ಪ್ರಧಾನ ಮಂತ್ರಿಯವರ ಕಛೇರಿ

ಜುಲೈ 25 ರಂದು ದಿವಂಗತ ಶ್ರೀ ಹರ್ ಮೋಹನ್ ಸಿಂಗ್ ಯಾದವ್ ಅವರ 10 ನೇ ಪುಣ್ಯತಿಥಿಯ ಅಂಗವಾಗಿ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ

Posted On: 24 JUL 2022 1:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜುಲೈ 25ರಂದು ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದಿವಂಗತ ಶ್ರೀ ಹರ್ ಮೋಹನ್ ಸಿಂಗ್ ಯಾದವ್ ಅವರ 10ನೇ ಪುಣ್ಯತಿಥಿಯ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಶ್ರೀ ಹರ್ ಮೋಹನ್ ಸಿಂಗ್ ಯಾದವ್ (1921ರ  ಅಕ್ಟೋಬರ್ 18  - 2012 ಜುಲೈ 25) ಯಾದವ ಸಮುದಾಯದ ಅತ್ಯುನ್ನತ ವ್ಯಕ್ತಿ ಮತ್ತು ನಾಯಕರಾಗಿದ್ದರು. ರೈತರು, ಹಿಂದುಳಿದ ವರ್ಗಗಳು ಮತ್ತು ಸಮಾಜದ ಇತರ ವರ್ಗಗಳಿಗೆ ದಿವಂಗತ ನಾಯಕನ ಕೊಡುಗೆಯನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯ ಅವರ ಭಾಗವಹಿಸುವಿಕೆಯಾಗಿದೆ.

ಶ್ರೀ ಹರ್ ಮೋಹನ್ ಸಿಂಗ್ ಯಾದವ್ ಅವರು ದೀರ್ಘಕಾಲದವರೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ವಿಧಾನ ಪರಿಷತ್ ಸದಸ್ಯ, ಶಾಸಕ, ರಾಜ್ಯಸಭಾ ಸದಸ್ಯರಾಗಿ ಮತ್ತು 'ಅಖಿಲ ಭಾರತೀಯ ಯಾದವ ಮಹಾಸಭಾ'ದ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಅವರು ತಮ್ಮ ಮಗ ಶ್ರೀ ಸುಖರಾಮ್ ಸಿಂಗ್ ಅವರ ಸಹಾಯದಿಂದ ಕಾನ್ಪುರ ಮತ್ತು ಸುತ್ತಮುತ್ತಲಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1984 ರ ಸಿಖ್ ವಿರೋಧಿ ದಂಗೆಗಳ ಸಮಯದಲ್ಲಿ ಹಲವಾರು ಸಿಖ್ ರ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಶ್ರೀ ಹರ್ ಮೋಹನ್ ಸಿಂಗ್ ಯಾದವ್ ಅವರಿಗೆ 1991 ರಲ್ಲಿ ಶೌರ್ಯ ಚಕ್ರವನ್ನು ನೀಡಲಾಯಿತು.

 

***********



(Release ID: 1844587) Visitor Counter : 98