ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ ಅಭಿಯಾನವನ್ನು ಆಯೋಜಿಸಿದ `ಇಪಿಎಫ್‌ಒʼ ಮತ್ತು ʻಇಎಸ್‌ಐಸಿʼ ಸಂಸ್ಥೆಗಳನ್ನು ಶ್ಲಾಘಿಸಿದ ಕೇಂದ್ರ ಕಾರ್ಮಿಕ ಸಚಿವ ಶ್ರೀ ಭೂಪೇಂದ್ರ ಯಾದವ್


ಭಾರತ ಸರಕಾರವು ಕೆಲಸದ ಸ್ಥಳದಲ್ಲಿ ಮತ್ತು ಕೆಲಸದ ಆಯ್ಕೆಯಲ್ಲಿ ಸಮಾನತೆ ಮಾತ್ರವಲ್ಲದೆ, ಸರಿಯಾದ ಕೆಲಸದ ಆಯ್ಕೆ ಹಾಗೂ ಸುರಕ್ಷಿತ ಆರೋಗ್ಯಕ್ಕೂ ಸಮಾನ ಸ್ವಾತಂತ್ರ್ಯದ ಖಾತರಿ ಒದಗಿಸಲು ಬದ್ಧವಾಗಿದೆ: ಶ್ರೀ ಯಾದವ್

ಕಾರ್ಮಿಕ ಸಚಿವಾಲಯವು ಮಹಿಳೆಯರ ಎಲ್ಲಾ ʻಇಪಿಎಫ್‌ಒʼ ಮತ್ತು ʻಇಎಸ್‌ಐಸಿʼ ಕ್ಲೇಮ್‌ಗಳನ್ನು ಇತ್ಯರ್ಥ ಮಾಡುವ ಮೂಲಕ ಹಾಗೂ ʻಮಹಿಳಾ ಸಬಲೀಕರಣ ಡೆಸ್ಕ್ʼ ಸ್ಥಾಪನೆ ಮೂಲಕ ಮಹಿಳಾ ದಿನವನ್ನು ಆಚರಿಸಿದೆ

Posted On: 09 MAR 2022 11:09AM by PIB Bengaluru

`ಆಜಾದಿ ಕಾ ಅಮೃತ್ ಮಹೋತ್ಸವಆಚರಣೆಯ ಹೆಗ್ಗುರುತಿನ ವಾರದ ಸಂದರ್ಭದಲ್ಲೇ ಬಂದಿರುವ ʻಅಂತಾರಾಷ್ಟ್ರೀಯ ಮಹಿಳಾ ದಿನʼದಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಮಿಕ ಸಚಿವಾಲಯದ ಎರಡು ಪ್ರಮುಖ ಘಟಕಗಳಾದ ʻಇಪಿಎಫ್ಒʼ ಮತ್ತು ʻಇಎಸ್ಐಸಿʼಗಳು ʻಡಿಜಿಎಂಎಸ್ʼ ಜೊತೆ ಸಹಯೋಗದಲ್ಲಿ ಹಲವು ಮಹಿಳಾ ಸ್ನೇಹಿ ಉಪಕ್ರಮಗಳ ಸರಣಿಯನ್ನು ಹಮ್ಮಿಕೊಂಡಿವೆ. ಮಹಿಳೆಯರ ಎಲ್ಲಾ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲು ಕ್ರಮ ಮತ್ತು ಹಾಗೂ ಮಹಿಳಾ ಪಾಲುದಾರರಿಗೆ ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸಲು ಮೊದಲ ಬಾರಿಗೆ ʻಮಹಿಳಾ ಸಬಲೀಕರಣ ಡೆಸ್ಕ್ʼ ಸ್ಥಾಪನೆಯು ಇಂತಹ ಉಪಕ್ರಮಗಳಲ್ಲಿ ಸೇರಿವೆ.

