ನೀತಿ ಆಯೋಗ

ನೀತಿ ಆಯೋಗದ ಭಾರತ ನಾವೀನ್ಯತಾ ಸೂಚ್ಯಂಕ – 2021 ರಲ್ಲಿ ಕರ್ನಾಟಕ, ಮಣಿಪುರ ಮತ್ತು ಚಂಡಿಗರ್ ಅಗ್ರಸ್ಥಾನಗಳಲ್ಲಿ

Posted On: 21 JUL 2022 11:20AM by PIB Bengaluru

ನೀತಿ ಆಯೋಗದ ಮೂರನೇ ಭಾರತ ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ, ಮಣಿಪುರ ಮತ್ತು ಚಂಡಿಘರ್ ಅಗ್ರಸ್ಥಾನಗಳಲ್ಲಿವೆ.

 

ನೀತಿ ಆಯೊಗದ ಉಪಾಧ್ಯಕ್ಷ ಸುಮನ್ ಬೇರಿ ಅವರು, ಆಯೋಗದ ಸದಸ್ಯರಾದ ಡಾ. ವಿ.ಕೆ. ಸರಸ್ವತ್, ಸಿಇಓ ಪರಮೇಶ್ವರನ್ ಅಯ್ಯರ್ ಮತ್ತು ಹಿರಿಯ ಸಲಹೆಗಾರ ನೀರಜ್ ಸಿನ್ಹಾ ಹಾಗೂ ಸ್ಪರ್ಧಾತ್ಮಕತೆ ಸಂಸ್ಥೆಯ ಅಧ್ಯಕ್ಷ ಡಾ. ಅಮಿತ್ ಕಪೂರ್ ಅವರ ಸಮ್ಮುಖದಲ್ಲಿ ಸೂಚ್ಯಂಕ ಬಿಡುಗಡೆ ಮಾಡಿದರು.

 

“ಪ್ರಮುಖ ರಾಜ್ಯಗಳ” ವಲಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, “ಈಶಾನ್ಯ ಮತ್ತು ಬೆಟ್ಟಗಾಡು ರಾಜ್ಯಗಳ” ವಲಯದಲ್ಲಿ ಮಣಿಪುರ ಅಗ್ರಸ್ಥಾನದಲ್ಲಿದೆ ಹಾಗೂ “ಕೇಂದ್ರಾಡಳಿತ ಪ್ರದೇಶ ಮತ್ತು ನಗರ ರಾಜ್ಯಗಳ” ವಿಭಾಗದಲ್ಲಿ ಚಂಡಿಘರ್ ಮೊದಲ ಸ್ಥಾನದಲ್ಲಿದೆ.

 

ಡಾ. ಸರಸ್ವತ್ ಮಾತನಾಡಿ, “ಸುಸ್ಥಿರ ಮತ್ತು ಎಲ್ಲವನ್ನೊಳಗೊಂಡ ಅಭಿವೃದ್ಧಿಯಲ್ಲಿ ನಾವೀನ್ಯತೆ ನಿರ್ಣಾಯಕವಾಗಿದ್ದು, ಇದರಿಂದ ನಮ್ಮ ಕಾಲದ ಅತಿದೊಡ್ಡ ಸವಾಲುಗಳನ್ನು ಇತ್ಯರ್ಥಪಡಿಸಲು ಇದು ಸಹಕಾರಿಯಾಗಲಿದೆ. ಲಕ್ಷಾಂತರ ಜನರನ್ನು ಬಡತನ ರೇಖೆಯಿಂದ ಹೊರತರಲಾಗಿದೆ ಮತ್ತು ಇದು ಸ್ವಾವಲಂಬಿ 'ಆತ್ಮನಿರ್ಭಾರ್ ಭಾರತ' ಕ್ಕೆ ದಾರಿ ಮಾಡಿಕೊಡಲಿದೆ” ಎಂದು ಹೇಳಿದರು.

