ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಘೋಷಿಸಿದ ಅಗ್ನಿಪಥ್ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವ ಅಗ್ನಿವೀರ್‌ಗಳಿಗಾಗಿ ಸಿ.ಎ.ಪಿ.ಎಫ್.ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಪ್ರತಿಶತ 10ರಷ್ಟು ಖಾಲಿ ಹುದ್ದೆಗಳನ್ನು ಮೀಸಲಿರಿಸಲು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ನಿರ್ಧರಿಸಿದೆ.
ಸಿ.ಎ.ಪಿ.ಎಫ್.ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ದಾಟಿ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು ಎಂ.ಎಚ್.ಎ. ನಿರ್ಧರಿಸಿದೆ.
ಇದರ ಜೊತೆಗೆ , ಅಗ್ನಿವೀರ್‌ಗಳ ಮೊದಲ ತಂಡಕ್ಕೆ, ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
प्रविष्टि तिथि:
18 JUN 2022 12:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಘೋಷಿಸಿದ ಅಗ್ನಿಪಥ್ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವ ಅಗ್ನಿವೀರ್‌ಗಳಿಗಾಗಿ ಸಿ.ಎ.ಪಿ.ಎಫ್. ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಪ್ರತಿಶತ 10ರಷ್ಟು ಖಾಲಿ ಹುದ್ದೆಗಳನ್ನು ಮೀಸಲಿರಿಸಲು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ನಿರ್ಧರಿಸಿದೆ.
ಸರಣಿ ಟ್ವೀಟ್‌ಗಳಲ್ಲಿ, ಗೃಹ ಸಚಿವರ ಕಛೇರಿಯು “ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಘೋಷಿಸಿದ ಅಗ್ನಿಪಥ್ ಯೋಜನೆಯಡಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವ ಅಗ್ನಿವೀರ್‌ಗಳಿಗಾಗಿ ಸಿಎಪಿಎಫ್‌ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ 10%ನಷ್ಟು ಖಾಲಿ ಹುದ್ದೆಗಳನ್ನು ಮೀಸಲಿಡಲು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ನಿರ್ಧರಿಸಿದೆ” ಎಂದು ಹೇಳಿದೆ.
“ಸಿಎಪಿಎಫ್‌ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು ಎಂ.ಎಚ್.ಎ. ನಿರ್ಧರಿಸಿದೆ, ಇದಲ್ಲದೆ, ಅಗ್ನಿವೀರರ ಮೊದಲ ಬ್ಯಾಚ್‌ಗೆ, ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 5 ವರ್ಷಗಳವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ” ಎಂದೂ ಅದು ಹೇಳಿದೆ
*****
(रिलीज़ आईडी: 1835160)
आगंतुक पटल : 290