ಹಣಕಾಸು ಸಚಿವಾಲಯ
ವಾಷಿಂಗ್ಟನ್ ಡಿ.ಸಿ.ಯಲ್ಲಿ ಜರುಗಿದ ಅಭಿವೃದ್ಧಿ ಸಮಿತಿಯ 105 ನೇ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಿದರು.
Posted On:
23 APR 2022 8:08AM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ವಾಷಿಂಗ್ಟನ್ ಡಿಸಿಯಲ್ಲಿ ಜರುಗಿದ ಅಭಿವೃದ್ಧಿ ಸಮಿತಿಯ 105 ನೇ ಸಭೆಯಲ್ಲಿ ಭಾಗವಹಿಸಿದರು. ಡಿಜಿಟಲೈಸೇಶನ್ ಮತ್ತು ಅಭಿವೃದ್ಧಿ, ಮುಂಗಡ ಸಾಲದಲ್ಲಿ ಅಭಿವೃದ್ಧಿಗಾಗಿ ಮತ್ತು ಬೃಹತ್ ಆರ್ಥಿಕ ಸುಸ್ಥಿರತೆಗಾಗಿ ಕೆಲಸ ಮಾಡುವುದು ಮತ್ತು ಉಕ್ರೇನ್ ನಲ್ಲಿನ ಪ್ರಸ್ತುತ ಯುದ್ಧದ ಜಾಗತಿಕ ಪರಿಣಾಮಗಳಿಗೆ ವಿಶ್ವ ಬ್ಯಾಂಕ್ ಗ್ರೂಪ್ ನ ಪ್ರತಿಕ್ರಿಯೆ: ಒಂದು ಪ್ರಸ್ತಾವಿತ ಮಾರ್ಗದರ್ಶಿ – ಇದು ಸಭೆಯ ನಡಾವಳಿ ಅಂಶಗಳಾಗಿವೆ
ಅಧಿವೇಶನದಲ್ಲಿ ಭಾಗವಹಿಸುತ್ತಾ, “ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಅತ್ಯುತ್ತಮವಾಗಿದೆ , ಎಲ್ಲಾ ದೊಡ್ಡ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ ಮತ್ತು ಭಾರತದ ಸ್ಥಿತಿಸ್ಥಾಪಕತ್ವ ಮತ್ತು ಬಲವಾದ ಆರ್ಥಿಕ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ “ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
ಭಾರತವು ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟನ್ನು ಉತ್ತಮ ಸ್ಥಿತಿಸ್ಥಾಪಕತ್ವದಿಂದ ಎದುರಿಸಿದೆ ಮತ್ತು ಲಸಿಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಮತ್ತು 1.85 ಶತಕೋಟಿ ಕೋವಿಡ್-19 ಲಸಿಕೆ ಡೋಸ್ಗಳನ್ನು ನಿರ್ವಹಿಸಿದೆ ಎಂದು ಕೇಂದ್ರ ಸಚಿವೆ ಶ್ರೀಮತಿ ಸೀತಾರಾಮನ್ ಅವರು ಹೇಳಿದರು
ಕೋವಿಡ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್ (ಕೋವಿನ್) ಪ್ಲಾಟ್ಫಾರ್ಮ್ ಅನ್ನು ಭಾರತವು ಸ್ವಯಂಪ್ರೇರಿತವಾಗಿ ಆಸಕ್ತ ಎಲ್ಲಾ ದೇಶಗಳಿಗೆ ನೀಡಿದೆ ಹಾಗೂ ಬೃಹತ್ ಗಾತ್ರದ (ಸ್ಕೇಲೆಬಲ್) ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಪುನರಾವರ್ತನೆಯ ಪ್ರಾಮುಖ್ಯತೆಯನ್ನು ಗುರುತಿಸುವ ಇತರ ಸಾರ್ವಜನಿಕ-ಸರಕು ವೇದಿಕೆಗಳಿಗೆ ಈ ನಿಟ್ಟಿನಲ್ಲಿ ಸಹಾಯವನ್ನು ಒದಗಿಸಲು ಸಿದ್ಧವಿದೆ ಎಂದು ಕೇಂದ್ರ ಸಚಿವೆ ಶ್ರೀಮತಿ ಸೀತಾರಾಮನ್ ಅವರು ಹೇಳಿದರು
ಶ್ರೀಲಂಕಾದಲ್ಲಿನ ಸಮಕಾಲೀನ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಕೇಂದ್ರ ಹಣಕಾಸು ಸಚಿವರು ಸಭೆಯಲ್ಲಿ ಪ್ರಸ್ತಾವಿಸಿ ಈ ವಿಶೇಷ ಸಭೆಯ ಗಮನ ಸೆಳೆದರು ಮತ್ತು ಈ ಬಿಕ್ಕಟ್ಟಿನಿಂದ ಹೊರಬರುಲು ಶ್ರೀಲಂಕಾಕ್ಕೆ ನಿರ್ಣಾಯಕ ಪರಿಹಾರವನ್ನು ಸಭೆಯಿಂದ ಕೋರಿದರು.
***
(Release ID: 1819395)
Visitor Counter : 244