ವಾರ್ತಾ ಮತ್ತು ಪ್ರಸಾರ ಸಚಿವಾಲಯ

ದುಬೈನಲ್ಲಿ ಬಾಲಿವುಡ್ ನಟ ಶ್ರೀ ಆರ್. ಮಾಧವನ್ ಸಮ್ಮುಖದಲ್ಲಿ ಮಾಧ್ಯಮ ಮತ್ತು ಮನರಂಜನಾ ಸಪ್ತಾಹ ಉದ್ಘಾಟಿಸಿದ ಶ್ರೀ ಅಪೂರ್ವ ಚಂದ್ರ 


2022ರ ಮಾರ್ಚ್ ಅಂತ್ಯದೊಳಗೆ ಎ.ವಿ.ಜಿ.ಸಿ. ಕಾರ್ಯ ಪಡೆ ಸ್ಥಾಪನೆ

ಭಾರತದಲ್ಲಿ ಕ್ರೀಡಾ ರೇಡಿಯೋ ಕೇಂದ್ರಕ್ಕೆ ಚಾಲನೆ ನೀಡಲಿರುವ ದುಬೈ ಮೂಲಕ ಚಾನೆಲ್ 2 ಸಮೂಹ

ಮುಂಬರುವ ಆರ್.ಆರ್.ಆರ್. ಚಿತ್ರ ಭಾರತೀಯ ಪೆವಿಲಿಯನ್ ನಲ್ಲಿ ಜಾಗತಿಕವಾಗಿ ಬಿಡುಗಡೆ

Posted On: 18 MAR 2022 6:50PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರಿಂದು ಬಾಲಿವುಡ್ ನಟ ಶ್ರೀ ಆರ್. ಮಾಧವನ್ ಅವರ ಸಮ್ಮುಖದಲ್ಲಿ ದುಬೈ ಎಕ್ಸ್‌ ಪೋದ ಇಂಡಿಯಾ ಪೆವಿಲಿಯನ್‌ ನಲ್ಲಿ ಮಾಧ್ಯಮ ಮತ್ತು ಮನರಂಜನಾ ಸಪ್ತಾಹವನ್ನು ಉದ್ಘಾಟಿಸಿದರು. ದೂರದರ್ಶನದ ಮಹಾನಿರ್ದೇಶಕ ಶ್ರೀ ಮಯಾಂಕ್ ಅಗರ್ವಾಲ್,  ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿಕ್ರಮ್ ಸಹಾಯ್, ಚಲನಚಿತ್ರ ಪ್ರಮಾಣೀಕರಣದ ಕೇಂದ್ರೀಯ ಮಂಡಳಿ ಸಿ.ಇ.ಓ. ಮತ್ತು ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ  ವ್ಯವಸ್ಥಾಪಕ ನಿರ್ದೇಶಕ ಶ್ರೀ ರವೀಂದರ್ ಭಾಕರ್ ಅವರನ್ನೊಳಗೊಂಡ ನಿಯೋಗದ ನೇತೃತ್ವವನ್ನು ಶ್ರೀ ಚಂದ್ರ ವಹಿಸಿದ್ದಾರೆ. 

