ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
“ನಾವೀನ್ಯತೆ ಮೂಲಕ ಭಾರತದ ಪರಿಕಲ್ಪನೆ@2047” ಕುರಿತ 3 ದಿನದ ವಿಚಾರ ಸಂಕಿರಣ ಉದ್ಘಾಟಿಸಲಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
Posted On:
06 MAR 2022 4:55PM by PIB Bengaluru
“ನಾವೀನ್ಯತೆ ಮೂಲಕ ಭಾರತದ ಪರಿಕಲ್ಪನೆ@2047” ಕುರಿತ 3 ದಿನದ ವಿಚಾರ ಸಂಕಿರಣ 2022 ರ ಮಾರ್ಚ್ 07-09 ರ ವರೆಗೆ ಚೆನ್ನೈನಲ್ಲಿ ನಡೆಯಲಿದೆ. ಮದ್ರಾಸ್ ನ ಐಐಟಿ ಸಹಯೋಗದಲ್ಲಿ ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆ [ಡಿ.ಎ.ಆರ್.ಪಿ.ಜಿ] ಸಚಿವಾಲಯ ಈ ಕಾರ್ಯಕ್ರಮ ಆಯೋಜಿಸಿದೆ. ಚೆನ್ನೈನ ಐಐಟಿಎಂ ಸಂಶೋಧನಾ ಪಾರ್ಕ್ ನಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ [ಸ್ವಾತಂತ್ರ್ಯ ಜವಾಬ್ದಾರಿ], ಭೂ ವಿಜ್ಞಾನ ಖಾತೆ [ಸ್ವಾತಂತ್ರ್ಯ ಜವಾಬ್ದಾರಿ], ಪ್ರಧಾನಮಂತ್ರಿ ಕಾರ್ಯಾಲಯ, ಸಾರ್ವಜನಿಕ ಕುಂದು ಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ 2022 ರ ಮಾರ್ಚ್ 8 ರಂದು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ.
ಐಐಟಿ ಮದ್ರಾಸ್ ನ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ವಿಚಾರ ಸಂಕಿರಣದಲ್ಲಿ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. ಭಾರತ ಸರ್ಕಾರದ ಡಿ.ಎ.ಆರ್ ಅಂಡ್ ಪಿಜಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್ ಅವರು ಸಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಭಾರತದಲ್ಲಿ ಇ-ಆಡಳಿತದ ಉಪಕ್ರಮಗಳು ಕುರಿತು ಡಿ.ಎ.ಆರ್ ಅಂಡ್ ಪಿ.ಜಿ ಸಚಿವಾಲಯ ಸಿದ್ಧಪಡಿಸಿರುವ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಐಐಟಿ ಮದ್ರಾಸ್ ನ ಹಿರಿಯ ಪ್ರಾಧ್ಯಾಪಕ ಪ್ರೊಫೆಸರ್ ಅಶೋಕ್ ಜುಂಜ್ಹುನ್ ವಾಲ ಅವರು ವಂದನಾರ್ಪಣೆ ಸಲ್ಲಿಸಲಿದ್ದಾರೆ.
ಆಧುನಿಕ ತಲೆಮಾರಿನ ಡಿಜಿಟಲ್ ತಂತ್ರಜ್ಞಾನದ ಸುಧಾರಣೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸರ್ಕಾರ ಮತ್ತು ನಾಗರಿಕರನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನವನ್ನು ಈ ವಿಚಾರ ಸಂಕಿರಣ ಮಾಡಲಿದೆ ಮತ್ತು “ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ” ಎಂಬ ನೀತಿ ನಿರೂಪಣೆ ಕುರಿತಾದ ನಾವಿನ್ಯತೆಯಡಿ ತಂತ್ರಜ್ಞಾನದ ಮರು ಅವಲೋಕನ, ಸಾರ್ವತ್ರಿಕವಾಗಿ ಇ-ಸೇವೆಗಳು ಕೈಗೆಟುವಂತೆ ಮಾಡುವ, ಜಿಲ್ಲಾ ಹಂತದಲ್ಲಿ ಡಿಜಿಟಲ್ ಕ್ರಮಗಳು ಮತ್ತು ಆಧುನಿತ ತಂತ್ರಜ್ಞಾನದ ಅಳವಡಿಕೆ ಹಾಗೂ ಐಸಿ’ಟಿ ಬಳಕೆಯಲ್ಲಿ ನಿರ್ವಹಣೆಯಂತಹ ನಾವಿನ್ಯತೆಯ ನೀತಿ ನಿರೂಪಣೆಗಳನ್ನು ರೂಪಿಸುವ ಉದ್ದೇಶವನ್ನು ವಿಚಾರ ಸಂಕಿರಣ ಒಳಗೊಂಡಿದೆ.
