ಗಣಿ ಸಚಿವಾಲಯ
ಖನಿಜ ಸಂಪತ್ತು ವೃದ್ಧಿಗೆ ಗಮನಹರಿಸಲು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಪ್ರತಿಜ್ಞೆ
172ನೇ ಸಂಸ್ಥಾಪನಾ ದಿನ ಆಚರಣೆ
Posted On:
05 MAR 2022 1:29PM by PIB Bengaluru
ಭಾರತದ ಪ್ರಧಾನ ಭೂವೈಜ್ಞಾನಿಕ ಸಂಸ್ಥೆಯಾದ ಜಿಯೋಲಾಜಿಕಲ್ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ತನ್ನ 172ನೇ ಸಂಸ್ಥಾಪನಾ ದಿನವನ್ನು ಎಲ್ಲಾ ಕಚೇರಿಗಳಲ್ಲಿ ಅತ್ಯುತ್ಸಾಹದಿಂದ ಆಚರಿಸಿತು. ಕೋಲ್ಕತ್ತಾದ ಜಿಎಸ್‌ಐನ ಕೇಂದ್ರ ಕಛೇರಿಯಲ್ಲಿ ನಿನ್ನೆ ನಡೆದ ಪ್ರಧಾನ ಕಾರ್ಯಕ್ರಮವನ್ನು ಅಲ್ಲಿನ ಮಹಾನಿರ್ದೇಶಕರಾದ ಶ್ರೀ ರಾಜೇಂದ್ರ ಸಿಂಗ್ ಗರ್ಖಾಲ್ ಉದ್ಘಾಟಿಸಿದರು.
ಶ್ರೀ ಆರ್.ಎಸ್.ಗರ್ಖಾಲ್, ಜಿಎಸ್ ಐ ಕಳೆದ 172 ವರ್ಷಗಳಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ಬಲವಾಗಿ ಪ್ರತಿಪಾದಿಸಿದರು ಮತ್ತು ಸಂಸ್ಥೆಯು ತನ್ನ ಐದು ಮಿಷನ್‌ಗಳಡಿಯಲ್ಲಿ ಕೈಗೊಂಡಿರುವ ವಿವಿಧ ಉಪಕ್ರಮಗಳ ಮೂಲಕ ಅದನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಖನಿಜ ನಿಕ್ಷೇಪಗಳನ್ನು ಗುರುತಿಸುವಲ್ಲಿ ಮತ್ತು ರಾಷ್ಟ್ರದ ಹೇರಳ ಖನಿಜ ಸಂಪನ್ಮೂಲಗಳನ್ನು ಹೆಚ್ಚಿಸುವಲ್ಲಿ ಜಿಎಸ್‌ಐ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು. ಇತ್ತೀಚೆಗೆ ಜಿಎಸ್ ಐ, 150 ಜಿ2 ಮತ್ತು ಜಿ3 ಮಿನರಲ್ ನಿಕ್ಷೇಪಗಳು ಹಾಗೂ 152 ಜಿ4 ಮಿನರಲ್ ನಿಕ್ಷೇಪಗಳನ್ನು ನಾನಾ ರಾಜ್ಯ ಸರ್ಕಾರಗಳಿಗೆ ಹರಾಜು ಮಾಡಲು ಹಸ್ತಾಂತರ ಮಾಡಿದೆ ಎಂದು ಶ್ರೀ ಗರ್ಖಾಲ್ ಪ್ರಮುಖವಾಗಿ ಪ್ರಸ್ತಾಪಿಸಿದರು. ಖನಿಜ ವಲಯದಲ್ಲಿ ರಾಷ್ಟ್ರವನ್ನು ಸ್ವಾವಲಂಬಿಯನ್ನಾಗಿ ಮಾಡಲು ಅನ್ವೇಷಣೆಗಳು ಮತ್ತು ಇತರ ಭೂವೈಜ್ಞಾನಿಕ ಕಾರ್ಯಗಳನ್ನು ಕೈಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಹರ್ನಿಶಿ ಕೆಲಸ ಮಾಡುವಂತೆ ಅವರು ಯುವ ಅಧಿಕಾರಿಗಳಿಗೆ ಕರೆ ನೀಡಿದರು. ಶ್ರೀ ಗರ್ಖಾಲ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಜಿಎಸ್‌ಐನ ಚಟುವಟಿಕೆಗಳು ಮತ್ತು ಸಂಸ್ಥೆಯು ಪ್ರಾರಂಭವಾದಾಗಿನಿಂದ ಮಾಡಿದ ಸಾಧನೆಗಳ ಬಗ್ಗೆ ಅವರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಮಹಾನಿರ್ದೇಶಕರು ಮತ್ತು ಮುಖ್ಯಸ್ಥರಾದ ಶ್ರೀ ಎಂ.