ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಜರ್ಮನ್ ಪ್ರವಾಸದ 3ನೇ ದಿನದಂದು ಅನೇಕ ಸೋಲಾರ್ ಪಿವಿ ತಾಣಗಳಿಗೆ ಭೇಟಿ ನೀಡಿದ ಶ್ರೀ ಭಗವಂತ್ ಖೂಬಾ


"ವಿದೇಶಿ ನೆಲದಲ್ಲಿ ಭಾರತೀಯರೊಂದಿಗೆ ಸಂವಹನ ನಡೆಸುವುದು ಒಂದು ಸಂತೋಷ ಮತ್ತು ಸುಯೋಗ": ಶ್ರೀ ಖೂಬಾ

ಮಾನ್ಯ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತವು ಹೇಗೆ ಅಭಿವೃದ್ಧಿ ಹೊಂದುತ್ತಿದೆ ಮತ್ತು ಅನಿವಾಸಿ ಭಾರತೀಯರು ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದ ಸಚಿವರು

ಮೂರು ದಿನಗಳ ಪ್ರವಾಸದ ವೇಳೆ ಹಲವಾರು ದ್ವಿಪಕ್ಷೀಯ ಮತ್ತು ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ ಮತ್ತು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ಹೂಡಿಕೆ ಘೋಷಣೆಗಳನ್ನು ನಿರೀಕ್ಷಿಸಿದ: ಶ್ರೀ ಖೂಬಾ

Posted On: 14 MAY 2022 12:49PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ಭಗವಂತ್ ಖೂಬಾ ಅವರು ಇಂಟರ್ ಸೋಲಾರ್ ಯುರೋಪ್ 2022ಕ್ಕಾಗಿ ಜರ್ಮನಿಯ ಮ್ಯೂನಿಚ್ ಪ್ರವಾಸದ ಕೊನೆಯ ದಿನದಂದು ಅನೇಕ ಸೌರ ಪಿವಿ ತಾಣಗಳಿಗೆ ಭೇಟಿ ನೀಡಿದ್ದರು.

https://static.pib.gov.in/WriteReadData/userfiles/image/WhatsAppImage2022-05-14at12.50.12PM7U66.jpeg

ಶ್ರೀ ಭಗವಂತ್ ಖೂಬಾ ಅವರು ಇಂದು ಬೆಳಗ್ಗೆ ಜರ್ಮನಿಯ ಮ್ಯೂನಿಚ್ ಬಳಿಯ ಅಲ್ಥೆಗೆನ್ಬರ್ ನಲ್ಲಿರುವ ಅಂತರಸ್ಥಳೀಯ ಕೃಷಿ ಬೇಸಾಯ ಅಗ್ರಿಪಿವಿ ತಾಣಕ್ಕೆ ಭೇಟಿ ನೀಡಿದರು. ಅಗ್ರಿ-ಪಿವಿ ಪರಿಕಲ್ಪನೆಯು ಕೃಷಿಗಾಗಿ ಮತ್ತು ಸೌರವಿದ್ಯುತ್ ಉತ್ಪಾದನೆಗಾಗಿ ಭೂಮಿಯ ದ್ವಿ ಬಳಕೆಯನ್ನು ಉತ್ತೇಜಿಸುತ್ತದೆ. ಎತ್ತರವಾಗಿ ಅಳವಡಿಸಬಹುದಾದ ಸೌರ ಫಲಕ ರಚನೆಗಳು ಬಿಸಿ ತಾಪಮಾನದ ಭಾರತೀಯ ಹವಾಮಾನದಲ್ಲಿ ಬೆಳೆಗಳಿಗೆ ಅಗತ್ಯವಾದ ನೆರಳನ್ನು ಒದಗಿಸುತ್ತವೆ. ಕೃಷಿ ಪಿವಿಯಲ್ಲಿ ಮತ್ತಷ್ಟು ಬೈಫೇಷಿಯಲ್ ಲಂಬವಾದ ಫಲಕಗಳನ್ನು ಸಹ ಬಳಸಬಹುದು.

https://static.pib.gov.in/WriteReadData/userfiles/image/WhatsAppImage2022-05-14at12.51.04PMNV2V.jpeg

