ಸಂಸ್ಕೃತಿ ಸಚಿವಾಲಯ
azadi ka amrit mahotsav

ಸಂಸ್ಕೃತಿ ಸಚಿವಾಲಯದಿಂದ ಆಜಾದಿ ಕಾ ಅಮೃತ ಮಹೋತ್ಸವದ ಒಂದು ವರ್ಷ ಆಚರಣೆಗಾಗಿ ‘ಅಮೃತ್ ಕಾಲ್ ಕಾ ಪೆಹಲಾ ಸಾಲ್’ ಆಯೋಜನೆ


ಆಚರಣೆಗೆ ಚಾಲನೆ ನೀಡಲಿರುವ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ.ಕಿಶನ್ ರೆಡ್ಡಿ

ಅಧಿಕಾರದಲ್ಲಿದ್ದ ಮಹಿಳೆಯರಿಗೆ ಮೀಸಲಾದ ‘ಅಮರ್ ಚಿತ್ರ ಕಥಾ’ ವಿಶೇಷ ಆವೃತ್ತಿ ಬಿಡುಗಡೆ

Posted On: 10 MAR 2022 3:22PM by PIB Bengaluru

ಭಾರತ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಉಪಕ್ರಮ ಒಂದು ವರ್ಷವನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಗಾಗಿ ಸಂಸ್ಕೃತಿ ಸಚಿವಾಲಯವು 2022ರ ಮಾರ್ಚ್ 12ರಂದು “ಅಮೃತ್ ಕಾಲ್ ಕಾ ಪೆಹ್ಲಾ ಸಾಲ್” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಪ್ರಗತಿ ಪರ ಸ್ವತಂತ್ರ ಭಾರತ, ಸಾಂಸ್ಕೃತಿಕ, ಶ್ರೀಮಂತ ಪರಂಪರೆ ಮತ್ತು ಭಾರತದ ಸಾಧನೆಗಳನ್ನು ಸ್ಮರಿಸಲು 2021ರ ಮಾರ್ಚ್ 12ರಂದು ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಉಪಕ್ರಮವು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವವನ್ನು ದೇಶದ ಮೂಲೆ ಮೂಲೆಗಳಿಂದ ಜನರನ್ನು ಒಟ್ಟುಗೂಡಿಸುವ ಮತ್ತು ಆತ್ಮನಿರ್ಭರ ಭಾರತದ ಸ್ಫೂರ್ತಿಯಿಂದ ಪ್ರೇರಿತವಾದ ಭಾರತ 2.0 ಅನ್ನು ಸಾಧಿಸುವ ದೂರದೃಷ್ಟಿಯಿಂದ ಆಚರಿಸಲಾಗುತ್ತಿದೆ. 
ಎಕೆಎಎಂ ಒಂದು ವರ್ಷ ಪೂರ್ಣಗೊಳಿಸುವ ಸಾಂಸ್ಕೃತಿಕ ಆಚರಣೆಗಳು ನವದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆಯಲಿವೆ ಮತ್ತು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ ಮತ್ತು ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ. ಮೀನಾಕ್ಷಿ ಲೇಖಿ ಉಪಸ್ಥಿತಿಯಲ್ಲಿ ನಡೆಯಲಿದೆ.  ಇದೇ ವೇಳೆ ಕಾರ್ಯಕ್ರಮದಲ್ಲಿ ಅಧಿಕಾರದಲ್ಲಿದ್ದ ಮಹಿಳೆಯರಿಗೆ ಮೀಸಲಾದ (ಸಂವಿಧಾನಿಕ ಸಭೆಗೆ ಚುನಾಯಿತರಾದ) ಮೀಸಲಾದ 'ಅಮರ್ ಚಿತ್ರ ಕಥಾ'ದ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು. 
ಆ ನಂತರ, ಆಜಾದಿ ಕಾ ಅಮೃತ್ ಮಹೋತ್ಸವದ ಒಂದು ವರ್ಷದ ಪ್ರಯಾಣವನ್ನು ಬಹು-ಮಾಧ್ಯಮ( ಮಲ್ಟಿ ಮೀಡಿಯಾ) ಮೂಲಕ ಪ್ರಸ್ತುತಪಡಿಸಲಾಗುವುದು. ಆಚರಣೆಯ ಭಾಗವಾಗಿ ಹುತಾತ್ಮರಿಗೆ ಡಿಜಿಟಲ್ ಗೌರವ ನೀಡುವ ‘ಡಿಜಿಟಲ್ ಜ್ಯೋತಿ’ಯನ್ನು ಪ್ರಾರಂಭಿಸಲಾಗುವುದು. ಸಂಜೆ ಕಲಾವಿದರಾದ ಸುನಿಲ್ ಗ್ರೋವರ್, ಧ್ವನಿ ಭಾನುಶಾಲಿ, ಅರ್ಮಾನ್ ಮಲಿಕ್ ಮತ್ತು ಆರ್ ಜೆ  ಮಲಿಷ್ಕಾ ಅವರದೊಂದಿಗೆ ಪ್ರಸಿದ್ಧ ಕವಿ ಮತ್ತು ಪ್ರದರ್ಶಕ ಕುಮಾರ್ ವಿಶ್ವಾಸ್ ಅವರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. 
ನಾನಾ ಸ್ಥಳಗಳಲ್ಲಿ ಆಯೋಜಿಸಲಾದ ಭೌತಿಕ ಮತ್ತು ವರ್ಚುವಲ್ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ದೇಶಾದ್ಯಂತ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ ಮತ್ತು  ಹೆಚ್ಚಿನ ಜನರು ಪಾಲ್ಗೊಂಡಿದ್ದರು. 2021ರ ಮಾರ್ಚ್ 12ರಂದು ಪ್ರಾರಂಭವಾದ ಭಾರತದ ಸ್ವಾತಂತ್ರ್ಯದ 75 ವರ್ಷಗಳ 75 ವಾರಗಳ ಆಚರಣೆಯು 2023ರ ಆಗಸ್ಟ್ 15ರಂದು ಸಮಾಪನಗೊಳ್ಳುತ್ತದೆ’’ 


                    ***                               


(Release ID: 1804805) Visitor Counter : 298