ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಗೋವಾದ ಜಲಕ್ರೀಡೆಗಳ ರಾಷ್ಟ್ರೀಯ ಸಂಸ್ಥೆಯಿಂದ ಜಲ ಕ್ರೀಡೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ 27 ಕೋರ್ಸ್ ಗಳ ಅಭಿವೃದ್ಧಿ: ಶ್ರೀ ಜಿ. ಕಿಶನ್ ರೆಡ್ಡಿ

प्रविष्टि तिथि: 28 MAR 2022 3:56PM by PIB Bengaluru

ಗೋವಾದಲ್ಲಿರುವ ಜಲಕ್ರೀಡೆಗಳಿಗಾಗಿರುವ ರಾಷ್ಟ್ರೀಯ ಸಂಸ್ಥೆ (ಎನ್.ಐ.ಡಬ್ಲ್ಯು.ಎಸ್.) ಯು ಭಾರತೀಯ ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣಾ ಸಂಸ್ಥೆಯ (ಐ.ಐ.ಟಿ.ಟಿ.ಎಂ.)  ಅಡಿಯಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರವಾಗಿದೆ ಮತ್ತು ಅದು ಜಲಕ್ರೀಡೆಗಳು ಹಾಗು ಆ ಸಂಬಂಧಿ ಕಾರ್ಯಚಟುವಟಿಕೆಗಳ ತರಬೇತಿ ಹಾಗು ಪ್ರಮಾಣೀಕರಣಕ್ಕೆ ಸಂಬಂಧಿಸಿ ಪ್ರವಾಸೋದ್ಯಮ ಸಚಿವಾಲಯದಡಿ ಇರುವ ಕೇಂದ್ರೀಯ ಸ್ವಾಯತ್ತ ಸಂಸ್ಥೆಯಾಗಿದೆ. ಗೋವಾದ ಎನ್.ಐ.ಡಬ್ಲ್ಯು.ಎಸ್. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲ ಕ್ರೀಡೆ ಸಂಬಂಧಿ ತರಬೇತಿ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ. ಕೇಂದ್ರೀಯ ಸ್ವಾಯತ್ತ ಸಂಸ್ಥೆಯ ಯಾವುದೇ ಕೇಂದ್ರವನ್ನು ತೆರೆಯಬೇಕಾದರೆ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ, ಸಂಪನ್ಮೂಲಗಳ ಲಭ್ಯತೆ, ಕಾರ್ಯ ಸಾಧ್ಯತೆ, ಬೇಡಿಕೆ ಮತ್ತು ಇತರ ಇಂತಹ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಹಾಗು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಸ್ಥಳಗಳ ಅನುಕೂಲತೆಗಳನ್ನು ತುಲನೆ ಮಾಡಿ ನೋಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಎನ್.ಐ.ಡಬ್ಲ್ಯು.ಎಸ್. ಸ್ಥಾಪನೆಗಾಗಿ ಸಚಿವಾಲಯಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ.

ದೇಶದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಜಲಕ್ರೀಡೆಗಳನ್ನು ಉತ್ತೇಜಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಬೆಂಬಲ ನೀಡುವುದಕ್ಕೆ ಸಚಿವಾಲಯ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರವಾಸೋದ್ಯಮ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ದ್ವೀಪಗಳು, ಕಡಲ ಕಿನಾರೆ ಮತ್ತು ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ಸ್ವದೇಶ ದರ್ಶನ್ ಯೋಜನೆ ಅಡಿಯಲ್ಲಿ ಅನುದಾನದ ಬೆಂಬಲವನ್ನು ನೀಡುತ್ತದೆ. ಜಲ ಕ್ರೀಡೆಗಳು. ಕಡಲ ಕಿನಾರೆ ಸುರಕ್ಷೆ ಇತ್ಯಾದಿಗಳು ಇದರಲ್ಲಿ ಅಡಕವಾಗಿರುವ ಪ್ರಮುಖಾಂಶಗಳಾಗಿವೆ. ಇದಲ್ಲದೆ ಭಾರತದಲ್ಲಿ ಸಾಹಸ ಪ್ರವಾಸೀ ಆಪರೇಟರ್ ಗಳಿಗೆ ಅನುಮೋದನೆ ನೀಡುವ ವ್ಯವಸ್ಥೆಯನ್ನೂ ಸಚಿವಾಲಯವು ಹೊಂದಿದೆ.

ಗೋವಾದ ಜಲ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆ (ಎನ್.ಐ.ಡಬ್ಲ್ಯು.ಎಸ್.)ಯ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ನೀತಿ ರೂಪಣೆ, ಮಾರ್ಗದರ್ಶಿಗಳು, ಎಸ್.ಒ.ಪಿ.ಗಳು, ಮಾನವ ಶಕ್ತಿಯ ತರಬೇತಿ ಇತ್ಯಾದಿಗಳಿಗೆ ಸಂಬಂಧಿಸಿ  ಬೆಂಬಲವನ್ನು  ನೀಡಲಾಗುತ್ತದೆ. ಈ ಕಾರ್ಯ ಚಟುವಟಿಕೆಗಳನ್ನು ಬಲಪಡಿಸಲು ಎನ್.ಐ.ಡಬ್ಲ್ಯು.ಎಸ್. ಈಗಾಗಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಜೊತೆ ಹಾಗು ಭಾರತೀಯ ನೌಕಾ ದೈಹಿಕ ತರಬೇತಿ ಶಾಲೆಯ ಜೊತೆ ತಿಳಿವಳಿಕಾ ಒಡಂಬಡಿಕೆಗಳನ್ನು ಮಾಡಿಕೊಂಡಿದೆ.

ಎನ್.ಐ.ಡಬ್ಲ್ಯು.ಎಸ್. ನಿಂದ ಜಲಕ್ರೀಡೆ ಮತ್ತು ಆ ಸಂಬಂಧಿತ ಕಾರ್ಯ ಚಟುವಟಿಕೆಗಳಲ್ಲಿ 27 ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯ ತರಬೇತುದಾರರು ವಿವಿಧ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತರಬೇತಿಗಳನ್ನು  ನಡೆಸುತ್ತಾರೆ ಮತ್ತು ಕ್ಯಾಂಪಸ್ ಗಳಿಂದ ಹೊರಗೆ ತರಬೇತಿ ಕೋರ್ಸ್ ಗಳನ್ನು ನಡೆಸುತ್ತಾರೆ. ಎನ್.ಐ.ಡಬ್ಲ್ಯು.ಎಸ್. ಆನ್ ಲೈನ ಮೂಲಕ ಮತ್ತು ಭೌತಿಕವಾಗಿ ಜಲ ಕ್ರೀಡೆ ಜಾಗೃತಿ ಆಂದೋಲನಗಳನ್ನು ಕೈಗೊಳ್ಳುತ್ತದೆ.

ಲೋಕ ಸಭೆಯಲ್ಲಿ ಇಂದು  ಪ್ರವಾಸೋದ್ಯಮ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಅವರು ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

***


(रिलीज़ आईडी: 1810702) आगंतुक पटल : 174
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Telugu