ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

‘‘ಆಯುಷ್ಮಾನ್‌ ಭಾರತ್‌ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಮತ್ತೊಂದು ಮೈಲಿಗಲ್ಲುಸಾಧಿಸಿವೆ - ಒಂದೇ ದಿನದಲ್ಲಿಸಾರ್ವಕಾಲಿಕ ಹೆಚ್ಚಿನ ಟೆಲಿಸಮಾಲೋಚನೆಗಳನ್ನು ದಾಖಲಿಸಿವೆ!’’

Posted On: 17 APR 2022 7:23PM by PIB Bengaluru

 2022ರ ಏಪ್ರಿಲ್‌ 16ರಂದು ಆಯುಷ್ಮಾನ್‌ ಭಾರತ್‌ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ(ಎಬಿ -ಎಚ್‌ಡಬ್ಲ್ಯು ಸಿಎಸ್‌) ಒಂದು ದಿನದಲ್ಲಿ3 ಲಕ್ಷ ಕ್ಕೂ ಹೆಚ್ಚು ಟೆಲಿ (ದೂರ) ಸಮಾಲೋಚನೆಗಳನ್ನು ಮಾಡಲಾಗಿದೆ. ಇದು ಎಬಿ -ಎಚ್‌ಡಬ್ಲ್ಯು ಸಿಗಳಲ್ಲಿಒಂದೇ ದಿನದಲ್ಲಿಮಾಡಿದ ಅತಿ ಹೆಚ್ಚು ಟೆಲಿಸಮಾಲೋಚನೆಗಳಾಗಿವೆ. ಈ ಮೂಲಕ ಅದರ ಹಿಂದಿನ 1.8 ಲಕ್ಷ  ಟೆಲಿಸಮಾಲೋಚನೆಗಳ ಒಂದೇ ದಿನದ ದಾಖಲೆಯನ್ನು ಮೀರಿಸಿದೆ. ಗೌರವಾನ್ವಿತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್‌ ಮಾಂಡವಿಯಾ ಅವರ ಅಧ್ಯಕ್ಷ ತೆಯಲ್ಲಿಎಬಿ -ಎಚ್‌ಡಬ್ಲ್ಯುಸಿಗಳು 4 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ದಿನದಂದು ಇದನ್ನು ಸಾಧಿಸಲಾಗಿದೆ.
ಇ-ಸಂಜೀವನಿ ವೇದಿಕೆಯಲ್ಲಿಎಬಿ -ಎಚ್‌ಡಬ್ಲ್ಯುಸಿಗಳ ಮೂಲಕ ಟೆಲಿಸಮಾಲೋಚನೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ವೈದ್ಯರಿಂದ ವೈದ್ಯರ ದೂರ ಸಮಾಲೋಚನೆ ವ್ಯವಸ್ಥೆಯಲ್ಲಿಒಂದು ತುದಿಯಲ್ಲಿಜಿಲ್ಲಾ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿತಜ್ಞ ವೈದ್ಯರು ಕುಳಿತುಕೊಳ್ಳುತ್ತಾರೆ ಮತ್ತು ಇನ್ನೊಂದು ತುದಿಯಲ್ಲಿರೋಗಿಯೊಂದಿಗೆ ಸಾಮಾನ್ಯ ವೈದ್ಯರು / ಸಮುದಾಯ ಆರೋಗ್ಯ ಅಧಿಕಾರಿ ಇರಲಿದ್ದಾರೆ.  ಇದು ನಿರಂತರ ಆರೈಕೆಗಾಗಿ ತಜ್ಞರ ಸಮಾಲೋಚನೆಗೆ ಭರವಸೆ ನೀಡುತ್ತದೆ. ರೋಗಿಗಳ ದೈಹಿಕ ಪ್ರಯಾಣವನ್ನು ಕಡಿಮೆ ಮಾಡುವ ಜತೆಗೆ ವೆಚ್ಚ ಮತ್ತು ಸಂಭಾವ್ಯ ಕಷ್ಟಗಳನ್ನು ತಗ್ಗಿಸುತ್ತದೆ. ಉಪ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ( ಎಸ್‌ಎಚ್‌ಸಿ -ಎಚ್‌ಡಬ್ಲ್ಯುಸಿ) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಪಿಎಚ್‌ಸಿ -ಎಚ್‌ಡಬ್ಲ್ಯುಸಿ), ಜಿಲ್ಲಾ ಆಸ್ಪತ್ರೆಗಳಲ್ಲಿತಜ್ಞರ ಮಾರ್ಗದರ್ಶನ ಪಡೆಯಲು ಟೆಲಿ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳು ಮತ್ತು ದೇಶಾದ್ಯಂತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಸ್‌/ ಏಮ್ಸ್‌) ಯಲ್ಲಿಯೂ ಸಹ ರೋಗಿಗೆ ಸಮಗ್ರ ಆರೈಕೆಯನ್ನು ನೀಡಲು, ಅವರ ಎಬಿ-ಎಚ್‌ಡಬ್ಲ್ಯುಸಿಗೆ ಭೇಟಿ ನೀಡುತ್ತಿದ್ದಾರೆ.
ಗೌರವಾನ್ವಿತ ಕೇಂದ್ರ ಸಚಿವರ ನಿರಂತರ ಉತ್ತೇಜನ ಮತ್ತು ಬೆಂಬಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಟೆಲಿಸಮಾಲೋಚನೆಗಾಗಿ, ಈ ಅಸಾಧಾರಣ ದಾಖಲೆಯನ್ನು ಸಾಧಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಲವಾದ ಪ್ರೇರಣೆಯಾಗಿದೆ. 4 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿಯೂ ಸಹ, ಗೌರವಾನ್ವಿತ ಸಚಿವರು ರೋಗಿಗಳು, ಏಮ್ಸ್‌ನಲ್ಲಿನ ತಜ್ಞರು ಮತ್ತು ಎಬಿ -ಎಚ್‌ಡಬ್ಲ್ಯುಸಿಗಳಲ್ಲಿನ ಸಮುದಾಯ ಆರೋಗ್ಯ ಅಧಿಕಾರಿಗಳೊಂದಿಗೆ ದೂರವಾಣಿ ಸಮಾಲೋಚನೆಗಳ ಕುರಿತು ಅವರ ಅಭಿಪ್ರಾಯವನ್ನು ಕೇಳಿದರು.
ಒಂದೇ ದಿನದ ದಾಖಲೆಯ ಸಾಧನೆಯು ಇ-ಸಂಜೀವನಿ ವೇದಿಕೆಯ ದೃಢವಾದ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಸುಮಾರು 1 ಲಕ್ಷ  ಎಬಿ-ಎಚ್‌ಡಬ್ಲ್ಯುಸಿಗಳು ಈಗಾಗಲೇ ಸಮಾಲೋಚನೆಯನ್ನು ಕೋರಿ ಮಾತನಾಡುವವರು ನೋಂದಾಯಿಸಿಕೊಂಡಿದ್ದಾರೆ ಮತ್ತು 25000 ಕ್ಕೂ ಹೆಚ್ಚು ಕೇಂದ್ರಗಳು ಟೆಲಿಸಮಾಲೋಚನೆಗಳನ್ನು ಒದಗಿಸುತ್ತಿವೆ. ಇ-ಸಂಜೀವನಿ ಪೋರ್ಟಲ್‌ ದೇಶದ ಉದ್ದ ಮತ್ತು ಅಗಲದಾದ್ಯಂತ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತಿದೆ.

ಈ ವೈವಿಧ್ಯಮಯ ಮತ್ತು ವಿಶಾಲ ದೇಶದ ದೂರದ ಭಾಗದಲ್ಲಿನ ಬಡವರಿಗೆ ಸಮಯೋಚಿತ ತಜ್ಞರ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಟೆಲಿಸಮಾಲೋಚನೆಗಳು ನಿಜವಾಗಿಯೂ ವರದಾನವಾಗಿ ಹೊರಹೊಮ್ಮಿದೆ.

***



(Release ID: 1817662) Visitor Counter : 151