ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನಿನ ಮಾಜಿ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಯೋಶಿಹಿಡೆ ಸುಗಾ ಅವರಿಂದ ಪ್ರಧಾನ ಮಂತ್ರಿಯವರ ಭೇಟಿ

Posted On: 24 MAY 2022 2:25PM by PIB Bengaluru

ಜಪಾನಿನ ಮಾಜಿ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಯೋಶಿಹಿಡೆ ಸುಗಾ ಅವರು 2022 ರ ಮೇ 24 ರಂದು ಟೋಕಿಯೋದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

2021 ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಕ್ವಾಡ್ ನಾಯಕರ ಶೃಂಗ ಸಭೆಯ ನೇಪಥ್ಯದಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಸಂದರ್ಭವೂ ಸೇರಿದಂತೆ ತಮ್ಮ ಹಿಂದಿನ ಮಾತುಕತೆಗಳನ್ನು ಅವರು ಸ್ಮರಿಸಿಕೊಂಡರು. ಭಾರತ-ಜಪಾನ್ ಬಾಂಧವ್ಯವನ್ನು ಬಲಪಡಿಸುವಲ್ಲಿ ಸುಗಾ ಅವರ ಕೊಡುಗೆಯ ಬಗ್ಗೆ ಪ್ರಧಾನ ಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದರು.

ಭಾರತ-ಜಪಾನ್ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ  ಉಭಯ ನಾಯಕರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು. ಜಪಾನೀ ಸಂಸತ್ ಸದಸ್ಯರ ನಿಯೋಗದ ನಾಯಕತ್ವ ವಹಿಸಿಕೊಂಡು ಭಾರತಕ್ಕೆ ಬರುವಂತೆ ಸುಗಾ ಅವರಿಗೆ ಪ್ರಧಾನ ಮಂತ್ರಿ ಅವರು ಆಹ್ವಾನವಿತ್ತರು.

***


(Release ID: 1827996) Visitor Counter : 165