ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಚಿವ ರಾಜೀವ್ ಚಂದ್ರಶೇಖರ್ ಅವರು ಭಾರತದ ನವೋದ್ಯಮಗಳ, ಯುನಿಕಾರ್ನ್ ಮುಖ್ಯಸ್ಥರೊಂದಿಗೆ ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ರವರನ್ನು ಭೇಟಿ ಮಾಡಿದರು


ಡಿಜಿಟಲ್ ಇಂಡಿಯಾದ ಸಾಧನೆಗಳ ಕುರಿತು ಚರ್ಚಿಸಿದರು ಮತ್ತು ಭವಿಷ್ಯದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಕೋರಿದರು.

"ದತ್ತಾಂಶ ಭದ್ರತೆಗಾಗಿ ಮತ್ತು ಸುರಕ್ಷಿತ ಅಂತರ್ಜಾಲದ ಭವಿಷ್ಯವನ್ನು ರೂಪಿಸುವಲ್ಲಿ ಪಾಲುದಾರ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕಾಗಿದೆ" -
ರಾಜೀವ್ ಚಂದ್ರಶೇಖರ್ ಐಜಿಎಫ್‍, ಯು ಕೆಯಲ್ಲಿ ಹೇಳಿಕೆ

Posted On: 02 JUL 2022 4:11PM by PIB Bengaluru

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ರವರು ಶುಕ್ರವಾರ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭಾರತೀಯ ನವೋದ್ಯಮ, ಯುನಿಕಾರ್ನ್‌ ಮತ್ತು ನವಪ್ರವರ್ತಕರ ನಿಯೋಗದೊಂದಿಗೆ ಭೇಟಿಯಾದರು. ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಯುಕೆ ನಡುವಿನ ಭವಿಷ್ಯದ ಸಹಯೋಗಗಳು ಮತ್ತು ಪಾಲುದಾರಿಕೆಗಳ ಬಗ್ಗೆ ಇಬ್ಬರೂ ಚರ್ಚಿಸಿದರು. ಈ ಸಂಬಂಧ ಶ್ರೀ ಚಂದ್ರಶೇಖರ್ ಅವರು ಬ್ರಿಟನ್ ಸಂಸದರಾದ ಶ್ರೀ ಪೌಲ್ ಸ್ಕಲ್ಲಿ ಅವರನ್ನೂ ಭೇಟಿಯಾದರು.

​​​​​​

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಚಂದ್ರಶೇಖರ್, ಭಾರತ ಮತ್ತು ಯುಕೆ ಎರಡೂ ನಾವೀನ್ಯತೆ ಆರ್ಥಿಕತೆಯನ್ನು ಶಕ್ತಿಯುತ ರೀತಿಯಲ್ಲಿ ವಿಸ್ತರಿಸಲು ಬಯಸುತ್ತವೆ. ಅವರು ಹೇಳಿದರು, “ನಾವು ಡಿಜಿಟಲ್ ಆರ್ಥಿಕತೆಯನ್ನು ಒಟ್ಟು ಆರ್ಥಿಕತೆಯ ಶೇಕಡಾ 25 ರಷ್ಟು ಮಾಡಲು ಬಯಸುತ್ತೇವೆ. ಯುಕೆ ಸರ್ಕಾರವು ಕೂಡಾ ಈ ವಲಯವನ್ನು ವಿಸ್ತರಿಸಲು ಬಯಸುತ್ತದೆ.

ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ ಶ್ರೀ ಚಂದ್ರಶೇಖರ್ ಅವರು ಶ್ರೀಮತಿ ಪ್ರೀತಿ ಪಟೇಲ್, ಗೃಹ ಕಾರ್ಯದರ್ಶಿ-ಯುಕೆ, ಶ್ರೀಮತಿ ಅನ್ನೆ-ಮೇರಿ ಟ್ರೆವೆಲಿಯನ್, ಅಂತರಾಷ್ಟ್ರೀಯ ವ್ಯಾಪಾರದ ಕಾರ್ಯದರ್ಶಿ ಮತ್ತು ಯುಕೆ ಸರ್ಕಾರದ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಶ್ರೀ ಕ್ರಿಸ್ ಫಿಲಿಪ್, ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆ ಸಚಿವರೊಂದಿಗೆ ಸಚಿವರ ದುಂಡುಮೇಜಿನ ಚರ್ಚೆ ನಡೆಸಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಯ ಕುರಿತು ಸಚಿವರು, 1990 ರ ದಶಕದಲ್ಲಿ ಭಾರತವು ತನ್ನ ಎಲ್ಲಾ ತಾಂತ್ರಿಕ ಅಗತ್ಯಗಳಿಗೆ ಇತರರ ಮೇಲೆ ಅವಲಂಬಿತವಾಗಿತ್ತು ಮತ್ತು ತಾನು ಉತ್ಪಾದಿಸುವ ಎಲ್ಲದಕ್ಕೂ ಎಲ್ಲಾ ಭಾಗಗಳು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಸಂದರ್ಭಕ್ಕಿಂತ ಭಿನ್ನವಾಗಿದೆ, ಇಂದು ಸನ್ನಿವೇಶವು ಸಂಪೂರ್ಣವಾಗಿ ವಿಭಿನ್ನವಾಗಿದೆ ಇದು ಈಗ 5ಜಿ ಗೇರ್ ಅನ್ನು ವಿನ್ಯಾಸಗೊಳಿಸುತ್ತಿದೆ ಮತ್ತು

5G ಉತ್ಪನ್ನಗಳನ್ನು ತಯಾರಿಸಲು ಬಳಸುವ ಉಪಕರಣಗಳನ್ನು ತಯಾರಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಯ ಅಡಿಯಲ್ಲಿ ಇದೆಲ್ಲವನ್ನೂ ಸಾಧಿಸಲಾಗಿದೆ” ಎಂದು ಹೇಳಿದರು.

ಶ್ರೀ ಚಂದ್ರಶೇಖರ್ ಅವರು ಯುಕೆ-ಇಂಟರ್ನ್ಯಾಷನಲ್ ಗ್ಲೋಬಲ್ ಫೋರಮ್ (ಐಜಿಎಫ್) ನಲ್ಲಿ ಡಿಜಿಟಲ್ ಭವಿಷ್ಯದ ಕುರಿತಾದ ಅಧಿವೇಶನದಲ್ಲಿ ಭಾಗವಹಿಸಿದರು, ಅಲ್ಲಿ ಅವರು ಬಳಕೆದಾರರ ನಷ್ಟದ ವಿರುದ್ಧ ನಾಗರಿಕರ ತ್ವರಿತ ಡಿಜಿಟಲೀಕರಣ ಮತ್ತು ಡಿಜಿಟಲ್ ಸುರಕ್ಷತೆಯ ಅಗತ್ಯತೆಯ ಕುರಿತು ಮಾತನಾಡಿದರು. ಸೈಬರ್‌ಸ್ಪೇಸ್ ಗಡಿಯಿಲ್ಲದ ಡೊಮೇನ್ ಆಗಿದ್ದು, ಬಳಕೆದಾರರಿಗೆ ಭದ್ರತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ವಿಶೇಷವಾಗಿ ಸಮಾನ ಮನಸ್ಕ ಪ್ರಜಾಪ್ರಭುತ್ವಗಳ ನಡುವೆ ಸಹಕಾರಕ್ಕಾಗಿ ಕರೆ ನೀಡಿದರು.

