ಸಂಪುಟ

ಪರಿವರ್ತಕ ಸುಧಾರಣೆಯೊಂದರಲ್ಲಿ, ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗಾಗಿ 'ಅಗ್ನಿಪಥ್' ಯೋಜನೆಗೆ ಸಂಪುಟದ ಅನುಮೋದನೆ.


ಅಗ್ನಿವೀರರನ್ನು ಆಯಾ ಸೇವಾ ಕಾಯಿದೆಗಳ ಅಡಿಯಲ್ಲಿ ನಾಲ್ಕು ವರ್ಷಗಳವರೆಗೆ ದಾಖಲಿಸಿಕೊಳ್ಳಲಾಗುವುದು

ಮೂರು ಪಡೆಗಳಲ್ಲಿ ಅನ್ವಯವಾಗುವಂತೆ ಅಪಾಯ ಮತ್ತು ಕಷ್ಟದ ಭತ್ಯೆಗಳೊಂದಿಗೆ ಆಕರ್ಷಕ ಮಾಸಿಕ ಪ್ಯಾಕೇಜ್

ನಾಲ್ಕು ವರ್ಷಗಳ ಅವಧಿ ಪೂರ್ಣಗೊಂಡ ನಂತರ ಅಗ್ನಿವೀರರಿಗೆ ಒಂದು ಬಾರಿಯ ‘ಸೇವಾನಿಧಿ’ ಪ್ಯಾಕೇಜ್ ಪಾವತಿಸಲಾಗುವುದು

ಈ ವರ್ಷ 46,000 ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು

ಭವಿಷ್ಯದ ಸವಾಲುಗಳನ್ನು ಎದುರಿಸಲು ಸಶಸ್ತ್ರ ಪಡೆಗಳು ಯುವ, ಸದೃಢ, ವೈವಿಧ್ಯಮಯ ವ್ಯಕ್ತಿಗಳನ್ನು ಹೊಂದಲಿವೆ.

Posted On: 14 JUN 2022 2:13PM by PIB Bengaluru

ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಆಕರ್ಷಕ ನೇಮಕಾತಿ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಇಂದು ಅನುಮೋದನೆ ನೀಡಿದೆ. ಈ ಯೋಜನೆಯನ್ನು ಅಗ್ನಿಪಥ್ ಎಂದು ಮತ್ತು ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ಯೋಜನೆಯು ದೇಶಭಕ್ತಿ ಮತ್ತು ಸ್ಫೂರ್ತಿ ತುಂಬಿದ ಯುವಕರು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.