ʻಇಪಿಎಫ್‌ಒʼ, ʻಇಎಸ್ಐಸಿʼ ಮತ್ತು ʻಡಿಜಿಎಂಎಸ್ʼ ಜಂಟಿಯಾಗಿ ಇಲ್ಲಿ "ಮಹಿಳಾ ಕಾರ್ಯಪಡೆಯ ಮೌಲ್ಯ ಮತ್ತು ಸಬಲೀಕರಣ" ಎಂಬ ವಿಷಯದ ಮೇಲೆ ಕಾರ್ಯಕ್ರಮ ಆಯೋಜಿಸಿದ್ದವು. ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಭೂಪೇಂದ್ರ ಯಾದವ್, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವ ಶ್ರೀ ರಾಮೇಶ್ವರ್ ತೇಲಿಕಾರ್ಮಿಕ ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುನಿಲ್ ಭರತ್‌ವಾಲ್‌, ಕೇಂದ್ರ ಭವಿಷ್ಯ ನಿಧಿ ಆಯುಕ್ತರಾದ ಶ್ರೀಮತಿ ನೀಲಂ ಶಮಿ ರಾವ್, ಕೇಂದ್ರ ಭವಿಷ್ಯ ನಿಧಿ ಆಯುಕ್ತ  ಶ್ರೀ ಎಂ.ಎಸ್. ಭಾಟಿಯಾ; .ಎಸ್..ಸಿ ಮಹಾ ನಿರ್ದೇಶಕರು ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಭೂಪೇಂದ್ರ ಯಾದವ್ ಅವರು, ಸರಕಾರದ ನಾಗರಿಕ ಕೇಂದ್ರಿತ ಮುಖಗಳಾಗಿರುವ ಕಾರ್ಮಿಕ ಸಚಿವಾಲಯದ ಪ್ರಮುಖ ಘಟಕಗಳು - ʻಇಪಿಎಫ್‌ಒ ಮತ್ತು ʻಇಎಸ್‌ಐಸಿʼ ಕೈಗೊಂಡ ವಿಶಿಷ್ಟ ಉಪಕ್ರಮಗಳನ್ನು ಶ್ಲಾಘಿಸಿದರು. "ಇಪಿಎಫ್‌ಒʼ ವಿಶ್ವಾಸವನ್ನು  ಸಂಕೇತಿಸಿದರೆ, ʻಇಎಸ್‌ಐಸಿʼ ಸೇವೆಗಳ ಮೂಲಕ ಕೊಡುಗೆ ನೀಡುತ್ತಿದೆ," ಎಂದು ಅವರು ಹೇಳಿದರು. ʻಇಪಿಎಫ್‌ಒ ಮತ್ತು ʻಇಎಸ್‌ಐಸಿʼಯಲ್ಲಿ ಎಲ್ಲಾ ಮಹಿಳೆಯರ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದು ಸೇರಿದಂತೆ ಮಹಿಳಾ ದಿನವನ್ನು ಆಚರಿಸಲು ಯೋಜಿಸಲಾದ ವಿಶಿಷ್ಟ ಸೇವೆಗಳನ್ನು ಅವರು ಶ್ಲಾಘಿಸಿದರು. ಭಾರತ ಸರ್ಕಾರವು ಕೆಲಸದ ಸ್ಥಳದಲ್ಲಿ ಮತ್ತು ಕೆಲಸದ ಆಯ್ಕೆಯಲ್ಲಿ ಸಮಾನತೆ ಕಾಯ್ದುಕೊಳ್ಳುವುದು ಮಾತ್ರವಲ್ಲದೆ, ಸರಿಯಾದ ಕೆಲಸದ ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ಆರೋಗ್ಯವನ್ನು ಭದ್ರಪಡಿಸಲು ಸಮಾನ ಸ್ವಾತಂತ್ರ್ಯ ಕಲ್ಪಿಸುವಲ್ಲಿ ಬದ್ಧವಾಗಿದೆ ಎಂದು ಸಚಿವರು ಹೇಳಿದರು. ಕಾರ್ಮಿಕ ಕಾರ್ಯದರ್ಶಿ ಸುನಿಲ್ ಭರತ್‌ವಾಲ್‌ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ತೊಡಗಿಸಿಕೊಳ್ಳುವಿಕೆಯು ಅವರ ಜನಸಂಖ್ಯೆಗೆ ಅನುಗುಣವಾಗಿರುವಂತೆ ಖಚಿತಪಡಿಸಿಕೊಳ್ಳುವುದೇ ಸರ್ಕಾರದ ದೊಡ್ಡ ಗುರಿಯಾಗಿದೆ ಎಂದು ಹೇಳಿದರು.

