ಉಕ್ಕು ಸಚಿವಾಲಯ
ಕಚ್ಚಾ ವಜ್ರದ ಹರಾಜಿನಲ್ಲಿ ಪ್ರಕಾಶಿಸಿದ ಎನ್ ಎಂಡಿಸಿ
प्रविष्टि तिथि:
10 MAR 2022 12:02PM by PIB Bengaluru
ಉಕ್ಕಿನ ಸಚಿವಾಲಯದಡಿ ಬರುವ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ ದೇಶದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆ (ಸಿಪಿಎಸ್ ಇ) ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ (ಎನ್ ಎಂಡಿಸಿ), ಮಧ್ಯಪ್ರದೇಶ ರಾಜ್ಯದಲ್ಲಿರುವ ತನ್ನ ಪನ್ನಾ ವಜ್ರದ ಗಣಿಗಳಲ್ಲಿ ಉತ್ಪಾದಿಸಲಾದ ಕಚ್ಚಾ ವಜ್ರಗಳ ಮಾರಾಟಕ್ಕಾಗಿ ಇ-ಹರಾಜು ನಡೆಸಿತು. ಇ-ಹರಾಜಿಗೆ ಸೂರತ್, ಮುಂಬೈ ಮತ್ತು ಪನ್ನಾದ ವಜ್ರ ವ್ಯಾಪಾರಿಗಳಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದೆ. 2020ರ ಡಿಸೆಂಬರ್ ಗೂ ಮುನ್ನ ಉತ್ಪಾದಿಸಿದ್ದ ಸುಮಾರು 8337 ಕ್ಯಾರಟ್‌ಗಳ ಒರಟು(ಕಚ್ಚಾ) ವಜ್ರಗಳನ್ನು, ಹರಾಜಿನಲ್ಲಿ ನೀಡಲಾಯಿತು ಮತ್ತು ಸುಮಾರು ಶೇ.100ರಷ್ಟು ವಿಜೇತ ಬಿಡ್‌ಗಳನ್ನು ಸ್ವೀಕರಿಸಲಾಯಿತು.

ಮಜ್ ಗಾವನ್‌ನಲ್ಲಿ ಎನ್ ಎಂಡಿಸಿಯ ವಜ್ರ ಗಣಿಗಾರಿಕೆ ಯೋಜನೆಯಡಿ- ಪನ್ನಾ ದೇಶದ ಏಕೈಕ ಯಾಂತ್ರೀಕೃತ ವಜ್ರದ ಗಣಿಯಾಗಿದೆ. ಯೋಜನೆಯು ಅದಿರು ಸಂಸ್ಕರಣಾ ಘಟಕದ ಸೌಲಭ್ಯಗಳನ್ನು ಹೊಂದಿದ್ದು, ಅದರಲ್ಲಿ ಭಾರಿ ಲೋಹದ ವಸ್ತುಗಳನ್ನು ಬೇರ್ಪಡಿಸುವ ಘಟಕ, ವಜ್ರ ಬೇರ್ಪಡಿಸಲು ಎಕ್ಸ್-ರೇ ಸಾರ್ಟರ್ ಮತ್ತು ಉತ್ಪಾದಿಸಲಾದ ಟೈಲಿಂಗ್‌ಗಳಿಗೆ ವಿಲೇವಾರಿ ವ್ಯವಸ್ಥೆ ಒಳಗೊಂಡಿದೆ.
ಎನ್ ಎಂ ಡಿಸಿ ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಶ್ರೀ ಸುಮಿತ್ ದೇಬ್, “ಎನ್ ಎಂಡಿಸಿ ಈಗ ಆರು ದಶಕಗಳಿಂದ ಗಣಿಗಾರಿಕೆಯ ಕ್ಷೇತ್ರದಲ್ಲಿದೆ ಆಧುನಿಕ ತಂತ್ರಜ್ಞಾನ ಮತ್ತು ಸಾಟಿಯಿಲ್ಲದ ಅನುಭವದೊಂದಿಗೆ, ಕಂಪನಿಯು ಪರಿಸರ ಸುರಕ್ಷತೆಯ ಸಮತೋಲನೆ ಮತ್ತು ಗಣಿಗಳ ಸುತ್ತಲಿನ ಜನರ ರಕ್ಷಣೆಯನ್ನು ರಾಷ್ಟ್ರಕ್ಕೆ ವರ್ಧಿತ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವ ಘಟಕವಾಗಿ ಮಾರ್ಪಟ್ಟಿದೆ. ಸೂರತ್‌ನಲ್ಲಿ ನಡೆಸಲಾದ ವಜ್ರದ ಹರಾಜಿನಲ್ಲಿ ನಾವು ಇತ್ತೀಚಿಗೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ, ಅಲ್ಲಿ ಸುಮಾರು ಶೇ.100ರಷ್ಟು ವಜ್ರ ವ್ಯಾಪಾರಿಗಳಿಂದ ಬಿಡ್‌ಗಳನ್ನು ಸ್ವೀಕರಿಸಲಾಗಿತ್ತು. ಎನ್ ಎಂಡಿಸಿ ಮಧ್ಯಪ್ರದೇಶದ ಪನ್ನಾದಲ್ಲಿ ತನ್ನ ವಜ್ರದ ಗಣಿ ಹೊಂದಿದೆ, ಇದು ನಮ್ಮ ದೇಶದ ಒಟ್ಟು ವಜ್ರ ಸಂಪನ್ಮೂಲದ ಶೇ.90 ರಷ್ಟನ್ನು ಹೊಂದಿರುವ ಭಾರತದ ಏಕೈಕ ರಾಜ್ಯವಾಗಿದೆ. ವರ್ಷಕ್ಕೆ 84,000 ಕ್ಯಾರಟ್‌ಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ರಾಜ್ಯದಲ್ಲಿ ಎನ್ ಎಂಡಿಸಿ ಇರುವಿಕೆ ದೇಶದ ಬೆಳೆಯುತ್ತಿರುವ ಆರ್ಥಿಕತೆಗೆ ಅದರ ಬದ್ಧತೆಯನ್ನು ತೋರಿಸುತ್ತದೆ’’ ಎಂದು ಹೇಳಿದರು.
***
(रिलीज़ आईडी: 1804769)
आगंतुक पटल : 220