ಸಹಕಾರ ಸಚಿವಾಲಯ
azadi ka amrit mahotsav

ಏಪ್ರಿಲ್ 12-13 ರಂದು ನವದೆಹಲಿಯಲ್ಲಿ ಸಹಕಾರ ನೀತಿ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜನೆ  


ಸಮ್ಮೇಳನ ಉದ್ಘಾಟಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ

ಸಹಕಾರಿಗಳ ಸಂಪೂರ್ಣ ಜೀವನ ಚಕ್ರ ಒಳಗೊಂಡಿರುವ ಆರು ಪ್ರಮುಖ ವಿಷಯಗಳು, ಅಂದರೆ ಅವರ ಆಡಳಿತ ಮತ್ತು ವ್ಯವಹಾರ ಕುರಿತ ಎಲ್ಲಾ ಅಂಶಗಳ ಚರ್ಚೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ, ಸಹಕಾರದಿಂದ ಸಮೃದ್ಧಿ ಎಂಬ ಮಂತ್ರವನ್ನು ಸಾಕಾರಗೊಳಿಸಲು ಮತ್ತು ದೇಶದಲ್ಲಿ ಸಹಕಾರಿ ಆಧಾರಿತ ಆರ್ಥಿಕ ಮಾದರಿ ಬಲಪಡಿಸಲು ಸಮ್ಮೇಳನದಿಂದ ಉತ್ತೇಜನೆ

Posted On: 08 APR 2022 5:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮತ್ತು ಸಹಕಾರಿ ವಲಯದ ಬೆಳವಣಿಗೆಯನ್ನು ಉತ್ತೇಜಿಸುವ ಹಾಗೂ ಸಹಕಾರದಿಂದ ಸಮೃದ್ಧಿ ದೃಷ್ಟಿಕೋನವನ್ನು ಸಾಕಾರಗೊಳಿಸಲು 2021 ರ ಜುಲೈ 6 ರಂದು ಹೊಸ ಸಹಕಾರಿ ಸಚಿವಾಲಯವನ್ನು ರಚಿಸಲಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಕ್ರಿಯಾತ್ಮಕ ನಾಯಕತ್ವದಡಿ ಹೊಸ ನೀತಿ ಮತ್ತು ಹೊಸ ಕಾರ್ಯಕ್ರಮಗಳ ಮೂಲಕ ಸಹಕಾರ ವಲಯದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.  

ಪಿ.ಎ.ಸಿಗಳ ಡಿಜಿಟಲೀಕರಣ, ರಾಷ್ಟ್ರೀಯ ಸಹಕಾರ ಸಂಘಗಳ ದತ್ತಾಂಶ ಸಂಗ್ರಹ, ಸಹಕಾರಿ ವಲಯದ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮ, ಒಂದೇ ಆಶ್ರಯದಡಿ “ಸಹಕಾರದಿಂದ ಸಮೃದ್ಧಿ”  ಯೋಜನೆ ಒಳಗೊಂಡಂತೆ ಹಲವಾರು ಕ್ರಮಗಳ ಮೂಲಕ ದೇಶದ ಸಹಕಾರ ಆಂದೋಲನವನ್ನು ಗಾಢವಾಗಿ ಬಲಪಡಿಸುತ್ತಿದ್ದಾರೆ. ಸಹಕಾರ ಸಚಿವಾಲಯ ತನ್ನ ಹೊಸ ಸಹಕಾರ ನೀತಿಯನ್ನು ಸಹ ರೂಪಿಸುತ್ತಿದೆ ಮತ್ತು ಇದರಿಂದ ಸಾಮಾಜಿಕ ವಾಸ್ತವಿಕತೆಗಳನ್ನು ಮತ್ತು ಹೊಸ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಲಿದೆ.