"ದತ್ತಾಂಶ ಆರ್ಥಿಕತೆಯು ಬಳಕೆದಾರರ ನಾಗರಿಕರ ಸುರಕ್ಷತೆಗಾಗಿ ಏನನ್ನಾದರೂ ಮಾಡಬೇಕಾಗಿದೆ ಎನ್ನುವ ಅರಿವನ್ನು ಮೂಡಿಸಿದೆ. ನೀತಿ ನಿರೂಪಕರಾಗಿ ನಾವು ಬಳಕೆದಾರರ ದೃಷ್ಟಿಯಿಂದ ನೊಡಬೇಕು. ಅತ್ಯಂತ ಅಂತರ್ಜಾಲ ಮತ್ತು ದೊಡ್ಡ ತಂತ್ರಜ್ಞಾನದ ಪ್ರಭಾವದ ಬೆಳವಣಿಗೆಯಲ್ಲಿ, ನಾವು ಒಂದು ಒಳಹರಿವಿನ ಹಂತದಲ್ಲಿರುತ್ತೇವೆ. ಸುರಕ್ಷತೆ ಮತ್ತು ವಿಶ್ವಾಸವು ಅತಿ ಮುಖ್ಯವಾಗಿದೆ ಮತ್ತು ಭಾರತ ಒಂದೇ ದೇಶದಿಂದ ಮಾತ್ರ ಮಾಡಲು ಸಾಧ್ಯವಿಲ್ಲ, ಸುರಕ್ಷಿತ ಅಂತರ್ಜಾಲದ ಭವಿಷ್ಯವನ್ನು ರೂಪಿಸುವಲ್ಲಿ ನಾವು ಪಾಲುದಾರ ದೇಶಗಳೊಂದಿಗೆ ಕೆಲಸ ಮಾಡಬೇಕಾಗಿದೆ ”ಎಂದು ಅವರು ಒತ್ತಿ ಹೇಳಿದರು.

ಇದಕ್ಕೂ ಮುನ್ನ 12ನೇ ಶತಮಾನದ ಕನ್ನಡ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶ್ರೀ ಚಂದ್ರಶೇಖರ್ (ಇವರನ್ನು ಬಸವಣ್ಣ ಎಂದು ಪೂಜ್ಯಭಾವದಿಂದ ಸ್ಮರಿಸಲಾಗುತ್ತಿದೆ), ಲಿಂಗ, ಜಾತಿ ಅಥವಾ ವರ್ಗದ ಆಧಾರದ ಮೇಲೆ ತಾರತಮ್ಯದ ವಿರುದ್ಧವೂ

 ಹೋರಾಡಿದರು. ಅವರ ಪ್ರಜಾಪ್ರಭುತ್ವ ಮತ್ತು ಅಹಿಂಸೆಯ ವಿಚಾರಗಳು ಪೀಳಿಗೆಗೆ ಸ್ಫೂರ್ತಿ ನೀಡಿವೆ. ಈ ಪ್ರತಿಮೆಯನ್ನು ಬ್ರಿಟಿಷ್ ಸಂಸತ್ತಿನ ಬಳಿ ಥೇಮ್ಸ್ ನದಿಯ ದಡದಲ್ಲಿ ಸ್ಥಾಪಿಸಲಾಗಿದೆ. ಇದನ್ನು 2015 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮಂದಿ ಅವರು ಅನಾವರಣಗೊಳಿಸಿದರು.

ಹಿಂದಿನ ದಿನ, ಶ್ರೀ ಚಂದ್ರಶೇಖರ್ ಅವರು 12 ನೇ ಶತಮಾನದ ಕನ್ನಡ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ, ಲಿಂಗ, ಜಾತಿ ಅಥವಾ ವರ್ಗದ ಆಧಾರದ ಮೇಲೆ ತಾರತಮ್ಯದ ವಿರುದ್ಧ ಹೋರಾಡಿದ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದರು. . ಅವರ ಪ್ರಜಾಪ್ರಭುತ್ವ ಮತ್ತು ಅಹಿಂಸೆಯ ವಿಚಾರಗಳು ಪೀಳಿಗೆಗಳಿಂದ ಸ್ಫೂರ್ತಿ ನೀಡುತ್ತಲಿವೆ. ಈ ಪ್ರತಿಮೆಯನ್ನು ಬ್ರಿಟಿಷ್ ಪಾರ್ಲಿಮೆಂಟ್ ಬಳಿ ಥೇಮ್ಸ್ ನದಿಯ ದಡದಲ್ಲಿ ಸ್ಥಾಪಿಸಲಾಗಿದೆ. ಇದನ್ನು 2015 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದರು.

*******

 

 

 

 



(Release ID: 1838972) Visitor Counter : 137