 

ನೀತಿ ಆಯೋಗದ ಸಿಇಓ ಪರಮೇಶ್ವರನ್ ಅಯ್ಯರ್ ಮಾತನಾಡಿ ‘ನಾವೀನ್ಯತೆ ಸೂಚ್ಯಂಕದ ಮೂಲಕ ಭಾರತವನ್ನು ನಾವೀನ್ಯತಾ ವಲಯದಲ್ಲಿ ನಿಗಾವಹಿಸಲು ನೀತಿ ಆಯೋಗ ನಿರಂತರ ಬದ್ಧತೆ ಹೊಂದಿದೆ ಎಂದು ಪುನುರುಚ್ಚರಿಸಿದರು. ರಾಜ್ಯಗಳು ಮತ್ತು ಪಾಲುದಾರರ ಸಹಭಾಗಿತ್ವದಲ್ಲಿ ದೇಶಾದ್ಯಂತ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿಯಾಗಿದೆ ಎಂದು ಹೇಳಿದರು.   

 

ಏನಿದು ಭಾರತ ನಾವೀನ್ಯತಾ ಸೂಚ್ಯಂಕ ?

 

ನೀತಿ ಆಯೋಗ ಮತ್ತು ಸ್ಪರ್ಧಾತ್ಮಕತೆ ಸಂಸ್ಥೆ ಸಿದ್ಧಪಡಿಸಿದ ಭಾರತದ ನಾವಿನ್ಯತಾ ಸೂಚ್ಯಂಕ ದೇಶದ ನಾವೀನ್ಯತೆಯ ಪರಿಸರ ವ್ಯವಸ್ಥೆಯ ಮೌಲ್ಯಮಾಪನ ಮಾಡಲು ಮತ್ತು ಅಭಿವೃದ್ಧಿ ವಲಯದಲ್ಲಿ ಇದು ಸಮಗ್ರ ಸಾಧನವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾವೀನ್ಯತಾ ವಲಯದಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ನಾವೀನ್ಯತೆಯ ಕಾರ್ಯಕ್ಷಮತೆಯ ಮೇಲೆ ಶ್ರೇಯಾಂಕ ನೀಡಲಾಗುತ್ತದೆ.

 

ಮೂರನೇ ಆವೃತ್ತಿಯಲ್ಲಿ ಜಾಗತಿಕ ನಾವೀನ್ಯತಾ ಸೂಚಕದ ಚೌಕಟ್ಟು ರಚಿಸುವ ಮೂಲಕ ದೇಶದಲ್ಲಿ ನಾವೀನ್ಯತೆಯ ವಿಶ್ಲೇಷಣಾ ವ್ಯಾಪ್ತಿಯನ್ನು ಹಿಗ್ಗಿಸಲು ಸಹಕಾರಿಯಾಗಲಿದೆ. ಈ ಸೂಚಕದ ಸಂಖ್ಯೆಯನ್ನು 36 [ಭಾರತ ನಾವಿನ್ಯತೆ ಸೂಚ್ಯಂಕ – 2020] ರಿಂದ 66 [ಭಾರತ ನಾವಿನ್ಯತೆ ಸೂಚ್ಯಂಕ – 2021]ಕ್ಕೆ ಹೆಚ್ಚಿಸಲಾಗಿದೆ. ಈ ಸೂಚಕಗಳನ್ನು 16 ಉಪ ಸ್ತಂಭಗಳಾದ್ಯಂತ ಹಂಚಿಕೆ ಮಾಡಲಾಗಿದೆ. ಇವು ಏಳು ಪ್ರಮುಖ ಸ್ತಂಭಗಳನ್ನು ರೂಪಿಸುತ್ತವೆ.

 

ಭಾರತ ನಾವೀನ್ಯತಾ ಸೂಚ್ಯಂಕ 2021 : ಒಟ್ಟಾರೆ ಶ್ರೇಯಾಂಕ

 

 ಭಾರತ ನಾವೀನ್ಯತಾ ಸೂಚ್ಯಂಕ -2021 ರ ರೂಪುರೇಷೆಗಳು ಕಳೆದ ವರ್ಷದಂತೆಯೇ ಉಳಿದಿವೆ. ಹಿಂದಿನ ಆವೃತ್ತಿಯಂತೆ ಐದು ಸಶಕ್ತ ಸ್ತಂಭಗಳು ಇನ್ ಪುಟ್ ಗಳನ್ನು ಅಳೆಯುತ್ತವೆ ಮತ್ತು ಎರಡು ಕಾರ್ಯನಿರ್ವಹಣಾ ಸ್ತಂಭಗಳು ಔಟ್ ಪುಟ್ ಅನ್ನು ಮಾಪನ ಮಾಡುತ್ತವೆ. ಕಾರ್ಯನಿರ್ವಹಣೆಯ ಸ್ತಂಭಗಳಲ್ಲಿನ ಎಲ್ಲಾ ಸೂಚಕಗಳು ರಾಜ್ಯ / ಕೇಂದ್ರಾಡಳಿತ ಪ್ರದೇಶದೊಳಗೆ ನಾವಿನ್ಯತೆಯನ್ನು ಉತ್ತೇಜಿಸಲು ನಿರ್ಣಾಯಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಕಾರ್ಯಕ್ಷಮತೆಯ ಸ್ತಂಭಗಳಲ್ಲಿನ ಸೂಚಕಗಳು ಜ್ಞಾನ ಸೃಷ್ಟಿ ಮತ್ತು ಸ್ಪರ್ಧಾತ್ಮಕತೆಯಲ್ಲಿ ದೇಶದ ಉತ್ಪಾದನೆಯನ್ನು ಪ್ರತಿನಿಧಿಸುತ್ತದೆ.

