ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
2022-23 ಹಂಗಾಮಿಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ ಸಂಪುದ ಅನುಮೋದನೆ
Posted On:
22 MAR 2022 2:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2022-23 ನೇ ಹಂಗಾಮಿಗಾಗಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು (ಎಂ ಎಸ್ ಪಿ) ಅನುಮೋದಿಸಿದೆ. ಈ ಅನುಮೋದನೆಯು ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸುಗಳನ್ನು ಆಧರಿಸಿದೆ.
ಕಚ್ಚಾ ಸೆಣಬಿನ ಎಂ ಎಸ್ ಪಿ (ಟಿಡಿ5 ದರ್ಜೆಗೆ ಸಮನಾದ ಟಿ ಡಿ ಎನ್3) ಯನ್ನು 2022-23 ಹಂಗಾಮಿಗೆ ಹಿಂದಿನ ವರ್ಷಕ್ಕಿಂತ 250 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಲ್‌ಗೆ.4750 ರೂ. ನಿಗದಿಪಡಿಸಲಾಗಿದೆ. ಇದು ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇ.60.53 ರಷ್ಟು ಲಾಭವನ್ನು ಖಚಿತಪಡಿಸುತ್ತದೆ. 2022-23ರ ಹಂಗಾಮಿನ ಕಚ್ಚಾ ಸೆಣಬಿನ ಎಂ ಎಸ್ ಪಿ ಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸುವ 2018-19ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ ತತ್ವಕ್ಕೆ ಅನುಗುಣವಾಗಿದೆ.
ಇದು ಕನಿಷ್ಠ ಶೇ.50 ರಷ್ಟು ಲಾಭದ ಭರವಸೆ ನೀಡುತ್ತದೆ. ಸೆಣಬು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಾತ್ರಿಪಡಿಸುವ ಮತ್ತು ಗುಣಮಟ್ಟದ ಸೆಣಬನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಪ್ರಮುಖ ಮತ್ತು ಪ್ರಗತಿಪರ ಕ್ರಮಗಳಲ್ಲಿ ಒಂದಾಗಿದೆ.
ಭಾರತ ಸೆಣಬು ನಿಗಮ (ಜೆಸಿಐ) ಬೆಲೆ ಬೆಂಬಲ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಿಂದ ಉಂಟಾಗುವ ನಷ್ಟವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಮರುಪಾವತಿ ಮಾಡುತ್ತದೆ.
***
(Release ID: 1808255)
Visitor Counter : 280
Read this release in:
Tamil
,
Manipuri
,
Odia
,
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Telugu
,
Malayalam