ಈ ಹಿನ್ನೆಲೆಯಲ್ಲಿ ಎರಡು ದಿನಗಳ ಸಹಕಾರ ನೀತಿ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ನವದೆಹಲಿಯಲ್ಲಿ 2022 ರ ಏಪ್ರಿಲ್ 12-13 ರಂದು ಆಯೋಜಿಸಲಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಹಕಾರ ಖಾತೆ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎರಡು ಡಜನ್ ಗೂ ಹೆಚ್ಚು ಕೇಂದ್ರ ಸಚಿವಾಲಯಗಳ ಪ್ರತಿನಿಧಿಗಳು, ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳು, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಸಹಕಾರ ವಲಯದ ರಿಜಿಸ್ಟ್ರಾರ್ ಗಳು ಹಾಗೂ ಸುಮಾರು 40 ಸಹಕಾರಿ ವಲಯ, ರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮ್ಮೇಳನ ಸಹಕಾರಿಗಳ ಸಂಪೂರ್ಣ ಜೀವನ ಚಕ್ರವನ್ನು ಒಳಗೊಂಡಿರುವ ಆರು ಪ್ರಮುಖ ವಿಷಯಗಳನ್ನು ಚರ್ಚಿಸುತ್ತದೆ. ಮತ್ತದರ ವ್ಯವಹಾರ ಮತ್ತು ಆಡಳಿತದ ಎಲ್ಲಾ ಅಂಶಗಳನ್ನು ಸ್ಪರ್ಶಿಸುತ್ತದೆ.

     I.         ಪ್ರಸ್ತುತ ಕಾನೂನು ಚೌಕಟ್ಟು, ನಿಯಂತ್ರಣ ನೀತಿಯನ್ನು ಗುರುತಿಸುವುದು, ಕಾರ್ಯಾಚರಣೆಯ ಅಡೆತಡೆಗಳು ಮತ್ತು ಅವುಗಳನ್ನು ತೆಗೆದುಹಾಕಲು ಅಗತ್ಯಕ್ರಮಗಳು, ಸುಗಮ ವ್ಯವಹಾರವನ್ನು ಮುನ್ನಡೆಸುವುದು ಮತ್ತು ಸಹಕಾರಿಗಳು ಹಾಗೂ ಇತರ ಆರ್ಥಿಕ ಘಟಕಗಳಿಗೆ ಸೂಕ್ತ ವೇದಿಕೆಯಂತಹ  ಕ್ರಮಗಳನ್ನು ಒದಗಿಸಲಿದೆ.

   II.         ಸಹಕಾರ ತತ್ವಗಳನ್ನು ಒಳಗೊಂಡಿರುವ ಆಡಳಿತ ವ್ಯವಸ್ಥೆಯನ್ನು ಬಲಗೊಳಿಸುವ ಸುಧಾರಣೆಗಳು, ಪ್ರಜಾಸತ್ಮಾತ್ಮಕವಾಗಿ ಸದಸ್ಯರ ನಿಯಂತ್ರಣ, ಸದಸ್ಯರ ಪಾಲ್ಗೊಳ್ಳುವಿಕೆ ಹೆಚ್ಚಳ, ಪಾರದರ್ಶಕತೆ, ಚುನಾವಣೆಗಳ ನಿಯಂತ್ರಣ, ಎಚ್ಆರ್ ನೀತಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳು, ಲೆಕ್ಕಪರಿಶೋಧನೆ ಮತ್ತು ಖಾತೆಗಳ ರಕ್ಷಣೆ.

III.         ಮೂಲ ಸೌಕರ್ಯ ಬಲಪಡಿಸಿ ಸಹಕಾರಿಗಳ ಮೂಲಕ ಸಶಕ್ತ ಆರ್ಥಿಕ ಘಟಕಗಳನ್ನು ರೂಪಿಸುವುದು, ಈಕ್ವಿಟಿ ಪಾಲು ನೆಲೆಗೊಳಿಸುವುದು, ಬಂಡವಾಳ ಹೊಂದುವ, ಚಟುವಟಿಕೆಯಲ್ಲಿ ವಿವಿಧತೆ, ಮಾರುಕಟ್ಟೆ, ವ್ಯವಹಾರ ಯೋಜನೆ ಅಭಿವೃದ್ಧಿ, ನಾವೀನ್ಯತೆ, ತಂತ್ರಜ್ಞಾನ ಅಳವಡಿಕೆ ಮತ್ತು ರಫ್ತು ಚಟುವಟಿಕೆಗಳು.

