ಪ್ರಧಾನ ಮಂತ್ರಿಯವರ ಕಛೇರಿ

ಮೇ 12, 2022 ರಂದು ಭರೂಚ್‌ ನಲ್ಲಿ ಜರುಗುವ 'ಉತ್ಕರ್ಷ್ ಸಮಾರೋಹ್' ಅನ್ನು ಉದ್ದೇಶಿಸಿ ಭಾಷಣ ಪ್ರಧಾನಮಂತ್ರಿ ಅವರು ಮಾಡಲಿದ್ದಾರೆ


ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳು ಈ ಜಿಲ್ಲೆಯಲ್ಲಿ 100 ಪ್ರತಿಶತ ಯಶಸ್ವಿಯಾಗಿರುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Posted On: 11 MAY 2022 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಭರೂಚ್‌ ನಲ್ಲಿ 12 ಮೇ, 2022 ರಂದು ಬೆಳಗ್ಗೆ 10:30 ಕ್ಕೆ ಜರುಗಲಿರುವ ‘ಉತ್ಕರ್ಷ್ ಸಮಾರೋಹ್’ ಅನ್ನು ಉದ್ದೇಶಿಸಿ ವಿಡಿಯೊ ಸಮಾವೇಶ ಮೂಲಕ  ಭಾಷಣ ಮಾಡಲಿದ್ದಾರೆ. ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಸಹಾಯ ಮಾಡುವ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳು ಈ ಜಿಲ್ಲೆಯಲ್ಲಿ ಶೇ.100ರಷ್ಟು ಯಶಸ್ಸು ಸಾಧಿಸಿದ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

 ವಿಧವೆಯರು, ವೃದ್ಧರು ಮತ್ತು ನಿರ್ಗತಿಕ ನಾಗರಿಕರಿಗೆ ನೆರವು ನೀಡುವ ಯೋಜನೆಗಳ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಭರೂಚ್‌ ನ ಜಿಲ್ಲಾಡಳಿತವು ಈ ವರ್ಷದ ಜನವರಿ 1 ರಿಂದ ಮಾರ್ಚ್ 31, 2022 ರವರೆಗೆ ‘ಉತ್ಕರ್ಷ್ ಇನಿಶಿಯೇಟಿವ್’ ಅಭಿಯಾನವನ್ನು ನಡೆಸಿತು. ಗಂಗಾ ಸ್ವರೂಪ ಆರ್ಥಿಕ ಸಹಾಯ ಯೋಜನೆ, ಇಂದಿರಾ ಗಾಂಧಿ ವೃದ್ಧ ಸಹಾಯ ಯೋಜನೆ, ನಿರಾಧಾರ್ ವೃದ್ಧ್ ಆರ್ಥಿಕ ಸಹಾಯ ಯೋಜನೆ ಮತ್ತು ರಾಷ್ಟ್ರೀಯ ಕುಟುಂಬ ಸಹಾಯ ಯೋಜನೆ ಎಂಬ ನಾಲ್ಕು ಯೋಜನೆಗಳಲ್ಲಿ ಒಟ್ಟು 12,854 ಫಲಾನುಭವಿಗಳನ್ನು ಗುರುತಿಸಲಾಗಿದೆ.

ಚಾಲನೆಯ ಸಂದರ್ಭದಲ್ಲಿ, ಯೋಜನೆಯ ಪ್ರಯೋಜನಗಳನ್ನು ಪಡೆಯದವರ ಬಗ್ಗೆ ಮಾಹಿತಿ ಸಂಗ್ರಹಿಸಲು ತಾಲೂಕುವಾರು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳನ್ನು ಘೋಷಿಸಲಾಯಿತು.  ಜಿಲ್ಲೆಯ ಎಲ್ಲಾ ಗ್ರಾಮಗಳು ಮತ್ತು ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಉತ್ಕರ್ಷ ಶಿಬಿರಗಳನ್ನು ಆಯೋಜಿಸಲಾಗಿದ್ದು, ಅಗತ್ಯ ದಾಖಲೆಗಳನ್ನು ಒದಗಿಸಿದ ಅರ್ಜಿದಾರರಿಗೆ ಸ್ಥಳದಲ್ಲೇ ಅನುಮೋದನೆ ನೀಡಲಾಯಿತು.  ಚಾಲನೆಯನ್ನು ಮತ್ತಷ್ಟು ಸುಗಮಗೊಳಿಸಲು ಉತ್ಕರ್ಷ್ ಸಹಾಯಕರಿಗೆ ಪ್ರೋತ್ಸಾಹಕಗಳನ್ನು ಸಹ ಈ ಯೋಜನೆಯಡಿ ನೀಡಲಾಯಿತು.

***



(Release ID: 1824431) Visitor Counter : 198