ಎಂ. ಪೊವಾರ್, ಜಿಎಸ್ ಐ ಕೈಗೊಂಡಿರುವ ಹೊಸ ಉಪಕ್ರಮಗಳನ್ನು ವಿಶೇಷವಾಗಿ ಆಡಳಿತದ ವಿಭಾಗದಲ್ಲಿ ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಎಡಿಜಿ ಮತ್ತು ಎನ್ ಎಂಎಚ್ III & IV ನ ಡಾ. ಎಸ್. ರಾಜು, ಜಿಎಸ್ ಐ ಒಂದು ಸಂಸ್ಥೆಯಾಗಿ ಕಾಲ ಕ್ರಮೇಣ ವಿಕಸನಗೊಂಡಿತು ಮತ್ತು ಜಗತ್ತಿನ ಪ್ರಮುಖ ಭೂವೈಜ್ಞಾನಿಕ ಸಂಸ್ಥೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಜಿಎಸ್‌ಐನ ವಿವಿಧ ಕಾರ್ಯಗಳ ಮೂಲಕ ಕೈಗೊಂಡ ಚಟುವಟಿಕೆಗಳ ಕುರಿತು ಕಾಫಿ ಟೇಬಲ್ ಪುಸ್ತಕಗಳು ಮತ್ತು ಆಡಿಯೊ-ದೃಶ್ಯಗಳನ್ನು ಬಿಡುಗಡೆ ಮಾಡಲಾಯಿತು. ಕೋಲ್ಕತ್ತಾ ಮತ್ತು ಅದರ ಸುತ್ತಮುತ್ತಲನಗರಗಳ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಂಡೆಗಳು, ಖನಿಜಗಳು ಮತ್ತು ಪಳೆಯುಳಿಕೆಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು.
ರೈಲ್ವೆಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಹುಡುಕಲು 1851ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ ಐ) ಅನ್ನು ಸ್ಥಾಪಿಸಲಾಯಿತು. ವರ್ಷಗಳು ಕಳೆದಂತೆ ಜಿಎಸ್ ಐ ದೇಶದ ನಾನಾ ಕ್ಷೇತ್ರಗಳಲ್ಲಿ ಅಗತ್ಯವಿರುವ ಭೂ-ವಿಜ್ಞಾನದ ಮಾಹಿತಿಯ ಭಂಡಾರವಾಗಿ ಬೆಳೆದಿದೆ, ಆದರೆ ಅಂತಾರಾಷ್ಟ್ರೀಯ ಖ್ಯಾತಿಯ ಭೂ-ವೈಜ್ಞಾನಿಕ ಸಂಸ್ಥೆಯ ಸ್ಥಾನಮಾನ ಸಹ ಪಡೆದುಕೊಂಡಿದೆ. ಇದರ ಪ್ರಮುಖ ಕಾರ್ಯಗಳಲ್ಲಿ ರಾಷ್ಟ್ರೀಯ ಭೂವೈಜ್ಞಾನಿಕ ಮಾಹಿತಿ ಮತ್ತು ಖನಿಜ ಸಂಪನ್ಮೂಲ ಮೌಲ್ಯಮಾಪನವನ್ನು ರಚಿಸುವುದು ಮತ್ತು ನವೀಕರಿಸುವುದು ಸೇರಿದೆ. ನೆಲಮಟ್ಟದ ಸಮೀಕ್ಷೆಗಳು, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳು, ಖನಿಜ ಶೋಧನೆ ಮತ್ತು ವಿಚಾರಣೆಗಳು, ಬಹು-ಶಿಸ್ತಿನ ಭೂವೈಜ್ಞಾನಿಕ, ಭೂ-ತಾಂತ್ರಿಕ, ಭೂ-ಪರಿಸರ ಮತ್ತು ನೈಸರ್ಗಿಕ ಅಪಾಯಗಳ ಅಧ್ಯಯನಗಳು, ಗ್ಲೇಶಿಯಾಲಜಿ (ನೀರ್ಗಲ್ಲು ), ಭೂಕಂಪನ ಟೆಕ್ಟೋನಿಕ್ ಅಧ್ಯಯನ ಮತ್ತು ಮೂಲಭೂತ ಸಂಶೋಧನೆಗಳ ಮೂಲಕ ಪ್ರಮುಖ ಉದ್ದೇಶಗಳನ್ನು ಸಾಧಿಸಲಾಗುತ್ತದೆ.