ಈ ಪರಿಕಲ್ಪನೆಯು ಮುಂಬರುವ ವರ್ಷಗಳಲ್ಲಿ ಭಾರತದ ಆಹಾರ ಭದ್ರತೆ ಮತ್ತು ಇಂಧನ ಭದ್ರತೆಯ ಅಗತ್ಯಗಳನ್ನು ಪೂರೈಸುತ್ತದೆ. ಆದ್ದರಿಂದ ಅಂತಹ ಅನೇಕ ಯೋಜನೆಗಳನ್ನು ಭಾರತದಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು. ಎಂ.ಎನ್.ಆರ್.ಇ. ಕಾರ್ಯದರ್ಶಿ ಶ್ರೀ ಇಂದೂ ಶೇಖರ್ ಚತುರ್ವೇದಿ ಉಪಸ್ಥಿತರಿದ್ದರು. ಶ್ರೀ ಖೂಬಾ ಅವರು ನವೀನ ತಂತ್ರಜ್ಞಾನಗಳು/ ವಿಧಾನಗಳೊಂದಿಗೆ ವಿವಿಧ ಸೋಲಾರ್ ಪಿವಿ ತಾಣಗಳಿಗೆ ಭೇಟಿ ನೀಡಿದರು. ಇಂತಹ ಒಂದು ತಾಣದಲ್ಲಿ ಮಣ್ಣಿನ ಸ್ಕ್ರೂ ವಿಧಾನವನ್ನು ಬಳಸಲಾಗುತ್ತಿತ್ತು, ಅಲ್ಲಿ ಪಿವಿ ರಚನೆಯನ್ನು ಮೌಂಟ್ ಮಾಡಲು ಯಾವುದೇ ಸಿಮೆಂಟ್ ಅನ್ನು ಬಳಸಲಾಗುವುದಿಲ್ಲ, ಬದಲಿಗೆ ಪಿವಿಗೆ ಬಲವಾದ ಆಧಾರವನ್ನು ಒದಗಿಸಲು ದೊಡ್ಡ ಸ್ಕ್ರೂ ಒಂದನ್ನು ನೆಲಕ್ಕೆ ಕೊರೆಯಲಾಗುತ್ತದೆ. ಈ ವಿಧಾನವು ಸಿಮೆಂಟ್ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ರೀತಿಯ ಮಣ್ಣಿನ ಕುಸಿಯುವಿಕೆಯನ್ನು ತಪ್ಪಿಸುತ್ತದೆ. ಭಾರತೀಯ ಆರ್.ಇ ವಲಯವೂ ಸಹ ಇಂತಹ ನವೀನ ವಿಧಾನಗಳಿಗಾಗಿ ಎದುರು ನೋಡುತ್ತಿದೆ ಎಂದು ಅವರು ತಿಳಿಸಿದರು.
ಮ್ಯೂನಿಚ್ ನಲ್ಲಿ ಶ್ರೀ ಭಗವಂತ್ ಖೂಬಾ ಅವರಿಗೆ ಅನಿವಾಸಿ ಭಾರತೀಯರಿಂದ  ಹೃತ್ಪೂರ್ವಕ ಸ್ವಾಗತ ಮತ್ತು ಸನ್ಮಾನ ದೊರೆಯಿತು. ವಿದೇಶಿ ನೆಲದಲ್ಲಿ ಭಾರತೀಯರೊಂದಿಗೆ ಸಂವಹನ ನಡೆಸುವುದು ಸಂತೋಷ ಮತ್ತು ಸುಯೋಗ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಮಾನ್ಯ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತವು ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂಬುದರ ಬಗ್ಗೆ ಸಚಿವರು ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು. ಇದಲ್ಲದೆ ಅನಿವಾಸಿ ಭಾರತೀಯರು ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಬಹುದು ಎಂದೂ ಚರ್ಚಿಸಿದರು. ಕಳೆದ 3 ದಿನಗಳಲ್ಲಿ ಅನೇಕ ದ್ವಿಪಕ್ಷೀಯ ಮತ್ತು ದುಂಡು ಮೇಜಿನ ಸಭೆಗಳಿ ಆಯೋಜಿತವಾಗಿದ್ದವು.

***


(Release ID: 1825383) Visitor Counter : 165