ʻಆಜಾದಿ ಕಾ ಅಮೃತ್ ಉತ್ಸವʼ ಭಾಗವಾಗಿ, ʻಇಪಿಎಫ್‌ಒʼ 75 ಲಕ್ಷ -ನಾಮನಿರ್ದೇಶನಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿತ್ತು. ಅದರಲ್ಲೂ ವಿಶೇಷವಾಗಿ ಮಹಿಳಾ ದಿನದಂದು, ಮಹಿಳಾ ನೌಕರರನ್ನು ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸುವಂತೆ ಉತ್ತೇಜಿಸುವ ಅಭಿಯಾನವನ್ನು ಕೈಗೊಂಡಿತ್ತು. ಸಮಯದಲ್ಲಿ 92 ಲಕ್ಷಕ್ಕೂ ಹೆಚ್ಚು -ನಾಮನಿರ್ದೇಶನಗಳ ಮೂಲಕ ʻಇಪಿಎಫ್‌ಒʼ ತನ್ನ ಗುರಿಯನ್ನು ಸಾಧಿಸಿದೆ. ನಾಮನಿರ್ದೇಶನ ಮಾಡಿದ ಸದಸ್ಯರಲ್ಲಿ 70 ಲಕ್ಷ ಜನರು ಮಹಿಳೆಯರನ್ನು ತಮ್ಮ ನಾಮನಿರ್ದೇಶಿತರನ್ನಾಗಿ ಆಯ್ಕೆ ಮಾಡುವ ಮೂಲಕ  ತಮ್ಮ ಸಂಗಾತಿಗಳು, ಹೆಣ್ಣುಮಕ್ಕಳು, ತಾಯಂದಿರನ್ನು ಸಶಕ್ತರನ್ನಾಗಿ ಮಾಡಿದ್ದಾರೆ.

ಉದ್ಯೋಗದಾತ ಸಂಸ್ಥೆಗಳ ಜೊತೆ ಕೈಜೋಡಿಸಿ ವಿಶೇಷ ಸಪ್ತಾಹ ನಡೆಸುವ ಮೂಲಕ ಮಹಿಳಾ ಸದಸ್ಯರ -ನಾಮನಿರ್ದೇಶನಗಳನ್ನು ವೇಗಗೊಳಿಸಲು ಪ್ರಯತ್ನಿಸಲಾಯಿತು. ಇದರ ಭಾಗವಾಗಿ ʻಇಪಿಎಫ್‌ಒʼ ಕ್ಷೇತ್ರ ಕಚೇರಿಗಳಿಂದ ವಿಶೇಷ ಶಿಬಿರಗಳನ್ನು ನಡೆಸಿ, ಮಹಿಳಾ ಸದಸ್ಯರನ್ನು ತಲುಪಲು ಪ್ರಯತ್ನಿಸಲಾಯಿತು. ಅಭಿಯಾನಕ್ಕೆ ಸ್ಪಂದಿಸಿರುವ 10,415 ಸಂಸ್ಥೆಗಳು ತಮ್ಮ ಮಹಿಳಾ ಉದ್ಯೋಗಿಗಳು 100% -ನಾಮನಿರ್ದೇಶನಗಳನ್ನು ಪೂರ್ಣಗೊಳಿಸಿರುವುದಾಗಿ ವರದಿ ಮಾಡಿವೆ. ದೇಶದ ಅಗ್ರ 100ಸಂಸ್ಥೆಗಳಿಂದ ಒಟ್ಟು 7 ಲಕ್ಷ -ನಾಮನಿರ್ದೇಶನಗಳನ್ನು ಮಹಿಳಾ ಸದಸ್ಯರು ಸಲ್ಲಿಸಿದ್ದಾರೆ.

ಚೆನ್ನೈ ವಲಯವು ಗರಿಷ್ಠ ಸಂಖ್ಯೆಯ ಕ್ಲೇಮುಗಳನ್ನು ಸ್ವೀಕರಿಸಿದೆ ಮತ್ತು ಪ್ರಕ್ರಿಯೆಗೊಳಪಡಿಸಿದ್ದು, ಕೊಯಮತ್ತೂರು ʻಇಪಿಎಫ್‌ಒʼ ಪ್ರಾದೇಶಿಕ ಕಚೇರಿಯೂ ಗರಿಷ್ಠ ಕ್ಲೇಮುಗಳನ್ನು ಇತ್ಯರ್ಥಗೊಳಿಸಿದೆ7 ಲಕ್ಷ -ನಾಮನಿರ್ದೇಶನಗಳಲ್ಲಿ ತೆಲಂಗಾಣ ವಲಯದ ಪಾಲು 44% ರಷ್ಟಿದೆ. ತೆಲಂಗಾಣ ವಲಯಕ್ಕೆ ಸೇರಿದ ಹಾಗೂ ಪ್ರಧಾನವಾಗಿ ಬೀಡಿ ತಯಾರಿಕಾ ಸಂಸ್ಥೆಗಳ ನೌಕರರನ್ನು ಸದಸ್ಯರಾಗಿ ಹೊಂದಿರುವ ನಿಜಾಮಾಬಾದ್‌ನ ʻಇಪಿಎಫ್‌ಒʼ ಕಚೇರಿಯು ಎಲ್ಲಾ -ನಾಮನಿರ್ದೇಶನಗಳಲ್ಲಿ 39% ರಷ್ಟು ಪಾಲನ್ನು ಹೊಂದಿದೆ. ಕಚೇರಿಗಳಿಗೆ ವಿಶೇಷ ಮಾನ್ಯತೆ ಪ್ರಶಸ್ತಿ ದೊರೆತಿದೆ.

ಮತ್ತೊಂದು ಅಭಿಯಾನದಲ್ಲಿ, 05 ಮಾರ್ಚ್ 2022ರವರೆಗಿನ ಎಲ್ಲಾ ಮಹಿಳೆಯರ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಉಪಕ್ರಮದಡಿ  ಒಂದು ವಾರದಲ್ಲಿ ಒಟ್ಟು 638 ಕೋಟಿ ರೂ.ಗಳ 144069 ಮಹಿಳೆಯರು ಕ್ಲೇಮ್ ಗಳನ್ನು ಇತ್ಯರ್ಥಪಡಿಸಲಾಗಿದೆ. ಕಳೆದ ವರ್ಷ 2021ರಲ್ಲಿ, ʻಇಪಿಎಫ್ಒʼ ತನ್ನ ದೆಹಲಿ ಕಚೇರಿಗಳಲ್ಲಿ ತನ್ನ ಮಹಿಳಾ ಚಂದಾದಾರರ ಎಲ್ಲಾ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವ ಅಭಿಯಾನ ನಡೆಸಿತ್ತು. 2022 ಮಹಿಳಾ ದಿನವನ್ನು ಆದ್ಯತಾ ಸೇವೆಗಳ ಸಬಲೀಕರಣ ಪ್ರದರ್ಶನದ ರೂಪದಲ್ಲಿ ಸಾಂಕೇತಿಕವಾಗಿ ಆಚರಿಸುವ ನಿಟ್ಟಿನಲ್ಲಿ ʻಇಪಿಎಫ್‌ಒʼ ಈಗ ಭಾರತದ ಎಲ್ಲಾ ಕಚೇರಿಗಳಲ್ಲಿ ಅಭಿಯಾನವನ್ನು ಪುನರಾವರ್ತಿಸಿದೆ.

