ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಭಾರತೀಯ ಕ್ರೀಡಾ ಪ್ರಾಧಿಕಾರದ ವಿವಿಧ ಕ್ರೀಡಾ ವಿಭಾಗಗಳಲ್ಲಿ 615 ತರಬೇತುದಾರರು ನಿಯಮಿತ ಆಧಾರದ ಮೇಲೆ ಹಾಗೂ 416 ತರಬೇತುದಾರರು ಗುತ್ತಿಗೆ/ನಿಯೋಜನೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ; ಶ್ರೀ ಅನುರಾಗ್ ಠಾಕೂರ್

ಪ್ರಕಟಣಾ ದಿನಾಂಕ: 05 APR 2022 4:47PM by PIB Bengaluru

ಭಾರತೀಯ ಕ್ರೀಡಾ ಪ್ರಾಧಿಕಾರ [ಸಾಯಿ] ಅನುಷ್ಠಾನಗೊಳಿಸುತ್ತಿರುವ ಹಲವು ಕ್ರೀಡಾ ಉತ್ತೇಜನ ಕಾರ್ಯಕ್ರಮಗಳ ವಿವಿಧ ಕ್ರೀಡಾ ವಿಭಾಗಗಳಲ್ಲಿ ಅಥ್ಲೀಟ್ ಗಳು ಹಾಗೂ ಆಯಾ ಕೇಂದ್ರದ ಕ್ರೀಡಾ ಚಟುವಟಿಕೆಗಳಿಗೆ ಅನುಗುಣವಾಗಿ ತರಬೇತುದಾರರನ್ನು ನಿಯೋಜಿಸಲಾಗುತ್ತಿದೆ. ಪ್ರಸ್ತುತ ಸಾಯಿಯಲ್ಲಿ 615 ಕ್ರೀಡಾಪಟುಗಳು ನಿಯಮಿತ ಆಧಾರದ ಮೇಲೆ ಹಾಗೂ ಅಗತ್ಯತೆಗೆ ಅನುಗುಣವಾಗಿ 416 ತರಬೇತುದಾರರನ್ನು ಗುತ್ತಿಗೆ/ನಿಯೋಜನೆ ಆಧಾರದ ಮೇಲೆ ನೇಮಿಸಲಾಗಿದೆ.

ಬರುವ 2024 ಮತ್ತು 2028 ರ ಒಲಿಂಪಿಕ್ಸ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಥ್ಲೀಟ್ ಗಳಿಗಾಗಿ 360 ಡಿಗ್ರಿ ಕೋನದಲ್ಲಿ ಬೆಂಬಲ ಒದಗಿಸಲು 416 ತರಬೇತುದಾರರನ್ನು ನೇಮಕಾತಿ ಮತ್ತು ಗುತ್ತಿಗೆ/ನಿಯೋಜನೆ ಆಧಾರದ ಮೇಲೆ ನೇಮಿಸಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ವಿವಿಧ ಕ್ರೀಡಾ ವಿಭಾಗಗಳ ತರಬೇತಿ ಕೇಂದ್ರಗಳಿಗೆ ಅಗತ್ಯವಾಗಿರುವ ತರಬೇತುದಾರರನ್ನು ನೇಮಿಸಲಾಗುತ್ತಿದ್ದು, ಈ ನೇಮಕಾತಿಯನ್ನು ರಾಜ್ಯವಾರು ಆಧಾರದ ಮೇಲೆ ಮಾಡುವುದಿಲ್ಲ.  ತಮಿಳುನಾಡು ರಾಜ್ಯದ 3 ಸಾಯಿ ತರಬೇತಿ ಕೇಂದ್ರಗಳಿಗೆ ಪ್ರಸ್ತುತ 18 ತರಬೇತುದಾರರನ್ನು ನಿಯೋಜಿಸಲಾಗಿದೆ.

ಈ ಮಾಹಿತಿಯನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

*****


(ಪ್ರಕಟಣೆ ಐ.ಡಿ.: 1813874) ವಿಸಿಟರ್ ಕೌಂಟರ್ : 154
ಪ್ರಕಟಣೆಯನ್ನು ಇದರಲ್ಲಿ ಓದಿ: English , Tamil , Urdu , हिन्दी , Punjabi