IV.         ತರಬೇತಿ, ಶಿಕ್ಷಣ, ಜ್ಞಾನದ ಹಂಚಿಕೆ ಮತ್ತು ಸಹಕಾರಿಗಳನ್ನು ಮುಖ್ಯವಾಹಿನಿಗೆ ತಂದು ಅರಿವು ಮೂಡಿಸುವ, ಉದ್ಯಮಶೀಲತೆಯ ತರಬೇತಿ , ಮಹಿಳೆಯರು, ಯುವ ಸಮೂಹ ಹಾಗೂ ದುರ್ಬಲವರ್ಗಗಳನ್ನು ಒಳಗೊಳ್ಳುವ ಕ್ರಮಗಳು.  

  V.         ಹೊಸ ಸಹಕಾರಿಗಳನ್ನು ಉತ್ತೇಜಿಸುವ, ನಿಷ್ಕ್ರೀಯಗೊಂಡಿರುವುದನ್ನು ಪುನಶ್ಚೇತನಗೊಳಿಸುವ, ಸಹಕಾರಿಗಳನ್ನು ಸಹಕಾರ ವಲಯದಲ್ಲಿ ಉತ್ತೇಜಿಸುವ, ಸದಸ್ಯರ ಸಂಖ್ಯೆ ಹೆಚ್ಚಿಸುವ, ಔಪಚಾರಿಕವಾಗಿ ಸಾಮೂಹಿಕ ಚಟುವಟಿಕೆಗಳನ್ನು ಕೈಗೊಳ್ಳುವ, ಸುಸ್ಥಿರ ಬೆಳವಣಿಗೆಗಾಗಿ ಸಹಕಾರಿಗಳನ್ನು ಅಭಿವೃದ್ಧಿಪಡಿಸುವುದು, ಪ್ರಾದೇಶಿಕ ಅಸಮತೋಲನವನ್ನು ತಗ್ಗಿಸುವುದು ಮತ್ತು ಹೊಸ ಕ್ಷೇತ್ರಗಳನ್ನು ಅನ್ವೇಷಿಸುವುದು.

VI.         ಸಾಮಾಜಿಕ ಸಹಕಾರಿಗಳನ್ನು ಉತ್ತೇಜಿಸುವುದು ಮತ್ತು ಸಹಕಾರಿಗಳ ಸಾಮಾಜಿಕ ಭದ್ರತೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ವಿವಿಧ ಪಾಲುದಾರರೊಂದಿಗೆ ಇಂತಹ ಸಮ್ಮೇಳನಗಳನ್ನು ಸರಣಿ ಸ್ವರೂಪದಲ್ಲಿ ಆಯೋಜಿಸುತ್ತಿದ್ದು, ಇದು ಇಂತಹ ಮೊದಲ ಸಮ್ಮೇಳನವಾಗಿದೆ. ಶೀಘ್ರದಲ್ಲೇ ತಮ್ಮ ಅಭಿಪ್ರಾಯಗಳನ್ನು ಆಹ್ವಾನಿಸಲು ಎಲ್ಲ ಸಹಕಾರಿಗಳೊಂದಿಗೆ ಮತ್ತೊಂದು ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಈ ಪ್ರಯತ್ನಗಳು ಹೊಸ ದೃಢವಾದ ರಾಷ್ಟ್ರೀಯ ನೀತಿಯ ರಚನೆಯಲ್ಲಿ ಅಂತ್ಯಗೊಳ್ಳುತ್ತವೆ. ದೇಶದಲ್ಲಿ ಸಹಕಾರಿ ಆಧಾರಿತ ಆರ್ಥಿಕ ಮಾದರಿಯನ್ನು ಬಲಪಡಿಸಲು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಹಕಾರದಿಂದ ಸಮೃದ್ಧಿ ಎಂಬ ಮಂತ್ರವನ್ನು ಇದು ಉತ್ತೇಜಿಸುತ್ತದೆ.

****


(Release ID: 1815185) Visitor Counter : 352