ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಮನ್ ವೆಲ್ತ್ ಕ್ರೀಡಾಕೂಟ 2022ರಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ ಲಿಫ್ಟರ್ ವಿಕಾಸ್ ಠಾಕೂರ್ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ 

ಪ್ರಕಟಣಾ ದಿನಾಂಕ: 02 AUG 2022 10:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್  ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022ರಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ ಲಿಫ್ಟರ್ ವಿಕಾಸ್ ಠಾಕೂರ್ ಅವರನ್ನು ಅಭಿನಂದಿಸಿದ್ದಾರೆ.


ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ 
“ಈ ಬಾರಿ ವಿಕಾಸ್ ಠಾಕೂರ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದು ಕಾಮನ್ ವೆಲ್ತ್ ಕ್ರೀಡಾಕೂಟದ ಮೆರುಗು ಹೆಚ್ಚಿಸಿದ್ದಾರೆ. ಅವರ ಯಶಸ್ಸಿನಿಂದ ಸಂತೋಷವಾಗಿದೆ. ಅವರ ಕ್ರೀಡಾ ಬದ್ಧತೆ ಶ್ಲಾಘನೀಯ. ಮುಂಬರುವ ಅವರ ಎಲ್ಲ ಪ್ರಯತ್ನಗಳಿಗೂ ಶುಭ ಕೋರುತ್ತೇನೆ’’ ಎಂದು ತಿಳಿಸಿದ್ದಾರೆ. 

 


 

*************


(ಪ್ರಕಟಣೆ ಐ.ಡಿ.: 1847768) ವಿಸಿಟರ್ ಕೌಂಟರ್ : 157