ಅಗ್ನಿಪಥ್ ಯೋಜನೆಯನ್ನು ಸಶಸ್ತ್ರ ಪಡೆಗಳಲ್ಲಿ ಯುವಜನರನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಸಮಕಾಲೀನ ತಾಂತ್ರಿಕ ಪ್ರವೃತ್ತಿಗಳಿಗೆ ಹೆಚ್ಚು ಹೊಂದಿಕೆಯಾಗುವ ಮತ್ತು ಸಮಾಜದ ನುರಿತ, ಶಿಸ್ತು ಮತ್ತು ಪ್ರೇರಿತ ಮಾನವಶಕ್ತಿಯ ಯುವ ಪ್ರತಿಭೆಗಳನ್ನು ಆಕರ್ಷಿಸುವ ಮೂಲಕ ಸಮವಸ್ತ್ರವನ್ನು ಧರಿಸಲು ಉತ್ಸುಕರಾಗಿರುವ ಯುವಕರಿಗೆ ಇದು ಅವಕಾಶವನ್ನು ಒದಗಿಸುತ್ತದೆ. ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ, ಇದು ಸಶಸ್ತ್ರ ಪಡೆಗಳ ಯುವಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು 'ಜೋಶ್' ಮತ್ತು 'ಜಜ್ಬಾ' ಗೆ ಹೊಸ ಹುರುಪು ನೀಡುತ್ತದೆ. ಹಾಗೆಯೇ, ಸಶಸ್ತ್ರ ಪಡೆಗಳ ತಂತ್ರಜ್ಞಾನದಲ್ಲಿ ಸದಯದ ಅಗತ್ಯವಾಗಿರುವ ಪರಿವರ್ತನೆಯ ಬದಲಾವಣೆಯನ್ನು ತರುತ್ತದೆ. ಈ ಯೋಜನೆಯ ಅನುಷ್ಠಾನದಿಂದ ಭಾರತೀಯ ಸಶಸ್ತ್ರ ಪಡೆಗಳ ಯೋಧರ ಸರಾಸರಿ ವಯಸ್ಸು ಸುಮಾರು 4-5 ವರ್ಷಗಳು ಕಡಿಮೆಯಾಗಲಿದೆ. ಸಶಸ್ತ್ರ ಪಡೆಗಳಲ್ಲಿ ಸ್ವಯಂ-ಶಿಸ್ತು, ಶ್ರದ್ಧೆ ಮತ್ತು ಆಳವಾದ ತಿಳುವಳಿಕೆಯೊಂದಿಗೆ ಹೆಚ್ಚು ಪ್ರೇರಿತವಾದ ಯುವಕರ ಒಳಹರಿವಿನಿಂದ ರಾಷ್ಟ್ರೀಯತೆಯು ಅಪಾರವಾಗಿ ಪ್ರಯೋಜನವನ್ನು ಪಡೆಯುತ್ತದೆ, ಇವರು ಸಮರ್ಪಕ ಕೌಶಲ್ಯವನ್ನು ಹೊಂದಿರುತ್ತಾರೆ ಮತ್ತು ಇತರ ಕ್ಷೇತ್ರಗಳಲ್ಲಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ರಾಷ್ಟ್ರ, ಸಮಾಜ ಮತ್ತು ರಾಷ್ಟ್ರದ ಯುವಕರಿಗೆ ಅಲ್ಪಾವಧಿಯ ಮಿಲಿಟರಿ ಸೇವೆಯ ಪ್ರಯೋಜನವು ಅಪಾರವಾಗಿದೆ. ಇದರಲ್ಲಿ ದೇಶಭಕ್ತಿ, ತಂಡದ ಕೆಲಸ, ದೈಹಿಕ ಸಾಮರ್ಥ್ಯದ ವರ್ಧನೆ, ದೇಶಕ್ಕಾಗಿ ಬೇರೂರಿರುವ ನಿಷ್ಠೆ ಮತ್ತು ಬಾಹ್ಯ ಬೆದರಿಕೆಗಳು, ಆಂತರಿಕ ಬೆದರಿಕೆಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ತರಬೇತಿ ಪಡೆದ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಇದು ಮೂರು ಪಡೆಗಳ ಮಾನವ ಸಂಪನ್ಮೂಲ ನೀತಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಲು ಸರ್ಕಾರವು ಪರಿಚಯಿಸಿದ ಪ್ರಮುಖ ರಕ್ಷಣಾ ನೀತಿ ಸುಧಾರಣೆಯಾಗಿದೆ. ಈ ನೀತಿಯು ತಕ್ಷಣವೇ ಜಾರಿಗೆ ಬರುತ್ತದೆ, ಇನ್ನು ಮುಂದೆ ಮೂರು ಸೇವೆಗಳಿಗೆ ದಾಖಲಾತಿಯನ್ನು ನಡೆಸುತ್ತದೆ.