ಜಿಎಸ್ ಐ ಮುಖ್ಯ ಪಾತ್ರದಲ್ಲಿ ವಸ್ತುನಿಷ್ಠ, ನಿಷ್ಪಕ್ಷಪಾತ ಮತ್ತು ನವೀಕೃತ ಭೌಗೋಳಿಕ ಪರಿಣತಿ ಮತ್ತು ಎಲ್ಲಾ ರೀತಿಯ ಭೂವೈಜ್ಞಾನಿಕ ಮಾಹಿತಿಯನ್ನು ಒದಗಿಸುವುದನ್ನು ಒಳಗೊಂಡಿದೆ. ನೀತಿ ನಿರ್ಧಾರಗಳು, ವಾಣಿಜ್ಯ ಮತ್ತು ಸಾಮಾಜಿಕ-ಆರ್ಥಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತದೆ. ಭಾರತ ಮತ್ತು ಅದರ ಕಡಲಾಚೆಯ ಪ್ರದೇಶಗಳ ಮೇಲ್ಮೈ ಮತ್ತು ಉಪಮೇಲ್ಮೈಯಿಂದ ಪಡೆದ ಎಲ್ಲಾ ಭೂವೈಜ್ಞಾನಿಕ ಪ್ರಕ್ರಿಯೆಗಳ ವ್ಯವಸ್ಥಿತ ದಾಖಲಾತಿಗೆ ಜಿಎಸ್ ಐ ಒತ್ತು ನೀಡುತ್ತದೆ. ಭೌಗೋಳಿಕ ಮತ್ತು ಭೂರಾಸಾಯನಿಕ ಮತ್ತು ಭೂವೈಜ್ಞಾನಿಕ ಸಮೀಕ್ಷೆಗಳನ್ನು ಒಳಗೊಂಡಂತೆ ಇತ್ತೀಚಿನ ಮತ್ತು ಕಡಿಮೆ ವೆಚ್ಚದ ಪರಿಣಾಮಕಾರಿ ತಂತ್ರಗಳು ಮತ್ತು ವಿಧಾನಗಳನ್ನು ಬಳಸಿಕೊಂಡು ಸಂಸ್ಥೆಯು ಹಾಗೆ ಮಾಡುತ್ತದೆ.
ಸಮೀಕ್ಷೆ ಮತ್ತು ಗುರುತಿಸುವುದು, ಜಿಎಸ್ಐಯ ಪ್ರಮುಖ ಸಾಮರ್ಥ್ಯವು ಪ್ರಾದೇಶಿಕ ದತ್ತಾಂಶ ಮೂಲ ಸಂಗ್ರಹಣೆ, ನಿರ್ವಹಣೆ, ಸಮನ್ವಯ ಮತ್ತು ಬಳಕೆಯ ಮೂಲಕ ನಿರಂತರವಾಗಿ ವರ್ಧಿಸುತ್ತದೆ (ರಿಮೋಟ್ ಸೆನ್ಸಿಂಗ್ ಮೂಲಕ ಸ್ವಾಧೀನಪಡಿಸಿಕೊಳ್ಳುವುದೂ ಸೇರಿ). ಜಿಯೋ-ಇನ್ಫಾರ್ ಮ್ಯಾಟಿಕ್ಸ್ ವಲಯದ ಇತರ ಪಾಲುದಾರರೊಂದಿಗೆ ಸಹಕಾರ ಮತ್ತು ಸಹಯೋಗದ ಮೂಲಕ ಭೂವೈಜ್ಞಾನಿಕ ಮಾಹಿತಿ ಮತ್ತು ಪ್ರಾದೇಶಿಕ ದತ್ತಾಂಶದ ಪ್ರಸಾರಕ್ಕಾಗಿ ಇತ್ತೀಚಿನ ಕಂಪ್ಯೂಟರ್ ಆಧಾರಿತ ತಂತ್ರಜ್ಞಾನಗಳನ್ನು ಬಳಸಲಾಗುವುದು ಮತ್ತು ಆ ಉದ್ದೇಶಕ್ಕಾಗಿ ಇದು 'ಭಂಡಾರ' ಅಥವಾ 'ಕ್ಲಿಯರಿಂಗ್ ಹೌಸ್' ಆಗಿ ಕಾರ್ಯನಿರ್ವಹಿಸುತ್ತದೆ.
ಗಣಿ ಸಚಿವಾಲಯದ ಜೊತೆ ಸೇರಿಸಲ್ಪಟ್ಟಿರುವ ಕಚೇರಿಗಳಲ್ಲಿ, ಜಿಎಸ್ ಐ ಲಕ್ನೋ, ಜೈಪುರ, ನಾಗ್ಪುರ, ಹೈದರಾಬಾದ್, ಶಿಲ್ಲಾಂಗ್ ಮತ್ತು ಕೋಲ್ಕತ್ತಾದಲ್ಲಿ ಆರು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ ಮತ್ತು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಘಟಕ ಕಚೇರಿಗಳನ್ನು ಹೊಂದಿದೆ.
***
(Release ID: 1803171)
Visitor Counter : 245