ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಚೊಚ್ಚಲ ಸಿಡಬ್ಲೂಜಿಯಲ್ಲಿ ಮಿಂಚಿದ ಟಾಪ್ಸ್ ಅಥ್ಲೀಟ್ ಮತ್ತು ಎಸ್ಎಐ ಎನ್ ಸಿಒಇ ತರಬೇತಿ ಪಡೆದ ಬಿಂದ್ಯಾರಾಣಿ
Posted On:
31 JUL 2022 5:41PM by PIB Bengaluru
ವೇಟ್ ಲಿಫ್ಟರ್ ಬಿಂದ್ಯಾರಾಣಿ ದೇವಿ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಸಂಪಾದಿಸಿದ್ದಾರೆ. ಅವರು ಒಟ್ಟು 202 ಕೆಜಿ(86ಕೆಜಿ+116ಕೆಜಿ) ಭಾರವನ್ನು ಎತ್ತಿದರು.
ಮಣಿಪುರದ ಬಿಂದ್ಯಾರಾಣಿ ದೇವಿ ಅವರು ಒಂದು ದಶಕದ ಹಿಂದೆ ತಮ್ಮ ತವರು ಇಂಫಾಲದಲ್ಲಿ ವೇಟ್ ಲಿಫ್ಟಿಂಗ್ ಆರಂಭಿಸಿದರು. ಆ ಕ್ರೀಡೆಯನ್ನು ಆಯ್ಕೆಮಾಡಿಕೊಂಡ 3 ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಅವರು ಇಂಫಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ)ನ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ (ಎನ್ ಸಿಒಇ)ದಲ್ಲಿ ತರಬೇತಿಗೆ ಆಯ್ಕೆಯಾದರು ಮತ್ತು ಅಲ್ಲಿಂದ ಹಿಂತಿರುಗಿ ನೋಡಲಿಲ್ಲ.
ಇಂಫಾಲದ ಎನ್ ಸಿಒಇಯಲ್ಲಿ 3 ವರ್ಷಗಳ ನಿರಂತರ ತರಬೇತಿ ಮತ್ತು ಕಠಿಣ ಪರಿಶ್ರಮದ ನಂತರ ಅವರು 2019 ರಲ್ಲಿ ಎಸ್ ಐಎನ ಪಾಟಿಯಾಲ ಪ್ರಾದೇಶಿಕ ಕೇಂದ್ರದಲ್ಲಿ ಭಾರತೀಯ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದರು.
ಕೆಲವೇ ವರ್ಷಗಳಲ್ಲಿ ಅವರು ಕಾಮನ್ ವೆಲ್ತ್ ಹಿರಿಯರ ಚಾಂಪಿಯನ್‌ಶಿಪ್ 2019 ನಲ್ಲಿ ಚಿನ್ನದ ಪದಕ, ಅದೇ ಸ್ಪರ್ಧೆಯಲ್ಲಿ 2021 ರಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜುಲೈ 30ರಂದು ರಾತ್ರಿ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ 55 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಾಗ ಅದು ಅವರ ಅತಿದೊಡ್ಡ ಅಂತಾರಾಷ್ಟ್ರೀಯ ಸಾಧನೆಯಾಯಿತು.
ಸಿಡಬ್ಲೂಜಿಗಾಗಿ ನಮ್ಮ ಕಾಮನ್‌ವೆಲ್ತ್ ಚಾಂಪಿಯನ್ಗಳ ಉತ್ತಮ ಸಿದ್ಧತೆಯನ್ನು ಖಾತ್ರಿಪಡಿಸಿಕೊಳ್ಳಲು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (ಎಂವೈಎಎಸ್) ಭಾರತೀಯ ಕ್ರೀಡಾ ಪ್ರಾಧಿಕಾರದಡಿಯಲ್ಲಿ ತಮ್ಮ ವಾರ್ಷಿಕ ತರಬೇತಿ ಮತ್ತು ಸ್ಪರ್ಧೆಗಳ ವೇಳಾಪಟ್ಟಿ (ಎಸಿಟಿಸಿ) ಯೋಜನೆಯ ಮೂಲಕ ಒಟ್ಟು 25,63,336 ರೂ. ಗಳನ್ನು ಎಸ್ಎಐ ನೆರವು ನೀಡಿದೆ. ಈ ಯೋಜನೆಯಡಿ ಬಿಂದ್ಯಾರಾಣಿ ಹಾಗೂ ಇತರ ವೇಟ್ ಲಿಫ್ಟರ್‌ಗಳನ್ನು ಬೃಹತ್ ಕ್ರೀಡಾ ಸ್ಪರ್ಧೆಗೆ ಒಂದು ತಿಂಗಳ ಮೊದಲೇ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಅನುಕೂಲವಾಗುವಂತೆ ಬರ್ಮಿಂಗ್ ಹ್ಯಾಮ್‌ಗೆ ಕಳುಹಿಸಲಾಗಿತ್ತು. ಬಿಂದ್ಯಾರಾಣಿ ಅವರು ಟಾರ್ಗೆಟ್ ಒಲಂಪಿಕ್ ಪೋಡಿಯಂ ಯೋಜನೆ ಅಭಿವೃದ್ಧಿ (ಟಾಪ್ಸ್) ಗುಂಪಿನ ಭಾಗವಾಗಿದ್ದಾರೆ, ಇದರಿಂದ ಅವರ ತರಬೇತಿಗಾಗಿ ವೈಯಕ್ತಿಕ ನೆರವು ದೊರಕುವುದಲ್ಲದೆ, ಮಾಸಿಕ 25,000 ರೂ. ಪಾಕೆಟ್ ಭತ್ಯೆ ಕೂಡ ಲಭಿಸುತ್ತದೆ.
*******
(Release ID: 1846791)
Visitor Counter : 154