ್ಮಶಾಲಾದಲ್ಲಿ ನಡೆದ ಮುಖ್ಯಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯಗಳು ಆರು ತಿಂಗಳ ಕಾಲ ನಡೆಸಿದ ಕಸರತ್ತಿನೊಂದಿಗೆ ಸಭೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಅವರು ವಹಿಸಿದ್ದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 7 ನೇ ಆಡಳಿತ ಮಂಡಳಿ ಸಭೆಯು ಮೇಲಿನ ಪ್ರತಿಯೊಂದು ವಿಷಯಗಳ ಮೇಲೆ ಮಾರ್ಗಸೂಚಿ ಮತ್ತು ಫಲಿತಾಂಶ ಆಧಾರಿತ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲಿದೆ.  

 

2019 ರ ನಂತರ ಇದು ಆಡಳಿತ ಮಂಡಳಿಯ ಮೊದಲ ವೈಯಕ್ತಿಕ ಸಭೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾವು ನಿರ್ದಿಷ್ಟವಾಗಿ ಅಮೃತ ಕಾಲಕ್ಕೆ ಪ್ರವೇಶಿಸುತ್ತಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಭಾರತ ಜಿ-20 ಅಧ್ಯಕ್ಷತೆ ವಹಿಸುತ್ತಿದೆ ಮತ್ತು ಭಾರತ ಮುಂದಿನ ಮಹತ್ವದ ಶೃಂಗ ಸಭೆಯನ್ನು ಆಯೋಜಿಸುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಈ ಸಭೆಯ ಅಧ್ಯಕ್ಷತೆ ವಹಿಸುತ್ತಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ ಮತ್ತು ಜಿ-20 ವೇದಿಕೆಯಲ್ಲಿ ತಮ್ಮ ಪ್ರಗತಿಯನ್ನು ತೋರಿಸಲು ರಾಜ್ಯಗಳು ವಹಿಸಬಹುದಾದ ಪಾತ್ರಗಳ ಬಗ್ಗೆಯೂ ಒತ್ತು ನೀಡುತ್ತಿದೆ.  

 

ರಾಷ್ಟ್ರೀಯ ಆದ್ಯತೆಗಳ ಹಂಚಿಕೆಯ ದೃಷ್ಟಿಯನ್ನು ವಿಕಸನಗೊಳಿಸುವ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಪಾಲುದಾರಿಕೆಯ ಪ್ರಧಾನ ಸಂಸ್ಥೆಯಾಗಿದೆ ನೀತಿ ಆಯೋಗದ ಆಡಳಿತ ಮಂಡಳಿ. ಅಂತರ್ ವಲಯ, ಅಂತರ್ ಇಲಾಖೆಗಳು ಮತ್ತು ಒಕ್ಕೂಟ ವ್ಯವಸ್ಥೆಯ ವಿಷಯಗಳ ಕುರಿತು ಚರ್ಚಿಸಲು ಆಡಳಿತ ಮಂಡಳಿ ಸಭೆ ವೇದಿಕೆಯಾಗಿದೆ. ಪ್ರಧಾನಮಂತ್ರಿ, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗವನ್ನು ಈ ವ್ಯವಸ್ಥೆ ಒಳಗೊಂಡಿದೆ. ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರು, ನೀತಿ ಆಯೋಗದ ಅಧಿಕಾರೇತರ ಸದಸ್ಯರು, ಉಪಾಧ್ಯಕ್ಷರು, ನೀತಿ ಆಯೋಗದ ಪೂರ್ಣ ಪ್ರಮಾಣದ ಸದಸ್ಯರು ಹಾಗೂ ಕೇಂದ್ರ ಸಚಿವರು ವಿಶೇಷ ಆಹ್ವಾನಿತರಾಗಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮಾಲೋಚನೆಗಳಿಗೆ ಮತ್ತು ಸರ್ಕಾರದ ಸಂಪೂರ್ಣ ಸಹಕಾರದೊಂದಿಗೆ ಸುಸಂಘಟಿತ ಕ್ರಮಗಳಿಗಾಗಿ ಪ್ರಮುಖ ಕಾರ್ಯತಂತ್ರಗಳನ್ನು ಗುರುತಿಸುವ ಪ್ರಮುಖ ವೇದಿಕೆಗಳಲ್ಲಿ ಒಂದಾಗಿದೆ.

 

*******



(Release ID: 1848867) Visitor Counter : 187