ನಾಗರೀಕ ವಿಮಾನಯಾನ ಸಚಿವಾಲಯ
azadi ka amrit mahotsav

ಉಕ್ರೇನ್‌ನ ನೆರೆಯ ರಾಷ್ಟ್ರಗಳಿಂದ ವಿಶೇಷ ವಿಮಾನಗಳ ಮೂಲಕ 2100 ಕ್ಕೂ ಹೆಚ್ಚು ಭಾರತೀಯರನ್ನು ಇಂದು ಕರೆತರಲಾಗಿದೆ


ವಿಶೇಷ ವಿಮಾನಗಳ ಮೂಲಕ ಇದುವರೆಗೆ 15 ಸಾವಿರದ 900ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ

Posted On: 06 MAR 2022 3:57PM by PIB Bengaluru

ಭಾರತೀಯ ನಾಗರಿಕರನ್ನು ರಕ್ಷಿಸಲು ಕಾರ್ಯರೂಪಕ್ಕೆ ತರಲಾಗಿರುವ 'ಆಪರೇಷನ್ ಗಂಗಾ' ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳ ಮೂಲಕ 2135 ಭಾರತೀಯರನ್ನು ಇಂದು ವಾಪಸ್ ಕರೆತರಲಾಗಿದೆ. ಇದರೊಂದಿಗೆ, 2022 ಫೆಬ್ರವರಿ 22 ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ 15 ಸಾವಿರದ 900ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲಾಗಿದೆ. 66 ವಿಶೇಷ ನಾಗರಿಕ ವಿಮಾನಗಳ ಮೂಲಕ ತಾಯ್ನಾಡಿಗೆ ಕರೆತಂದ ಭಾರತೀಯರ ಸಂಖ್ಯೆ 13,852 ಕ್ಕೆ ಏರಿದೆ. ಇಲ್ಲಿಯವರೆಗೆ, IAF(ಭಾರತೀಯ ವಾಯು ಪಡೆ ) 10 ವಿಮಾನಗಳನ್ನು ಇದಕ್ಕಾಗಿ ಹಾರಿಸಿದೆ. ಆಪರೇಷನ್ ಗಂಗಾ ಭಾಗವಾಗಿ ಈ ದೇಶಗಳಿಗೆ (ಯುದ್ಧ ಪೀಡಿತ) 26 ಟನ್ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುವಾಗ, 2056 ಪ್ರಯಾಣಿಕರನ್ನು ವಾಪಸ್ ಕರೆತರಲಾಗಿದೆ.

ಇಂದು 9 ವಿಶೇಷ ನಾಗರಿಕ ವಿಮಾನಗಳು ದೆಹಲಿಗೆ ಬಂದಿಳಿದವು ಮತ್ತು 2 ಮುಂಬೈ ತಲುಪಿದವು. ಬುಡಾಪೆಸ್ಟ್‌ನಿಂದ 6 ವಿಮಾನಗಳು, ಬುಕಾರೆಸ್ಟ್‌ನಿಂದ 2, ರ್ಜೆಸ್ಜೋವ್‌ನಿಂದ 2 ಮತ್ತು ಕೊಸಿಸ್‌ನಿಂದ 1 ವಿಮಾನಗಳು ಬಂದಿವೆ.

ನಾಳೆ, ಬುಡಾಪೆಸ್ಟ್ (5), ಸುಸೇವಾ (2) ಮತ್ತು ಬುಕಾರೆಸ್ಟ್ (1) ನಿಂದ 8 ವಿಶೇಷ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು 1500 ಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ಕರೆತರಲಿವೆ.

***


(Release ID: 1803381) Visitor Counter : 215