ಅಗ್ನಿವೀರರಿಗೆ ಸೌಲಭ್ಯಗಳು

ಅಗ್ನಿವೀರರಿಗೆ ಮೂರು ಸೇವೆಗಳಲ್ಲಿ ಅನ್ವಯವಾಗುವಂತೆ ಅಪಾಯ ಮತ್ತು ಕಷ್ಟದ ಭತ್ಯೆಗಳೊಂದಿಗೆ ಆಕರ್ಷಕ ಮಾಸಿಕ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿಯು ಪೂರ್ಣಗೊಂಡ ನಂತರ, ಅಗ್ನಿವೀರರಿಗೆ ಒಂದು ಬಾರಿಯ 'ಸೇವಾನಿಧಿ' ಪ್ಯಾಕೇಜ್ ಅನ್ನು ಪಾವತಿಸಲಾಗುವುದು, ಅದು ಅವರ ಕೊಡುಗೆಯನ್ನು ಒಳಗೊಂಡಿರುತ್ತದೆ ಮತ್ತು ಅದರ ಮೇಲಿನ ಸಂಚಿತ ಬಡ್ಡಿ ಮತ್ತು ಕೆಳಗೆ ಸೂಚಿಸಿದ ಬಡ್ಡಿ ಸೇರಿದಂತೆ ಅವರ ಕೊಡುಗೆಯ ಸಂಚಿತ ಮೊತ್ತಕ್ಕೆ ಸಮಾನವಾದ ಸರ್ಕಾರದ ಕೊಡುಗೆಯನ್ನು ಒಳಗೊಂಡಿರುತ್ತದೆ:

ವರ್ಷ

ಕಸ್ಟಮೈಸ್ ಮಾಡಿದ ಪ್ಯಾಕೇಜ್ (ಮಾಸಿಕ)

 

ಕೈಗೆ ಸಿಗುವುದು (ಶೇ.70)

ಅಗ್ನಿವೀರ್ ಕಾರ್ಪಸ್ ಫಂಡ್‌ಗೆ ಕೊಡುಗೆ (ಶೇ.30)

ಭಾರತ ಸರ್ಕಾರದಿಂದ ಕಾರ್ಪಸ್ ಫಂಡ್‌ಗೆ ಕೊಡುಗೆ

ಎಲ್ಲಾ ಅಂಕಿಅಂಶಗಳು ರೂ.ಗಳಲ್ಲಿ (ಮಾಸಿಕ ಕೊಡುಗೆ)

1 ನೇ ವರ್ಷ

30000

21000

9000

9000

2 ನೇ ವರ್ಷ

33000

23100

9900

9900

3 ನೇ ವರ್ಷ

36500

25580

10950

10950

4 ನೇ ವರ್ಷ

40000

28000

12000

12000

ನಾಲ್ಕು ವರ್ಷಗಳ ನಂತರ ಅಗ್ನಿವೀರ್ ಕಾರ್ಪಸ್ ಫಂಡ್‌ನಲ್ಲಿ ಒಟ್ಟು ಕೊಡುಗೆ

5.02 ಲಕ್ಷ ರೂ

5.02 ಲಕ್ಷ ರೂ

4 ವರ್ಷಗಳ ನಂತರ ನಿರ್ಗಮನ

ಸೇವಾನಿಧಿ ಪ್ಯಾಕೇಜ್ ಆಗಿ 11.71 ಲಕ್ಷ ರೂ.

(ಅನ್ವಯವಾಗುವ ಬಡ್ಡಿದರಗಳ ಪ್ರಕಾರ ಮೇಲಿನ ಮೊತ್ತದ ಮೇಲೆ ಸಂಗ್ರಹವಾದ ಬಡ್ಡಿಯನ್ನು ಸಹ ಪಾವತಿಸಲಾಗುವುದು)

           

 

