ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

2022ರ ಏಪ್ರಿಲ್ 11 ರಿಂದ ಮೇ 31 ರವರೆಗೆ ಪರೀಕ್ಷಾ ಪರ್ವ 4.0 ಅನ್ನು ಆಚರಿಸಲಿರುವ ಎನ್.ಸಿ.ಪಿ.ಸಿ.ಆರ್

Posted On: 10 APR 2022 5:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಪರೀಕ್ಷಾ ಪೇ ಚರ್ಚಾ"ದಿಂದ ಸ್ಫೂರ್ತಿ ಪಡೆದು, ಪರೀಕ್ಷೆಗಳನ್ನು ಸಂತೋಷಕರ ಚಟುವಟಿಕೆಯನ್ನಾಗಿ ಮಾಡುವ ತನ್ನ ಪ್ರಯತ್ನವನ್ನು ಮುಂದುವರಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್.ಸಿ.ಪಿ.ಸಿ.ಆರ್) 2022ರ ಏಪ್ರಿಲ್ 11 ರಿಂದ ಮೇ 31, 2022 ರವರೆಗೆ ಪರೀಕ್ಷಾ ಪರ್ವ- 4.0 ಅನ್ನು ಆಚರಿಸಲಿದೆ. ಪರೀಕ್ಷೆಗಳ ಬಗ್ಗೆ ಮಕ್ಕಳಲ್ಲಿರುವ ಒತ್ತಡದ ದೃಷ್ಟಿಕೋನವನ್ನು ಬದಲಾಯಿಸಲು ಮತ್ತು ಪರೀಕ್ಷಾ ಫಲಿತಾಂಶಕ್ಕೆ ಮುನ್ನ ಆತಂಕದಿಂದ ಹೊರತರುವ ಉದ್ದೇಶದೊಂದಿಗೆ ಎನ್.ಸಿ.ಪಿ.ಸಿ.ಆರ್ 2019ರಿಂದ  ತನ್ನ 'ಪರೀಕ್ಷಾ ಪರ್ವ' ಅಭಿಯಾನದೊಂದಿಗೆ ಪರೀಕ್ಷೆಗಳ ಸಂತಸವನ್ನು ಆಚರಿಸುತ್ತಿದೆ.


ಪರೀಕ್ಷಾ ಪರ್ವ 4.0 ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ತಜ್ಞರಿಂದ ಮಾರ್ಗದರ್ಶನ ಮತ್ತು ಪ್ರಮುಖ ಸಲಹೆಗಳನ್ನು ಪಡೆಯಲು ಒಂದು ವೇದಿಕೆಯನ್ನು ಒದಗಿಸುವ ಪ್ರಯತ್ನವಾಗಿದೆ. ಒತ್ತಡದ ಸಮಯದಲ್ಲಿ, ಅಹಿತಕರ ಮತ್ತು ಗೊಂದಲಮಯ ಆಲೋಚನೆಗಳ ಕುರಿತಂತೆ ತಜ್ಞರೊಂದಿಗೆ ಮಾತನಾಡುವುದು ಮತ್ತು ಹಂಚಿಕೊಳ್ಳುವುದು ವಿದ್ಯಾರ್ಥಿಗಳ ಒತ್ತಡ ಮತ್ತು ಆತಂಕ ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಈ ವರ್ಷ, ಮಕ್ಕಳ ಜೊತೆಗೆ ಶಿಕ್ಷಕರು ಮತ್ತು ಪೋಷಕರನ್ನೂ ತಲುಪುವ ಉದ್ದೇಶದಿಂದ ಬಹುಮುಖಿ ವಿಧಾನವನ್ನು ಅನುಸರಿಸಲಾಗುವುದು. ಪರೀಕ್ಷಾ ಪರ್ವ 4.0 ಈ ಕೆಳಗಿನ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ:
i) 2022 ರ ಏಪ್ರಿಲ್ 11 ರಿಂದ 2022 ರ ಮೇ 31 ರವರೆಗೆ ಫೇಸ್ಬುಕ್, ಟ್ವಿಟರ್, ಎನ್.ಸಿ.ಪಿ.ಸಿ.ಆರ್.ನ ಯೂಟ್ಯೂಬ್ ಮತ್ತು ದೂರದರ್ಶನ ರಾಷ್ಟ್ರೀಯ ಮತ್ತು ನ್ಯೂ ಇಂಡಿಯಾ ಜಂಕ್ಷನ್ ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಂಗ್ ಅಧಿವೇಶನಗಳು, ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶಕ್ಕೂ ಮುನ್ನ ತಮ್ಮ ಪರೀಕ್ಷಾ ಒತ್ತಡ ಮತ್ತು ಚಿಂತೆಗಳನ್ನು ಕಡಿಮೆ ಮಾಡಿಕೊಳ್ಳಲು ತಜ್ಞರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
ii) ಸಂವೇದನಾ- (1800-121-2830) ಎಂಬುದು ಕೋವಿಡ್ ಸಂಬಂಧಿತ ಒತ್ತಡಕ್ಕಾಗಿ ತರಬೇತಿ ಪಡೆದ ಸಮಾಲೋಚಕರ ಉಚಿತ ದೂರವಾಣಿ ಕರೆಯ ಸಮಾಲೋಚನಾ ಸೇವೆಯಾಗಿದ್ದು, ಎನ್.ಸಿ.ಪಿ.ಸಿ.ಆರ್.ಈಗ ಇದನ್ನು ಪರೀಕ್ಷೆ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ವಿದ್ಯಾರ್ಥಿಗಳಿಗೆ ವಿಸ್ತರಿಸುತ್ತಿದೆ.


***


(Release ID: 1815499) Visitor Counter : 235