ಭಾರತ ಸರ್ಕಾರ ದೀರ್ಘಕಾಲೀನ ಗುರಿಗಳನ್ನು ಗುರುತಿಸಲು “ಭಾರತದ ಪರಿಕಲ್ಪನೆ@2047” ಎಂಬ ಮುನ್ನೋಟ ಸಿದ್ಧಪಡಿಸುತ್ತಿದೆ ಮತ್ತು ಕಾಲಮಿತಿಯಲ್ಲಿ ಈ ದಶಕಕ್ಕೆ ಅನುಗುಣವಾದ ಅಲ್ಪಾವಧಿಯ ಮೈಲಿಗಲ್ಲು ತಲುಪಲು ಬೇಕಾದ ದೃಷ್ಟಿಕೋನದ ಬಗ್ಗೆಯೂ ಚರ್ಚಿಸಲಿದೆ. ಪ್ರಸ್ತುತ ಸಾಂಸ್ಥಿಕ ಚೌಕಟ್ಟಿನಿಂದ ನಿರ್ಬಂಧಿತವಾಗದ ರೀತಿಯಲ್ಲಿ ಈ ದೃಷ್ಟಿಕೋನವನ್ನು ರೂಪಿಸಲಾಗುತ್ತಿದೆ ಮತ್ತು ಯೋಜಿತ ರೀತಿಯಲ್ಲಿ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸೂಕ್ತ ಮತ್ತು ರಚನಾತ್ಮಕ ಸುಧಾರಣೆಗಳನ್ನು ಸೂಚಿಸಲಾಗುತ್ತಿದೆ. ನ್ಯೂಕ್ಲಿಯಸ್ ಮತ್ತು ಘಟಕಗಳ ತಂಡಗಳಿಗೆ ಸುಮಾರು 200 ಮಂದಿಯನ್ನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ, ಇದರಲ್ಲಿ ಒಬ್ಬರು ಐಎಎಸ್ ಅಧಿಕಾರಿ, ಯುವ ಅಧ್ಯಾಪಕ ಸದಸ್ಯರು ಮತ್ತು ಯುವ ಉದ್ಯಮಿಗಳು ಒಟ್ಟಿಗೆ ಕುಳಿತು ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ ಹತ್ತು ಘಟಕಗಳನ್ನು ರಚಿಸಲಾಗಿದ್ದು, ನ್ಯೂಕ್ಲಿಯಸ್ ತಂಡಗಳಲ್ಲಿ ನಾಲ್ವರು ಸದಸ್ಯರಿರಲಿದ್ದಾರೆ. ವಿಚಾರ ಸಂಕಿರಣದಲ್ಲಿ ಮೂಲ ಚಿಂತಕರ ಚಾವಡಿಯಂತೆ ಚರ್ಚೆ ನಡೆಸಲಾಗುತ್ತದೆ. ಮುಂದಿನ 20 ವರ್ಷಗಳಲ್ಲಿ ಭಾರತವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎನ್ನುವ ಕುರಿತು ಲೆಕ್ಕಾಚಾರ ಮಾಡಲಾಗುತ್ತದೆ.
ಪ್ರತಿಯೊಂದು ತಂಡಗಳಿಗೂ ಮೂಲ ಸೌಕರ್ಯ, ಇಂಧನ, ನೀರು, ಕೃಷಿ, ಶಿಕ್ಷಣ, ಆರೋಗ್ಯ ರಕ್ಷಣೆ, ನಗರ ವಸತಿ ಮತ್ತಿತರ ವಲಯಗಳ ಕುರಿತು ಕುರಿತು ಚರ್ಚಿಸಿ, ಭಾರತ ಎದುರಿಸಲಿರುವ ಸಮಸ್ಯೆಗಳ ನಿವಾರಣೆ ಮತ್ತು ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಗಣನೀಯ ಪ್ರಗತಿಗೆ ಒತ್ತು ನೀಡುವ ಕುರಿತು ಮಾಹಿತಿ ನೀಡುವಂತೆ ಸೂಚಿಸಲಾಗಿದೆ. “ಡಿಜಿಟಲ್ ಆಡಳಿತದಲ್ಲಿ ನಾವಿನ್ಯತೆ” ಎಂಬುದು ಒಟ್ಟಾರೆ ವಿಚಾರ ಸಂಕಿರಣದ ತಿರುಳಾಗಿದೆ.
***
(Release ID: 1803432)
Visitor Counter : 285