ಸಂಪುಟ

ಲಿಥುವೇನಿಯಾದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿ ತೆರೆಯಲು ಸಂಪುಟದ ಅನುಮೋದನೆ

Posted On: 27 APR 2022 4:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 2022ರಲ್ಲಿ ಲಿಥುವೇನಿಯಾದಲ್ಲಿ ಹೊಸ ಭಾರತೀಯ ರಾಜತಾಂತ್ರಿಕ ಕಚೇರಿ ಆರಂಭಿಸಲು ಅನುಮೋದನೆ ನೀಡಿದೆ. 

ಲಿಥುವೇನಿಯಾದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಯನ್ನು ತೆರೆಯುವುದರಿಂದ ಭಾರತದ ರಾಜತಾಂತ್ರಿಕ ಹೆಜ್ಜೆಗುರುತುಗಳನ್ನು ವಿಸ್ತರಿಸಲು, ರಾಜಕೀಯ ಸಂಬಂಧಗಳು ಮತ್ತು ವ್ಯೂಹಾತ್ಮಕ ಸಹಕಾರವನ್ನು ಆಳಗೊಳಿಸಲು, ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಕಾರ್ಯಕ್ರಮಗಳ ವೃದ್ಧಿಗೆ ಅನುವು ಮಾಡಿಕೊಡಲಿದೆ. ಜೊತೆಗೆ, ಜನರ ನಡುವಿನ ಸಂಪರ್ಕ ಬಲಗೊಳ್ಳಲೂ ಇದರಿಂದ ನೆರವಾಗಲಿದೆ. ಬಹುಪಕ್ಷೀಯವಾಗಿ ಹೆಚ್ಚು ಸುಸ್ಥಿರವಾದ ರಾಜಕೀಯ ಸಂಪರ್ಕಕ್ಕೆ ಇದು ಅವಕಾಶ ನೀಡುತ್ತದೆ ಮತ್ತು ಭಾರತದ ವಿದೇಶಾಂಗ ನೀತಿಯ ಉದ್ದೇಶಗಳಿಗೆ ಬೆಂಬಲವನ್ನು ಗಳಿಸಲು ಸಹಾಯ ಮಾಡುತ್ತದೆ. ಲಿಥುವೇನಿಯಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯು ಅಲ್ಲಿನ ಭಾರತೀಯ ಸಮುದಾಯಕ್ಕೆ ಉತ್ತಮ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. 

ಲಿಥುವೇನಿಯಾದಲ್ಲಿ ಹೊಸ ಭಾರತೀಯ ರಾಜತಾಂತ್ರಿಕ ಕಚೇರಿ ತೆರೆಯುವ ನಿರ್ಧಾರವು ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಆದ್ಯತೆ ಅಥವಾ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ನಿಟ್ಟಿನಲ್ಲಿ ಮುನ್ನೋಟದ ಹೆಜ್ಜೆಯಾಗಿದೆ. ಭಾರತದ ರಾಜತಾಂತ್ರಿಕ ಉಪಸ್ಥಿತಿಯ ವಿಸ್ತರಣೆಯು ಭಾರತೀಯ ಕಂಪನಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ಒದಗಿಸುವುದಲ್ಲದೆ ಭಾರತದಿಂದ ಸರಕು ಮತ್ತು ಸೇವೆಗಳ ರಫ್ತುಗಳನ್ನು ಉತ್ತೇಜಿಸುತ್ತದೆ. ಇದು ಸ್ವಾವಲಂಬಿ ಭಾರತ ಅಥವಾ 'ಆತ್ಮನಿರ್ಭರ ಭಾರತ'ದ ನಮ್ಮ ಗುರಿಗೆ ಅನುಗುಣವಾಗಿ ದೇಶೀಯ ಉತ್ಪಾದನೆ ಮತ್ತು ಉದ್ಯೋಗವನ್ನು ಹೆಚ್ಚಿಸುವಲ್ಲಿ ನೇರ ಪರಿಣಾಮ ಬೀರುತ್ತದೆ. 
 

 

****



(Release ID: 1820699) Visitor Counter : 213