‘ಸೇವಾನಿಧಿ’ಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಯಾವುದೇ ಅರ್ಹತೆ ಇರುವುದಿಲ್ಲ. ಅಗ್ನಿವೀರರಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅವರ ಸೇವಾ ಅವಧಿಗೆ ರೂ 48 ಲಕ್ಷಗಳ ಕೊಡುಗೆ ರಹಿತ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಈ ಅವಧಿಯಲ್ಲಿ, ಅಗ್ನಿವೀರರಿಗೆ ವಿವಿಧ ಮಿಲಿಟರಿ ಕೌಶಲ್ಯ ಮತ್ತು ಅನುಭವ, ಶಿಸ್ತು, ದೈಹಿಕ ಸಾಮರ್ಥ್ಯ, ನಾಯಕತ್ವದ ಗುಣಗಳು, ಧೈರ್ಯ ಮತ್ತು ದೇಶಪ್ರೇಮವನ್ನು ಪಡೆಯಲಿದ್ದಾರೆ. ನಾಲ್ಕು ವರ್ಷಗಳ ಈ ಅವಧಿಯ ನಂತರ, ಅಗ್ನಿವೀರರನ್ನು ನಾಗರಿಕ ಸಮಾಜಕ್ಕೆ ಸೇರುತ್ತಾರೆ. ಅಲ್ಲಿ ಅವರು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಅಪಾರ ಕೊಡುಗೆ ನೀಡಬಹುದು. ಪ್ರತಿ ಅಗ್ನಿವೀರ್ ಗಳಿಸಿದ ಕೌಶಲ್ಯಗಳನ್ನು ಅವರ ವಿಶಿಷ್ಟವಾದ ರೆಸ್ಯೂಮ್‌ನ ಭಾಗವಾಗಿ ಮಾಡಲು ಪ್ರಮಾಣಪತ್ರದಲ್ಲಿ ಗುರುತಿಸಲಾಗುತ್ತದೆ. ಅಗ್ನಿವೀರ್‌ಗಳು ತಮ್ಮ ಯೌವನದ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ, ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಉತ್ತಮ ವ್ಯಕ್ತಿಗಳಾಗಲು ಪ್ರಬುದ್ಧರಾಗುತ್ತಾರೆ ಮತ್ತು ಸ್ವಯಂ-ಶಿಸ್ತು ಹೊಂದಿರುತ್ತಾರೆ. ಅಗ್ನಿವೀರ್ ಅವಧಿಯ ನಂತರ ನಾಗರಿಕ ಜಗತ್ತಿನಲ್ಲಿ ಅವರ ಪ್ರಗತಿಗೆ ತೆರೆದುಕೊಳ್ಳುವ ಮಾರ್ಗಗಳು ಮತ್ತು ಅವಕಾಶಗಳು ಖಂಡಿತವಾಗಿಯೂ ರಾಷ್ಟ್ರ ನಿರ್ಮಾಣದ ಕಡೆಗೆ ದೊಡ್ಡ ಪ್ರಯೋಜನ ನೀಡುತ್ತವೆ. ಮೇಲಾಗಿ, ಸರಿಸುಮಾರು 11.71 ಲಕ್ಷ ರೂ.ಗಳ ಸೇವಾ ನಿಧಿಯು ಸಾಮಾನ್ಯವಾಗಿ ಸಮಾಜದ ಆರ್ಥಿಕವಾಗಿ ವಂಚಿತ ಸ್ತರಗಳ ಯುವಜನರಿಗೆ ಇರುವ ಹಣಕಾಸಿನ ಒತ್ತಡವಿಲ್ಲದೆ ಅವನ/ಅವಳ ಭವಿಷ್ಯದ ಕನಸುಗಳನ್ನು ಮುಂದುವರಿಸಲು ಅಗ್ನಿವೀರ್‌ಗೆ ಸಹಾಯ ಮಾಡುತ್ತದೆ.

