ಸಂಪುಟ
ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಸಿಂಗಾಪುರದ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದ ನಡುವೆ ತಿಳಿವಳಿಕಾ ಒಡಂಬಡಿಕೆ (ಎಂ.ಓ.ಯು.)ಗೆ ಸಂಪುಟದ ಅನುಮೋದನೆ
Posted On:
29 JUN 2022 3:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷ ತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಗಣರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಸಿಂಗಾಪುರ ಗಣರಾಜ್ಯದ ಸರ್ಕಾರದ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದ ನಡುವೆ ಅಂಕಿತ ಹಾಕಲಾದ ತಿಳಿವಳಿಕಾ ಒಡಂಬಡಿಕೆ (ಎಂ.ಓ.ಯು.)ಯ ಬಗ್ಗೆ ಮಾಹಿತಿ ನೀಡಲಾಯಿತು. ಈ ತಿಳಿವಳಿಕಾ ಒಡಂಬಡಿಕೆಗೆ 2022ರ ಫೆಬ್ರವರಿಯಲ್ಲಿಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕಾ ಒಡಂಬಡಿಕೆಯು ಎರಡೂ ದೇಶಗಳಲ್ಲಿನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಹೊಸ ತಂತ್ರಜ್ಞಾನ ಸೃಷ್ಟಿ, ಮಾನವಶಕ್ತಿ ತರಬೇತಿ, ಸಹಯೋಗದ ಮೂಲಕ ಐಪಿ ಉತ್ಪಾದನೆಗೆ ಕಾರಣವಾಗುವಂತಹ ಒಂದು ಕಾರ್ಯವಿಧಾನವನ್ನು ಮತ್ತು ಪರಿಸರ ವ್ಯವಸ್ಥೆಯನ್ನು ರೂಪಿಸಲು ಹಾಗು ಪರಿಸರ ವ್ಯವಸ್ಥೆಗೆ ಪೂರಕವಾಗಿ ನೆರವಾಗುತ್ತದೆ.
ಈ ಸಹಕಾರದ ಅಡಿಯಲ್ಲಿ ಜಾರಿಗೆ ತರಲಾದ ಚಟುವಟಿಕೆಗಳ ಮೂಲಕ ಹೊಸ ಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯು ಆತ್ಮನಿರ್ಭರ ಭಾರತಕ್ಕೆ ಉತ್ತೇಜನವನ್ನು ನೀಡುತ್ತದೆ. ಈ ತಿಳುವಳಿಕಾ ಒಡಂಬಡಿಕೆಯು ಎರಡೂ ದೇಶಗಳಲ್ಲಿ ಹೊಸ ತಂತ್ರಜ್ಞಾನ ಸೃಷ್ಟಿ, ಮಾನವಶಕ್ತಿ ತರಬೇತಿ, ಸಹಯೋಗದ ಮೂಲಕ ಐಪಿ ಉತ್ಪಾದನೆಗೆ ಕಾರಣವಾಗುವ ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ರಚಿಸಲು ಒಂದು ಕಾರ್ಯವಿಧಾನವನ್ನು ಒದಗಿಸುತ್ತದೆ ಮತ್ತು ಸಹಾಯ ಮಾಡುತ್ತದೆ. ಈ ತಿಳಿವಳಿಕಾ ಒಡಂಬಡಿಕೆಯಲ್ಲಿ ಪ್ರಸ್ತಾಪಿಸಲಾದ ಚಟುವಟಿಕೆಗಳು ಉತ್ಪನ್ನ ಅಭಿವೃದ್ಧಿ ಮತ್ತು ತಂತ್ರಜ್ಞಾನ ವಿನಿಮಯವನ್ನು ಒಳಗೊಂಡಿರುತ್ತವೆ, ಇದು ಹೊಸ ಉದ್ಯಮಗಳು ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಬಹುದು.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯಲ್ಲಿ ಸಮಾನ ಆಸಕ್ತಿಯ ಕ್ಷೇತ್ರಗಳಲ್ಲಿ ಭಾರತ ಮತ್ತು ಸಿಂಗಾಪುರಗಳ ನಡುವೆ ಸಹಕಾರವನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಮತ್ತು ಸುಗಮಗೊಳಿಸುವುದು ಈ ಜ್ಞಾಪಕ ಪತ್ರದ ಉದ್ದೇಶವಾಗಿದೆ. ಸಂಶೋಧನೆ, ನಾವಿನ್ಯತೆ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ಪ್ರಗತಿಯನ್ನು ಮುನ್ನಡೆಸಬಲ್ಲಪರಸ್ಪರ ಹಿತಾಸಕ್ತಿಯ ಯಾವುದೇ ಕ್ಷೇತ್ರದೊಳಗಿನ ಸಹಯೋಗಕ್ಕೆ ಆದ್ಯತೆ ನೀಡಲಾಗುವುದು:
1. ಕೃಷಿ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ;
2. ಸುಧಾರಿತ ಉತ್ಪಾದನೆ ಮತ್ತು ಎಂಜಿನಿಯರಿಂಗ್…;
3. ಹಸಿರು ಆರ್ಥಿಕತೆ, ಶಕ್ತಿ, ನೀರು, ಹವಾಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು;
4. ದತ್ತಾಂಶ ವಿಜ್ಞಾನ, ಉದಯೋನ್ಮುಖ ತಂತ್ರಜ್ಞಾನ;
5. ಸುಧಾರಿತ ವಸ್ತುಗಳು; ಮತ್ತು
6. ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ.
ಪರಸ್ಪರ ಒಪ್ಪಿಗೆಯ ಮೂಲಕ ಸಾಮಾನ್ಯ ಆಸಕ್ತಿಯ ಇತರ ಕ್ಷೇತ್ರಗಳನ್ನು ಸೇರಿಸಲಾಗುವುದು.
******
(Release ID: 1838065)
Visitor Counter : 198
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam