ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಂಗೇರಿ ಪ್ರಧಾನಮಂತ್ರಿ ಗೌರವಾನ್ವಿತ ವಿಕ್ಟರ್ ಓರ್ಬನ್ ಅವರೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ದೂರವಾಣಿ ಮಾತುಕತೆ

Posted On: 09 MAR 2022 8:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಗೇರಿ ಪ್ರಧಾನ ಮಂತ್ರಿ ಗೌರವಾನ್ವಿತ ವಿಕ್ಟರ್ ಓರ್ಬನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಪರಿಣಾಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ತಕ್ಷಣವೇ ಅಲ್ಲಿ ಕದನ ವಿರಾಮ ಘೋಷಣೆಯ ಅಗತ್ಯತೆ ಮತ್ತು ರಾಜತಾಂತ್ರಿಕ ಮಾತುಕತೆಗೆ ಮರಳುವ ಅವಶ್ಯಕತೆಯನ್ನು ಖಚಿತಪಡಿಸುವ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಚರ್ಚಿಸಿದರು.

ಉಕ್ರೇನ್ - ಹಂಗೇರಿ ಗಡಿಯ ಮೂಲಕ 6000ಕ್ಕಿಂತ ಹೆಚ್ಚಿನ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟ ಗೌರವಾನ್ವಿತ  ಓರ್ಬನ್ ಮತ್ತು ಹಂಗೇರಿ ಸರ್ಕಾರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಉಕ್ರೇನ್‌ನಿಂದ ಸ್ಥಳಾಂತರವಾದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಓರ್ಬನ್ ತಮ್ಮ ಶುಭಾಶಯಗಳನ್ನು ತಿಳಿಸಿದರು. ಭಾರತೀಯ ವೈದ್ಯ ವಿದ್ಯಾರ್ಥಿಗಳು ಬಯಸಿದಲ್ಲಿ ತಮ್ಮ ಅಧ್ಯಯನ ಮುಂದುವರಿಸಲು ಹಂಗೇರಿಯನ್ನು ಆಯ್ಕೆ ಮಾಡಬಹುದು ಎಂದು ಅವರು ಹೇಳಿದರು. ಈ ಉದಾರ ಕೊಡುಗೆಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಕ್ರೇನ್-ರಷ್ಯಾ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲು ನಿರಂತರ ಸಂಪರ್ಕ ಸಾಧಿಸಲು ಮತ್ತು ಸಂಘರ್ಷಕ್ಕೆ ಅಂತ್ಯ ಹಾಡಲು ಎರಡೂ ದೇಶಗಳು ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಮತ್ತು ಉತ್ತೇಜನ ನೀಡಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

***


(Release ID: 1804728) Visitor Counter : 211