ಸಶಸ್ತ್ರ ಪಡೆಗಳಲ್ಲಿ ಸಾಮಾನ್ಯ ಕೇಡರ್ ಆಗಿ ನೋಂದಣಿಗೆ ಆಯ್ಕೆಯಾದ ವ್ಯಕ್ತಿಗಳು ಕನಿಷ್ಠ 15 ವರ್ಷಗಳ ಮುಂದಿನ ಅವಧಿಗೆ ಸೇವೆ ಸಲ್ಲಿಸಬೇಕಾಗುತ್ತದೆ ಮತ್ತು ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಗಳು/ಇತರ ಶ್ರೇಣಿ ಮತ್ತು ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯಲ್ಲಿ ತತ್ಸಮಾನ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಭಾರತೀಯ ವಾಯುಪಡೆಗೆ ದಾಖಲಾದ ನಾನ್ ಕಾಂಬಾಟಂಟ್ ಸೇವಾ ನಿಯಮಗಳು ಮತ್ತು ಷರತ್ತುಗಳು ಇವರಿಗೆ ಅನ್ವಯವಾಗುತ್ತವೆ.

ಈ ಯೋಜನೆಯು ಸಶಸ್ತ್ರ ಪಡೆಗಳಲ್ಲಿ ಯುವ ಮತ್ತು ಅನುಭವಿ ಸಿಬ್ಬಂದಿಗಳ ನಡುವೆ ಉತ್ತಮ ಸಮತೋಲನವನ್ನು ಖಾತ್ರಿಪಡಿಸುವ ಮೂಲಕ ಹೆಚ್ಚು ಯುವ ಮತ್ತು ತಾಂತ್ರಿಕವಾಗಿ ಸಮರ್ಥವಾದ ಸಮರ ಪಡೆಗೆ ಕಾರಣವಾಗುತ್ತದೆ.

ಅನುಕೂಲಗಳು

  • ಸಶಸ್ತ್ರ ಪಡೆಗಳ ನೇಮಕಾತಿ ನೀತಿಯಲ್ಲಿ ಪರಿವರ್ತಕ ಸುಧಾರಣೆ.
  • ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಕರಿಗೆ ಒಂದು ಅನನ್ಯ ಅವಕಾಶ.
  • ಸಶಸ್ತ್ರ ಪಡೆಗಳು ಯುವ ಮತ್ತು ಕ್ರಿಯಾತ್ಮಕವಾಗುತ್ತವೆ.
  • ಅಗ್ನಿವೀರರಿಗೆ ಆಕರ್ಷಕ ಹಣಕಾಸು ಪ್ಯಾಕೇಜ್.
  • ಅತ್ಯುತ್ತಮ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಮತ್ತು ತಮ್ಮ ಕೌಶಲ್ಯ ಮತ್ತು ಅರ್ಹತೆಗಳನ್ನು ಹೆಚ್ಚಿಸಿಕೊಳ್ಳಲು ಅಗ್ನಿವೀರರಿಗೆ ಅವಕಾಶ.
  • ನಾಗರಿಕ ಸಮಾಜದಲ್ಲಿ ಮಿಲಿಟರಿ ನೀತಿಯೊಂದಿಗೆ ಉತ್ತಮ ಶಿಸ್ತಿನ ಮತ್ತು ನುರಿತ ಯುವಕರ ಲಭ್ಯತೆ.
  • ಸಮಾಜಕ್ಕೆ ಮರಳುವವರಿಗೆ ಮರು-ಉದ್ಯೋಗ ಅವಕಾಶಗಳು ಮತ್ತು ಅವರು ಯುವಕರಿಗೆ ಮಾದರಿಯಾಗುತ್ತಾರೆ