ಚಾನೆಲ್ 2 ಸಮೂಹಗಳ ನಿಗಮದ ಅಧ್ಯಕ್ಷ ಶ್ರೀ ಅಜಯ್ ಸೇಥಿ ಅವರೊಂದಿಗೆ ಕಾರ್ಯದರ್ಶಿ ಸಭೆ ನಡೆಸಿದರು. ಭಾರತದಲ್ಲಿ ಕ್ರೀಡೆಗೆ ಸಮರ್ಪಿತವಾದ ನೇರ ಪ್ರಸಾರದ ರೇಡಿಯೊ ಚಾನೆಲ್ ಅನ್ನು ಪ್ರಾರಂಭಿಸುವ ಅವರ ಕಂಪನಿಯ ದೃಷ್ಟಿಕೋನವನ್ನು ಶ್ರೀ ಸೇಥಿ ಅವರು ಶ್ರೀ ಚಂದ್ರ ಅವರಿಗೆ ವಿವರಿಸಿದರು. ಶ್ರೀ ಸೇಥಿ "ಭಾರತದಲ್ಲಿ ಪ್ರಸ್ತುತ ರೇಡಿಯೊದಲ್ಲಿ ನೇರ ಕ್ರಿಕೆಟ್ ಪ್ರಸಾರದ ಗುಣಮಟ್ಟ ಮತ್ತು ವಸ್ತುವಿಷಯದ ಕೊರತೆಯಿದೆ ಮತ್ತು ಸುಮಾರು 11 ಸೆಕೆಂಡುಗಳ ವಿಳಂಬವಿದೆ" ಎಂದು ಹೇಳಿದರು. ಕಂಪನಿಯು ಶ್ರೀ ಕಪಿಲ್ ದೇವ್ ಮತ್ತು ಶ್ರೀ ಸುನಿಲ್ ಗವಾಸ್ಕರ್ ಸೇರಿದಂತೆ ಕ್ರಿಕೆಟ್ ತಾರೆಗಳೊಂದಿಗೆ ಸಹಯೋಗ ಹೊಂದಿದೆ. ಮೂಲಸೌಕರ್ಯ, ಮಾರುಕಟ್ಟೆ ಮತ್ತು ವಸ್ತುವಿಷಯಗಳಲ್ಲಿ ಹೂಡಿಕೆ ಮಾಡಲು ಕಂಪನಿಯು ಸಿದ್ಧವಾಗಿದೆ ಮತ್ತು ಭಾರತ ಸರ್ಕಾರದಿಂದ ಚಾನಲ್ ಗೆ ಸಂಬಂಧಿಸಿದಂತೆ ಬೆಂಬಲವನ್ನು ಪಡೆಯಲಿದೆ ಎಂದು ಅವರು ಹೇಳಿದರು. ಪ್ರಸ್ತುತ, ಅವರು ಪ್ರಸಾರ ಭಾರತಿಯೊಂದಿಗೆ 60:40 ಆದಾಯ ಹಂಚಿಕೆ ಮಾದರಿಯಲ್ಲಿದ್ದಾರೆ, ಆದರೆ ವಸ್ತುವಿಷಯವನ್ನು ಉತ್ಪಾದಿಸುತ್ತಿಲ್ಲ.
ತಮ್ಮ ಕಂಪನಿಯು ದುಬೈನಲ್ಲಿ ಎಫ್.ಎಂ ವಾಹಿನಿಗಳು, ಕೀನ್ಯಾದ ಟಿವಿ ವಾಹಿನಿ, ಮೀಡಿಯಾ ಸಿಟಿ, ಕೆರಿಬಿಯನ್ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡಗಳೇ ಮೊದಲಾದ ಪ್ರಮುಖ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ ಎಂದು ಶ್ರೀ ಸೇಥಿ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದರು.  ಕಂಪನಿಯು ಐಸಿಸಿ ಜಾಗತಿಕ ಕ್ರಿಕೆಟ್ ರೇಡಿಯೋ ಹಕ್ಕುಗಳನ್ನು ಹೊಂದಿದೆ ಎಂದರು. ಈ ಕಾರ್ಯವನ್ನು ಮತ್ತಷ್ಟು ಮುಂದುವರಿಸಲು ಸಚಿವಾಲಯದಿಂದ ಎಲ್ಲಾ ಬೆಂಬಲವನ್ನು ನೀಡುವ ಭರವಸೆಯನ್ನು ಕಾರ್ಯದರ್ಶಿ ನೀಡಿದರು.
ಭಾರತದೊಂದಿಗೆ ಅನಿಮೇಷನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಸ್ತುವಿಷಯ ಸೃಷ್ಟಿಗೆ ಸಹಯೋಗ ಎಂಬ ವಿಷಯದ ಬಗ್ಗೆ ಇಂಡಿಯಾ ಪೆವಿಲಿಯನ್ ನಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಚರ್ಚೆಯಲ್ಲಿ ಶ್ರೀ ಚಂದ್ರ ಅವರು ಮಾತನಾಡಿ, ಭಾರತದ ಎವಿಜಿಸಿ ವಲಯದಲ್ಲಿನ ಅವಕಾಶಗಳನ್ನು ಒತ್ತಿ ಹೇಳಿದರು. "ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಗೋಚರ ಉದ್ಯಮಗಳಲ್ಲಿ ಒಂದಾಗಿದೆ" ಎಂದು ಶ್ರೀ ಚಂದ್ರ ಹೇಳಿದರು. ಭಾರತೀಯ ಎಂ ಮತ್ತು ಇ ಉದ್ಯಮವು 28 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ್ದಾಗಿದೆ ಮತ್ತು 2030ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್ ತಲುಪಲಿದದ್ದು, ಒಟ್ಟಾರೆ ವೃದ್ಧಿ ದರ ಶೇ.12 ಎಂದು ಅಂದಾಜಿಸಲಾಗಿದೆ ಎಂದರು. ಉದ್ಯಮಕ್ಕೆ ಅಗತ್ಯವಿರುವ ಪ್ರತಿಭೆ ಮತ್ತು ಸೃಜನಶೀಲ ಕೌಶಲ್ಯವನ್ನು ಭಾರತ ಹೊಂದಿದೆ." ಈ ವಲಯದ ಕಂಪನಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಎವಿಜಿಸಿ ನೀತಿಯನ್ನು ರೂಪಿಸುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾರ್ಚ್ 2022ರ ಅಂತ್ಯದ ವೇಳೆಗೆ ಎವಿಜಿಸಿ ಕಾರ್ಯಪಡೆಯನ್ನು ಸ್ಥಾಪಿಸಲಿದೆ ಎಂದು ಕಾರ್ಯದರ್ಶಿ ಉಲ್ಲೇಖಿಸಿದರು.
ಶ್ರೀ ಆರ್. ಮಾಧವನ್ ಅವರು ಎವಿಜಿಸಿ ವಲಯದ ಬಗ್ಗೆ ಗಮನ ಹರಿಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಶ್ಲಾಘಿಸಿದರು ಮತ್ತು ಭಾರತೀಯರ ಪ್ರತಿಭೆ ಮತ್ತು ಅದರ ಬೆಳವಣಿಗೆಯ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದರು.
ಶ್ರೀ ರವೀಂದರ್ ಭಾಕರ್ ಅವರು ಕೌಶಲ್ಯ ಮತ್ತು ದೀರ್ಘಾವಧಿಯಲ್ಲಿ ಭಾರತೀಯ ಎಂ ಮತ್ತು ಇ ಉದ್ಯಮಕ್ಕೆ ಪ್ರಯೋಜನವಾಗುವ ಪ್ರತಿಭಾ ಸಂಗ್ರಹವನ್ನು ರೂಪಿಸುವ ಮಹತ್ವವನ್ನು ಒತ್ತಿ ಹೇಳಿದರು.
ದುಂಡು ಮೇಜಿನ ಸಭೆ, ಭಾರತ, ದುಬೈ ಮತ್ತು ಇತರ ದೇಶಗಳ ಉದ್ಯಮದ ಪ್ರಮುಖರಿಂದ ವ್ಯಾಪಕವಾದ ವಿಚಾರಧಾರೆಗೆ ಸಾಕ್ಷಿಯಾಯಿತು. ಭಾರತದ ಎ.ವಿ.ಜಿಸಿ. ವಲಯದಲ್ಲಿ ಹೊರಗುತ್ತಿಗೆಗೆ ವಿಪುಲವಾದ ಅವಕಾಶಗಳನ್ನು ನೀಡುತ್ತದೆ ಮತ್ತು ಉಭಯ ದೇಶಗಳಲ್ಲಿ ಭಾರತದ ಖಾಸಗಿ ವಲಯ ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವೆ ಬಲವಾದ ಸಹಯೋಗವನ್ನು ಬೆಳೆಸಲು ಆಳವಾದ ಸಹಯೋಗದ ಅಗತ್ಯವನ್ನು ಧ್ವನಿಸುತ್ತದೆ. 
ಮುಂಬರುವ ಹದಿನೈದು ದಿನಗಳಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪೆವಿಲಿಯನ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ. ಪರಸ್ಪರ ಪ್ರಯೋಜನಕಾರಿಯಾದ ಸಹಯೋಗಕ್ಕಾಗಿ ಸಚಿವಾಲಯವು ಯುಎಇ ಯೊಂದಿಗೆ ತಿಳಿವಿಕೆ ಒಪ್ಪಂದವನ್ನು ವಿದ್ಯುಕ್ತಗೊಳಿಸಲಿದೆ. ಮುಂದಿನ ಕೆಲವು ತಿಂಗಳುಗಳವರೆಗೆ ಚರ್ಚೆ ಮುಂದುವರಿಯಲಿದೆ ಮತ್ತು 6-8 ತಿಂಗಳಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.
ಮುಂಬರುವ ಭಾರತೀಯ ಚಲನಚಿತ್ರ ಆರ್.ಆರ್.ಆರ್ ಗೆ ಕಾರ್ಯದರ್ಶಿ, ಚಿತ್ರ ನಿರ್ದೇಶಕ ಶ್ರೀ ಎಸ್.ಎಸ್. ರಾಜಮೌಳಿ ಮತ್ತು ನಟರಾದ ಶ್ರೀ ರಾಮ್ ಚರಣ್ ಮತ್ತು ಶ್ರೀ ಎನ್.ಟಿ. ರಾಮರಾವ್ ಜೂನಿಯರ್ ಅವರ ಸಮ್ಮುಖದಲ್ಲಿ ಜಾಗತಿಕವಾಗಿ ಚಾಲನೆ ನೀಡಲಾಯಿತು. ಜಾಗತಿಕ ಮಾಧ್ಯಮ ಸಂಸ್ಥೆಗಳು ಮತ್ತು ಭಾರತ ಮತ್ತು ಯುಎಇಯ ವಿವಿಧ ಪ್ರಮುಖ ಪ್ರತಿನಿಧಿಗಳ
ಸಮ್ಮುಖದಲ್ಲಿ ಈ ಚಾಲನೆ ನೀಡಲಾಯಿತು.


***


 



(Release ID: 1807202) Visitor Counter : 143