 

ನೀತಿ ಆಯೋಗದ ಹಿರಿಯ ಸಲಹೆಗಾರ ನೀರಜ್ ಸಿನ್ಹಾ ಮಾತನಾಡಿ, ‘ದೇಶದ ನಾವೀನ್ಯತೆ ಸ್ಥಿತಿ ಸ್ಥಾಪಕತ್ವ ಮತ್ತು ಸ್ವಾವಂಬನೆಯನ್ನು ಉತ್ತೇಜಿಸುವಲ್ಲಿ ಇದು ನಿರ್ಣಾಯಕವಾಗಿದೆ. ಈ ಸೂಚ್ಯಂಕ ಭಾರತದ ಎಲ್ಲಾ ರಾಜ್ಯಗಳಲ್ಲಿ ನಾವೀನ್ಯತೆಯ ವಿಕೇಂದ್ರೀಕರಣಕ್ಕೆ ಸಹಕಾರಿಯಾಗಿದೆ’ ಎಂದು ಹೇಳಿದರು.

 

ಸ್ಪರ್ಧಾತ್ಮಕತೆ ಸಂಸ್ಥೆಯ ಅಧ್ಯಕ್ಷ ಡಾ. ಅಮಿತ್ ಕಪೂರ್ ಮಾತನಾಡಿ, ‘ಅಂತರರಾಷ್ಟ್ರೀಯವಾಗಿ ಸೂಚ್ಯಂಕ ಭಾರತದ ಕಲಿಕೆಗಳನ್ನು ಹೆಚ್ಚಿಸುತ್ತದೆ ಮತ್ತು ನಾವು ನಮ್ಮ ಸಹವರ್ತಿಗಳೊಂದಿಗೆ ಸಮಾನಾಂತರ ಬೆಳವಣಿಗೆ ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

 

ದೇಶವನ್ನು ನಾವೀನ್ಯತೆ-ಚಾಲಿತ ಆರ್ಥಿಕತೆಯಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ನಿರಂತರ ಬದ್ಧತೆಗೆ ಭಾರತ ನಾವೀನ್ಯತಾ ಸೂಚ್ಯಂಕ – 2021 ಸಾಕ್ಷಿಯಾಗಿದೆ ಎಂದರು.

 

ಸುಧಾರಣೆ ಮತ್ತು ಬೆಳವಣಿಗೆ [ಜಿ.ಐ.ಆರ್.ಜಿ] ಕಾರ್ಯವಿಧಾನವನ್ನು ಚಾಲನೆಗೊಳಿಸಲು, ಜಾಗತಿಕ ಸೂಚ್ಯಂಕಗಳ ಮೇಲೆ ನಿಗಾ ಇಡುವ ಸರ್ಕಾರದ ಪ್ರಯತ್ನಕ್ಕೆ ಭಾರತ ನಾವೀನ್ಯತಾ ಸೂಚ್ಯಂಕ ಕೊಡುಗೆ ನೀಡುತ್ತದೆ. ಇದಕ್ಕಾಗಿ ನೀತಿ ಆಯೋಗ ನೋಡೆಲ್ ಸಂಸ್ಥೆಯಾಗಿದೆ.

 

ಸಂಪೂರ್ಣ ವರದಿಯನ್ನು ಇಲ್ಲಿ ಓದಿ:

https://www.niti.gov.in/sites/default/files/2022-07/India-Innovation-Index-2021-Web-Version_21_7_22.pdf

 

***********



(Release ID: 1843613) Visitor Counter : 1602