ಉಪರಾಷ್ಟ್ರಪತಿಗಳ ಕಾರ್ಯಾಲಯ
ಕೆಂಪುಕೋಟೆಯಿಂದ ಸಂಸದರ ‘ಹರ್ ಘರ್ ತಿರಂಗಾ’(ಮನೆಮನೆಯಲ್ಲಿ ತ್ರಿವರ್ಣ ಧ್ವಜ) ಬೈಕ್ ರ‍್ಯಾಲಿಗೆ ಉಪ ರಾಷ್ಟ್ರಪತಿಯವರು ಚಾಲನೆ ನೀಡಿದರು
ರಾಷ್ಟ್ರೀಯ ಧ್ವಜದ ಭಾವನಾತ್ಮಕ ಸಂಪರ್ಕವನ್ನು ತಮ್ಮ ಕ್ಷೇತ್ರಗಳಿಗೆ ಕೊಂಡೊಯ್ಯುವಂತೆ ಉಪ ರಾಷ್ಟ್ರಪತಿಯವರು ಸಂಸದರನ್ನು ಒತ್ತಾಯಿಸಿದರು
'ನಾವು ಹೆಮ್ಮೆಯಿಂದ ನಮ್ಮ ರಾಷ್ಟ್ರಧ್ವಜವನ್ನು ಹಾರಿಸುವಾಗ, ಏಕತೆ ಮತ್ತು ಸಾರ್ವತ್ರಿಕ ಸಹೋದರತ್ವದ ನಮ್ಮ ರಾಷ್ಟ್ರೀಯ ಮೌಲ್ಯಗಳನ್ನೂ ಪ್ರತಿಬಿಂಬಿಸಿ'
Posted On:
03 AUG 2022 1:09PM by PIB Bengaluru
ಕೆಂಪುಕೋಟೆಯಿಂದ ವಿಜಯ್ ಚೌಕ್ ವರೆಗೆ ಸಂಸದರ ‘ಹರ್ ಘರ್ ತಿರಂಗಾ’(ಮನೆಮನೆಯಲ್ಲಿ ತ್ರಿವರ್ಣ ಧ್ವಜ) ಬೈಕ್ ರ‍್ಯಾಲಿಗೆ ಉಪರಾಷ್ಟ್ರಪತಿಗಳು ಚಾಲನೆ ನೀಡಿದರು. ಭಾರತದ ನಾಗರಿಕರು ಮತ್ತು ರಾಷ್ಟ್ರಧ್ವಜದ ನಡುವೆ ವೈಯಕ್ತಿಕ ಸಂಪರ್ಕವನ್ನು ಬೆಳೆಸಲು ಭಾರತ ಸರ್ಕಾರದ ಉಪಕ್ರಮವಾದ ‘ಹರ್ ಘರ್ ತಿರಂಗಾ’ದ ಜಾಗೃತಿಯನ್ನು ಹೆಚ್ಚಿಸಲು ಸಂಸ್ಕೃತಿ ಸಚಿವಾಲಯವು ಈ ರ‍್ಯಾಲಿಯನ್ನು ಆಯೋಜಿಸಿದೆ. ಬೈಕ್ ರ‍್ಯಾಲಿಯಲ್ಲಿ ಕೇಂದ್ರದ ವಿವಿಧ ಸಚಿವರು ಭಾಗವಹಿಸಿದ್ದರು.
ಈ ಉಪಕ್ರಮಕ್ಕಾಗಿ ಸಂಸ್ಕೃತಿ ಸಚಿವಾಲಯವನ್ನು ಶ್ಲಾಘಿಸಿದ ಶ್ರೀ ನಾಯ್ಡು, ಸ್ವಾತಂತ್ರ್ಯ ದಿನಾಚರಣೆಯು "ನಮ್ಮ ಸ್ವಾತಂತ್ರ್ಯ ಹೋರಾಟಗಾರರು ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ಮಾಡಿದ ಅಸಂಖ್ಯಾತ ತ್ಯಾಗಗಳನ್ನು ನಮಗೆ ನೆನಪಿಸಬೇಕು" ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟದ ಶೌರ್ಯ ಮತ್ತು ಸಾಮಾಜಿಕ ಸಾಮರಸ್ಯದ ಕಥೆಗಳನ್ನು ಮೆಲುಕು ಹಾಕಬೇಕು ಎಂದು ಕರೆ ನೀಡಿದರು. "ನಾವು ಹೆಮ್ಮೆಯಿಂದ ನಮ್ಮ ರಾಷ್ಟ್ರಧ್ವಜವನ್ನು ಹಾರಿಸುವಾಗ, ಏಕತೆ, ಸಾಮರಸ್ಯ ಮತ್ತು ಸಾರ್ವತ್ರಿಕ ಸಹೋದರತ್ವದ ನಮ್ಮ ರಾಷ್ಟ್ರೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತೇವೆ ಮತ್ತು ಎತ್ತಿಹಿಡಿಯುತ್ತೇವೆ" ಎಂದು ಅವರು ಸಲಹೆ ನೀಡಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳ ಸಚಿವರು, ಶ್ರೀ ಪ್ರಲ್ಹಾದ್ ಜೋಶಿ, ಸಂಸ್ಕೃತಿ ಸಚಿವ, ಶ್ರೀ ಕಿಶನ್ ರೆಡ್ಡಿ, ಭಾರತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ, ಶ್ರೀ ಅನುರಾಗ್ ಠಾಕೂರ್ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವರಾದ, ಶ್ರೀ ಅರ್ಜುನ್ ರಾಮ್ ಮೇಘವಾಲ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರುಗಳಾದ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಶ್ರೀ ವಿ. ಮುರಳೀಧರನ್ ಮತ್ತು ಹೆಚ್ಚಿನ ಸಂಖ್ಯೆಯ ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
********
(Release ID: 1847912)
Visitor Counter : 165