ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ (ಡೋನರ್)ದ ಅಡಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣೆಯಲ್ಲಿ ನಡೆಯಲಿದೆ ಈಶಾನ್ಯ ಉತ್ಸವ


ಶ್ರೀ ಹರ್‌ದೀಪ್ ಸಿಂಗ್ ಪುರಿ ಅವರು ಗ್ಯಾಂಗ್ಟಾಕ್‌ನಲ್ಲಿ 'ಈಶಾನ್ಯ ರಾಜ್ಯಗಳಲ್ಲಿ ನಗರಾಭಿವೃದ್ಧಿ: ಸ್ಮಾರ್ಟ್ ಸಿಟಿ ಕ್ರಾಂತಿ' ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ

Posted On: 29 APR 2022 2:09PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್‌ದೀಪ್  ಸಿಂಗ್ ಪುರಿ ಅವರು ಗ್ಯಾಂಗ್‌ಟಾಕ್‌ನಲ್ಲಿ ನಾಳೆ, 30ನೇ ಏಪ್ರಿಲ್, 2022 ರಂದು ಮುಖ್ಯ ಅತಿಥಿಯಾಗಿ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣವು 'ಈಶಾನ್ಯ ರಾಜ್ಯಗಳಲ್ಲಿ ನಗರಾಭಿವೃದ್ಧಿ: ಸ್ಮಾರ್ಟ್ ಸಿಟಿ ಕ್ರಾಂತಿ' ಕುರಿತು ಕೇಂದ್ರೀಕರಿಸುತ್ತದೆ. ಸಿಕ್ಕಿಂ  ರಾಜ್ಯದ ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಸಚಿವರಾದ ಶ್ರೀ ಅರುಣ್ ಉಪ್ರೇತಿ ಮತ್ತು ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್‌ಲೈನ್ ಕಟ್ಟಡ ಅನುಮತಿ ವ್ಯವಸ್ಥೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗುವುದು.

ಬೆಳಗಿನ ಅಧಿವೇಶನದ ನಂತರ ಸಂಬಂಧಿತ ವಿಷಯದ ಮೇಲೆ ಮೂರು ತಾಂತ್ರಿಕ ಅಧಿವೇಶನಗಳು ನಡೆಯುತ್ತವೆ.  ಇವುಗಳನ್ನು ಖರಗ್‌ಪುರದ ಐಐಟಿಯ ಹಿರಿಯ ಪ್ರೊಫೆಸರುಗಳು ನಡೆಸುತ್ತಾರೆ.

ಸಿಕ್ಕಿಂ ಕಾರ್ಯಕ್ರಮವು ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಒಂದು ಭಾಗವಾಗಿದೆ: ಈಶಾನ್ಯ ಹಬ್ಬವನ್ನು ಎಲ್ಲಾ ಎಂಟು ಈಶಾನ್ಯ ರಾಜ್ಯಗಳಲ್ಲಿ 28 ಏಪ್ರಿಲ್, 2022 ರಿಂದ ಮೇ 4, 2022 ರವರೆಗೆ ಆಚರಿಸಲಾಗುತ್ತದೆ. ಇದನ್ನು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಆಯೋಜಿಸಿದೆ (ಡೋನರ್) "ನಾವು ಯಾರಿಗಿಂತಲೂ ಕಡಿಮೆಯಿಲ್ಲ” (ಹಮ್ ಕಿಸಿ ಸೆ ಕಮ್ ನಹಿ) ಎಂಬ ಮನೋಭಾವದಿಂದ. ಭಾರತವು ಪ್ರಸ್ತುತ ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಭಾರತವು ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಸಮಯದಲ್ಲಿ ತನ್ನ ವೈಭವದ ಇತಿಹಾಸ, ಜನರು, ಸಂಸ್ಕೃತಿ ಮತ್ತು ಸಾಧನೆಗಳನ್ನು ಆಚರಿಸುತ್ತಿದೆ, ಸಚಿವಾಲಯವು ಈ ಹಬ್ಬದ ಮೂಲಕ ಈಶಾನ್ಯ ಪ್ರದೇಶದ ಸೌಂದರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅದರ ಸಾಧನೆಗಳನ್ನು ಎತ್ತಿ ತೋರಿಸುತ್ತಿದೆ. ಇದೇ ರೀತಿಯ ಕಾರ್ಯಕ್ರಮಗಳು, ವಿವಿಧ ವಿಷಯಗಳ ಮೇಲೆ, ನಡೆಯುತ್ತಿರುವ ಉತ್ಸವದ ಅಡಿಯಲ್ಲಿ ಈಶಾನ್ಯ ರಾಜ್ಯಗಳ ವಿವಿಧ ರಾಜಧಾನಿಗಳಲ್ಲಿ ನಡೆಯುತ್ತಿವೆ.

 

**=**



(Release ID: 1821351) Visitor Counter : 130