ಪ್ರಧಾನ ಮಂತ್ರಿಯವರ ಕಛೇರಿ

ಮೇ 17 ರಂದು ʻಟ್ರಾಯ್ʼನ ರಜತ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ


5ಜಿ ಮತ್ತು ಮುಂದಿನ ತಲೆಮಾರಿನ ತಂತ್ರಜ್ಞಾನಗಳಲ್ಲಿ ತಮ್ಮ ಉತ್ಪನ್ನಗಳು, ಮೂಲಮಾದರಿಗಳು, ಪರಿಹಾರಗಳು ಮತ್ತು ಅಲ್ಗರಿದ್ಮ್‌ಗಳನ್ನು ಸ್ಥಿರೀಕರಿಸುವ ನಿಟ್ಟಿನಲ್ಲಿ ಭಾರತೀಯ ಕೈಗಾರಿಕೆ ಮತ್ತು ನವೋದ್ಯಮಗಳನ್ನು ಬೆಂಬಲಿಸುವ ʻ5ಜಿ ಟೆಸ್ಟ್ ಬೆಡ್ʼ ಅನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದಾರೆ.

Posted On: 16 MAY 2022 4:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 17ರಂದು ಬೆಳಗ್ಗೆ 11 ಗಂಟೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ರಜತ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಈ ಸಂದರ್ಭದ ಸ್ಮರಣಾರ್ಥ ಪ್ರಧಾನಮಂತ್ರಿಯವರು ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ. 

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಐಐಟಿ ಮದ್ರಾಸ್ ನೇತೃತ್ವದ ಒಟ್ಟು ಎಂಟು ಸಂಸ್ಥೆಗಳು ಬಹು ಸಂಸ್ಥೆಯ ಸಹಯೋಗದ ಯೋಜನೆಯಾಗಿ ಅಭಿವೃದ್ಧಿಪಡಿಸಿದ ʻ5ಜಿ ಟೆಸ್ಟ್‌ ಬೆಡ್‌ʼಗೆ ಚಾಲನೆ ನೀಡಲಿದ್ದಾರೆ. ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಟಿ ಬಾಂಬೆ, ಐಐಟಿ ಕಾನ್ಪುರ, ಐಐಎಸ್ಸಿ ಬೆಂಗಳೂರು, ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ರಿಸರ್ಚ್ (ಸಮೀರ್) ಹಾಗೂ ʻಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವೈರ್‌ಲೆಸ್‌ ಟೆಕ್ನಾಲಜಿʼ(ಸಿಇಡಬ್ಲ್ಯೂಐಟಿ) ಈ ಯೋಜನೆಯಲ್ಲಿ ಭಾಗವಹಿಸಿದ ಇತರ ಸಂಸ್ಥೆಗಳಲ್ಲಿ ಸೇರಿವೆ. ಈ ಯೋಜನೆಯನ್ನು 220 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.  ʻಟೆಸ್ಟ್ ಬೆಡ್ʼ ಭಾರತೀಯ ಉದ್ಯಮ ಮತ್ತು ನವೋದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಇದು 5ಜಿ ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ತಮ್ಮ ಉತ್ಪನ್ನಗಳು, ಮೂಲಮಾದರಿಗಳು, ಪರಿಹಾರಗಳು ಮತ್ತು ಅಲ್ಗರಿದ್ಮ್‌ಗಳನ್ನು ಸ್ಥಿರೀಕರಿಸಲು ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. 

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ, 1997ರ ಮೂಲಕ ʻಟ್ರಾಯ್ʼಅನ್ನು 1997 ರಲ್ಲಿ ಸ್ಥಾಪಿಸಲಾಯಿತು.

***



(Release ID: 1825945) Visitor Counter : 166