ಸಣ್ಣ, ಮಧ್ಯಮ ಮತ್ತು ದೊಡ್ಡ - ಎಲ್ಲಾ ಮೂರು ವಿಭಾಗಗಳಲ್ಲಿ ಸಂಸ್ಥೆಗಳಿಂದ ಪ್ರತ್ಯೇಕವಾಗಿ ಸಲ್ಲಿಸಲಾದ ಒಟ್ಟು -ನಾಮನಿರ್ದೇಶನಗಳಲ್ಲಿ ಅಗ್ರಸ್ಥಾನ ತಲುಪಲು ʻಇಪಿಎಫ್‌ಒʼ ನೋಯ್ಡಾ ಪ್ರಮುಖ ಪಾತ್ರ ವಹಿಸಿದ್ದು, ಇದಕ್ಕಾಗಿ ಪ್ರಶಸ್ತಿಗೆ ಭಾಜನವಾಗಿದೆ.  ಸಂಸ್ಥೆಯ ಚಂದಾದಾರರ ಸಂಖ್ಯೆಯು 100-200 ನಡುವೆ ಇದ್ದರೆ ಅದನ್ನು ಸಣ್ಣ ವರ್ಗವೆಂದು ಪರಿಗಣಿಸಲಾಗುತ್ತದೆ. ಸಂಖ್ಯೆ 201-200 ನಡುವೆ ಇದ್ದರೆ ಅದನ್ನು ಮಧ್ಯಮ ವರ್ಗವೆಂದು ಹಾಗೂ 500 ಅಥವಾ ಅದಕ್ಕಿಂತ ಹೆಚ್ಚು ಚಂದಾದಾರರನ್ನು ಹೊಂದಿರುವ ಸಂಸ್ಥೆಗಳನ್ನು ದೊಡ್ಡ ವರ್ಗವೆಂದು ವ್ಯಾಖ್ಯಾನಿಸಲಾಗುತ್ತದೆ. ದೆಹಲಿಯ ʻಮ್ಯಾನ್ ಪವರ್ ಗ್ರೂಪ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ʼ ಮತ್ತು ನೋಯ್ಡಾದ ʻಮೆಸ್ಸರ್ಸ್‌ ಉಫ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ʼ ಎಂಬ ಎರಡು ಸಂಸ್ಥೆಗಳು ಗರಿಷ್ಠ ಸಂಖ್ಯೆಯ -ನಾಮನಿರ್ದೇಶನಗಳನ್ನು ಸಲ್ಲಿಸಿದ ದೇಶದ ಅಗ್ರ 75 ಸಂಸ್ಥೆಗಳಲ್ಲಿ ಸೇರಿದ್ದು, ಎಲ್ಲಾ 75 ಸಂಸ್ಥೆಗಳ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿವೆ. ಅಂತಹ ಎಲ್ಲಾ 75 ಪ್ರಮುಖ ಸಂಸ್ಥೆಗಳು ವಿಶೇಷವಾಗಿ ಉಲ್ಲೇಖಾರ್ಹವಾಗಿವೆ.

ʻಇಪಿಎಫ್‌ಒʼ ಎಲ್ಲಾ ಮಹಿಳಾ ಪಾಲುದಾರರ ಸೇವಾ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ದೆಹಲಿ ಮತ್ತು ಮುಂಬೈನಲ್ಲಿ ಮೊದಲ ʻಮಹಿಳಾ ಸಬಲೀಕರಣ ಡೆಸ್ಕ್ʼಗೆ ಇಂದು ಸಚಿವರು ವರ್ಚ್ಯುಯಲ್‌ ರೂಪದಲ್ಲಿ ಚಾಲನೆ ನೀಡಿದರು.

ಮೂವರು ʻಇಎಸ್‌ಐಸಿʼ ಕೊರೊನಾ ಯೋಧರಿಗೆ ಸಚಿವರು ಮಾನ್ಯತೆ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದರು. ಪ್ರಶಸ್ತಿ ಪಡೆದವರೆಂದರೆ, ಆಂಧ್ರಪ್ರದೇಶದ ಡಾ. ಜಯಶ್ರೀ ಶಿವಕುಮಾರ್ ಭಲೆ, ಕೆ.ಕೆ ನಗರದ ವೈದ್ಯಕೀಯ ಅಧಿಕಾರಿ ಶ್ರೀಮತಿ ಉಮಾ ಗೋಪಿನಾಥ್ ಮತ್ತು ʻಇಎಸ್‌ಐಸಿʼ ಅರೆವೈದ್ಯಕೀಯ ಸಿಬ್ಬಂದಿ ಶ್ರೀಮತಿ ಮೀನಾಕ್ಷಿ. ಇದಲ್ಲದೆ, ಭಾರತದಲ್ಲಿ ಮೊದಲ ಬಾರಿಗೆ ಮಹಿಳಾ ಗಣಿ ಉದ್ಯೋಗಿಗಳಾಗಿ ನೇಮಕಗೊಂಡ ನಾಲ್ವರು ಮಹಿಳಾ ಗಣಿ-ಕಾರ್ಮಿಕರನ್ನು ಸಚಿವರು ಸನ್ಮಾನಿಸಿದರು. ʻಓಪನ್ ಕಾಸ್ಟ್ʼ ಗಣಿಗಳ ಅರುಣಾ ನಾರಾಯಣ ಸಂಕತಲಾ ಮತ್ತು ಬಿಪಾಶಾ ಬಿಸ್ವಸ್ ಹಾಗೂ ಭೂಗತ ಗಣಿಗಳ ನೌಕರರಾದ ಯೋಗೇಶ್ವರಿ ರಾಣೆ, ಸಂಧ್ಯಾ ರಸಕಟ್ಲಾ ಸನ್ಮಾನಿತರು.

***


(Release ID: 1804313) Visitor Counter : 231