ಚುನಾವಣಾ ಆಯೋಗ
azadi ka amrit mahotsav g20-india-2023

ಮುಖ್ಯ ಚುನಾವಣಾ ಆಯುಕ್ತ / ಚುನಾವಣಾ ಆಯುಕ್ತರಿಗೆ ಲಭ್ಯವಿರುವ ಭತ್ಯೆ ಮತ್ತು ಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ


ಮುಖ್ಯ ಚುನಾವಣಾ ಆಯುಕ್ತ / ಚುನಾವಣಾ ಆಯುಕ್ತರು ಸಪ್ಚುರಿ ಭತ್ಯೆಯ ಮೇಲೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯದಿರಲು ನಿರ್ಧರಿಸಿದ್ದಾರೆ

ಮುಖ್ಯ ಚುನಾವಣಾ ಆಯುಕ್ತ / ಚುನಾವಣಾ ಆಯುಕ್ತರು ವರ್ಷಕ್ಕೆ ಎರಡು ಪ್ರಯಾಣ ರಜೆ ಭತ್ಯೆಯನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ

Posted On: 20 MAY 2022 4:54PM by PIB Bengaluru

15 ಮೇ 2022 ರಂದು ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ, ಶ್ರೀ ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಶ್ರಿ  ಅನುಪ್ ಚಂದ್ರ ಪಾಂಡೆ ಜೊತೆ ಸೇರಿ ಇಂದು ಚುನಾವಣಾ ಆಯೋಗದ ಮೊದಲ ಸಭೆ ನಡೆಸಿದರು.

ಇತರ ವಿಷಯಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರು (ಇಸಿ) ಅವರಿಗೆ ಆತಿಥ್ಯ ಭತ್ಯೆಯ ಮೇಲೆ ನೀಡಲಾದ ಆದಾಯ ತೆರಿಗೆ ವಿನಾಯಿತಿಗಳನ್ನು ಒಳಗೊಂಡಂತೆ ಅವರಿಗೆ ಲಭ್ಯವಿರುವ ಭತ್ಯೆಗಳು ಮತ್ತು ಸವಲತ್ತುಗಳನ್ನು ಆಯೋಗವು ಪರಿಶೀಲಿಸಿತು.

ಸಿಇಸಿ ಮತ್ತು ಇಸಿ ಗಳು  ಚುನಾವಣಾ ಆಯೋಗದ (ಚುನಾವಣಾ ಆಯುಕ್ತರ ಸೇವೆಯ ಷರತ್ತುಗಳು ಮತ್ತು ವ್ಯವಹಾರದ ವಹಿವಾಟು) ಕಾಯಿದೆ, 1991 ರ ಸೆಕ್ಷನ್ 3 ರ ಪ್ರಕಾರ ಸಂಬಳದ ಭತ್ಯೆಗಳು ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ. ಸಿಇಸಿ ಮತ್ತು ಇಸಿ ಗಳು  ಪ್ರಸ್ತುತ ಇವುಗಳಿಗೆ ಅರ್ಹರಾಗಿದ್ದಾರೆ:

ರೂ.34000/- ಮಾಸಿಕ ಪೂರಕ (ಸಂಪ್ಚುಯರಿ) ಭತ್ಯೆ ಈ ಭತ್ಯೆಯ ಮೇಲೆ ಸಿಇಸಿ ಮತ್ತು ಇಸಿ ಗಳು  ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 
 
ತಮಗಾಗಿ, ಬಾಳ ಸಂಗಾತಿಗೆ ಮತ್ತು ಕುಟುಂಬದಲ್ಲಿ ಅವಲಂಬಿತ ಸದಸ್ಯರಿಗೆ ವರ್ಷದಲ್ಲಿ ಮೂರು ಪ್ರಯಾಣ ರಜೆ ಭತ್ಯೆಗಳು (ಎಲ್‌ಟಿಸಿ).

ಚುನಾವಣಾ ಆಯೋಗವು ವೈಯಕ್ತಿಕ ಹಕ್ಕುಗಳಲ್ಲಿ ಕಟ್ಟುನಿಟ್ಟಾದ ಅನುಸರಣೆಯ ಅಗತ್ಯವನ್ನು ಪರಿಗಣಿಸಿ ಸರ್ವಾನುಮತದಿಂದ ಈ ಕೆಳಗಿವುಗಳನ್ನು ನಿರ್ಧರಿಸಿದೆ:
 
ಸಿಇಸಿ ಮತ್ತು ಇಸಿಗಳು ಪ್ರಸ್ತುತ ಅವರಿಗೆ ನೀಡಿರುವ ಯಾವುದೇ ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳುವುದಿಲ್ಲ. ಸೂಕ್ತ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ. 
 
 ಇದಲ್ಲದೆ, ಸಿಇಸಿ ಮತ್ತು ಇಸಿ ಗಳು ಅವರಿಗೆ ಪ್ರಸ್ತುತ ಲಭ್ಯವಿರುವ ಮೂರು ಎಲ್‌ಟಿಸಿ ಯ ಬದಲಾಗಿ   ಒಂದು ವರ್ಷದಲ್ಲಿ ಕೇವಲ ಒಂದು ಎಲ್‌ಟಿಸಿಯನ್ನು ಮಾತ್ರ ಪಡೆಯುತ್ತಾರೆ. 

***(Release ID: 1827131) Visitor Counter : 92