ಪ್ರಧಾನ ಮಂತ್ರಿಯವರ ಕಛೇರಿ
ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಂಡವನ್ನು ಅಭಿನಂದಿಸಿದ ಪ್ರಧಾನಿ
Posted On:
03 AUG 2022 9:11AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬರ್ಮಿಂಗ್‌ಹ್ಯಾಮ್‌ನ ʻಕಾಮನ್‌ವೆಲ್ತ್ ಕ್ರೀಡಾಕೂಟ-2022ʼದಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಂಡವನ್ನು ಅಭಿನಂದಿಸಿದ್ದಾರೆ.
ಈ ಕುರಿತು ತಮ್ಮ ಸರಣಿ ಟ್ವೀಟ್‌ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ:
"ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ತಂಡದ ಕಿಡಂಬಿ ಶ್ರೀಕಾಂತ್@srikidambi, ಸಾತ್ವಿಕ್‌ರಾಜ್ @satwiksairaj, ಸುಮೀತ್‌ರೆಡ್ಡಿ@buss_reddy, ಲಕ್ಷ್ಯ ಸೇನ್@lakshya_sen, ಚಿರಾಗ್ ಶೆಟ್ಟಿ@Shettychirag04, ತ್ರಿಸಾ ಜಾಲಿ, ಆಕರ್ಷಿ ಕಶ್ಯಪ್, ಅಶ್ವಿನಿ ಪೊನ್ನಪ್ಪ@P9Ashwini, ಗಾಯತ್ರಿ ಗೋಪಿಚಂದ್ ಮತ್ತು ಪಿ.ವಿ. ಸಿಂಧೂ@Pvsindhu1 ಅವರಿಗೆ ಅಭಿನಂದನೆಗಳು. ಅವರ ಸಾಧನೆಗೆ ಹೆಮ್ಮೆ ತಂದಿದೆ.ʼʼ
"ಬ್ಯಾಡ್ಮಿಂಟನ್ ಭಾರತದ ಅತ್ಯಂತ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವು ಈ ಆಟವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಅದರತ್ತ ಆಕರ್ಷಿತರಾಗಲು ಸಾಕಷ್ಟು ನೆರವಾಗುತ್ತದೆ.ʼʼ
**********
(Release ID: 1847765)
Visitor Counter : 168
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam