ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕಾನ್ ನಲ್ಲಿ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಕೆಂಪು ಹಾಸಿನಲ್ಲಿ ನಡೆಯಲಿರುವ ಭಾರತದ ಚಲನಚಿತ್ರ ಕ್ಷೇತ್ರದ ಹೆಸರಾಂತ ಗಣ್ಯರು


ಎ.ಆರ್. ರೆಹಮಾನ್, ಶೇಖರ್ ಕಪೂರ್, ಅಕ್ಷಯ್ ಕುಮಾರ್, ರಿಕಿ ಕೇಜ್ ಅವರಿಗೆ ಕೆಂಪು ಹಾಸಿನ ಸ್ವಾಗತ

Posted On: 10 MAY 2022 6:02PM by PIB Bengaluru

    75ನೇ ಕಾನ್ ಚಲನಚಿತ್ರೋತ್ಸವದ ಕೆಂಪು ಹಾಸಿನ ಕಾರ್ಯಕ್ರಮ ಭಾರತೀಯ ಪ್ರೇಕ್ಷಕರಿಗೆ ಅದ್ದೂರಿ ವರ್ಣರಂಜಿತ ಕಾರ್ಯಕ್ರಮವಾಗಲಿದೆ, ಏಕೆಂದರೆ ದೇಶದ ಸಿನಿಮಾ ಜಗತ್ತಿನ  ಹೆಸರಾಂತ ಗಣ್ಯರು ಕಾನ್ ಚಲನಚಿತ್ರೋತ್ಸವ-2022 ಉದ್ಘಾಟನಾ ದಿನ 2022ರ ಮೇ 17ರಂದು ಭಾರತೀಯ ನಿಯೋಗದ ಭಾಗವಾಗಿ ಕೆಂಪುಹಾಸಿನ ಮೇಲೆ ನಡೆಯಲು ಸಜ್ಜಾಗಿದ್ದಾರೆ.
    ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಕಾನ್ ನಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಭಾರತದ ಪ್ರಮುಖ ಸಂಗೀತ ಕ್ಷೇತ್ರದ ತಾರೆಗಳೂ ಸೇರಿದಂತೆ ಪ್ರಮುಖ ಗಣ್ಯರ ಪಟ್ಟಿ ಹೀಗಿದೆ. ನಿಯೋಗದಲ್ಲಿ ಈ ಕೆಳಗಿನ ಗಣ್ಯರು ಇರಲಿದ್ದಾರೆ.     

  1. ಶ್ರೀ ಅಕ್ಷಯ್ ಕುಮಾರ್(ನಟ ಮತ್ತು ನಿರ್ಮಾಪಕ, ಬಾಲಿವುಡ್)
  2. ಶ್ರೀ ಎ.ಆರ್. ರೆಹಮಾನ್(ಅಂತಾರಾಷ್ಟ್ರೀಯ ಸಂಗೀತ ನಿರ್ದೇಶಕರು)
  3. ಶ್ರೀ ಮಾಮೆ ಖಾನ್(ಜನಪದ ಸಂಗೀತ ರಚನಾಕಾರರು, ಗಾಯಕರು)
  4. ಶ್ರೀ ನವಾಜುದ್ದಿನ್ ಸಿದ್ದಿಖಿ(ನಟ, ಬಾಲಿವುಡ್)
  5. ಕುಮಾರಿ ನಯನತಾರಾ(ನಟಿ, ಮಲಯಾಳಂ, ತಮಿಳು)
  6. ಕುಮಾರಿ ಪೂಜಾ ಹೆಗಡೆ(ನಟಿ, ಹಿಂದಿ, ತೆಲುಗು)
  7. ಶ್ರೀ  ಪ್ರಸೂನ್ ಜೋಶಿ(ಅಧ್ಯಕ್ಷರು, ಸಿಬಿಎಫ್ ಸಿ)
  8. ಶ್ರೀ ಆರ್. ಮಾಧವನ್(ನಟ ಮತ್ತು ನಿರ್ಮಾಪಕ), ಕಾನ್ ನಲ್ಲಿ ವರ್ಲ್ಡ್ ಪ್ರೀಮಿಯರ್ ಆಫ್ ರಾಕೆಟ್ರಿ 
  9.   ಶ್ರೀ ರಿಕಿ ಕೇಜ್(ಸಂಗೀತ ರಚನಾಕಾರರು)
  10. ಶ್ರೀ ಶೇಖರ್ ಕಪೂರ್(ಚಿತ್ರ ನಿರ್ಮಾಪಕರು)
  11. ಕುಮಾರಿ ತಮ್ಮನಾ ಭಾಟಿಯಾ(ನಟಿ, ಹಿಂದಿ, ತೆಲುಗು, ತಮಿಳು ಚಿತ್ರರಂಗ)
  12. ಕುಮಾರಿ ವಾಣಿ ತ್ರಿಪಾಠಿ(ನಟಿ)

ಈ ವರ್ಷ ಭಾರತದ ಶ್ರೀಮಂತ ವೈವಿಧ್ಯತೆಯನ್ನು ಮತ್ತು ಸ್ವಾದವನ್ನು- ಭಾರತದ ಸಂಸ್ಕೃತಿ, ಪರಂಪರೆ, ಗತವೈಭವ ಮತ್ತು ಅಭಿವೃದ್ಧಿಯನ್ನು ಚಲನಚಿತ್ರಗಳ ಮೂಲಕ ಪ್ರದರ್ಶಿಸುವ ಉದ್ದೇಶವಿದೆ. ಅದಕ್ಕಾಗಿ ದೇಶದ ನಾನಾ ಆಯಾಮಗಳನ್ನು ಹಾಗೂ ಸಾಮರ್ಥ್ಯಗಳನ್ನು ಬಿಂಬಿಸುವ ರೀತಿಯಲ್ಲಿ ಉದ್ದಗಲಕ್ಕೂ ಇರುವ ಪ್ರತಿಭೆಗಳನ್ನು ನಿಯೋಗಕ್ಕೆ ಆಯ್ಕೆ ಮಾಡಲಾಗಿದೆ.  
ಇತ್ತೀಚೆಗೆ ಮುಕ್ತಾಯಗೊಂಡ 52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಅವುಗಳೆಂದರೆ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತಿತರ ಒಟಿಟಿ ವೇದಿಕೆಗಳ ಜತೆಗೆ ಸಹಭಾಗಿತ್ವ, ಭವಿಷ್ಯದ 75 ಸೃಜನಾತ್ಮಕ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಬ್ರಿಕ್ಸ್ ಚಲನಚಿತ್ರೋತ್ಸವ ಇತ್ಯಾದಿ. ಅದೇ ಸ್ಫೂರ್ತಿಯೊಂದಿಗೆ ಕ್ಯಾನ್ ಗಾಗಿ ಈ ವರ್ಷ ಹಲವು ಹೊಸ ಮತ್ತು ಆಕರ್ಷಕ ಉಪಕ್ರಮಗಳನ್ನು ರೂಪಿಸಲಾಗಿದೆ. 
    ಚಲನಚಿತ್ರೋತ್ಸವದ ಈ ಆವೃತ್ತಿಯಲ್ಲಿ ಕಾನ್ ಚಲನಚಿತ್ರ ಮಾರುಕಟ್ಟೆ(ಮಾರ್ಚೆ ದುಫ ಫಿಲಂ) ಗೌರವಕ್ಕೆ ಭಾರತ ಅಧಿಕೃತವಾಗಿ ಆಯ್ಕೆಯಾಗಿದೆ. ಇದೇ ಮೊದಲ ಬಾರಿಗೆ ಯಾವುದೇ ದೇಶಕ್ಕೆ ಸಿಗದಂತಹ ಗೌರವ ಭಾರತಕ್ಕೆ ಲಭ್ಯವಾಗಿದೆ ಮತ್ತು ಭಾರತ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ವೇಳೆ ಮತ್ತು ಭಾರತ-ಫ್ರಾನ್ಸ್ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 75 ವರ್ಷ ಆಚರಿಸುತ್ತಿರುವ ವೇಳೆ ಈ ಗೌರವ ಸಲ್ಲುತ್ತಿದೆ. 
    ಈ ಮೊದಲು ಸಚಿವರು, ಭಾರತಕ್ಕೆ ಕಾನ್ ನಲ್ಲಿ ಗೌರವ ಪ್ರದಾನವಾಗಲಿದೆ. ಅದರಡಿ ದೃಶ್ಯ, ಶ್ರವಣ ಮಾಧ್ಯಮದ 5 ಹೊಸ ನವೋದ್ಯಮಗಳಿಗೆ ಅವಕಾಶ ಲಭ್ಯವಾಗಲಿದೆ ಎಂದು ಹೇಳಿದ್ದರು. 

***



(Release ID: 1824393) Visitor Counter : 191