ನಿಯಮ ಮತ್ತು ಷರತ್ತುಗಳು

ಅಗ್ನಿಪಥ್ ಯೋಜನೆಯಡಿಯಲ್ಲಿ, ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ಸಂಬಂಧಿತ ಸೇವಾ ಕಾಯಿದೆಗಳ ಅಡಿಯಲ್ಲಿ ಪಡೆಗಳಿಗೆ ದಾಖಲಿಸಲಾಗುತ್ತದೆ. ಅವರು ಸಶಸ್ತ್ರ ಪಡೆಗಳಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಶ್ರೇಣಿಗಳಿಗಿಂತ ವಿಭಿನ್ನವಾದ ಶ್ರೇಣಿಯನ್ನು ಹೊಂದಿರುತ್ತಾರೆ. ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಸಾಂಸ್ಥಿಕ ಅಗತ್ಯತೆಗಳು ಮತ್ತು ಕಾಲಕಾಲಕ್ಕೆ ಸಶಸ್ತ್ರ ಪಡೆಗಳು ಪ್ರಕಟಿಸಿದ ನೀತಿಗಳ ಆಧಾರದ ಮೇಲೆ, ಅಗ್ನಿವೀರರಿಗೆ ಸಶಸ್ತ್ರ ಪಡೆಗಳಲ್ಲಿ ಕಾಯಂ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ. ಈ ಅರ್ಜಿಗಳನ್ನು ಅವರ ನಾಲ್ಕು ವರ್ಷಗಳ ಅವಧಿಯ ಕಾರ್ಯಕ್ಷಮತೆ ಸೇರಿದಂತೆ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಕೇಂದ್ರೀಕೃತ ರೀತಿಯಲ್ಲಿ ಪರಿಗಣಿಸಲಾಗುತ್ತದೆ ಮತ್ತು ಪ್ರತಿ ನಿರ್ದಿಷ್ಟ ತಂಡದ ಶೇ.25 ರಷ್ಟು ಅಗ್ನಿವೀರರನ್ನು ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರ್‌ಗೆ ದಾಖಲಿಸಲಾಗುತ್ತದೆ. ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. ಆಯ್ಕೆಯು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರವಾಗಿರುತ್ತದೆ.

ಮಾನ್ಯತೆ ಪಡೆದ ತಾಂತ್ರಿಕ ಸಂಸ್ಥೆಗಳಾದ ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟುಗಳಿಂದ ವಿಶೇಷ ರ್ಯಾಲಿಗಳು ಮತ್ತು ಕ್ಯಾಂಪಸ್ ಸಂದರ್ಶನಗಳೊಂದಿಗೆ ಎಲ್ಲಾ ಮೂರು ಪಡೆಗಳಿಗೆ ಆನ್‌ಲೈನ್ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನೋಂದಣಿಯನ್ನು ಕೈಗೊಳ್ಳಲಾಗುತ್ತದೆ. ದಾಖಲಾತಿಯು ‘ಆಲ್ ಇಂಡಿಯಾ ಆಲ್ ಕ್ಲಾಸ್’ಆಧಾರದಲ್ಲಿರುತ್ತದೆ ಮತ್ತು ಅರ್ಹ ವಯಸ್ಸು 17.5 ರಿಂದ 21 ವರ್ಷಗಳ ವ್ಯಾಪ್ತಿಯಲ್ಲಿರುತ್ತದೆ. ಅಗ್ನಿವೀರರು ಆಯಾ ವಿಭಾಗಗಳು/ವರ್ಗಗಳಿಗೆ ಅನ್ವಯವಾಗುವಂತೆ ಸಶಸ್ತ್ರ ಪಡೆಗಳಲ್ಲಿ ದಾಖಲಾತಿಗಾಗಿ ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು. ಅಗ್ನಿವೀರರ ಶೈಕ್ಷಣಿಕ ಅರ್ಹತೆಯು ವಿವಿಧ ವರ್ಗಗಳಲ್ಲಿ ದಾಖಲಾತಿಗಾಗಿ ಸದ್ಯದಲ್ಲಿರುವುದೇ ಮುಂದುವರೆಯುತ್ತದೆ. {ಉದಾಹರಣೆಗೆ: ಸಾಮಾನ್ಯ ಕರ್ತವ್ಯ (ಜಿಡಿ) ಸೈನಿಕನ ಪ್ರವೇಶಕ್ಕಾಗಿ, ಶೈಕ್ಷಣಿಕ ಅರ್ಹತೆ 10 ನೇ ತರಗತಿ).



(Release ID: 1834114) Visitor Counter : 229